Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನನ್ನವಳು ನನ್ನವಳು ನನ್ನರಸಿ ಬರುವವಳು,
ನನ್ನ ಒಲವಿನಾ ಬೆಳಕಿನಲಿ ಪುಟಿದೆದ್ದು ಅರಳುವಳು,
ಸಮಯದಾ ಅರಿವಿನಲಿ ಸೌಖ್ಯದಿ ಸಂತೈಸುವಳು,
ಮೋಹದಾ ಮಡುವಿನಲಿ ರಸದೌತಣ ಉಣಿಸುವಳು,
ಅಕ್ಕರೆಯ ಭಾವದಲಿ ಎಲ್ಲರ ನಲಿಸುವಳು,
ಸಾಮ್ಯತೆಯ ನಡತೆಯಲಿ ಹಿರಿಯರ ನಗಿಸುವಳು,
ಚಿತ್ತಾರದ ಚೆಲುವಿನಲಿ ನನಬದುಕಿಗೆ ಬಣ್ಣವ ಹಚ್ಚುವಳು,
ಈ ಒಂಟಿ ಬದುಕಿಗೆ ಜೊತೆಯಾಗಲು ಬರುತಿಹಳು,
ನನ್ನೆದೆಯ ಪ್ರೀತಿಗೆ ಪ್ರೇಮಾಂಕುರವ ಬೇರೆಸುವಳು,
ನನ್ನಾಸೆಯ ಜೀವ, ನನ ನಗುವಿನ ಮೂಲ, ನನ್ನೊಲವಿನ ಚೇತನ, ನನ ನಡೆತೆಯ ಕನ್ನಡಿಯಾಗಿ , ಮಧುಮಗಳಾಗಿ ಅರ್ಧಾಂಗಿಯಾಗಲೆಂದು ಬರುತಿಹಳು..
ನನ್ನಾತ್ಮದ ಆತ್ಮ - ನನ್ನಾಕೆ...
- Manju..
15 Jun 2018, 12:09 am
ಯಾವ ಕೆಟ್ಟ ಚಟದ ಅಮಲೊ
ಮೋರಿಯಂಚಿನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದೆ ಸಮಾಜ
ಕೊಚ್ಚೆಯೊಳಗೆ ಜಾರಿ ಬಿದ್ದು ನಾರುವುದೊಂದು ಬಾಕಿ
ಮೋರಿ ಸೇರಿ ಮಿಂದೆದ್ದು ಅದರ ವಾಸನೆಯ
ನಡೆದಲ್ಲೆಲ್ಲ ಹರಡಿ ಸೋಂಕು ತಗುಲಿ ನರಳಿಸಿ
ಕಾಲಿಟ್ಟಲೆಲ್ಲ ಅಮಲೇರಿಸಿ ಸಾಗುವಾಸೆಯ ಧ್ಯೇಯವಿರಬೇಕು ಅದಕೆ
ಯಾರು ಎಬ್ಬಿಸುವವರಿಲ್ಲ ಒಂದಿಷ್ಟು ನೀರು ಸುರಿದು.
ಬಡಿದು ಚಿಕಿತ್ಸೆ ಕೊಡಿಸಿ, ಹಿಡಿದ ಅಮಲ ಬಿಡಿಸಿ
ಅದರ ಸ್ವಾಸ್ಥ್ಯ ಕಾಪಾಡುವ ಮನಸು ಯಾರಿಗೂ ಇದ್ದಂತಿಲ್ಲ
ಎಲ್ಲ ಅದರತ್ತ ತಿರುಗಿ ತಿರುಗಿ ನೋಡಿ ನಗುವವರೆ
ಮೂಗು ಮುಚ್ಚಿಕೊಂಡು ಏನು ನಡಿದಿಲ್ಲವೆಂಬಂತೆ ನಡೆವವರೆ
ಬಿದ್ದು ಹೊರಳಾಡುತ್ತಿರುವದ ನೋಡಿ ಜರಿದು ಸಾಗುವವರಷ್ಟೆ
- ಶ್ರೀಕಾವ್ಯ
14 Jun 2018, 06:35 pm
ಭುವಿಗೆ ಸುರಿವ ಚೆಲುವ ಮಳೆಯು
ನೀನು ತರುವ ಮಾತಿನ ಸವಿಯು
ಸಾಕೆನಿಸಿದರು ಒಮ್ಮೊಮ್ಮೆ ನಿಲ್ಲದ ಅತಿವೃಷ್ಟಿ
ಮಗದೊಮ್ಮೆ ಕಾಣದೆ ಬರಡಾಗಿಸೊ ಅನಾವೃಷ್ಟಿ
ಮಳೆಯೊಳಗೆ ತನುವು ನಲಿದ ಮೇಲೂ
ಬೇಕೆನಿಸದಿರುವುದೆ ಮತ್ತೆ ಹನಿಗಳ ಸಾಲು
ತುಸು ಹೆಚ್ಚೇ ಕಾಡೋ ಗೆಳತಿ ನಾನು
ಮುನಿಸು ಸಹಿಸಿ ಮುದ್ದಿಸು ನನ್ನನು
ಕಣ್ಣ ಅಂಚಲಿ ಕೇಳದೆ ಕಂಬನಿ ಜಾರುವಾಗ
ತಂದುಕೊಡು ಕಣ್ಣೀರು ಮರೆಸೊ ಮಾತು ಬೇಗ
ಅನುಬಂಧದ ಭಾವಕೆ ಮಿತಿ ಹಾಕಲಾಗದವಳು ನಾನು
ಅತಿಯಾದರೆ ಒಮ್ಮೆ ಅಪ್ಪಿ ಮನ್ನಿಸು ನನ್ನನು
ಬಾಡುತಿದೆ ಮಳೆಗೆ ಕಾದು ಕುಳಿತ ಹೂವು
ಹನಿಯಾದರು ಚೆಲ್ಲು ಮಾತಿನಮಳೆಗೆ ತರದೆ ಸಾವು
ಒಲವ ನವಿರು ಮಾತಿಗೆ ಕಾದು ಕುಳಿತಿರುವೆ ನಾನು
ಒಮ್ಮೆ ನೆನೆದು ಬಂದು ಮಾತ ಸುರಿಸಿ ಅರಳಿಸು ನನ್ನನು
- ಶ್ರೀಕಾವ್ಯ
14 Jun 2018, 06:35 pm
ನಿನ್ನ ಬಾಳ ಹಾದಿಗೆ
ಚೆಲ್ಲಿರಲೆಂದು ಮೃದು ಮಲ್ಲಿಗೆ
ನಗಿಸಿ ನಲಿಸುವ ನಿನ್ನ ಮಾತಿಗೆ
ಸಿಗಲಿ ಸಕಲ ಸುಖದ ಬಾಡಿಗೆ
ನೋವೆನಿದ್ದರು ಸರಿದು ಬಿಡಲಿ ಪಾದದಡಿಗೆ
ಗೆಲುವಿಗಷ್ಟೆ ಜೊತೆಯಾಗಲಿ ನಿನ್ನ ನಡಿಗೆ
ಜನನ ಮರಣದ ನಡುವಿನ ಬಾಳಿಗೆ
ನನಸಾದ ಕನಸುಗಳಾಗಲಿ ದೀವಟಿಗೆ
ಎಂದೂ ಮುಗಿಯದ ನಿನ್ನ ಪ್ರೀತಿಗೆ
ಸವಿಯಾದ ಬೆಚ್ಚನೆಯ ಅಪ್ಪುಗೆ
ಮನದೊಡಲ ನಿಶ್ಕಲ್ಮಶ ಚೆಲುವಿಗೆ
ಕಾಡಿಸಿ ಕೆಣಕುವ ಗುಣವೆ ದೃಷ್ಟಿಬೊಟ್ಟಿನ ಕಾಡಿಗೆ
ಜಂಭ ತೋರಿ ಕಾಡಿಸಿ ರಮಿಸೊ ಮುದ್ದು ತಂಗಿಗೆ
ತೆರೆದಿಡುತಿರುವೆ ಶುಭಾಷಯದ ಮಳಿಗೆ
ಹುಟ್ಟಿದ ದಿನದ ಶುಭಾಶಯಗಳು ಕಣೆ ನಿನಗೆ
ನಿನ್ನ ಬಾಳಗಲಿ ಸಕಲೈಶ್ವರ್ಯ ತುಂಬಿದ ಜೋಳಿಗೆ
- ಶ್ರೀಕಾವ್ಯ
14 Jun 2018, 06:31 pm
ಏಕೋ ಏನೋ ಸದಾ ನೀನದೆ ನೆನಪು..
ಬೇಳ್ಮುಂಜಾನೆಯಿಂದ ಮಲಗುವವರೆಗೂ..
ಕಾಡುವುದೇಕೂ ನಿನದೇ ನೆನಪು....
ಗೋಡೆಗಳ ಪ್ರತಿ ಧ್ವನಿಯಲು ನೀನೆ..
ಹಕ್ಕಿಗಳ ಚಿಲಿಪಿಲಿಯಲೂ ನೀನೆ...
ಆಗಸದಲು ನೀನೆ, ಸೂರ್ಯ ಚಂದ್ರರಲೂ ನೀನೆ..
ಇರುಳಲಿ ಅರಳುವ ಸವಿಗನಸಲು ನೀನೆ..
ಓ...
ಮನದನ್ನೆ ಈ ಪರಿಯಾಗಿ ಕಾಡುತಿರುವೆಯೇಕೆ ನನ್ನನ್ನೆ...
ಹಗಲುಗನಸಿನಲು ನೀನೇ...
ಮಾತಿನ ಮಂಪರಲು ನೀನೆ..
ಮಿನುಗುವ ನಕ್ಷತ್ರದಲು ನೀನೆ..
ಮನೆಯೊಳುರಿವ ದೀಪದಲೂ ನೀನೆ..
ನನ್ನುಸಿರಿನ ಬಿಸಿಯಲೂ ನೀನೆ..
ತಂಗಾಳಿಯ ತಂಪಲೂ ನೀನೆ...
ಹೇ ಮನದನ್ನೆ ... ಕಾಡುವೆ ಏಕೆ ನೀ ನನ್ನನ್ನೇ....
- Manju..
14 Jun 2018, 06:04 pm
ಮರಗಳಿರಲಿ ಗಿಡಗಳಿರಲಿ,,
ಹೂ ಹಣ್ಣು ದುಂಬಿ ನಗಲು,,,,
ಜಗವೇ ಸುಂದರ,,
ನಿಸರ್ಗ ನಮ್ಮ ಮಂದಿರ,,,
ಬೆಟ್ಟವಿರಲು ಗುಡ್ಡವಿರಲು,,
ಝರಿ ತೊರೆಗಳು ಹರಿಯುತಿರಲಿ,,,
ಜಗವೇ ಸುಂದರ,,
ಇರಲಿ ಇವು ನಿರಂತರ,,,
ಜಿಂಕೆ ಜಿಗಿದು ಹಕ್ಕಿ ಉಲಿದು,,,,
ಮೋಡ ಅರಳಿ ತೇಲುತಿರಲು,,,
ಜಗವೇ ಸುಂದರ ಮಂದಿರ,,,
ಶುದ್ಧ ಗಾಳಿ, ನೀರು
ದೊರೆಯುತಿರಲು
ಗಿಡ,ಮರಗಳು ನಿತ್ಯ ಬೆಳೆತಿರಲು
ಪರಿಸರ ಉಳಿಸಿ
ಬೆಳೆಸುವವರ ಸಂಖ್ಯೆ ಹೆಚ್ಚುತ್ತಿರಲು
ಈ ಜಗವೆಷ್ಟು ಸುಂದರ!!!
- Prakash Angadi
14 Jun 2018, 01:42 pm
ನೆನೆದು ಮಲಗಿದರೇನು ಮನದಲ್ಲಿ
ಕೈಗೆ ನಿಟುಕದ ಕನಸುಗಳ
ಸವಿ ಸಂಜೆಯ ಹೊತ್ತಲ್ಲಿ........
ಕಣ್ಣು ಕಣ್ಣುಗಳ ಮಿಲನ
ಅದೊಂದು ಮಧುರ ಕ್ಷಣ
ನಾ ಅರಿಯೆನು ಆಕೆಯ ಮನದ ಅಂತರಾಳವ
ಇಂತಿಹುದೋ ನನ್ನ ಮೇಲಾ
ಅಭಿಪ್ರಾಯ ಅವಳಿಗ......
ಬರಿ ಮಾರು ದೂರದ ಪಯಣ
ನನ್ನ ಆಕೆಯ ಕಣ್ಣೋಟದ ಚಲನ
ಗಂಟೆ ಕೂಗಿ ಕರೆಯುವುದು...
ಆಕೆಯ ಆಗಮನದ ಬರುವಿಕೆಯ ಸಮಯ
ನಿಗದಿ ಪಡಿಸಿದಂತಿದೆ ಸಮಯ
ಆ ಗಳಿಗೆಯ ನಮಗಾಗಿ...
ಹೀಗೆ ನಡೆಯುತ್ತಿದೆ ಈ ಸವಿಸಂಜೆಯ
ಕಣ್ಣೋಟದ ಪಯಣ......
ಎರಡು ದಿನದಿಂದೆಕೋ ಮನಸ್ಸಿನಲ್ಲಿ ಕಳವಳ
ಆಕೆ ಕಣ್ಣಿಗೆ ಬಿದ್ದಿಲ್ಲದ ಕಾರಣ....
ಆದಷ್ಟು ಬೇಗ ತಿಳಿಸಬೇಕು ನನ್ನಿ .......
ಪ್ರೀತಿಯ ಒಲೆಯ ಕವನ
....... ಮಂಜು
- ಮಂಜು
13 Jun 2018, 08:26 pm
ಕಾರ್ಮುಗಿಲು ಕವಿದ ಮೋಡದ ಮರೆಯಲಿ
ನಿಂತಿರುವೇ ನೀನು ಭೂಮಿ ತಾಯಿ ಮಡಿಲಲಿ
ಹನಿಹನಿಯಾಗಿ ಸುರಿಸಿ ಭೂಮಿ ತಂಪಾಗಿಸದೆ
ಜೀವ ಜಲ ರಾಶಿಗೂ ಬಾಯಾರಿಕೆ ನೀಗಿಸದೆ
ಜೋರಾಗಿ ಅತ್ತು ಬಿಡು ನೀ ಒಮ್ಮೆಲೆ
ಗದ್ದೆ ತುಂಬ ಪೈರು ತುಂಬಿದ ತೆನೆಗಳು
ನಿತ್ಯ ದುಡಿಮೆಯ ಬಯಲಿನೆಡೆಗೆ
ಚಳಿಸಲಾಗದ ಕಾಲುಗಳು
ಬಿಸಿಲು ಬೇಗೆಗೆ ಬೆಂದು ಹೋಗಿ
ನಾಡಿ ಬಡಿತ ನಿಂತವು
ಮೊರೆ ಇಡುವೆನು ದೇವಾ ರೈತನು
ಅವನ ಕೂಗು ನಿನಗೆ ಕೇಳಿಸದೆ ???
- Prakash Angadi
13 Jun 2018, 05:45 pm
ತಂಪು ತಂಗಾಳಿಯು ಸುಯ್ಯುತಿಹದು
ಈ ಸವಿಸಂಜೆಯ ಹೊತ್ತಲ್ಲಿ........
ಸಂಗೀತದ ಪರಿಯಲ್ಲಿ .. ಬೀಸುತ್ತ
ಹಾಗೆ ಇಂಪಾಗಿ ಕಿವಿಗೆ ಅಪ್ಪಳಿಸುತ್ತ
ಹೇಳುತಿಹಾಡು ಶುಭ ಸಜೆಯ ಸಂದೇಶ
ಎತ್ತರದ ಬೆಟ್ಟಗುಡ್ಡಗಲಿಲ್ಲ........
ಬೃಹದಾಕಾರವಾಗಿ ಬೆಳೆದುನಿಂತ ಮರಗಳಿಲ್ಲ
ಜುಳು ಜುಳು..ಗಾನದ ಹರಿವ ತೊರೆಗಲಿಲ್ಲ
ಸೊಂಪಾಗಿ ಬೆಳೆದು ನಿಂತ ಬಿದಿರುಮಣೆಗಳ
ಕಟ ಕಟ ಶಬ್ದಗಲಿಲ್ಲ
ಕೋಗಿಲಯ ಇಂಪಾದ ಕಂಠಸಿರಿಯ ಕೂಗಿಲ್ಲ
ದನಕರುಗಳ ಹೆಜ್ಜೆಯ ಸಪ್ಪಳವಿಲ್ಲ
ತೆಂಗಿನ ಕಾಯಿ ದಪ್ಪೆಂದು ಬಿದ್ದ ಹಾಗೂ ಇಲ್ಲ
ಕುರಿದನಗಾಯ್ಕರ ಗದ್ದಲವಂತು ಮೊದಲಿಲ್ಲ
ಕಾರುಮೊಟರುಗಳ ಕರ್ಕಶ ಶಬ್ದದನಡುವೆ
ಮೋಡಮುಟ್ಟುವ ಕಟ್ಟಡಗಳ ಮದ್ಯೆ
ಜನಜಂಗುಳಿಯ ಗದ್ದಲದ ನಡುವೆ
ಏಕೋ ನಮ್ಮಳ್ಳಿಯ ಸುಂದರ ಸವಿ
ನೆನಪುಗಳ ಹೊತ್ತು ತಂದಿಹದು
ಈ ಸವಿ ಸಂಜೆಯ ತಂಪು ತಂಗಾಳಿ
ನಮ್ಮೂರ ಜ್ಞಾಪಿಸಿ ನೆನಪಿಗೆ ತಂದ ನಿನಗೊಂದು
.......... ಧನ್ಯವಾದ
.........ಮಂಜು
- ಮಂಜು
12 Jun 2018, 06:08 pm
ಚಕಿತನಾಗುವೆ ಚೆಲುವೆ ನಿನ್ನ ನೋಟಕ್ಕೆ,
ಚತುರೆ ನೀನು ಈಜು ಬಾ ನನ್ನ ಸರಸದ ಸೆಲೆಯಲಿ,
ಕೌತುಕ ಜೋರಾಗುವುದು ನಿನ್ನ ನೋಡ ಬರುತಿರುವಾಗ,
ಹತ್ತಿರವಿರುವಾಗ ದೂರದಂತೆ, ದೂರವಿರುವಾಗ ಹತ್ತಿರದಂತೆ,
ಏನಿದು ಮಾಯಾಜಾಲ?
- Harshavardhana
12 Jun 2018, 02:01 pm