Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

'ಕವನ' ಸಂಜಿವಿನಿ

ಕವನಗಳ ಬಯಸುತಿದೆ ನನ್ನ ಈ ಮನ
ಅರಿಯದೆ ಕನವರಿಸುತ್ತಿದೆ ಗಾಯದ ಹೃದಯ
ಸಂಜಿವಿನಿಯಂತೆ ಮುದ ನಿಡುವುದೆ
ಅ ನಿನ್ನ ಮನಸಿನ 'ಕವನ',,,,,,,,,,,,!!!!!!


ರಚನೆ :-
ಕನಸು.

- NatarajuN

31 May 2018, 10:40 pm

ಮನ್ನಿಸೇನಾ ಮನಸೇ....

ಏಕೋ ಪ್ರೀತಿಸುತ್ತಿದ್ದ ಹೃದಯ ಇಂದು ನನ್ನ ತೊರೆಯುತ್ತಿದೆ .
ನೀನೇ ಬೇಕು ,ನೀನೇ ಬೇಕು ಎಂದು ಹಟವಿಡಿದು ಕುಳಿತಿದೆ .

ಈ ಹೃದಯದ ಪ್ರತಿ ಬಡಿತಗಳಲ್ಲಿಯೂ ನಿನ್ನ ಹೆಸರನ್ನೇ ಸ್ಮರಿಸುತ್ತಿರುವೆ,
ನನ್ನ ಪ್ರತಿ ಉಸಿರಿನ ಕಣ ಕಣದಲ್ಲೂ ನಿನ್ನ ಪ್ರೀತಿಯೇ ತುಂಬಿದೆ ಕಣೋ .

ನೀನೇಕೋ ನನ್ನ ತೊರೆಯುವಾ ನಿರ್ದಾರವೇಕೋ ಮಾಡುತಲಿರುವೆ,

ಹುಡುಕುಬೇಡ ,ಹುಡುಕಿದಷ್ಟು ನಾ ಇನ್ನಷ್ಟು ದೂರ ದೂರಾ ಹೋಗುವೆ ಮತ್ತೆ ಬಾರದ ಲೋಕಕ್ಕೆ ...

ಮನ್ನಿಸೋ ಎನ್ನ ಮುದ್ದು ಮನಸೇ ,ಇನ್ನಷ್ಟು ನೋವ ಅನುಭವಿಸುವಷ್ಟು ಈ ಮನಸು ಶಕ್ತಿಯ ಒಂದಿಲ್ಲ ....


ಮನ್ನಿಸೋ ನನ್ನ ,ಇನೊಂದು ಜನ್ಮವೊಂದಿದರೆ ,ಆ ಜನ್ಮದಲ್ಲಿ ಆದರೂ ನಿನ್ನ ಪ್ರೀತಿಗೆ ಅರ್ಹಳಾಗಿರುವೆ ...

ಹುಚ್ಚು ಪ್ರೀತಿ ನನ್ನದು ಕಣೋ ಎಷ್ಟೋ ಹುಚ್ಚು ಕನಸ ,ಆಸೆಗಳ ಹೇಳ ಬಯಸಿದೆ ಆದರೆ ಎಲ್ಲ ಎಲ್ಲವೂ ಮಣ್ಣು ಪಾಲಾಯಿತು ...........


ನೀನೇ ನನ್ನ ಜೀವ ಎನ್ನುವಷ್ಟು ಪ್ರೀತಿಸಿದೆ ...ನೀ ನನ್ನ ಆರ್ತೈಸಿಕೊಳ್ಳಲು ಪ್ರಯತ್ನ ಕೂಡ ಮಾಡದೆ ಹೋದೆ



ಮನ್ನಿಸೆನ್ನಾ ಗೆಳೆಯಾ ನಾ ಮಾಡಿದ ತಪ್ಪೇನು ಎನ್ನುವುದು ಇಂದಿಗೂ ತಿಳಿಯಲಿಲ್ಲ ನಾ
ಮನ್ನಿಸು ನನ್ನ ಮುದ್ದು ಮನಸೇ


..

- Acchu love

31 May 2018, 04:58 pm

ನಾ ಹೇಗೆ ತಡೆಯಲಿ

ನಾ ಹೇಗೆ ತಡೆಯಲೀ
ನೀ ನನ್ನದೆಯ ಸೀಳಿಕೊಂಡು ಹೊರಟು ನಿಂತಿರಲು....
ಬೆಚ್ಚನೆಯ ನನ್ನೆದೆಯ ಗುಬ್ಬಚ್ಚಿ
ಗೂಡಲ್ಲಿ ನಿನ್ನ ಬಚ್ಚಿಟ್ಟುಕೊಂಡರೂ
ನನ್ನೊಲವು ನಿನಗೆ ವಿಷವಾದ ಮೇಲೆ
ಹುಸೀ ನಗೆಯ ಬೀರಿ ನೀ ಹೊರಟು
ನಿಂತಿರಲು ನಾ ಹೇಗೆ ತಡೆಯಲೀ......
ಮನವೆಂಬ ತಿಳೀ ನೀಲಿ ಕೊಳದೊಳಗೆ ಕಲ್ಲೊಂದು ಎಸೆದು
ಕೊಲ್ಲುವ ಕಟುಕನಿಗಿಂತಲೂ ನೀ
ಕಟುವಾದ ಮೇಲೆ
ನಾ ಹೇಗೆ ತಡೆಯಲೀ.......

- shruthi AS

31 May 2018, 01:28 am

ವಸಂತ ಗಳಿಗೆಯ ಹಾರೈಕೆ,,,

ನಿಸರ್ಗದ ಸಿರಿಯನ್ನೆ ಮೈದುಂಬಿ
ಮಲಗಿರುವ ತವರೂರಿನ ಒಡತಿಗೆ,,,,!!

ಮುಗುಳು ನಗೆಚೆಲ್ಲಿ ಎಲ್ಲರ ಮನಗೆಲ್ಲುವ
ನನ್ನ ನಲುಮೆಯ ಚಲುವೆಗೆ ,,,,,,,,!!!

ಮನದುಂಬಿ ಹೇಳುವೆ ನಾ ಎಂದೆಂದಿಗೂ
ನಗುತಿರು ಏ ನನ್ನ ಗೆಳತಿ,,,,!!

ಹಾರೈಸುವೆ ನಾನಿಂದು ಈ ಜಗಕೆ ನೀ ಕಾಲಿಟ್ಟ
ವಸಂತಗಳಿಗೆಯ ನೆನೆನೆನೆದು,,,,,!!!


@ ಕನಸು

- NatarajuN

31 May 2018, 12:39 am

ಮತ್ತೇ ಮುಂಗಾರು....!

ಬಸವಳಿದ ರೈತನ ಬದುಕಿಗೆ ಬರವಸೆಯ ಮಿಂಚು ಮುಂಗಾರು.‌‌..

ಸೋತಹ ಬುಜಗಳಿಗೆ ಆಸರೆಯ ಶಕ್ತಿ ಮುಂಗಾರು..

ಬತ್ತಿದ ಬೆಂಗಾಡಿಗೆ ತಂಪಿನ ಸಿಂಚನ ಮುಂಗಾರು..

ಒಣಗಿದ ಜಲಚರ ಗರಿಕೆಗೆ ಮರುಜನ್ಮ ಮುಂಗಾರು..

ಯಾವ ಸರ್ಕಾರವು ಕೊಡಲಾಗದ ಅಭಯ ಈ ಮುಂಗಾರು...

ದುರ್ಗೆಶಾ....!

- Duragesh

30 May 2018, 08:09 pm

ನಾ ಕಂಡ ಕರಾವಳಿ

ಒಡಲ ತಣಿಸುತಾ ಹರಿವ ನದಿಗಳು
ಸುಡುವ ಬಿಸಿಲನು ತಣಿಸೊ ಮರಗಳು

ಸುತ್ತ ಸಾಗರದಿ ಸಾಲು ಅಲೆಗಳು
ಎತ್ತ ನೋಡಿದರು ಸಾವಿರ ಗುಡಿಗಳು

ದಟ್ಟ ಕಾನನದಿ ಹಸಿರು ಸಿರಿಗಳು
ಪರಶುರಾಮನ ಸ್ರಷ್ಟಿಯ ಶಿಲೆಗಳು

...ಕುಶಿ...

- sharin rao

30 May 2018, 07:39 pm

ಮೌನಿ

*ಮೌನಿ ಎಂದರೆ ಯಾರು?....*

ಉಸುರಿನ ಬಿರುಗಾಳಿಯ ಶಬ್ದವನು
ಹೃದಯ ಬಡಿತದ ಕ್ರೂರ ಭಯವನು
ನರನಾಡಿಗಳಲಿ ಉಕ್ಕಿ ಹರಿಯುತಿರುವ
ರಕುತದ ರಭಸದ ಚೀತ್ಕಾರವನು
ಸಹಿಸಿಯೂ ಮಾತಾಡದವಳೇ....?

ಇತ್ತ ನಗಲಾರದೆ.. ಅತ್ತ ಅಳಲಾರದೆ..
ಇತ್ತ ಸಾಯಲಾರದೆ...ಅತ್ತ ಬಾಳಲಾರದೆ...
ತನ್ನೊಡನೆ ತಾನೇ ಸೋಲುವವಳೇ...?

*ನಿಜ ಹೇಳಿ ಮೌನಿ ಎಂದರೆ ಯಾರು?*

*✍

- Chimpu

30 May 2018, 06:11 pm

ಮರಣ

ಸಾಧುವಂತೆ ಸೌಮ್ಮ ನೀನು
ಮುಗ್ದರಲ್ಲಿ ಮುಗ್ದ ನೀನು
ಕುಬ್ಜರಲ್ಲಿ ಕುಬ್ಜ ನೀನು
ನಮ್ಮಿಂದ ನೀ ಮರೆಯಾದೆಯೇನು

ಮೊಲೆ ಉಣಿಸಿ
ಮಡಿಲಲ್ಲಿ ಮುದ್ದಿಸಿ
ಬೆಳೆಸಿದವಳ ಅಗಲಿ
ನೀನೇಕೆ ಹೋದೆ ಮರೆಯಾಗಿ

ಹಿರಿಯ ಮಗನಾಗಿ
ಸೋದರ ಬಾಂಧವ್ಯವ ಬೆಸೆದು
ಪಿತೃವಾತ್ಸಲ್ಯವ ತೊರೆದು
ಕಂಬನಿಯ ಒರೆಹೊರೆಸಿ ಹೋದೆಯಾ

ತನ್ನವರ ಚಿಂತೆ ನಿನಗಿನ್ನಿಲ್ಲ
ಬಂಧು ಬಳಗ ಬೇಕಿಲ್ಲ
ಒಡನಾಡಿಗಳ ನೆನಪಿಲ್ಲ
ನಿನ್ನೆ,ಇಂದು,ನಾಳೆಗಳ ಬಂಧನವಿಲ್ಲ
ಚಿರಶಾಂತಿಯ ಪಡೆದೆಯಲ್ಲ



ಶಾರಧ

- ಶಕುಂತಲಾ

30 May 2018, 09:00 am

ಮಳೆ

ದಿಗಂತಕ್ಕೂ ದಿಗಿಲಾಯಿತೇನೋ
ಭುವಿಯಲ್ಲಿನ ದುರ್ಜನರ
ಕಂಡು, ಅಮ್ಮನ ಬೆನ್ನಹಿಂದ ಬಚ್ಚಿಟ್ಟುಕೊಳ್ಳಲೆಂದು ಬಿಕ್ಕಿ ಬಿಕ್ಕಿ ಅಳುತ್ತಿದೆ ನನ್ನ ಕಣ್ಣ ಆಸರೆ ಕೊಡುವೆ ಬಂದು ಸೆರೆ
ಮಳೆಹನಿಯೇ ನನಗೆ ಮನೆ ಇಲ್ಲದಿದ್ದರೂ!!

ಯಾವ ಮರದ ಮುದ್ದು ಎಲೆಯೋ ಒಂದಿನಿತು ಅಡ್ಡಿಯಾಗಿ ನನ್ನ ರಕ್ಷಿಸುತ್ತಿದೆ,
ನಿನ್ನ ಕಣ್ಣ ತಂಪಿನಿಂದ.
ಯಾರು ನಿರ್ಮಿಸಿದ ರೈಲು ಹಳಿಯೋ ದಣಿದ
ಒಡಲ ಭಾರಕೆ ಕಿಂಚಿತ್ತೂ ಅಲುಗಾಡದೆ ಮುಖಭಾವಗಳಿಲ್ಲದೆ ಮಂಕಾಗಿ ನಿಂತಿದೆ.

ಖರ್ಚಾಗದ ಮೌನ ಮಾತಿಗೆ ಬೆಲೆ ಕೇಳುವುದೆಂದು
ಮೌನಿಯಾಗಿರುವೆ ಇವೆಲ್ಲವೂ ನಿನಗೆ
ನೇರವಾಗಿ ತಿಳಿಸದೆ ಬೆಂದ ಬಡಪಾಯಿಯ ನೊಂದ ಕಣ್ಣುಗಳ ನೋಡಿ ತಿಳಿಯೇ ಆಗಸವೆ
ನಿನಗಿಂದು ನನ್ನಯ ಸಣ್ಣ ಮನವಿ!!

- ಚುಕ್ಕಿ

29 May 2018, 08:34 pm

ಬೆಂಕಿಯಲ್ಲಿ ಅರಳಿದ ಹೂವು

ಎಷ್ಟೋ ಕಷ್ಟ,ದುಃಖಗಳ ನಡುವೆ ಬೆಳೆದು ನಿಂತ ಹೂವು ನಾ ,
ಅದ ಹೇಗೆ ಹೇಳಲಿ ನಾ ನನ್ನ ವೇಥೆಯಾ ,
ಕಣ್ಣೀರ ಕಂಬನಿಗಳ ನಡುವೆ ಅರಳಿದ ನನ್ನ ಕನಸ ಹೇಗೆ ಹೇಳಲಿ ಇಂದು ನಾ ....

ಹುಚ್ಚು ,ಪೆದ್ದುತನದ ನೂರೆಂಟು ಆಸೆಗಳ ಕನಸ್ಸ ಕಂಡೆ ನಾ ಹೇಳಲಾಗದಷ್ಟು ...

ಬೆಟ್ಟಕ್ಕಿಂತ ಹೆತ್ತರ ,ಆಕಾಶಕ್ಕೆ ಕೈ ಚಾಚುವಂತೆ ನನ್ನ ಕನಸುಗಳು ಮುಗಿಲ ಮುಟ್ಟಲೋಗಿ ಸೋತು ಭೂಮಿ ಸೇರುತ್ತಿದೆ.....

ಆಸೆಯೂ ಆಸೆ ಈ ಬಡಪಾಯಿಯ ಆಸೆಯೂ ನಿರಾಸೆಯೋ ತಿಳಿದಿಲ್ಲ

ಈ ಕಣ್ಣೀರಿಗೆ ನನ್ನ ಜೀವನವೇ ಶೂನ್ಯದಂತೆ ಕಂಡಿದೆ ಆ ದೇವರೇ ಬಲ್ಲ ನನ್ನೀ ಹಣೆಬರಹವ

ಏನೋ ಹೇಳಲಿ ಈ ನನ್ನ ಕ್ರೂರ ಕಷ್ಟಗಳ ,ನಿಕೃಷ್ಟ ಜೀವನದ ವ್ಯಥೆಯಾ ......

ಹೇಳಿದಷ್ಟು ಮುಂಬರುತಲಿದೆ ಪದಗಳ ಸಾಲು ,,ಸಾಲು ಸಾಲಾಗಿ ಒಂದಾದಮೇಲೊಂದು ಬರುತಲಿದೆ ಕಷ್ಟಗಳ ಸುರಿಮಳೆಯೋ ,ಇಲ್ಲ ಬೆಂಕಿಯಾ ಮಳೆಯೋ ನಾ ಅರಿಯೆ .....

ಎಷ್ಟೋ ಕನಸ ಕಂಡು ನಾ ಹುಚ್ಚು ಪೆದ್ದಾಗಿ ಕಾಣುತ್ತಾ ಸಂತೋಷ ಪಡುತಳಿರುವೆ ನನ್ನ ಕನಸಿನಲ್ಲಿ......

- Acchu love

27 May 2018, 04:44 pm