Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮುಂಜಾನೆಯ ನಮನಗಳು

ಹಕ್ಕಿಗಳ ಇಂಚರಗಳ ನಡುವೆ
ಬೆಳ್ಳಿರಥವನ್ನೇರಿ ಬಂದ ಬಾಸ್ಕರ
ಸೋಗಸಾದ ಮುಂಜಾನೆಯಲಿ
ಮಂಜುಗಳ ಬಿತ್ತರಿಸಿ ಮುದ ನೀಡಿದ ರವಿತೇಜ
ಕತ್ತಲೆಯ ಕರಗಿ ಬೆಳಕಿನ ಹಾಲು ಚೆಲ್ಲಿದ ನೇಸರ
ಎದ್ದೇಳಿ ಸ್ನೇಹಿತರೆ ನಿಮಗಿದೋ
ಮುಂಜಾನೆಯ,ನಮನ
ಶುಭ್ರವಾಗಿರಲಿ ನಿಮ್ಮ ಮನ
ಖುಷಿಖುಷಿಯಿಂದಿರಲಿ ಈ ದಿನ
ಶುಭದಿನ

- ಎಸ್.ಬಿ

07 Jun 2018, 06:05 am

ಮಲಗೆನ್ನ ಮಗುವೆ

ಮಲಗೆನ್ನ ಮಗುವೆ ಈ ಬಾಳ ನಗುವೆ
ಮಲಗೆನ್ನ ಮುದ್ದು ಮರಿ
ನೀನೇನೆ..... ಎಲ್ಲ ಸಿರಿ
||ಮಲಗೆನ್ನ ಮಗುವೆ||

ತಂಗಾಳಿ ತಂಪು ಸೂಸಿ
ಮಲಗೆನ್ನ ಮಗು ಎಂದು ಹರಸಿ
ನಿದಿರೆಗೆ ಜಾರುವ ಮುನ್ನ
ಲಾಲಿ ಹಾಡಿ ಮಲಗಿಸುವೆ ನಿನ್ನ
||ಮಲಗೆನ್ನ ಮಗುವೆ||

ಓಂ ನನ್ನ ಬಂಗಾರದ ಗಿಣಿಯೆ
ನೀನೇನೆ ಈ ಬಾಳ ನಿಧಿಯೆ
ನಿದಿರಮ್ಮ ಬರುವ ಹೊತ್ತು
ಕೊಡುವೆನು ಸಿಹಿ ಮುತ್ತು
||ಮಲಗೆನ್ನ ಮಗುವೆ||

- sharadhashekar

06 Jun 2018, 06:46 pm

ಸೋಲು

ನಿನ್ನೆಯ ಪರಿಸರ ದಿನವನ್ನು
ಆಚರಿಸಲೋಸುಗ ಅವನು
ಊಟ, ನೀರು, ಉಸಿರಾಟವನ್ನೆಲ್ಲ ಬಿಟ್ಟ !
ಇವತ್ತು..
ಅವನ ಕೊನೆಯ ಎಸಕವ ಮುಗಿಸಲು ಜನ
ಸೌದೆ ಒಟ್ಟು ಮಾಡುತ್ತ ಇದ್ದಾರೆ !!

- ಶ್ರೀಗೋ.

06 Jun 2018, 06:54 am

ವಿಪರ್ಯಾಸ

ಕಾಡನ್ನು ಕಡಿದು
ಪರಿಸರವ ನಾಶ
ಮಾಡಿ
ಕಾಂಕ್ರೀಟು ನಾಡು ಕಟ್ಟಿ
ಶುದ್ದ ಗಾಳಿಯ
ಕೊರತೆಯಾದಾಗ
ಬದುಕುವಾಸೆಗೆ
ಕೊನೆ ಕ್ಷಣದಲ್ಲಿ

ಗಿಡ ನೆಡುವುದು

✍ ಅಲ್ತಾಫ್ ಬಿಳಗುಳ

- ಅಲ್ತಾಫ್ ಬಿಳಗುಳ

05 Jun 2018, 10:18 pm

ಪರಿಸರ

ಬೆಳೆ ಬೆಳೆದು ಕಾಡು
ನಿಂತುಪುದು ಬೀಡು
ವನವೆಲ್ಲ ಜೇನುಗೂಡು
ಕಡಿಕಡಿದು ನೀವು
ಮಾಡಬೇಡಿ ನೋವು
ಎಂದೆಂದೂ ಇರಲಿ ಅರಿವು

ನನ್ನಿಂದ ನಾ ಹುಟ್ಟಿ ಬರುವೆ
ನನ್ನ ಮೇಲೆ ಕೋಪವೇಕೆ???
ಹೂ ಹಣ್ಣು ಕೊಡುವೆ ನೆರಳನ್ನು ನೀಡುವೆ
ನನ್ನನ್ನು ಕಡಿವಿರೇಕೆ??
ಬಿಸಿಲಲ್ಲಿ ನಾನು ನೆರಳಿನಲ್ಲಿ ನೀವು
ನಿಮಗಾಗಿ ನಾನು ಇರುವೆ
ಯಾರಿಂದ ನನಗೆ ಆಸರೆಯು ಬೇಡ
ನನ್ನ ಮೇಲೆ ಕರುಣೆವಿರಲಿ
ನನ್ನನ್ನು ಕಡಿಯದಿರಿ

ನನ್ನನ್ನು ಕಡಿದು ಹಣಕ್ಕಾಗಿ ಮಾರಿ
ಕ್ಷಣಕಾಗಿ ಬಾಳಬೇಡಿ
ಕಾಡನ್ನು ಉಳಸಿ ನಾಡನ್ನು ಬೆಳಸಿ
ಉಸಿರಾಗರಲಿ ಹಾಡು
ನೆನಪಿರಲಿ ನನ್ನ ಹಾಡು

-------ಪ್ರಕಾಶ್

- Prakash Angadi

05 Jun 2018, 09:52 am

ಜಾತಿ ಮಾಯೇ ಅತಿಯಾಯ್ತೇ

ಕಮ್ಮಾರ ಬೆಳೆದ ಕಾಳು ಅದೇ,
ಕುರುಬ ಬೆಳೆದರೂ ಬೆಳೆವುದೂ  ಅದೇ ಕಾಳು,
ಬೆಳೆದ ಕಾಳಿಗೇನು ಗೋತ್ತು ಬೆಳದವ ಯಾರೆಂದು?
ಅದಕ್ಕೆ ಗೊತ್ತಿರುವುದು ಬೇಯುವುದು,
ಬೆಂದು, ಹಸಿವ ನೀಗಿಸುವುದು,
ಇದನ್ನು ಅರಿಯೇ ಮತವೇ ಮನುಜ ಮತ,
ಈ ಚಿಂತನೆಯೇ ಜಗಕ್ಕೆ ಹಿತ.


  ..........   

- Harshavardhana

04 Jun 2018, 09:14 pm

ನೀನೆ

ಕರೆದಲ್ಲಿಗೆ ಬರುವೆನೆಂದು ಸದರ
ತಿಳಿಯಬೇಡ
ಬರುವ ಜರೂರ್ ಇದೆ
ನೀ ನನ್ನ ಪ್ರೀತಿಯೆಂದು
ಅರ್ಥವಿಲ್ಲದ ಮೌನ ಬದ್ಧತೆ
ಇಲ್ಲದ ನುಡಿಗಳು
ಅಸಂಬಧವಾಗಿವೆ
ಶುದ್ಧನಾಗು ಇಲ್ಲ ನಿಶಬ್ದನಾಗು ನಿಶಬ್ಧನಾಗು

- RaviThondgere

04 Jun 2018, 12:26 pm

ಹೃದಯಕ್ಕೆ ಕೊಳ್ಳಿ

ನನ್ನವಳ ತವರೂರು ಹುಬ್ಬಳ್ಳಿ'''--
ನನ್ನ ಮದುವೆಯಲ್ಲಿ ಕೊಟ್ಟಾಳ ಬಹಳ ಬಂಗಾರ ಬೆಳ್ಳಿ
ವರದಕ್ಷಿಣೆ ತೆಗೆದುಕೊಂಡ ಕಾರಣಕ್ಕಾಗಿ ನನ್ನ ದೂರ ತಳ್ಳಿ
ಇಟ್ಟಾಳ ನನ್ನ ಹೃದಯಕ್ಕೆ ಕೊಳ್ಳಿ***

- Prakash Angadi

03 Jun 2018, 04:28 pm

ಮನ ಸೆಳೆಯುತಿಹುದು..

ಮನ ಸೆಳೆಯುತಿಹುದು ಮಾಧವ ನಿನ್ನ ಮುರಳಿಗಾನವ ಕೇಳಿ, ಧ್ವನಿ ಮಾಧುರ್ಯತೆ ತಿಳಿಯಲು ಕೊಳಲ ಕೋರಳುಗಚ್ಚಿದ ನಿನ್ನ ತುಟಿಯ ಸವಿಯಲ್ಲಿ.

ಕಾರಣ ಕೇಳದಿರು ನೀನು ವಿವಿಧ ರಾಗಗಳ ಕೇಳಿ ಸವಿ ಮುತ್ತಿನ ಮಾಲೆ ಕಟ್ಟಿ ನಿನ್ನ ಕೊರಳಿಗೆ ನಸು ನಾಚಿ ಸಮರ್ಪಿಸಿದಲ್ಲಿ.

ಪರಿ ಪರಿ ಕುಸುಮಗಳ ಘಮವ ತುಂಬಿರುವೆಯಾ ನಿನ್ನ ಉಸಿರ ಸುಧೆಯಲ್ಲಿ ಕೂಗಿ ಕರೆಯುತಿವುದು ನನ್ನ ನೆರಳಡಿಯ ಮನಮೋಹಕ ರೂಪ ಬಂದು ಸೇರೆಂದು ನಿನ್ನಲ್ಲಿ.

ಬರಗಾಲ ಬಂದಿಹುವುದು ಸೇರಗ ಮಿಂಚಿಗೆ ನಿನ್ನ ಕೈಬೆರಳ ಸ್ಪರ್ಶ ಸೋಕದೇನೆ ಮುದುಡಿ ಮಲಗಿದ ತುಟಿಯ ನಗುವನು ಕೊಂಚ ದಯಮಾಡಿ ಎಬ್ಬಿಸು ನಿನ್ನ ಕಣ್ಣ ಸಹ್ನೆಯಲ್ಲಿ ತುಂಟ ಮಾಧವ.

ನನ್ನ ತನುವಿನೊಡೆಯ ಮನದ ಮಡಿಯ ಹೊಡೆದು ಸೇರಿರುವೆ, ಯಾವ ರೀತಿಯ ನ್ಯಾಯವಿದು ನನ್ನ ಮನಸ್ಸ ಕದ್ದು ನಿನ್ನಲ್ಲಿ ಬಚ್ಚಿಡುವುದು ಕೃಷ್ಣ❤

- ಚುಕ್ಕಿ

01 Jun 2018, 08:02 pm

ಪ್ರೀತಿಯ ಆಸೆ..........

ನಗುವಿನೊಳಗೆ ನಗುವೊಂದೆ
ಕಾಣುವೆ ಆಸೆ......‌‌‌‌.
ಪುಟ್ಟ ಮನದೊಳಗೆ
ಪುಟ್ಟದೊಂದು ಗೂಡು
ಕಟ್ಟುವ ಆಸೆ.....‌‌..
ಮನಸೊಳಗೆ ಮನಸೊಂದು
ಮನೆ ಮಾಡಿ ಆಡಿ ನಲಿಯುವ ಆಸೆ.......
ಆಕಾರವಿಲ್ಲದ ಆಸೆಗೆ ಅಂದವ ಕೊಟ್ಟು
ಸಿಂಗರಿಸಿ ನೋಡುವ ಆಸೆ.............
ಯಾರಿಲ್ಲದ ಆ ಉರಲ್ಲಿ ನನ್ನೊಡೆಯನ
ಆಸೆಯೊಂದೆ ಅರಿಯುವ ಆಸೆ...........
ಅವನ ನಗುವಲ್ಲಿ ಮುದ್ದಾದ ಮಗುವಂತೆ
ಆಡಿ ನಲಿಯುವ ಆಸೆ............
ಆಸೆಯ ಪ್ರೀತಿಯ ಗುರುತು.........

- ರಾಗಸಿರಿ....

01 Jun 2018, 02:43 pm