ಬಲ್ಲವರಾರು ದೈವದಾ ಸಂಚು,
ದೇವನಾಕುವ ಎಲ್ಲದಕೂ ಹೊಂಚು,
ಹಿಂದೆ ಯಾಕಾಯಿತೆಂದು ನೀ ತಿಳಿಯೆ,
ಮುಂದೆ ಏನಾಗುವುದೆಂದು ನೀ ಅರಿಯೆ,
ತಿಳಿಯದಾ, ಅರಿಯದಾ ನಿನಗೇಕೆ ಈ ಪರಿಯ ಗೊಡವೆ,
ಒಳ್ಳೆಯತನದಲಿ ನಡೆಸು ನೀ ನಿನ್ನ ಬಾಳುವೆ,
ಆಗ ನೀ ಜೀವನದಾ ಉನ್ನತ ಶಿಖರವನ್ನೇರುವೆ...
ಪ್ರೀತಿಯನ್ನ ಪ್ರೀತಿಯಿಂದ
ಯಾವ ಗುರುದಕ್ಷಿಣೆ ಇಲ್ಲದೆ
ಸದಾ ಪ್ರೀತಿ ನಿಡುವ
ಜಗದ್ಗುರು ಅಮ್ಮ ಅಮ್ಮ
ಅಮ್ಮನ ಪ್ರೀತಿಯೇ
ನಮಗೆಲ್ಲಾ ಶ್ರೀರಕ್ಷೆ
ಅಮ್ಮನ ಪ್ರೀತಿಗೆ
ಸರಿಸಾಟಿ ಇಲ್ಲ
ಈ ಜಗದೊಳ್
ನಿನ್ನೆದೆಯ ಹೃದಯದ ಶಬ್ದಗಳು ಸಪ್ತಸ್ವರಗಳಾಗಿ ಕೇಳ ಬರುತಲಿದೆ.....
. ನನ್ನ ಮುದ್ದು ಗೆಳೆಯನೇ ನಿನೊಂದಿಗೆ ನಾ ಜೀವನದ್ದುದ್ದಕ್ಕೂ ಜೊತೆಯಾಗಿರುವಾಸೆ.....
ನನ್ನೊಲವಿನ ನನ್ನ ಮುದ್ದು ಹೃದಯವೇ ಇಂದು ನಿನಗೆ ಹುಟ್ಟು ಹಬ್ಬದ ಶುಭಾಶಯಗಳ ಕೋರುತಲಿರುವೆ ತುಂಬು ಹೃದಯದಿ ನೂರಾರು ಕಾಲ,ಏಳೇಳು ಜನುಮಕ್ಕೂ ಸುಖವಾಗಿ ನೀನೇ ನನ್ನ ಗೆಳೆಯನಾಗಿ ಬಾ ಸದಾ ಎಂದು ಕೋರಿಕೊಳ್ಳುತಲಿರುವೆ ಆ ದೇವರನ್ನು ........
ಇಂದು ನಿನ್ನ ಜನುಮ ದಿನದ ಹಾರ್ದಿಕ ಶುಭಾಶಯಗಳು ನನ್ನ ಮುದ್ದು ಹೃದಯವೇ...
ಜೀವನ ಒಂದು ಪಾಠಶಾಲೆ.
ನಗುವು ನಮ್ಮ ಬದುಕಿನ ಒಲೆ.
ನಗುವನ್ನು ತೋರಿದರೆ ಬದುಕಿಲ್ಲ ಮುಂದೆ.
ನೋವನ್ನು ತೋರಿದರೆ ಸ್ಓಲೆಲ್ಲ ಹಿಂದೆ.
ಸಾಧಿಸುವ ಮನದಿ ಚಲವಿರಲು ಇಂದು,
ಕ್ಸಾರ್ಥಕತೆಯ ಬದುಕು ಸಿಗುವುದೆಂದೆಂದು.
ನೀ ಕೊಟ್ಟೆ ನನ್ನ ಕೆನ್ನೆಯ ಮೇಲೆ ಮೊದಲೊಂದು ಮುತ್ತು/.
ಆಗ ನಾ ಬೇಡಿದೆ ನಿನ್ನ ಹೃದಯಾಗುಡಿಯ ಸಂಪತ್ತು/.
ಆ ಕ್ಷಣ ನೀ ನೀಡಿದೆ ನನಗೆ ಪ್ರೀತಿಪ್ರೇಮದ ಸಿಹಿ ತುತ್ತು/.
ಆಗ ನಾನಾದೆ ನಿನ್ನ ಬದುಕಿನ ಕ್ಸಾಮ್ರಾಜ್ಯದ ಸ್ವಾತಿಮುತ್ತು./
ಬರೆದವರು ನಾಗಮಣಿ ಹೆಚ್.ಬಿ.
ಸೋಲೇ ಗೆಲುವಿನ ಮೆಟ್ಟಿಲು
ಗೆದ್ದಾಗ ಕಾಣುವದು ಮುಗಿಲು
ಕನಸನ್ನ ಮರೆಯಬೇಡ ,ಸೋತಾಗ ಸಾಯಬೇಡ
ಓ ಮನಸೇ ..ಗೆದ್ದೇ ಗೆಲ್ಲುವೇ ಒಂದು ದಿನ,
ಕನಸಿಗೆ ಬಾಡಿಗೆ ಇಲ್ಲ, ಶ್ರಮಕ್ಕೆ ಹಂಗಿಲ್ಲ
ನೂರೆಂಟು ಕನಸು ,,ಬೇರೆಡೆಗೆ ಎಳೆಯದಿರು ಮನಸು,
ಕನಸನ್ನೆ ಬೆನ್ನತ್ತಿರುವೆ,ನೀನ್ನನ್ನೇ ನಂಬಿರುವೆ
ಓ ಮನಸೇ,,,ಗೆದ್ದೇ ಗೆಲ್ಲುವೇ ಒಂದು ದಿನ,