Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನವಳಿಗಾಗಿ

ನಿನ್ನ ಸಂತೋಷಕ್ಕಾಗಿ ಜೀವನವಿಡೀ ಬದುಕುವ ಆಸೆ ನನ್ನದು
ಕೊಡುವೆಯಾ ಒಂದು ಅವಕಾಶ
ಮುಂದಿನ ಜನ್ಮದ ಕಲ್ಪನೆ ನನಗಿಲ್ಲ ಆದರೆ ಈ ಜನ್ಮವಿಡಿ ನಿನಗಾಗಿ ಬದುಕುವ ಒಂದು ಅವಕಾಶ ಕೊಡು ಸಾಕು ನಿನ್ನ ಹೃದಯದಲ್ಲಿ ಕೊಡು ಸ್ವಲ್ಪ ಜಾಗ
ಹೃದಯದರಸ ನಾಗಿ ಬಾಳುವೆ ನನ್ನ ಉಸಿರಿರುವ ತನಕ

- Karthik.N Karthik

07 Jun 2025, 03:08 pm

ಮನಸಿನ ಮಹಾರಾಣಿ...

ಉರಾಗ ಇತ್ತ ಒಂದು ಸಣ್ಣ ಓಣಿ...
ಆ_ಓನ್ಯಾಗ ಇತ್ತ ನನ್ನ ಮನಸಿನ ಮಹಾರಾಣಿ..
ಮಾಡಿದಾಗ ನನಗ ಕಣ್ಣು ಸೊನ್ನಿ..
ಕೂಗಿ ಕರಿತಿದ್ನಿ ನಾ..ಎ ಚಿನ್ನಿ...
ಮನಸಾರೆ ಪ್ರೀತಿ ಮಾಡಿ ತಿನಿಸಿದ್ನಿ
ಹಾಲಮ್ಯಾಗಿನ ಕೆನಿ...
ಅವಳೆ ನನ್ನ ಪಾಲಿಗೆ ಚಿನ್ನದ ಗಣಿ...
ಚಿನ್ನದ ಗಣಿ...
_ಮಲ್ಲು ಎಸ್ ಬಿರಾದಾರ

- Driving lover { Mallu }

07 Jun 2025, 10:36 am

ಅದ್ಭುತ ಸಮಯ

ಆ ಒಂದು ದಿನ ನನ್ನ ಜೀವನದ ಅತ್ಯಂತ ವಿಶೇಷ ದಿನ
ಅಂದುಕೊಂಡಿರಲಿಲ್ಲ ಆ ಒಂದು ಪುಟ್ಟ ಜೀವ ನನಗೆ ಸಿಗುವುದು ಎಂದು.....

ಆಕಸ್ಮಿಕ ಪರಿಚಯ ನೀನು
ನನ್ನ ಪ್ರತಿ ನೋವು ಖುಷಿಗೆ ಸ್ಪಂದಿಸಿರುವ ನೀನು.‌

ನನ್ನ ತರಲೆ ಮಾತುಗಳ ಸಹಿಸಿಕೊಂಡೆ ನೀನು
ನಿನ್ನ ಪ್ರೀತಿಗೆ ಸೊತವಳು ನಾನು....

ಕಾಳಜಿಯ ತೋರಿದೆ ನೀನು
ನಿನ್ನ ಕಾಳಜಿಯಲಿ ಸುರಕ್ಷಿತಳು ನಾನು...

ಎಲ್ಲಾ ಸಂದರ್ಭದಲ್ಲೂ ಜೊತೆಗಿರುವೇ ನೀನು
ಯಾವ ಸಮಯದಲ್ಲಿ ನನ್ನ ದೂರ ತಳ್ಳುವೆಯೋ ಎಂಬ ಭಯದಲ್ಲೀರುವೇ ನಾನು.‌...

ನನ್ನ ವೈಯಕ್ತಿಕ ಜೀವನದ ದಿನಚರಿ ನೀನು
ನಿನ್ನ ನಿಷ್ಕಲ್ಮಶ ಪ್ರೀತಿ ಸ್ನೇಹದಲಿ ನನ್ನೆ ಮರೆತೇ‌ ನಾನು....

ಯಾರ‌ ಹಾಜರಿಯನ್ನು ಪರಿಗಣಿಸದ ನಾನು
ನೀ ಕಾಣದಿದ್ದಾಗ ಹುಡುಕಾಡುವೇ ನಾನು...

ಕಾದಿರುವೆ ನಿನ್ನ ಪ್ರತಿ ಮಾತಿಗೆ ಮಗುವಾಗಿ ನಾನು
ಬರುವೆಯಾ ಗೆಳೆಯ‌ ನನ್ನೋಡನೆ ಮಾತಾನಾಡಲು ನೀನು...

ಕಲ್ಪನೆಗೂ ಮೀರಿದ ಅದ್ಭುತ ನೀನು..‌...
ಓಡುತ್ತಿರುವ ಸಮಯಕ್ಕೆ ತಡವಾಗಿ ಬಾ ಎಂದು ಮನವಿ ಮಾಡಿರುವೆ ನಾನು...
ಹೀಗೆ ನಿಲ್ಲಬಾರದೇ ಸಮಯ‌ ನಮಗೆಂದು.‌

ನಿನ್ನ ಜೀವನದಲಿ ಖುಷಿ ತುಂಬಿರಲಿ ಆ ಖುಷಿಗೆ ಕಾರಣ ನಾನಗಿರಲಿ...

ಸ್ನೇಹದ ಅರ್ಥ ನಿನಗಾಗಿರುವಾಗ ಆ ಸ್ನೇಹದ ಪ್ರತ್ಯರ್ಥ ನಾನಗಬೇಕು.‌

??
೦೫/೦೨೦೨೫











- Jyothi

05 Jun 2025, 01:27 am

ನನ್ ಚಿಕ್ಕ ಪರಿಚಯ

ನಾನು.....
ನನ್ನ ಕನಸು ಕಾಣುವ
ಕನಸೇ ನಾನು.....
ಕನಸಲ್ಲಿ ಮರೆಯಾಗದೆ
ಕನಸಲ್ಲಿ ಕಾಣದೇ
ಕನಸಲ್ಲಿ ಪರಿಚಯ ವಾದ
ಸುಂದರ ಕನಸು ನಾನು....
ಕನಸಲ್ಲಿ ನಾನು ಒಂದು ಕಂಡೆ
ಸುಂದರ ಕನಸೊಂದು ಶುರುವಾಗಿತು..

..ಹಗಲಿನಲ್ಲಿ ನನ್ನ ಕನಸು..

ದೊಡ್ಡ ಊರು , ಹೆಸರು ವಾಸಿ ಯಾದ

- Anjali c s

02 Jun 2025, 11:41 pm

ಸುಖ ----ದುಃಖ



ದುಃಖ ಮರುಗಟ್ಟಿದಾಗ
ಸಂತೋಷದ ದಾರಿ ತೆರೆಯುತ್ತದೆ
ಆ ದಾರಿಯಲ್ಲಿ
ನಡೆಯಬೇಕು ಅಷ್ಟೇ!
ಆದ್ರೆ ಬಹುತೇಕ ಜನರಿಗೆ
ದಾರಿ ಕಾಣುವುದಿಲ್ಲ
ಕಾರಣ ಅಜ್ಞಾನ.....

ಕಷ್ಟಗಳು ಮೇಲಿಂದ ಮೇಲೆ
ಕಾಡುವಾಗ ದೃತಿಗೆಡದೆ
ಮುನ್ನೆಡೆಯಬೇಕು
ಇಲ್ಲದಿದ್ದರೆ ಕಷ್ಟಗಳು
ನಮ್ಮನ್ನು ದುಃಖದಲ್ಲಿ ಮುಳುಗಿಸುತ್ತವೆ........

ಸುಖವು ಸದಾ ನಮ್ಮ ಜೊತೆ ಇರಬೇಕು ಅಂದರೆ,
ನಾವು ನಮ್ಮ ಮನಸ್ಸನ್ನು
ಶುದ್ಧವಾಗಿ ಇಟ್ಟುಕೊಳ್ಳಬೇಕು
ಇಲ್ಲದಿದ್ದರೆ ನೀರಿನ ಮೇಲಿನ ಗುಳ್ಳೆಯಂತೆ ಸುಖವು ಬಹುಬೇಗ ಮಾಯವಾಗುತ್ತದೆ......

ಸುಖ ಸಂತೋಷಕ್ಕೆ
ಅತೋರೆಯುವ ಮನ
ಮನಸಿನ ಕೃಷಿಗೆ ಮುಂದಾಗದಿರುವುದು
ಅಸವಗಳಿಗೆ ಅಂಟಿಕೊಂಡಿರುವುದು
ದುಃಖಕ್ಕೆ ಕಾರಣ......

ಡಾ II ನಾಗೇಶ್ ಮೌರ್ಯ
9743907399

- ಡಾ ನಾಗೇಶ ಮೌರ್ಯ

02 Jun 2025, 12:26 pm

ಪ್ರೀತಿಗೆ ಕಾರಣ ಇಲ್ಲವೇ ಇಲ್ಲ

ನಲ್ಲೇ
ನೀ ಆಡುವ ಮಾತು
ಗುನುಗುತ್ತಿದೆ
ಹೃದಯದಲಿ ಕೂತು,
ನೀನ್ನ ಕುಡಿ ನೋಟ
ಕಲಿಸಿದೆ ಮನಸಿಗೆ ಹೊಸ ಪಾಠ
ಕೈ ಬಳೆ ಸದ್ದಿನಲಿ
ಕಳೆದು ಹೋದೆ
ಕಾಲ್ಗೆಜ್ಜೆ ನಾದದಲಿ
ಮರಳಿ ಬಂದೆ
ಈ ಮೌನದ ಭಾಷೆಗೆ
ಲಿಪಿ ಇಲ್ಲ
ಪ್ರೀತಿಲಿ ಬಿದ್ದೋರು
ಯಾರ ಮಾತು ಕೇಳೋದಿಲ್ಲ
ಪ್ರೀತಿಗೆ ಕಾರಣ ಇಲ್ಲವೇ ಇಲ್ಲ......

ಡಾ ಈ ನಾಗೇಶ್ ಮೌರ್ಯ
9743907399

- ಡಾ ನಾಗೇಶ ಮೌರ್ಯ

02 Jun 2025, 12:14 pm

ಅವಳು

ಅವಳಂತೆ ಯಾರಿಲ್ಲಾ ಬೇರೆಯವರಂತೆ ಅವಳಲ್ಲಾ

ಬಂಗಾರದಂತೆ ಅಲ್ಲಾ ಬಂಗಾರವೇ ಅವಳು,

ಚಂದಿರನಂತೆ ಅಲ್ಲಾ ಚಂದಿರನೇ ಅವಳು,

ಮಗುವಿನ ಮನಸ್ಸವಳು, ನಗು ನಗುತಾ ಇರುವವಳು,

ಮುಸ್ಸಂಜೆಯಂತೆ ಅವಳು,

ತಿಳಿಯಾದ ತಂಗಳಿ ಬಿಸುವವಳು,

ಹುಣ್ಣಿಮೆ ಬೆಳದಿಂಗಳ ಹೊಂಬಣ್ಣದವಳು,

ಮಾತುಗಳೇ ಮುತ್ತುಗಳು, ಮೌನದಲಿಯೇ ಮಾತು ಆಡುವವಳು.


~ಆಶಿಶ್⚡️

- Ashish B Metre

23 May 2025, 08:27 am

"ಅವರ ಆ ಪರಿಚಯ"

"ಜೀವನದಲ್ಲಿ ಯಾರು ಸುಮ್ಮನೆ
ಪರಿಚಯವಾಗುವುದಿಲ್ಲ..
ಅದರ ಹಿಂದೆ ಬಲವಾದ ಕಾರಣ
ಇರುತ್ತದೆ...
ಅಪರೂಪಕ್ಕೆ ಸಿಕ್ಕ ಸ್ನೇಹ, ಪ್ರೀತಿ,
ನಿಮ್ಮದು.ಸಂತೋಷವೋ.ದುಃಖವೋ
ಕೋಪವೋ.ಚೇಷ್ಟೆಯೋ.ಎಲ್ಲಾವು
ನಿಮೊಂದಿಗೆ ಮಾತ್ರ ಮಾಡಿರುವೆ
ಅದೆಲ್ಲವೂ ನನ್ನವರು ಎಂದು ಮಾತ್ರ
ನಿನ್ನ ಇರೋದು ಕಷ್ಟ ಅಂತಲ್ಲ
ಅದು ಮನಸಿಗೆ ಇಷ್ಟ ಇಲ್ಲ...
ನಿನ್ನ ಬಿಟ್ಟು ಬೇರೆ ಯಾರು ಸಿಗಲ್ಲ
ಅಂತಲ್ಲ..
ಸಿಗೋ ಯಾರು ನಿನ್ನ ಹಾಗೆ
ಇರೋದಿಲ್ಲ"..
- ಎ.ಆರ್.ರಾಹುಲ್.

- ?.?.?????.

21 May 2025, 10:12 pm

"ಅಪೂರ್ಣ ಅನುಭವಿ"

"ಜೀವನವೆಂಬ ಪುಸ್ತಕದಲ್ಲಿ ?.?.?????.
ಕೆಲವರು ಒಂದು ವಿಷಯದ
ರೀತಿಯಲ್ಲಿ ಬಂದು ಹೋಗುತ್ತಾರೆ...
ಆದರೆ ಬಂದು ಹೋಗುವಷ್ಟರಲ್ಲಿ
ಒಂದು ಪುಸ್ತಕದ ಅರ್ಥ ಮತ್ತು
ಅನುಭವಗಳನ್ನು ಕೊಟ್ಟು
ಹೋಗುತ್ತಾರೆ...
ಇದನ್ನು ಜೀವನದ ಉತ್ತಮ
ಪಾಠ ವೇನನ್ನಲೋ,ಅಥವಾ
ಬಿಟ್ಟುಹೋದ ನನ್ನ ಮೇಲಿನ
ಕೋಪವೇನ್ನಲೋ"...
- ಎ.ಆರ್.ರಾಹುಲ್.

- ?.?.?????.

21 May 2025, 06:41 pm

ಅವಳು?

ಅವಳು...

ನಗುಮೊಗದ ಬಾಲೆ

ಮಗು ಮನಸಿನ ಹೊಂಬಾಳೆ

ಜಗತ್ತಿನ ತೋರಿಕೆಗಷ್ಟೆ ಆ ನಗು ಆಗಿತ್ತೆ ಹೊರತು..

ಅವಳ ಜೀವನಕ್ಕಲ್ಲ...

ಎಲ್ಲಾ ಇದ್ದು ಯಾರು ಇರದ ಜೀವನ

ಅವಳದು...?

ವಿಷಯ ಅವಳ ಮನಸಿನದು...

ಆಕೆಯ ಕಣ್ಣೀರ ಅರಿತವರೆಷ್ಟೋ ನಾ ಕಾಣೆ...

ಆದರೆ ಅವಳ ಕೋಪವ ಕಠುರವಾಗಿ

ದೂರಿದರಲ್ಲೇನೆ....

ಸೂಕ್ಷ್ಮ ಮನಸು ಅವಳದು... ಅದು ಅವಳ ತಪ್ಪ...

ಎಷ್ಟಾದರೂ ಹೆಣ್ಣು ಮನಸದು... ನೋಂದೊಡನೆ ಕಣ್ಣಿರೇ ತೆಪ್ಪ.. ಕಂಡವರ ಕಣ್ಣಿಗೆ ಹಟವಾದರೂ.. ಅದು ಅವಳ ನೋವಿನ ಪ್ರತಿರೂಪವಾಗಿತ್ತು.. ಪ್ರಪಂಚವೇ ಕಣ್ಣೆರೆದು ನೋಡುವುದರೊಳಗೆ...

ಅವಳ ಮನಸು ಚಿದ್ರವಾಗಿತ್ತು...??

- Ashish B Metre

21 May 2025, 08:39 am