ಮತ್ತೆ ನೆನಪಾಗುತಿದೆ ನಿನ್ನೊಂದಿಗೆ ಇಟ್ಟ ಹೆಜ್ಜೆ ಗುರುತುಗಳ ಸಾಲು.....
ಮರೆಯಲಿ ನಾ ಹೇಗೆ ಆ ನಿನ್ನ,ಪಿಸುನುಡಿಯ ಮೆಲ್ನುಡಿಯ ಸಾಲು....
ಕರಗಳ ಜೋಡಿಸಿದ ಆ ದಿನಗಳು ಕರಗಿ ಹೋದಿತೆ ಅಷ್ಟು ಸುಲಭವಾಗಿ...!?
ಕೋಪಿಸಿಕೊಂಡಾಗಲೆಲ್ಲ ಬರೆದ ಕವನಗಳ ಸಾಲು ಮರೆಯಲಿ ಹೇಗೆ ನೀ ಹೇಳು...!?
ನೆನಪುಗಳೊಂದಿಗೆ ನೆನಪು ನೆನಪಿಸುತಿದೆ
ಪ್ರತಿ ಕ್ಷಣ ನಿನ್ನೊಂದಿಗೆ ಕಳೆದ ಹೊಳಪು
ನೀ ಇಲ್ಲದ ಈ ದಿನವೇ ಬರೀ ನೆನಪಾಗಿದೆ
ನೆನಪಲ್ಲೆ ಸಾಗುತಿದೆ ಈ ಬದುಕು
ಬರೆದಷ್ಟು ಮರೆಯದೇ ಹೋಗಿದೆ
ನೀ ಬಿಟ್ಟು ಹೋದ ನೆನಪು
ಪದೇಪದೇ ನೆನಪಿಸುತ್ತಲೇ ಇದೆ ನೀ ಮುದ್ದಾಡಿ ಕಳೆದ ಸಮಯಗಳ ನೆನಪು
ಜಿನುಗುವ ಧರೆಯಂತೆ, ಉರಿಯುವ ರವಿಯಂತೆ
ಬೀಸುವ ಗಾಳಿಯಂತೆ ನೆನಪು ನೆನಪಾಗಿ
ನೋಯಿಸುತಿದೆ, ಬೇಸರಿಸುತಿದೆ , ಮೌನವಾಗಿಸುತಿದೆ ನೆನಪೆಂಬ ನೆನಪು
ದೇಶದ ನಿಜವಾದ ದೇಶಪ್ರೇಮಿ
ದೇಶದ ಗಡಿಕಾಯುವ ಸಿಪಾಯಿ..
ದೇಶಸೇವೆಗೆ ಗರ್ವಪಡುವ ಗವಾಯಿ ಇವನು
ತಾಯ್ನಾಡಿನ ರಕ್ಷಣೆಗೆ ಪ್ರಾಣ ಕೊಡುವ ತ್ಯಾಗಮಯಿ ಇವನು.. " ಪ "
ದೇಶಪ್ರೇಮಿಯ ರಕ್ಷಿಸುವ ಧೀರ ಇವನು
ದೇಶದ್ರೋಹಿಯ ಸಂಹರಿಸುವ ವೀರ ಇವನು..
ನಡೆಸುವನು ಕಠಿಣ ಸಮರಾಭ್ಯಾಸ
ಆಗುವನು ಉಕ್ಕಿನ ಶರೀರದ ಮನುಷ..
ಪ್ರತಿಕ್ಷಣ ಎಚ್ಚರ
ಗನ್ನು ಕ್ಷೀಪಣಿ ಪಿರಂಗಿ ಇವನ ಅಸ್ತ್ರ
ತನುಮನ ದೇಶಪ್ರೇಮದ ಮಂತ್ರ..
ಘೋರ ಕದನಕೂ ಸಿದ್ಧ
ವೀರ ಮರಣಕೂ ಬದ್ಧ..
ದೇಶದಲ್ಲಿ ಶಾಂತಿ ಐಕ್ಯ ಕಾಪಾಡುವ ಧ್ಯೇಯ ಇವನದು..
ಊರನ್ನು ರಕ್ಷಿಸುವ ಶೂರ ಇವನು
ಉಗ್ರನನ್ನು ಬೇಟೆಯಾಡುವ ವ್ಯಾಘ್ರ ಇವನು
ನೆಲ ಜಲ ಗಾಳಿಯಲ್ಲಿ
ಬೆಂಕಿ ಗುಂಡು ಸಿಡಿದು ಬರಲಿ
ಇವ ನುಗ್ಗುವ ಪರಿ ಚಿರತೆಯೇ ಸರಿ..
ಕೊರೆಯೋ ಚಳಿಗೆ ನಡುಗದೆ
ಗುಡುಗೋ ಮಳೆಗೆ ಬಗ್ಗದೆ
ಇವ ಘರ್ಜಿಸುವ ಪರಿ ಸಿಂಹವೇ ಸರಿ..
ರಕ್ತ ಸುರಿಯಲಿ ಮಾಂಸ ಖಂಡ ಉದುರಲಿ
ಇವ ಬಿಡನು ತನ್ನ ಗುರಿ..
ನಗುತ ಪ್ರಾಣ ಬಿಡುವನಿವನು ವಿಜಯ ಪತಾಕೆ ಹಾರಿಸಿ..
ಇವನ ತ್ಯಾಗ ಬಲಿದಾನವನ್ನು ಸ್ಮರಿಸಿ ವಂದಿಸುವ ಕರ್ತವ್ಯ ನಮ್ಮದು..
ನಾ ಕಟ್ಟಿದ್ದೆ ವಿಶಾಲ ಕನಸಿನ ಚಪ್ಪರ
ಕಂಬವೆಂಬ ನಿನ್ನ ಪ್ರೀತಿಯೆ ಅದಕ್ಕೆ ಆಧಾರ
ಮುಕುಟದಲ್ಲಿ ಸ್ವರ್ಣ ಕಲಶದ ಶೃಂಗಾರ
ಕಂಬಗಳನ್ನು ಬಿಗಿದಿದ್ದವು ಮುತ್ತಿನ ಹಾರ
ಆ ಮುತ್ತಿನ ಹಾರ ದಲ್ಲಿ ಎರಡು ಪ್ರಕಾರ
ಒಂದು ಕೋಪವೆಂಬ ಮುತ್ತಿನ ಹಾರ
ಮತ್ತೊಂದು ಪ್ರೀತಿವೆಂಬ ಮುತ್ತಿನ ಹಾರ
ಪ್ರೀತಿ ವೆಂಬ ಮುತ್ತಿನ ಹಾರ ಹತ್ತಿರ ಹತ್ತಿರ
ಕೋಪವೆಂಬ ಮುತ್ತಿನ ಹಾರ ದೂರ ದೂರ
ಚಪ್ಪರವ ಕಾಣಲು ಬರುವನು ನೇಸರ
ಇರುಳಲ್ಲಿ ಇಣುಕಿ ನೋಡುವನು ಚಂದಿರ
ರವಿ ಚಂದ್ರರ ನಡುವೆ ಉಂಟು ನಂಬಿಕೆ ಪರಸ್ಪರ
ಆದರೆ ನಮ್ಮಲ್ಲಿ ಪ್ರತಿ ಸಣ್ಣ ವಿಷಯವೂ ಗಂಭೀರ
ಕೊನೆಗೆ ವಚನವು ಆಗುವುದು ಭಯಂಕರ
ದೂರವಾಗಲಿ ಅಸಮಾಧಾನ ಕೋಪ ಅಹಂಕಾರ
ನಂಬಿಕೆ ಗೌರವ ದಿಂದ ನಡೆದರೆ ಪರಸ್ಪರ
ಜೀವನವಾಗುದು ನೆಮ್ಮದಿಯ ಮಹಾಸಾಗರ
ಮರೆತುಬಿಡು ನಿ ಎಲ್ಲವ; ನನ್ನ ಮಧುರ
ಮತ್ತೆ ಆರಂಭವಾಗುದು ಬೇಡ ಶೀತಲಸಮರ
ಬಾ ಸಂಗಾತಿ ಕಟ್ಟುವ ಕನಸಿನ ಚಪ್ಪರ
ಸ್ವರ್ಣ ಕಲಶ ಸ್ಪರ್ಶಿಸಲಿ ಬಾನಂಬರ
ನಾ ಕಟ್ಟಿದ್ದೆ ವಿಶಾಲ ಕನಸಿನ ಚಪ್ಪರ
ಕಂಬವೆಂಬ ನಿನ್ನ ಪ್ರೀತಿಯೆ ಅದಕ್ಕೆ ಆಧಾರ
ಒಂಟಿಯಾದ ಜೀವಕ್ಕೆ
ಅಣ್ಣನ ಸ್ಥಾನ ಕೊಟ್ಟು
ಅಪ್ಪ ಅಮ್ಮನ ಪ್ರೀತಿಯ ಮರೆಮಾಚಿದೆ
ನನ್ನ ಮುದ್ದು ತಂಗಿ ನೀ
ನೀ ಇಂದು, ಎಂದೆಂದಿಗೂ
ನನ್ನ ಪುಟ್ಟ ತಂಗಿಯಾಗಿರು
ಮುಂದಿನ ಜನ್ಮ ಇದ್ದರೆ
ನಿನ್ನ ಮಡಿಲ ಕಂದನಾಗಿ ಹುಟ್ಟಿ
ನಿನ್ನ ಋಣವ ತೀರಿಸುವೇ
ಈ ಸಂಬಂಧ ಅನುಬಂಧ
ಚಿರಕಾಲ ಸಾಗಲಿ