Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಕೂಡಿಟ್ಟದೇಲ್ಲ ಪರರಿಗೆಂದು ಹೇಳುವರು
ಜ್ಞಾನಿಗಳು..... ಸಾಧಕರು
ಅದ ಕೇಳಿ ಬದಲಾದವರುಂಟೆ ತಿಳಿದರು
ಕುಡಿಡುವುದ..... ನಿಲ್ಲಿಸಿದವರುಂಟೆ
ಏಕೆ ಈ ಜ್ಞಾನಬಂಡಾರಗಳ ತಿಳಿವಂತಿಕೆ
ಈ ಯುಗದ ಜನಕೆ......
ಸತ್ಯದದಾರಿ ಬಲುಕಠಿಣವಂತೆ ಅದಕ್ಕೆ
ಇಲ್ಲಿ ಸತ್ಯದದಾರಿ ತುಳಿಯುವುದಿಲ್ಲವೇನೋ
ಸುಳ್ಳಿನದಾರಿ ಬಲು ಸುಲಭವಂತೆ.....
ಅದಕ್ಕೆ ಇರಬೇಕು ಇಲ್ಲಿ ಸುಳ್ಳೇ ಸರ್ವಾಧಿಕಾರಿ
ಪರಮಾತ್ಮ ನೋಡುತಿಹನು ನಿನ್ನ ಕರ್ಮಗಳ
ಏನ ನೋಡುವನು ಅನ್ಯಾಯಗಳ
ಬಡವರ ಕಷ್ಟಗಳಸುಮ್ಮನೆ ತಟಸ್ಥನಾಗಿ ನಿಂತು
ನೋವುಂಡವರ ಕೂಗಿಗೆ ಕಿವಿಗೊಡದೆ
ಅನುಭವಿಸಬೇಕು ಪಾಪಗಳ ಫಲವ
ಆದರೆ.. ಯಾರೋ ಮಾಡಿದ ಪಾಪವ
ಯಾರೋ ಅನುಭವಿಸುತಿಹರು...... ಇಲ್ಲಿ
ಪುಣ್ಯದ.... ಫಲದ ಕನಸು ಕಾಣುತ್ತಾ
ಯಾರ ದೂರಿದರೆನಂತೆ ನಿನ್ನ ನಿ ನೋಡಿಕೊ
ಇಂದಿಗಾದರು ಬಿಡು ನಿನ್ನ ಆಸೆಕೊತ್ತಲಗಳ
ಈ ಕೋಟೆ ಗದ್ದಲಗಳ ... ಅರಮನೆಯ
ಯಾವುದು ಇಲ್ಲಿ ನಿಜವಲ್ಲ........
.......... ಮಂಜು
- ಮಂಜು
11 Jun 2018, 06:39 pm
ಎತ್ತ ನೋಡಿದರತ್ತ ಕೈಗೆ ನಿಲುಕದ
ಭಾವನೆಗಳ ಸರಮಾಲೆ ಮನದಲ್ಲಿ
ಏಕಾದರು ಇರುವುದೋ.. ಈ ಕೆಟ್ಟ ಮನಸ್ಸು
........ ಈ ದೇಹದಲ್ಲಿ
ಬೇಡವಾದ ಚಿಂತನೆಗಳ ಏಕೆ ನೆನಪಿಸಿ..
ಕೊಳ್ಳುವುದೋ ಮತ್ತೆ ಮತ್ತೆ
ನೋವು ತರಿಸಲೆಂದು ....
ಇನ್ನಷ್ಟು ದುಪ್ಪಟಗೊಳಿಸಲು ಈ
ಕಲಿಯುಗದ ಕಷ್ಟಗಳ ಪಯಣವ
ಕಣ್ಣಿಗೆ ಕಾಣಿಸುವುದೆಲ್ಲ ನಿಜವಲ್ಲ...
ಎಂದೆನಿಸುತಿಹದು ಈ ಮನಕೆ
ಆ ಹಿಂದಿನ ದಿನಗಳ ನೆನಪುಗಳು
ಇನ್ನು ಚುಚ್ಚುತಿಹದು ಇಟಿಯಂತೆ
ಅದೊಂದು ದಿನ ಅದೊಂದು ದಿನ
ಏಕಾದರು ಬಂತೋ ನನ್ನ ಜೀವನದಲ್ಲಿ
ಇಂದಿಗೂ ಅನುಭವಿಸುವಂತೆ ಮಾಡಿದೆ
.............. ಅದರ ಫಲವ
ನಾ.... ಏಕೆ ಮೊದಲಿನಂತಿಲ್ಲ
ಎಂಬ ಪ್ರಶ್ನೆ ಸದಾ ಮನಸ್ಸಿನಲ್ಲಿ
ಕೊರೆಯುತಿಹದು ಗುಂಗಿಯಂತೆ
ಮತ್ತೇ ಮತ್ತೆ ಬರಬಾರದೇಕೆ ಆ ಕಳೆದುಹೋದ
ಆ ಮಧುರ ದಿನಗಳ ಕ್ಷಣಗಳು
ಕಾಲ ಚಕ್ರ ತಿರುಗಬಾರದೇಕೆ ಹಿಂದಕ್ಕೆ
ನನ್ನಿ ಪರಿಯ ನೋವ ಕಣ್ಣಾರೆ ಕಂಡ್ಡಿದ್ದು.......
...... ಮಂಜು
- ಮಂಜು
10 Jun 2018, 09:22 pm
ಬದುಕು ಕಲಿಸುವ ಸರ್ಕಾರಿ ಸ್ಕೂಲಲ್ಲಿ ಕಲಿತವ್ನೆ ಜಾಣ
ಐಪಿಎಸ್ಸು ಐಎಸ್ಸಿನ ಕೆಲಸ್ದಲ್ಲಿ ಸರ್ಕಾರಿ ಸ್ಕೂಲವ್ರೆ ನೋಡಣ್ಣ..
ಇಲ್ಲಿ ಕಲಿತು ಹೋದರೆ ಬದುಕು ಬಂಗಾರ ಎಂಬ ಮಾತು ನಿಜವಣ್ಣ
ಈ ಸರ್ಕಾರಿ ಶಾಲೆಯೇ ದೇಶದ ಭವಿಷ್ಯ ನೋಡೋ ನಮ್ಮ ಮಕ್ಳಣ್ಣ
ಲಕ್ಷ ಲಕ್ಷ ಡೊನೆಷನ್ ಕೊಟ್ಟು ಕಲಿತವ್ನು ಅಷ್ಟೇ ಕಣಣ್ಣ..
ಕನ್ನಡ ಕಲಿತವ ಹಣದ ಕೋಟೆ ಕಟ್ಟ ಬಹುದಣ್ಣ..
ವಿದ್ಯೆ ಪಡೆದವ್ನು ದೇಶದ ಒಳಿತಿಗೆ ನಿಜವಾಗಿ ಬೇಕಣ್ಣ..
ವಿದ್ಯೆಇಲ್ಲದ ಮುಖ ಹಾಳೂರಹದ್ದು ಅನ್ನೋದು ಮರೆಯಬೇಡಣ್ಣ..
ಶಿಕ್ಷಣವೇ ಶಕ್ತಿಯಂತೆ ಅನ್ನೋದು ತಿಳಿಯಣ್ಣ..
ನಾವೆಲ್ಲರೂ ಕಲಿಯೋಣ ನಾವೆಲ್ಲರೂ ಬೆಳೆಯೋಣ..
ಇಲ್ಲಿ ಕಲಿತು ಹೋದರೆ ಬದುಕು ಬಂಗಾರ ಎಂಬ ಮಾತು ನಿಜವಣ್ಣ
ಈ ಸರ್ಕಾರಿ ಶಾಲೆಯೇ ದೇಶದ ಭವಿಷ್ಯ ನೋಡೊ ನಮ್ಮ ಮಕ್ಳಣ್ಣ..
ಉಚಿತ ಶಿಕ್ಷಣ ಕಡ್ಡಾಯ ಶಿಕ್ಷಣ ಮಗುವಿನ ಹಕ್ಕಣ್ಣ
ಆಟದಿಂದ ಪಾಠವನ್ನು ಕಲಿಸೋ ಗುರುವಣ್ಣ
ಸರ್ಕಾರಿಶಾಲೆ ಅನ್ನಬೇಡ ಓದಲು ಕಳಿಸಣ್ಣ..
ನಲಿಕಲಿ ಶಿಕ್ಷಣಕೆ ಮಕ್ಕಳೆಲ್ಲ ಹರುಷದಿ ಬರುವರಣ್ಣ
ಪಾಠ ಮಾಡುವಾಗ ಚಟುವಟಿಕೆ ಇರುವುದಣ್ಣ
ಇಲ್ಲಿ ಯೋಜನೆ ನೂರಾರು ಈ ಮಕ್ಕಳ ಬೆಳಗಿಸಲು..
ಇಲ್ಲಿ ಕಲಿತು ಹೋದರೆ ಬದುಕು ಬಂಗಾರ ಎಂಬ ಮಾತು ನಿಜವಣ್ಣ..
ಈ ಸರ್ಕಾರಿ ಶಾಲೆಯೇ ದೇಶದ ಭವಿಷ್ಯ ನೋಡೋ ನಮ್ಮ ಮಕ್ಳಣ್ಣ..
- ಸುರೇಶ್ ಟಿ ವಿ
09 Jun 2018, 08:24 pm
ನನ್ನೊಡಲ ಉಸಿರು
ನಿನ್ನಲೆ ಬೆರೆತಿದೆ ಹಸಿರೆ
ಅಳಿಯದುಳಿಯಲೆನ್ನ ಹೆಸರು
ನೀನೇನೆ ಮೂಲ ಆಸರೆ
ದೂರಾದರೆ ಈ ಭುವಿಯ ಮರೆತು
ಬೇರೇನಿಲ್ಲ ಅಳಿವಿನ ಹೊರತು
ಮರೆಯಾಗದಿರು ಉಳಿಸದೆ ಗುರುತು
ಬದುಕುವೆ ನಾ ನಿನ್ನ ಬೆರೆತು
ನೀ ನಳನಳಿಸಿ ಹಸಿರಾಗಿ ನಕ್ಕರೆ
ನಗುವೆ ಕುಡಿದಂತೆ ಹಾಲು ಸಕ್ಕರೆ
ನೀನೇನೆ ಅತ್ತು ಅತ್ತು ಸತ್ತರೆ
ಸುಟ್ಟು ಸಾಯುವಳು ಈ ಧರೆ
ನೀನಿಲ್ಲದೆ ನಾನೇನು ಅಲ್ಲ
ನಾನಿಲ್ಲದೆ ಅಳಿವುದು ಎಲ್ಲ
ನೀ ಜೊತೆಜೊತೆಯಿರೆ ನಲ್ಲ
ಕರುಳಬಳ್ಳಿಗಳ ಜೀವನ ಸವಿಬೆಲ್ಲ
- ಶ್ರೀಕಾವ್ಯ
08 Jun 2018, 06:39 pm
ಈ ಕಣ್ಗಳಲಿ ತುಂಬಿ ಹರಿಯುವಷ್ಟು ಕಣ್ಣೀರ ದಾರೆ,, ಆದರೂ ಬಿಕ್ಕಿ ಅಳುವ ಸ್ವಾತಂತ್ರ್ಯ ವಿಲ್ಲ ಎನಗೆ...
ಮನಸಿಗೆ ಭಾರವಾದ ನೋವು ಹೇಳಲು ಕಾತೊರೆಯುತ್ತಿದೆ ,,ಆದರೆ ಕೇಳುವ ಒಂದು ಹೃದಯವಿಲ್ಲ ....
ಯಾರೋ ನನ್ನೋರು ?
ಎಲ್ಲಾ ಸ್ವಾರ್ಥಿಗಳ ಲೋಕ
ಎಲ್ಲೋ ,ಯಾರೋ ಪ್ರೀತಿ ,ವಾತ್ಸಲ್ಯಕ್ಕೆ ಬೆಲೆ ಕೊಡೋರಾದ್ರು ಯಾರೋ .....
ಹೇಳಲಾಗುತಿಲ್ಲ ಮನ ಬಾರ, ಸಹಿಸಲಾಗುತಿಲ್ಲ ವೇದನೆಯ,
ಅಳಲು ಬಿಕ್ಕಿ ಬಿಕ್ಕಿ ಅಳ ತೊಡಗಿದೆ
ಸಾಂತ್ವನಿಸುವವರಿಲ್ಲವೋ....
ಏನೋ ವಿಧಿ ,ಯಾಕೋ ಯಾಕೋ ಇಂತ ಬದುಕ ಕೊಟ್ಟು ನೋಡುವ ಹುಚ್ಚು ಸಾಹಸ ನಿನಗೆ ಶರಣು ತಂದೆ ನಿನಗೆ ....
ಇನೆಂದು ಕೊಡದಿರು ನನ್ನ ಶತ್ರುಗಳಿಗೂ ಈ ನನ್ನ ಬದುಕಾ
ಮುಂದೆ ನನಗಾಗಿ ಬರುವುದು ಒಳ್ಳೆಯ ಬದುಕು ಎಂಬ ಸಣ್ಣ ನಂಬಿಕೆಯೂ ಹುಸಿಯಾಗಿದೆಯಲ್ಲೋ ಭಗವಂತ
- Acchu love
08 Jun 2018, 05:33 pm
ನಿನ್ನಿಂದ ನಿನಗಾಗಿ ನಿನಗೋಸ್ಕರ
ಬದುಕುತೇನಿ ಎಂಬ ಹಂಬಲವಿಲ್ಲ
ನೀನಿಲ್ಲದೇ ನಿನಗಿಂತ ಒಂದು ಕೈ
ಜಾಸ್ತಿ ಬದುಕಿ ತೋರಿಸ್ತಿನಿ ಯಾಕಂದ್ರೆ
ನಾನು ನಿನಗಾಗಿ ಬದುಕುತ್ತಿಲ್ಲ
ನನಗಾಗಿ ನಾನು ಬದುಕತ್ತಿದ್ದೇನೆ....
{ನಾಗರಾಜ ಬಿ}
- ನಾಗರಾಜ ಬಾಕೆ೯ರ್
08 Jun 2018, 11:23 am
ಜಿನುಗುಟ್ಟುವ ಮಳೆಹನಿಯಲಿ
ಬಾಡಿ ಹೋಗಿಹುದು ಮೈ-ಮನ ಚಳಿಯಲಿ
ಮಂಪರು ನಿದ್ದೆಯೊಂದಿಗೆ
ಗೊರಕೆ ಹೊಡೆಯುವುದೇ ನಿಂತಿಲ್ಲ
ಬೀಸುವ ಚಳಿಮಳೆಯಲಿ
ನಾ ಹೇಗೆ ಎದ್ದೇಳಲಿ ಈ ಮಳೆಯಲಿ
ಬೆಚ್ಚನೆಯ ಬೆಡ್ಸೀಟ್ನ ಅಡಿಯಿಂದ
- ಎಸ್.ಬಿ
08 Jun 2018, 06:25 am
ಮನಸ್ಸೆಂಬ ಮಾಯಾನಗರಿಯಲಿ
ಯಾರಿದ್ದರೇನು ಯಾರಿರದಿದ್ದರೇನು....
ಸದಾ ನಿನ್ನದೇ ಪ್ರೀತಿಯ
ಸದ್ದು-ಗದ್ದಲ....
ಮೌನವಾದರೂ ನೀ ಒಂದು ಘಳಿಗೆ
ಸಿಡಿಲ ಸಡಿಲ ಸವಾರಿ
ಬಿಡುವಿಲ್ಲದಂತೆ
ನನ್ನೊಳಗೆ....
ಕಡಲಾಳದ ಸ್ವಾತಿಮುತ್ತಂತೆ
ನೀನು
ಕಳೆದೋಗದಂತೆ ಕಾಪಾಡಿಕೊಳ್ಳುವೆ
ನಾನಿನ್ನು!
- shruthi AS
08 Jun 2018, 12:54 am
ಅಪ್ಪಿ ಬಿಡಲೆ ಒಮ್ಮೆ ನಿನ್ನ
ಸ್ವಲ್ಪ ಪ್ರೀತಿಯಿಂದ
ಕಚ್ಚಿ ಬಿಡಲೆ ನಿನ್ನ ಕೆನ್ನೆಯನ್ನ
ಮುದ್ದು ಮನಸ್ಸಿನಿಂದ.....
ಮಂಜು ಹೊಳಲ್
- ನಾಗರಾಜ ಬಾಕೆ೯ರ್
07 Jun 2018, 08:27 pm
ಅಣ್ಣ ಕಂಡೀರ, ಅಜ್ಜ ಕಂಡೀರ
ನನ್ನ ಹೆಂಡೀರ
ಅಕ್ಕ ಕಂಡೀರ,ತಮ್ಮ ಕಂಡೀರ
ನನ್ನ ಹೆಂಡೀರ
ಜನಗಳ ಬಾಯಿಗೆ ಹಣ್ಣಾದವಳು
ರಸಿಕರ ಪಾಲಿಗೆ ಹೆಣ್ಣಾದವಳು
ಹಗಲಿರುಳು ನನ ನೆರಳ ಜೊತೆಗಿದ್ದವಳು
ಮನೆದೀಪ ಹಚ್ಚಿರಲು ಹೊರ ಹೋದವಳು
ಘಮಘಮ ಮಲ್ಲಿಗೆ ತಂದಿರುವೆ
ರುಚಿಸುವ ಹಣ್ಗಳ ಇಟ್ಟಿರುವೆ
ಸಂಜೆಗು ಮುನ್ನ ಮಡಿಯಾಗಿದೆ
ನಿದಿರೆಯು ನನ್ನ ಹೊರ ನೂಕಿದೆ
ತಡವಾಗಿದೆ ಹಸಿವಿದೆ ಕೇಳಿರಿ
ದಾರೀಲಿ ಸಿಕ್ಕರೆ ಮರೆಯದೆ ಕಳಿಸಿರಿ
ನೆನ್ನೆ ತನಕ ನಮಗೆ ಮುನಿಸಿಲ್ಲ
ಹೆಂಡಿರ ತೊರೆಯಲು ಮನಸಿಲ್ಲ
ಸರಸಕೆ ಕರೆದರೆ ಬರುತಿಲ್ಲ
ಮೈತ್ರಿಗೆ ಸಮಯದ ಅರಿವಿಲ್ಲ
ಕದ್ದು ತಿನ್ನುವ ಆಸೆಯು ನನಗಿಲ್ಲ
ಒಪ್ಪಿ ಬಂದರೆ ದಂಡಿಸಿ ಸುಖವಿಲ್ಲ
- ಜಿ. ಪ್ರಕಾಶ್
07 Jun 2018, 04:28 pm