Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನಸು ಭಾರ

ಅಳುವೆಂಬ ಹೊರೆಯ ಹೊತ್ತು
ನಗುತ್ತಲೇ ಇರುವೆ
ಕಳೆದುಕೊಂಡೆಲ್ಲವ ನಗುತ್ತಿರುವಾಗ
ನಮ್ಮೊಳ ಬೇರೆತು
ಅತ್ತವರಿಗಿಂತ ನಕ್ಕವರೆ ಜಾಸ್ತಿ

ಹುಚ್ಚು ಕೋಡಿ ಮನಸೆನ್ನದು
ಮತ್ತೆ ಮತ್ತೆ ಹಚ್ಚಿಕೊಳ್ಳಬಯಸುವದು
ಎಷ್ಟೇ ಚುಚ್ಚಿ ಮರೆಯಾದರು
ಅವರ ನೆನಪೊಂದ ಎದೆಗೂಡಲಿ ಬೆಚ್ಚಗಿರಿಸಿ

ಮೈಲಿಗೆ ಮೈಯಿಗೋ ಮನಸಿಗೋ
ತಲೆ ಮೇಲೆ ಸ್ನಾನ ಉದರದೊಳು ಹೇಸಿಗೆ
ತಿಳಿಯದಾಗಿದೆ ನನಗೆ
ಹರಿದ ಮನಸುಗಳ ಹೊಲಿಯದೆ
ಹರಿದೋಗುವ ಮೈ ಮೇಲಿನ ಬಟ್ಟೆಗೇಕೆ ಹೊಲಿಗೆ

ಕೋಡಗನ ಕೋಳಿ ನುಂಗುವ ಕಾಲದಿ
ಗೋಡೆಯ ಹಲ್ಲಿಗೆ ಹಾಲುಣಿಸುವದೆಂತಹ ನಾಟಕ
ಕಡಲಿಗೆ ಹಿಡಿ ಸಕ್ಕರೆ ಸುರಿದು
ನೀರನು ಸಿಹಿಯ ಮಾಡಬಯಸುವದೆಂತಹ ದ್ಯೂತಕ

ಗುಡದಿ...

- Panchakshari Chikkamath

18 Jun 2018, 08:22 am

:::::

ಮನಸ್ಸೆಂಬ ಮಂಟಪದಲ್ಲಿ ಕುಳಿತಿರುವೆ ನಾ,
ಏನು ಎಂಬುದ ತಿಳಿಯದ ಮನಸ್ಸು ನನ್ನದು...

ಕಣ್ಣ ಹನಿಯೇ ನೀನೇಕೆ ನನ್ನಿಂದ ದುರಾಗುತ್ತಿರುವೆ,
ನಿನಗೂ ನಾನು ಬೇಡವಾದನೆ...

ಕೂಗಿ ಕೂಗಿ ಕರೆಯುತ್ತಿದೆ ನನ್ನ ಬೆಂಬಿಡದ ಹುಚ್ಚು ಕನಸುಗಳು.....

ಯಾರೋ , ಯಾರೋ ಈ ಹುಚ್ಚು ,ಪೆದ್ದು ಕನಸ ಭುವಿಗೆ ತಂದೋರು.....

ಓ ಬ್ರಹ್ಮ ಈ ಸೃಷ್ಟಿ ನಿನ್ನದೇನಾ ?.....
ಯಾಕೋ ಈ ಚದುರಂಗದ ಆಟ ಏಕೋ ನಿನಗೆ

- Acchu love

16 Jun 2018, 02:56 pm

ಸುಖ ಸ್ವಪ್ನ ನಿದಿರೆ

ನನ್ನ ಬಂಗಾರಿ ಇಹಳು ಸುಖ ಸ್ವಪ್ನ ನಿದಿರೆಯಲಿ
ನಾನೆದ್ದೆ ಬಹು ಬೇಗ ಅವಳದೇ ನೆನಪಿನಲಿ
ಅಂದದಿ ಹೊಳೆಯುವಳು ಹಾಲ್ಗೆನ್ನೆ ಮುಖದಲ್ಲಿ
ಕಾಡುತಿದೆ ಮನ ಮುತ್ತಿಟ್ಟು ಮುತ್ತಿಟ್ಟು ಮೇಲೇಳಿಸುವ ಬಯಕೆಯಲಿ

ಆದರೇನು ಮಾಡಲಿ..??

ಈ ತುಡಿತ ಕಾಡುತಿದೆ ಅವಳಿದ್ದರು ಕೇವಲ ಕಲ್ಪನೆಯಲಿ
ಮನ ಕಾಡುವುದು ಮತ್ತೆಷ್ಟೋ..?
ಈಗ ಪ್ರತ್ಯಕ್ಷವಾದರೆ ಅವಳು ನನ್ನೆದುರಲಿ...

ಬರಹ: ಮಂಜುನಾಥ್
ಚಾಮರಾಜನಗರ

- Manju..

16 Jun 2018, 12:37 am

ಆ ದಿನಗಳು..

ಸಿಹಿ ಮನಗಳ ಸವಿ ಬಯಕೆಯ ಆ ದಿನಗಳು ಬರುವುದು ನೋಡಾ..
ಸವಿ ಭಾವನೆಯ ಸಿಹಿಯೊಲುಮೆಯು ಕೂಡುವುದು ಕೇಳಾ..
ಬೆಳದಿಂಗಳ ಬೆಳಕಲ್ಲಿ ಬರುವಳು ಬಂಗಾರಿ ನೋಡಾ..
ಹಾಲೊಡನೆ ಹರೆಯದಿ ಬರುವಳೂ ಕೇಳಾ..
ಹಸಿ ಮುಖದಿ ಮುಗುಳ್ನಗೆಯ ನೀಡುವಳು ನೋಡಾ..
ಚಿತ್ತಾರದ ಚೇಲುವಲ್ಲಿ ನಲಿಯುವಳು ಕೇಳಾ..
ಅಷ್ಟಾಂಗ ಸೌಂದರ್ಯದಿ ಮೆರೆಯುವಳು ನೋಡಾ..
ಮಾಡದಿರು ಆತುರ ಅವಳೆದುರು ಕೇಳಾ..
ಒಲವಿನಾ ಮನಗಳಿಗೆ ಐಕ್ಯತೆಯು ಕೇಳಾ..
ಇದು ಆತ್ಮಗಳ ಬೆಸುಗೆಯ ವಿಜ್ರಂಭಣೆಯು ಕೇಳಾ...

- Manju..

16 Jun 2018, 12:24 am

ವಚನ

ಓ..
ನನ್ನ ತಂಗಿಗೆ ವರವಾಗಿ ಬಂದಿರುವ "ವಚನ"..
ನಿನ್ನಮ್ಮ ನಿನ್ನಲಿ ಕಾಣ ಬಯಸುವಳು ಸೃಜನ ಶೀಲ ಮನ..
ಎಂದೆಂದಿಗೂ ನೀ ಹರಿಸು ಅವಳ ಒಳಿತಿಗೆ ಗಮನ.
ಅದ ಕೋರಿಯೆ ನಿನ್ನಮ್ಮ ದೇವರಿಗೆ ಪ್ರತಿ ದಿನವು ಮಾಡುವಳು ನಮನ..

ಅಜ್ಜಿಯ ಮನಸಿಗೆ ಖುಷಿಯನು ನೀಡು,
ಅಜ್ಜನ ಮನದಲಿ ಸಂತಸ ಕಾಣು,
ಅಮ್ಮನ ಆಸೆಗೆ ಪ್ರತಿಫಲ ನೀಡು,
ಇವರೆಲ್ಲರ ಒಳಿತಿಗೆ ಕಾರಣ ಆಗು....

ಓಹ್... "ವಚನ"...
ಇದಿಷ್ಟೂ ನಿನ್ನ ಬರವಿಗೆ ಕಾದಿದ್ದ
ಸಿಹಿಮನಗಳ ಸವಿ ಸಿಂಚನ..

- ಮಂಜುನಾಥ್
- ಚಾಮರಾಜನಗರ

- Manju..

15 Jun 2018, 11:06 pm

ಸಹಬಾಳ್ವೆ

ಒಟ್ಟಾಗಿ ಬಾಳುವ ಜೀವನ ನಡೆಸಿ
ಕೂಡಿ ಉಣ್ಣುವ ಜನರಿಂದಿಲ್ಲ
ಕೂಡಿ ದುಡಿಯುತ ಪೂರ್ವಜರು ಹೇಳಿದ

ದಿವ್ಯಮಂತ್ರ ಈಗಿಲ್ಲ
ಹತ್ತಿರವಿದ್ದರೂ,ಸನಿಹವಿದ್ದರೂ
ಸಂಬಂಧದ ಬೆಲೆ ತಿಳಿದಿಲ್ಲ
ಹೊಂದಿಕೆ ಎಂಬುವುದು ಉಳಿದಿಲ್ಲ
ಒತ್ತಡದ ಬದುಕಲಿ ಎಲ್ಲರೂ ಒಟ್ಟಿಗೆ
ಕೂಡಿ ಉಣ್ಣುವ ದಿನವಿಲ್ಲ
ಒಂದೇ ಸೂರಿನಡಿ
ಬದುಕುವ ದಿನಗಳು ನಮಗಿಲ್ಲ
ಉಣ್ಣುವ ಅಂಬಲಿ,,ಅನ್ನ ಸಾರಿನಲಿ
ಪ್ರೀತಿ ಪ್ರೇಮದ ರುಚಿಯಿಲ್ಲ
ನೋಡುವ ಕಣ್ಣಲ್ಲಿ ನೀಡುವ ಕೈಯಲ್ಲಿ
ನಂಬಿಕೆಯ ಹೊಂದಿಕೆಯಿಲ್ಲ
ಜೇನು,, ಗೆದ್ದಿಲು,,ಇರುವೆಗಳಂತೆ
ಬಾಳುವೆಯೆಂಬುವುದು ಕಲಿಲಿಲ್ಲ
ಶಾಂತಿ ಸಹನೆ ಮಂತ್ರದ ಮರೆತು
ಬದುಕಿನ ಬೆಲೆಯು ತಿಳಿದಿಲ್ಲ...
ಮಲ್ಲೇಶ ದಂಡಿನ,,ಹಾವೇರಿ

- Prakash Angadi

15 Jun 2018, 08:10 pm

ಅವಳಿಲ್ಲದ ದಿನಗಳು..

ನನ್ನಾಕೆ ನನ್ನೊಡ ಮಾತನಾಡುತಿರೆ..
ಉರುಳುವವು ದಿನ ಕೆಲವೇ ನಿಮಿಷಗಳಂತೆ..

ಅವಳೆಂದಾದರು ಮೌನಿಯಾದರೆ..
ದಿನ ಕದಲದೆ ನಿಲುಕದೆ ನಿಲ್ಲುವವು ವರುಷಗಳಂತೆ..

ಅವಳು ನನ್ನೊಡನೆ ಇರಲು..
ಗಳಿಗೆ ಗಳಿಗೆಗಳೂ ಆಗುವವು ಸಂಪಿಗೆಯಂತೆ ಸುಮಧುರ..

ಅವಳು ಬಳಿ ಇರದಿರಲು..
ಕ್ಷಣ ಕ್ಷಣಗಳು ವಿಷಾನಿಲದ ಮಂಪರ..

ನನ್ನವಳ ಒಡನೆ ಸಂಭಾಷಿಸಲು
ಕೆಲವೊಮ್ಮೆ ಮಾತೆ ಬಾರದೆ ಪರಿತಪಿಸುವೆ


ಇಂದು ಅವಳು ನನ್ನೊಡನೆ ಇರದಿರಲು
ಏತಕು ಮನಸೇ ಇರದೆ ಪರದಾಡುತಿರುವೆ

- Manju..

15 Jun 2018, 03:53 pm

ಸಂಗಾತಿ..

ಸೊತೆನಾ ಹಸಿಕಂಗಳ ಮುಗುಳ್ನಗೆಯ ಈ ಚೆಲುವೆಗೆ
ಮೃದು ಮಾತಿನ ಈ ನೀರಿಗೆ
ಬಿದ್ದೆ ನಾ ಕಂಗಳ ಕಾಂತಿಗೆ
ಪ್ರೀತಿ ಮೊಳೆಯಿತು ಆ ಕುಡಿ ನೋಟಕೆ
ಓ ಗೆಳತಿ ಆಗಬಯಸುವೆ
ಜನುಮ ಜನುಮ ನಿನ ಸಂಗಾತಿ
ಹೇಳು ಗೆಳತಿ ನಾ ಹೇಗೆ ಸ್ಪರ್ಶಿಸಲಿ
ಕಡಲಂತಿರುವ ಎದೆಯಾಳದ
ಪ್ರೀತಿಯ ತಳವ
ಓ ಗೆಳತಿ ದೋರು ನೀ ಸಿಹಿ ಮಾರ್ಗವ..

ಆಡ ಬಯಸುವೆ ನಿನ್ನೊಡನೆ ಜೋಕಾಲಿ
ಕೆಳ ಬಯಸುವೆ ಮಡಿಲಿನಲಿ ನೀ ಹಾಡುವ ಲಾಲಿ
ಜಿನುಗ ಬಯಸಿಹೆ ನಿನ್ನಾಸರೆಯಲಿ ಸುವ್ವಾಲಿ
ಲೀನವಾಗ ಬಯಸಿಹೆ ಪ್ರೀತಿ ತುಂಬಿದ ನಿನ ಕಂಗಳಲಿ

ಓ ಗೆಳತಿ ನೀ ದೊರು ಸಿಹಿ ಮಾರ್ಗವ..

- Manju..

15 Jun 2018, 09:25 am

ಮೌನದ ಹಾದಿ..

ಸುಮ್ಮನೆ ಏಕೆ ಕಾಡುತಿರುವೆ ನಿಶ್ಚಲ ಮೌನದಿ..
ಹರಿಸಬಾರದೆ ನನ್ನೆಡೆಗೆ ಕೆಲ ಕ್ಷಣವಾದರೂ
ನಿನ್ನ ಒಲುಮೆಯ ಸಿಹಿ ನುಡಿ..

ಮೌನ ವ್ರತದಿ ನನ್ನ ನೀ ದೂರ ಸರಿಸುತಿಹೆ..
ಅದೇ ಮೌನದ ನೋವಿನಲಿ ನಿನ್ನ ನಾ ನೆನೆಯುತಿಹೆ..

ಮಾಡದಿರು ಹೀಗೆ,
ಮನವು ನೋಯುವ ಹಾಗೆ,
ಬೇಗ ಬಂದು ತಡೆಯ ನೀಡು
ನನ್ನ ಮನದ ಬೇಗೆಗೆ ....

- ಮಂಜುನಾಥ್
- ಚಾಮರಾಜನಗರ

- Manju..

15 Jun 2018, 01:23 am

ಪ್ರೀತಿ ಮಡಿಲು

ಈ ನನ್ನ ಪ್ರೀತಿ ...

ಅಳೆಯಲಾಗದ ಕಡಲಿನ ನೀರಿನಂತೆ....
ಒಮ್ಮೊಮ್ಮೆ ನಿನಗೆ ಉಪ್ಪುಪ್ಪೆನಿಸಿದರು
ನಿಷ್ಕಲ್ಮಶವಾದ ಖನಿಜ ತುಂಬಿದ ಸಾರ...

ಈ ನನ್ನ ಪ್ರೀತಿ ...

ಕಷ್ಟಗಳೆಂಬ ಎಷ್ಟು ಮೊಡಗಳಿದ್ದರು
ಮುಗಿಲಲಿ ಕಾಣುವ ತಿಳಿನೀಲಿ ಬಣ್ಣದಂತೆ..
ಮೊಡವೆಷ್ಟೆ ಇದ್ದರೂ ಬಣ್ಣವೆಂದೂ ಮಾಸದು..

ಈ ನನ್ನ ಪ್ರೀತಿ ...

ಮುರಳಿಯ ಕೊಳಲಲಿ ಮೂಡುವ
ನಾದಲಹರಿಯ ಸಂಗೀತದಂತೆ..
ಸಂಗೀತಕೆಂದೂ ಕೊನೆಯೇ ಇರದು..

ಈ ನನ್ನ ಪ್ರೀತಿ ...

ಮಗುವಿನ ನಗುವಿನ ಇಂಪಂತೆ..
ಮಗುವಿನ ನಗುವಿನ ಇಂಪು
ಮನಕೆ ಎಂದೆಂದೂ ತಂಪು...

ಈ ನನ್ನ ಪ್ರೀತಿ ...

ಕೊನೆಯೇ ಸಿಗದ ದಾರಿಯಂತೆ..
ನಾನೆಲ್ಲೇ ಓಡಿದರು, ಮತ್ತೆ ಬಂದು ಬೀಳುವೆ
ನಿನ್ನ ಮಡಿಲಲ್ಲೆ...

- ಮಂಜುನಾಥ್. ಸಿ
ಚಾಮರಾಜನಗರ..

- Manju..

15 Jun 2018, 12:51 am