Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಯಾವಾಗ ಮುಕ್ತಿ

ತಾಕಿದೆ ಇಂದು ನಿನ್ನ ನಗುವಿನ ನೋಟ ಬಂದು ಒಲವಿನ ಮಾತನ್ನು ತಿಳಿಸಲು ಹೇಳು ನಾ ಬರಲಿ ಎಂದು
ಮೈ ಮರೆತಿರುವೆ ಅನುರಾಗ ದಲ್ಲಿ ಇಂದು
ಬಾ ನಲ್ಲಿನ ನಕ್ಷತ್ರವಾ ನೆನೆದು ನೆನೆದು

ಎಂದೆಂದೂ ನಿನ್ನ ನಲಿವಿನ ಗುಳಿ ಕೆನ್ನೆಯಲ್ಲಿ
ನಾ ಮಿನುಗುವ ಕನಸು ಕಂಡಿರುವೇ
ಬಾನಂಗಳದಲ್ಲಿ ನಾವಿಬ್ಬರೂ ನಡೆಯುವ ಮನಸ್ಸು ಮಾಡಿರುವೆ

ಹೇಳು ನಾ ಬರಲಿ ಎಂದು ತಿಳಿಸು ಬಾ ಇಂದು

ನಿನ್ನ ಹೆಜ್ಜೆ ಹೆಜ್ಜೆಗೆ ನಾ ಮನದಲ್ಲಿ ನಾಚು ತಿರುವೇ.... ನಿನ್ನ ಬಳಿ ಹೇಳಲು ಹೆದರುತ್ತಿರುವೆ

ಬಿಳುಪಿನ ಮಲ್ಲಿಗೆ ನೋಡಿದರೂ ಹಳದಿ ಹೂ ತುಳಿದರೂ ನಿನ್ನ ನೆನಪು ಕಾಡುತ್ತಿದೆ
ನನ್ನ....... ನಿನ್ನ ಬಳಿಯೇ ಕರೆ ತರುತ್ತಿದೆ ......

- ak

03 May 2018, 06:18 pm

ಬಂದಳೈ ಮಹಾ ಲಕ್ಷ್ಮೀ

ಬಂದಳೈ ಮಹಾ ಲಕ್ಷ್ಮೀ ನಮ್ಮ ಮನೆಗಿಂದು
ತಂದಳೈ ಸುಖ ಸಂತೋಷ ಮನಕಿಂದು
ಬಹುದಿನದಿನದಿಂದ ಕಾದಿದ್ದ ಆ ದಿನ
ಇಂದು ನನಗಾಗಿ ನೆನಪಾಸಾಯಿತು
ನನ್ನ ಮುದ್ದಿನ ಕಂದ

- ರಘು

03 May 2018, 12:33 pm

......-------

ಏನೋ ಏನೋ ಒಂದು ಭಯವು ಕಾಡತೊಡಗಿದೆ ನನ್ನರಿಯದೆ ಮನಸು..
ಏಕೋ ಏನೋ ಬೇಸರದಿ ಕೊರಗುತಲಿದೆ ಮನಸು

ಈ ಮನಸು ಮನಸುಗಳ ಗೊಂದಲಾಟಕ್ಕೆ ಬಲಿಯಾಗುವುದಾದರು ಏನು ?

ನನ್ನರಿಯದಾದ ತಪ್ಪಾದರೂ ಏನೋ ,

ನಾ ನಗಲಾರದೆ, ಅಳಲಾಗದೆ ಮೂಕ ವೇದನೆಯಾ ಸಹಿಸಲಾರದೆ ನರಳಾಡುತಿರುವೆ ನಿನ್ನ ನೆನಪಿನಲ್ಲಿ ...


ನೀ ನನ್ನ ಅರಿತೆ ಎಂದುಕೊಂಡಿದ್ದೆ ,ತಪ್ಪು ಕಲ್ಪನೆ ಎನಿಸಿದೆ .....

ಏಕೋ ಏಕೋ ನೀ ನನ್ನ ಅರಿಯದೆ ಹೋಗಿರುವೆ ....

ಮರಳಿ ಬಾರೋ ನನ್ನ ಆರ್ತೈಸಿಕೊಳ್ಳಲು .....

ನೀನೇ ಇಲ್ಲವಾದರೆ ಈ ಉಸಿರು ಇಂದೇತಕೋ ನನಗೆ.......

- Acchu love

03 May 2018, 12:40 am

ಕಾದಿರುವೆನು ನಾ

ಕಾದಿರುವೆನು ನಾನು ನೀನು ಬರುವೆಯೆಂದು
ಬಹು ದಿನಗಳಿಂದ ಪ್ರೀತಿ ಒಲವಿನಿಂದ
ಅಪ್ಪ ಅಮ್ಮನ ಒಲವಿನ ಕಂದ
ಅಜ್ಜ ಅಜ್ಜಿಯರ ಮುದ್ದಿನ ಕಂದ
ಕಾದಿಹೆವು ನಾವು ನಿನ್ನ ನೋಡಲೆಂದು

- ರಘು

02 May 2018, 10:37 am

:::::::

ಮರೆತಷ್ಟು ನೆನಪಾಗುತ್ತಿದೆ ....
ಮರೆಯಬೇಕೆನ್ನುವುದು ಮರೆತು ಹೋಗುತ್ತಿದೆ ...
ನೂರಾರು ಕನಸುಗಳು ...
ನೂರಾರು ಆಸೆಗಳು....
ನೂರಾರು ನೆನಪುಗಳು....
ನೂರಾರು ಮಾತುಗಳು....
ಕಣ್ಣಿನಂಚಿಗೆ ಬಂದು ಕುಳಿತಿದೆ ...
ನೀ ಬರುವುದಿಲ್ಲ ಎಂದು ಗೊತ್ತಿದ್ದರೂ,
ಈ ಹೃದಯ ನಿನಗಾಗಿ ಕಾದು ಕುಳಿತ್ತಿದೆ...


ಮುದ್ದು ಪೆದ್ದು

- Shilpa

01 May 2018, 08:09 pm

ನನ್ನವಳು

ಕಂಗಳಲ್ಲಿ
ಕಂಡು
ಕನವರಿಕೆಯಾಗಿ
ಕನಸು ಕೊಟ್ಟು
ಕರ್ಪೂರದ ಗೊಂಬೆಯಾದವಳು
ಕನಕಾಂಬರಿ ಹೂವಿನಂತವಳು

- Arun

01 May 2018, 11:08 am

ಕ್ಷಮೆಯಾಚನೆ

ಕ್ಷಮೆಯಾಚನೆ

ಮಂದಸ್ಮಿತ ಮುಗುಳು ನಗೆ.
ಕ್ಷಣ ಮಾತ್ರದಲ್ಲೆ ಮರೆಯಾಯಿತಲ್ಲ
ಧರೆಗೆ ಎರೆಯಾಯಿತಲ್ಲ.
ಬಿರುಗಾಳಿ ಸಹಿತ ಬೀಸಿದ ಆ ಮಳೆಗೆ.
ಮಂಜಾಗಿ ಬಿಸಿಲಿಗೆ ಸುಂದರವಾಗಿ ಹೊಳೆದ ಆ ಭಾನು
ಕ್ಷಣ ಮಾತ್ರಕ್ಕೆ ಕತ್ತಲಾಯಿತಲ್ಲ ಈ ದಿನ.
ಆ ಭಾನ ಚಂದಿರನ ಅಳಲು ಹನಿಯಾಗಿ ಧರೆಸೊಕಿ ಕೊನೆಗೆ ಮರೆಯಾಯಿತಲ್ಲ
ಮಾತು ತಪ್ಪಿ ಬಂದ ಪದಗಳ ಉಚ್ಚಾರಣೆ ಮನಸ ನೋಯಿಸುವ ರೀತಿಯಾಯಿತಲ್ಲ
ಮನನೊಂದ ಮನಸ್ಸು ಕ್ಷಮೆಯಾಚಿಸಿದಂತೆ
ನನಗೆ ಭಾಸವಾಗುತಿದೆಯಲ್ಲ.

ನೆನಒಇನ ನಾವಿಕ ಸಂತೋಷ್/ ಜೀತು

- ಸಂತೋಷ್//ಜೀತು

01 May 2018, 10:01 am

..----------..??

ನಾ ಏನೆಂದು ಹೇಳಲೊ.....
ಕಂಡ ಕನಸುಗಳೆಲ್ಲ ಚೂರಾಯಿತು ಎಂದು ...

ನಾ ಏನೆಂದು ಬರೆಯಲೊ
ಈ ಕವನಗಳ ,ಈ ನನ್ನ ಕವನಗಳ ಪ್ರತಿ ದ್ವನಿಯು ನಿನಾಗಿರುವಾಗ .ನೀ ಇಲ್ಲದೆ ನನ್ನ ಕವತೆಗಳಿಗೆ ಅರ್ಥವೇ ಇಲ್ಲದಂತಾಗಿದೆ ....

ನೀ ಒಂದಲ್ಲ ಒಂದು ದಿನ ನೀ ನನ್ನ ಹುಡುಕಿ ಬಂದೇ ಬರುವೆ ಎಂಬ ಹುಚ್ಚು ಕಲ್ಪನೆಯ ಆಸೆಯನಿಟ್ಟು ಕಾದು ನಿನ್ನ ದಾರಿಯನ್ನೇ ಎದುರು ನೋಡುತಿರುವೆ .........

ನೀ ಇಲ್ಲದ ಈ ಜಗತ್ತು ಮತ್ತೆ ನನಗೆ ಶೂನ್ಯವೆನಿಸ ತೊಡಗಿದೆ

- Acchu love

30 Apr 2018, 02:33 pm

.......

ಸದಾ ಮುಗುಳ್ನಗೆ ಬೀರುವ ನಿನ್ನ ಮುದ್ದು ಮುಖವ ...
ನಾ ಹೇಗೆ ವರ್ಣಿಸಲಿ .....
ನನ್ನೊಂದಿಗೆ ನೀ ಹಾಡಿದ ಪ್ರೀತಿಯ ಮಾತುಗಳ ......
ನಾ ಹೇಗೆ ಮರಿಯಲಿ .....
ನೊಂದಿರುವಾಗ ನೀನೊಂದು ಅಪ್ಪುಗೆಯು ತಂದ ಸಮಾಧಾನವ ....
ನಾ ಹೇಗೆ ತಿಳಿಸಲಿ ....
ನಿನ್ನಿಲ್ಲದ ನನ್ನ ಜೀವನ ಮುತ್ತಿಲ್ಲದ ಚಿಪ್ಪಿನಂತೆ ಇರುವುದು..
ನಾ ಹೇಗೆ ಜೀವಿಸಲಿ ....
ನೀ ಇಲ್ಲದೆ ನಾ ಹೇಗೆ ಇರಲಿ ....
ನೀನು ಇಲ್ಲದೆ ನಾನು ಇಲ್ಲ ....

ಮುದ್ದು ಪೆದ್ದು

- Shilpa

30 Apr 2018, 11:13 am

ತಂಪನೆರೆದು ಬಿಡು...

ನೆನಪುಗಳ ಭಾವ ಬಂಧನದ
ಬಿಸಿಲ ಬೇಗೆಯಲಿ ಹುಟ್ಟುವ
ಬಿಸಿಯುಸಿರಿನ ನೋವಿಗೊಂದಿಷ್ಟು
ನಗುವಿನ ತಂಪನೆರೆದು ಬಿಡು ಚಂದಿರ

ನಿನ್ನಡಿಯಲಿ ಇಡಿಯಾಗಿ
ನಿಂತಿರುವ ಮನ ನಕ್ಕು ಬಿಡಲಿ,
ಹರಿವ ಕಣ್ಣೀರು ಸುಮ್ಮನೆ
ಕಣ್ಣಾಲಿಯಲೆ ಸತ್ತು ಬಿಡಲಿ

ನಗುವ ಕೊಂದು ಹೋದವರ
ನೆನಪುಗಳು ಗೋರಿಗಳಾಗಿಬಿಡಲಿ
ಎದೆಯೊಳಗಿನ ಸದ್ದುಗದ್ದಲಗಳೆಲ್ಲ
ಮನದ ಯಾವ ಮೂಲೆಗೂ ಎಟುಕದಂತಾಗಲಿ

ಅರಳಿ ಬಿಡಲಿ ಅವುಗಳ ಮೇಲೊಂದು
ನಗುವ ಪಡೆದು ನಗುವ ಹರಡಿ
ಕನಸುಗಳ ಮಾಲೆಯಲೆ ಅಲಂಕರಿಸಿದ
ಸಂತಸವೇ ತುಂಬಿದ ಪ್ರೇಮ ಮಂದಿರ

- ಶ್ರೀಕಾವ್ಯ

29 Apr 2018, 09:11 pm