ಗುರಿ ಇಟ್ಟು ಹೋದೆ ಕಾಲೇಜಿಗೆ
ಪ್ರೀತಿ ಪ್ರೇಮ ಬೇಡವೆಂದು
ಅನಿಸಿತ್ತು
ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗ
ಬೇಕೆಂಬ ಆಸೆ ನನ್ನಲ್ಲಿ
ಆದರೆ ಕಾಲೇಜಿಗೆ ಬಂದಿಳಿದಳು
ಕಪ್ಪುಗೆಯ ರಾಣಿ.
ನೋಡುವುದಕ್ಕೆ ಚೆಂದವಿಲ್ಲದಿದ್ದರೂ
ನಾ ಬಿದ್ದೆ ಅವಳ ನಡೆತೆಗೆ
ಕೆಲವರು ಇದು ನಿನಗೆ ಬೇಡವೆಂದು
ಹೇಳಿದರೂ
ನನ್ನ ಮನಸ್ಸಿನ ದಾರೆ ಅವಳ ಗುನಕ್ಕೆ
ಕಟ್ಟಿಯಾಗಿತ್ತು.
ಸಮಯ ಬಂದಲ್ಲಿ ನಾ ಬಂದು
ಕೇಳುವೆ ನೆಂಬ
ಭರವಸೆಯನ್ನು ಕೊಟ್ಟೆ,
ಇದೀಗ ಕಾಯುತಿರುವೆ ಆ ಕರಗೆ
ಒಬ್ಬ ಭ್ರಷ್ಟ, ಇನ್ನೊಬ್ಬ ದುಷ್ಟ
ಅವನು ಕಳ್ಳ, ಇವನು ಸುಳ್ಳ
ಆ ಪಕ್ಷ ಕೋಮುವಾದಿ
ಈ ಪಕ್ಷ ಜಾತಿವಾದಿ..
ಯಾರಿಗೆ ಮುದ್ರೆಯೊತ್ತಲಯ್ಯ ನಾನು?
ಅವನಿಗೆ ಗೊತ್ತಿದೆ ಕೋಟಿ ದೋಚುವ ಕಲೆ
ಇವನ ಕೈಗೆ ಅಂಟಿಕೊಂಡಿದೆ
ಅಮಾಯಕರ ರಕ್ತದ ಕಲೆ !
ಅದೋ ನಾಮಪತ್ರ ಸಲ್ಲಿಸಿ ಆಯ್ತು ಅತ್ಯಾಚಾರಿ
ಇದೋ ಕೈ ಮುಗಿದು ಬೇಡಿ ಬರುತಿಹನು
ನಿತ್ಯ ದುರಹಂಕಾರಿ..
ಯಾರಿಗೆ ಮುದ್ರೆಯೊತ್ತಲಯ್ಯ ನಾನು?
ಜನರ ಜೇಬಿಗೆ ಕತ್ತರಿ ಹಾಕುವ ಕದಿಮನೊಬ್ಬ
ತಿಜೋರಿ ದೋಚಿ ವಿದೇಶದಲ್ಲಿ
ಬಚ್ಚಿಡುವ ಭೂಪನೊಬ್ಬ.
ಕೊರಳ ಪಟ್ಟಿ ಹಿಡಿದು ಹೊಡೆದಾಡಿಕೊಂಡ
ಬದ್ದ ರಾಜಕೀಯ ವೈರಿಗಳು
ದಿನಾ ರಾತ್ರಿ ಒಂದೇ ತಟ್ಟೆಯಲ್ಲಿ
ಬಡವರ ಹೆಣ ತಿನ್ನುತಿಹರು!
ಯಾರಿಗೆ ಮುದ್ರೆಯೊತ್ತಲಯ್ಯ ನಾನು?
ಮನ್ಸಿನ ಮನೆ ತುಂಬಾ ನಿನ್ ನೆನಪುಗಳ ರಂಗೋಲಿ ಬಿಡಿಸಿ ಕುಂತೀನಿ
ಅದರ ಅಂದ ಕೆಡಿಸ್ಲಿಕ್ಕಾದ್ರು ಬರ್ತೀಯೇನೊ ಅಂತ ಕಾಯ್ಲಿಕತ್ತೀನಿ
ಬಂದೋಗೊಮ್ಮೆ ಉಸಿರು ಹೆಸರು ರಂಗೋಲಿಯೊಟ್ಟಿಗ ಮಣ್ಣ ಸೇರಲಿಕ್ಕಾದ್ರು
ಕನಸಿನ ಮಳೆಯಲಿ
ತುಂತುರು ಹನಿಯಾಗಿ
ನಗು ಬೀರುವ ಮನದಲಿ
ಪ್ರೀತಿ ಅರಳಿಸು ಎದೆಯಲ್ಲಿ
ಕಟ್ಟಿದ ಕನಸೊಂದು
ಮನದಲಿ ನೆನಪಾಗಿ
ಬಯಸುತ್ತಿದೆ ನಿನ್ನ
ನಿಸರ್ಗದ ಮಡಿಲಿಲ್ಲಿ
ಜೀವನ ಜೋಕಾಲಿ ತುಗೋಣ ಬಾ
ಮಂಜು ಕವಿದ ಪ್ರೀತಿಗೆ
ಬೆಚ್ಚಗೆ ಕರಗಲು ನಿನ್ನ ಕಿರು ನಗೆ ಬೇಕು
ಬಾ ನನ್ನ ಸನಿಹಕೆ
ಸಮಯ ಸರಿಯುತ್ತಿದೆ ಮಿಂಚಾಗಿ
ಎಷ್ಟು ಕರೆದರೂ ಬಾರದ ನೆನಪಿನ ಕನಸ್ಸೊಂದು ತೂಗುತಿದೆ
ಪ್ರೀತಿಗೆ ಮನಸೋತ ಜೀವನದಲ್ಲಿ ಅನುರಾಗದ ಶೋಧನೆ