Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

"ಗುಣ"

ಹೊತ್ತು ಸಾಗೋದು ಏನು ಇಲ್ಲ.....
ಬಿಟ್ಟು ಹೋಗೋದೆ ,ಇಲ್ಲೇ ಎಲ್ಲಾ.....
ಕಿತ್ತು ತಿನ್ನದೆ ಕಂಡ ಕಂಡವರನ್ನೆಲ್ಲಾ
ಕೊಟ್ಟುತಿನ್ನು ಭಗವಂತ ನಿನಗೆ ಕೊಟ್ಟಷ್ಟರಿಂದ!
ಹಣೆ ಬರಹಕೆ ಹೊಣೆಯಾರು ಇಲ್ಲ
ಬ್ರಹ್ಮನಲ್ಲದೆ ಹಣೆಬರಹವ ಬರೆಯೋರಾರು ಅಲ್ಲ.....
ಬರೆದಷ್ಟೆ ಪಡೆಯೋದು
ಅದರಾಚೆ ,ನಿನ್ನಾಸೆಗೆ ನೀ ಬಲಿಯಾಗದೆ ಇರು!
ಸಿರಿ ಅನ್ನೋದು ಗರಿ ಗರಿಯ ನೋಟುಗಳಲಿ ಅಲ್ಲ
ಇಹುದು ನಿನ್ನ ಗುಣದಲಿ......ಗರಿ ಗರಿಯ ನೋಟು
ಸುಟ್ಟರೆ ಬೂದಿಯಾದೀತು......ಗುಣ ಅನ್ನೋದು ಸುಟ್ಟ
ಮೇಲೂ ಸುಡದೇ ,ಅವರಿವರ ಮನದಲಿ ಅಳಿಯದೆ ಉಳಿಬಹುದು

- ಅಜೀತ್

10 May 2018, 05:03 pm

ಯಾರಿಗೂ ಯಾರು ಇಲ್ಲ

ಇಲ್ಲಿ ಯಾರು ಯಾರಿಗೂ ಇಲ್ಲ...
ಇದ್ದಾಗ ಇರುವೆಯಂತೆ ಮುಕ್ಕುವರು
ಬಿದ್ದಾಗ ....ಕಣ್ಣಿಗೆ ಬೀಳದಂತೆ
ಬಾಳುವರು.....!
ಕಣ್ಣು ನನ್ನದಾದ ಮೇಲೆ
ಕಣ್ಣು ಜಾರಿ ಬೀಳುವ ಹನಿ ಹನಿಗೂ
ನಾನೇ ಜಿಮ್ಮೇದಾರ
ಆಸರೆಗೆ ಹೆಗಲು ಬಯಸಿದರೂ
ಗೊತ್ತಿಲ್ಲದಂತೆ ಗತ್ತೋಳಗೆ ಬದುಕುವರು....

- ಅಜೀತ್

10 May 2018, 04:59 pm

ಎಲ್ಲವೂ ಇದೆ....ಆದರೂ

ಎಲ್ಲವೂ ಇದೆ
ಆದರೂ ಮತ್ತಿನ್ನೇನೋ ಬೇಕನಿಸಿದೆ......
ಇಷ್ಟೇ ಇರುವ ಹೇ ಹ್ರುದಯ
ನೀ ಕೊಡುವ ಕಷ್ಟ ಅಷ್ಟಿಷ್ಟಲ್ಲ..‌‌.‌.
ನೀ ಕೇಳುವ ಬೇಕುಗಳ ಬೆನ್ನತ್ತಿ
ನಾನಾಗುತಿರುವೆನೇನೋ ಭೇಕೂಫ!
ತಿಳಿಯಲಾರದು ನಿನಗೆ
ಈಗೀಗ ಜಗದ ಒಳಗಿರುವ ಜಂಜಡ....
ಸ್ವಚ್ಚಂದವಾಗಿರುವ ನೀನು
ಬೇಕುಗಳ ಬೆನ್ನತ್ತದಿರು.....
ಗರ್ವದಿಂದ ಬಾಳುವ ನನ್ನನ್ನು
ಗರ್ವವೇ ನನ್ನ ನುಂಗಿ ಬಾಳದಂತೆ
ಮಾಡದಿರು ನೀನಿನ್ನು!

- ಅಜೀತ್

10 May 2018, 04:55 pm

ಅಮ್ಮ

ನಮ್ಮ ನಮ್ಮ ಅಮ್ಮಂದಿರ ಸಹನೆ ,ಸಹಾನುಭೂತಿ
ಅನುರಾಗ....
ನಮ್ಮ ನಮ್ಮ ಮಕ್ಕಳ ಅಮ್ಮಂದಿರಲಿ
ಅಪರೂಪ.......
ಒಂದಿಷ್ಟು ಕೋಪ
ಒಂದಷ್ಟು ಮುಂಗೋಪ
ಎಲ್ಲ ಬೇಡಿಕೆಗಳನು ಈಡೇರಿಸದೇ ಇರುವಾಗ
ನಮ್ಮ ಮೇಲೆ ಒಂದಷ್ಟು ಆರೋಪ.....

- ಅಜೀತ್

10 May 2018, 04:50 pm

ಮನಸ್ಸೇ....

ಹಾಳು ಸುಡಗಾಡು ಮನಸ್ಸಿಗೆ
ಮಾಡುವ ಬೇರೆ ಕೆಲಸ ಏನಿದೆ.....
ಸುಮ್ಮನಿರದೆ,ಪದೇ ಪದೇ...
ಸುಮ್ಮನಿರುವವರ ಮೌನಕ್ಕೆ
ಕಲ್ಲು ಹೊಡೆಯುವ ಹುಂಬ ದೈರ್ಯವ ಮಾಡುತಿದೆ.....
ಏನು ಮಾಡಲಿ ಬೇಸತ್ತು ಹೋಗಿರುವೆ,
ಮಾತೆ ಕೇಳುತ್ತಿಲ್ಲ ಮನಸ್ಸು ಈಚಿಚೇಗೆ...
ವೇಗವಾಗಿ ಆದಷ್ಟು ಬೇಗ ವೈದ್ಯರಿಗೆ ಭೇಟಿಯಾಗಬೇಕಿದೆ
ಮನಸ್ಸಿಗೊಂದು ಮಾತ್ರೆ ಕೊಡಿಸಬೇಕಾಗಿದೆ!

- ಅಜೀತ್

10 May 2018, 04:06 pm

ನೆನಪುಗಳು

ನಿನ್ನೋಂದಿಗಿನ ನನ್ನ ನೆನಪುಗಳು
ಕರಗಿ ಹೋಗುವ ಹಿಮದ ಉಂಡೆಗಳಲ್ಲ.....
ಒಂದಲ್ಲಾ....ಎರಡಲ್ಲಾ.....
ಕತ್ತಲಾದಾಗ ಆಕಾಶದಲ್ಲಿ ಗೋಚರಿಸುವ
ನಕ್ಷತ್ರಗಳಷ್ಟು.....‌
ಸಾಕಲ್ಲವೇ ನನ್ನ ಬದುಕಿಗಿಷ್ಟು!

- ಅಜೀತ್

10 May 2018, 03:42 pm

ಓ ಮನುಜ.............

ನನ್ನೊಳಗೇನಿದೆ ಎಂದು ನೀ ಕೇಳದಿರು
ನಿನ್ನೊಳಗೇನಿದೆ ಎಂದು ಮೊದಲು
ನೀ ಅರಿತುಕೊ ಓ ಮನುಜ..........

ಕಾಣದಿಹ ನುರೆಂಟು ದಾರಿಯ ಹುಡುಕುವ
ಬದಲು ಕಾಣುವ ಒಂದು ದಾರಿಯಲ್ಲಿ ನೀ ನಡೆಯೋ ಓ ಮನುಜ..........

ನಿನ್ನವರು ಯಾರಿಹರು ಎಂದು ಜಗವ ಹುಡುಕುವ ಮೊದಲು ನಿನ್ನೋಳಗೆ ಯಾರಿಹರೆಂದು ನಿನ್ನ ಮನವನ್ನೇ ಮೊದಲು ಹುಡುಕು
ಓ ಮನುಜ............

ಸಾಗರವ ದಾಟಿ ನೀ ಗುರಿಯ ಮುಟ್ಟುವ ಮೊದಲು
ನಿನ್ನ ಮನೆಯೋಳಗಿರುವ ಗುರುವ ಗೌವರಿಸೋ
ಓ ಮನುಜ............

ಮುಗಿಲೇರಿ ದೊರೆಯಾಗುವ ಮುನ್ನ ಭೂತಾಯ ಮಡಿಲೇರಿ ಮೊದಲು ಮಗುವಾಗೊ
ಓ ಮನುಜ................

ದ್ವೆಷದ ಅಮಲೇರಿ ದುಷ್ಟನಾಗುವ ಮೊದಲು ಪ್ರೀತಿಯ ಮದುವಲ್ಲಿ ಸೇರಿ ಮೊದಲು
ಒಳ್ಳೆಯವನಾಗೂ ಓ ಮನುಜ..........

ಎಲ್ಲರ ಅರಿತು ಎಲ್ಲರೊಳಗೆ ನೀ ಮರೆಯಾಗುವ ಮೊದಲು ನಿನ್ನ ನೀನು ಅರಿತು ಮೊದಲು ಮಾನವನಾಗು ಓ ಮನುಜ..............

- ರಾಗಸಿರಿ....

10 May 2018, 01:47 pm

ಒಲವೇ...

ಓ ಒಲವೇ ಒಲವೇ
ನೀ ನನ್ನ ಜೀವವೆ
ನೀನಿರದ ಕ್ಷಣಗಳ ನೋವೆ
ಸಾಕು, ಮುದ್ದಿಸಲು ಸಾವೆ

ಹರಿಸಿ ಒಲವ ಒರತೆ
ಎಲ್ಲಿ ಮರೆಯಾಗಿ ಮರೆತೆ
ನೀನಚ್ಟಿಟ್ಟ ಪ್ರೀತಿಯ ಹಣತೆ
ಸುಡುತಿದೆ ಎದೆಯೊಳಗೆ ಕುಳಿತೆ

ಹರಕು ಮುರುಕು ನೆನಪುಗಳೊಳಗೆ
ಕಣ್ಣಿಗೂ ಕಂಬನಿಗೂ ಬೆಸುಗೆ
ಮಿಡಿವ ಹೃದಯದ ಬಡಿತಕೆ‌
ಶುರುವಾಗಿದೆ ಮೌನವಾಗುವ ಬಯಕೆ

ಒಂಟಿಯಾದ ಕೈ‌ಯ ಬೆರಳು
ಜೊತೆಯಿರದೆ ಬಿಗಿಯುತಿದೆ ಕೊರಳು
ಸಾವಿಗೂ ಇಲ್ಲ ಕನಿಕರ
ನಾನೆಂದರೇಕೊ ಅದಕೂ ಬೇಸರ

- ಶ್ರೀಕಾವ್ಯ

08 May 2018, 05:13 pm

ನೆನಪಿನಂಗಳ

ಅಂದು ನಾ ಬಂದೆ ನಿನ್ನ ನೋಡಲೆಂದು ನಿನ್ನೂರಿಗೆ, ವರುಷಗಳೇ ಕಳೆದರು ಮತ್ತೆ ಮನದಲಿ ನೆನಪಿನ ಪುಸ್ತಕದ ಪುಟ್ಟವನ್ನು ತೆರೆದುಕೊಂಡಾಗ ಇಂದಿಗೆ ಎರಡು ವರ್ಷಗಳೇ ಸಂದರು ನಮ್ಮಿಬ್ಬರ ಸ್ನೇಹ, ಪ್ರೀತಿ,ಮುದ್ದಾದ ಮಗುವಿನ ನಿಷ್ಕಲ್ಮಷವಾದ ಮಂದಹಾಸದಂತೆ ಎಂದೆಂದಿಗೂ ನಗುತಿರಲಿ

- Ramadas

07 May 2018, 11:27 pm

ನೀನಿಲ್ಲದೆ ನಾನಿಲ್ಲ ...

ನಿನ್ನ ಪ್ರೀತಿಯ ತಿಳಿದವರಾರು ,
ನಿನ್ನ ಪ್ರೀತಿಗೆ ಬೆಲೆ ಕಟ್ಟುವವರಾರಿಹರು,
ನೀ ತೋರಿದ ಪ್ರೀತಿ ,ವಾತ್ಸಲ್ಯವ ಮರೆಯುವವರಾರು ....
ತಾಯಿ ನೀನಿಲ್ಲದೆ ಈ ಜಗತ್ತ ನೋಡುವುದಾದರು ಹೇಗೆ ನೀನೇ ನನ್ನ ಪ್ರಪಂಚ
ನಿನ್ನ ಹೊರೆತು ನನಗಾರು ಬೇಡಮ್ಮ ...


ನನ್ನ ಜೀವ ನೀನೇ ತಾಯಿ ನಿನಗಾಗಿ ನಾ

- Acchu love

06 May 2018, 04:57 pm