ಬಿಸಿಲು ಬೇಗೆ ತಣಿಸಲು ಸಾಲು ಮರವ ನೆಟ್ಟಳು
ಮಹಾ ಪುಣ್ಯಾಪಡೆದಳು ಮಹಾ ಮಾತೆಯಾದಳು
ಮರದಲಿ ತಾಯಿಪ್ರೀತಿ ತೋರಿ ಬೆಳೆಸಿದಳು
ಕರುನಾಡ ಕನ್ನಡದ ಮಣ್ಣಿನ ಕೀರ್ತಿ ಹಬ್ಬಿಸಿದಳು || ಪಲ್ಲವಿ ||
ಮರವ ನೋಡಿ ಮಮತೆಯಿಂದ ಹಿಗ್ಗಿದಳು
ಮಾನವ ಕುಲಕೆ ಮಹಾನ್ಯದ ತಾಯಿ ದೇವತೆ
ಬಿಸುಲು ಏನೇ ಇರಲಿ ತಿರು ತಿರುಗಿ ತಂದು
ನಿರುಣಿಸಿದಳು ಗಿಡವ ಹೆಮ್ಮರವ ಮಾಡಿ
ಸಂತೋಷ ಸಂಭ್ರಮ ಸಂತಸ ಕಂಡಳು ||1||
ಸಾಲು ಸಾಲಾಗಿ ಮೆರವಣಿಗೆ ಸನ್ಮಾನ ಕಂಡಳು
ಮರವೇ ಮನೆ ಪ್ರಕೃತಿಯೇ ಸಿರಿ ಸಂಪತ್ತು
ಮಾನವ ಕುಲಕೋಟಿ ಮಹಾ ಮಾತೆ...
ಮರವ ಅಪ್ಪಿಕೊಂಡು ಮುದ್ದಾಡಿದಳು
ಎಲ್ಲರ ಅಕ್ಕರೆಯ ಅಕ್ಕ ಸಕ್ಕರೆ ತಿಮ್ಮಕ್ಕ ತಿಮ್ಮಕ್ಕ..|| 2||
ತಾನು ಒಳ್ಳೆಯವರಂತೆ ತೋರಲು ಮತ್ತೊಬ್ಬರ ಬೆನ್ನ ಹಿಂದೆ ಅವರ ತೇಜೋವಧೆ ಮಾಡುವುದು ಸರಿಯಲ್ಲ..
ಮುಂದೆ ಸಕ್ಕರೆಯಂತೆ ಸಿಹಿಮಾತು ಬೆನ್ನ ಹಿಂದೆ ಹರಿತವಾದ ಕತ್ತಿ ಮಸೆಯುವುದು..!!
ತಮಗೆ ಸಹಾಯ ಮಾಡಿದಾಗ ಮಾತ್ರ ಅವರು ಒಳ್ಳೆಯವರು ,ಇಲ್ಲವಾದಲ್ಲಿ ಅವರು ನಮ್ಮ ಶತ್ರುಗಳು...!!
ತಮ್ಮ ಒಳ್ಳೆಯತನವನ್ನು ಬೇರೆಯವರ ಮುಂದೆ ಪ್ರದರ್ಶಿಸುವ ಅವಶ್ಯಕತೆಯಿಲ್ಲ..
ಒಳ್ಳೆಯತನ ಯಾವತ್ತಿಗೂ ಬೂದಿ ಮುಚ್ಚಿದ ಕೆಂಡದಂತೆ ಒಂದು ದಿನ ಬೆಂಕಿಯಂತೆ ಎಲ್ಲವನ್ನೂ ಸುಟ್ಟು ಬೂದಿ ಮಾಡುತ್ತದೆ ನೆನಪಿರಲಿ...!!
ಬೇರೆಯವರನ್ನು ಮೆಚ್ಚಿಸುವ ಸಲುವಾಗಿ, ತಮ್ಮವರನ್ನು ಕೀಳಾಗಿ ಕಾಣಬೇಡಿ..!!
ನಿಮ್ಮನ್ನು ನಂಬಿ ಬಂದವರನ್ನು ಯಾವತ್ತೂ ದೂರ ಮಾಡಬೇಡಿ...
ಕ್ಷಣಿಕ ಸಂತೋಷಕ್ಕಾಗಿ ತಮ್ಮವರ ಭಾವನೆಗಳ ಜೊತೆ ಆಟವಾಡಬೇಡಿ...
ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ, ಅವರ ಭಾವನೆಗಳಿಗೆ ಗೌರವ ನೀಡುವುದನ್ನು ಕಲಿಯಿರಿ..
ನೀವೂ ಮುಂದೆ ಸಾಗಿ ಹಾಗೂ ನಿಮ್ಮ ಜೊತೆಗಾರರಿಗೂ ಮುಂದೆ ಹೋಗಲು ದಾರಿ ಮಾಡಿಕೊಡಿ...
ಸ್ವಾರ್ಥದಿಂದ ಏನನ್ನು ಪಡೆಯಲು ಸಾಧ್ಯವಿಲ್ಲ ಅದರ ಬದಲು ನಿಸ್ವಾರ್ಥಗಳಾಗಿ ಮುಂದೆ ಸಾಗಿ ,ಜಯ ಖಂಡಿತವಾಗಿ ಸಿಕ್ಕೇ ಸಿಗುತ್ತದೆ...!!
ಇದು ನಿನ್ನ ಜೀವನ So ನಿನಗಾಗಿ ನೀನು ಬದುಕಿದರೆ ಸಾಕು , ಅದನ್ನು ಬಿಟ್ಟು ನಿನ್ನ So Called Friends ತರಹ ನಟಿಸುವವರನ್ನು ಮೆಚ್ಚಿಸುವ ಅವಶ್ಯಕತೆ ಇಲ್ಲ... ಹಾಗೂ ನಿನ್ನ ಅವಶ್ಯಕತೆ ಇಲ್ಲದ ಕಡೆ ತಲೆಯನ್ನು ಬಾಗಿಸುವ ಅಗತ್ಯನೂ ಇಲ್ಲ...!!!
ನನ್ನವರು ಎನ್ನುವರೆಲ್ಲ ನನ್ನವರಲ್ಲ...
ಸಮಯ ಎದುರಾದಾಗ ಕಂಡು
ಕಾಣದಂತೆ ದಾರಿಯಲ್ಲಿ ಹುಡುಕಿ ಹೋದರಲ್ಲ
ಮತ್ತೆ ಕಣ್ಣೆದುರು ಸಿಕ್ಕಾಗ ನೀವು ಆದಿನ
ಕಂಡಾಗ ನೀವು ಕಂಡ್ರಿ ಎಂದಾಗ..
"busy " ಎಂದೂ ನುಡಿದರಲ್ಲ..
ಮಾತು ಸ್ವಲ್ಪ ಮೌನವಾಗಿ ದೂರ
ಸರಿವರಲ್ಲ ಸರಿವರಲ್ಲ....
llನನ್ನವರು ಏನುವರೆಲ್ಲ ನನ್ನವರೆಲ್ಲ ll
ಹಣದ ಸಂಪತ್ತು, ಇದ್ದಾಗ ಇರುವೆ
ಸಾಲುಗಟ್ಟಿದಂತೆ ನಿಲ್ಲುವರಲ್ಲ....
ಮಾತು ಮಾತಿನಲಿ ನಮ್ಮವ.. ಎನುವರಲ್ಲ
ಪುರಾತನ ಸಂಬಂದ ಹುಡ್ಕಿ ನಮ್ಮವ..
ಎಂದೂ ಬಂದು ಹೋಗುವರಲ್ಲ
ಇದೆ ಈ ಜಗದ ನಿಯಮ..ಈ ಜನರ ನಿಯಮ
ನೀವು ಹುಡುಕುತ್ತಿರುವ ವೀರೇಶಪ್ಪ ವಿ ಖೈರವಾಡಗಿ ಅವರ ಕನ್ನಡ ಕವಿತೆಗಳು/ಗೀತೆಗಳ ಲಿರಿಕ್ಸ್ ಇಲ್ಲಿವೆ:? ವೀರೇಶಪ್ಪ ವಿ ಖೈರವಾಡಗಿ - ಕವಿತೆಗಳು/ಗೀತೆಗಳು1️⃣ ಮಳೆಬಿಲ್ಲೆ ?(ಪಲ್ಲವಿ)
ಮಳೆಬಿಲ್ಲೆ ಚಲುವಿನ ಮಳೆಬಿಲ್ಲೆ
ಮಳೆಬಿಲ್ಲೆ ಮೋಡಗಳ ನಡುವಲ್ಲೇ
ತುಂತುರು ಮಳೆಹನಿ ಸರಮಾಲೆ
ಎಳು ಬಣ್ಣದ ಕಾಣಲು ಸುಂದರ ..|| ಪಲ್ಲವಿ ||(ಚರಣೆ-1)
ಬಾನು ಭೂಮಿ ಸೌಂದರ್ಯ ಈ ವಿಸ್ಮಯ
ಕಡಲು ನದಿಗಳ ಸಂಗಮ ಈ ಸಂಭ್ರಮ
ನೋಡು ಕಾನನ ಪ್ರಕೃತಿ ಹಾಡುವ ಸರಿಗಮ
ಹಕ್ಕಿ ಹಾರಿ ಗೂಡು ಕಟ್ಟುವ ಸಿಹಿ ಸಂಗಮ || 1 ||(ಚರಣೆ-2)
ಹೂ ಬಳ್ಳಿ ಚಂದ ಹಕ್ಕಿಗಳ ಇಂಚರ ಚಂದ
ವನಗಳ ವಯ್ಯಾರ ಹಣ್ಣುಗಳು ಸುವಾಸನೆ
ಸುಮಧುರ ಸುಮದುರ ಸುಂದರ ಹಂದರ
ಎಲ್ಲೆಲ್ಲೂ ವನ್ಯಮೃಗ ಸೌಂದರ್ಯವೇ ಚಂದ || 2 ||✍️ ಕವಿ: ವೀರೇಶಪ್ಪ ವಿ ಖೈರವಾಡಗಿ
? ಸ್ಥಳ: ಬೆಂಗಳೂರು, ಕರ್ನಾಟಕ
?
ಹೃದಯದ ಅಂತರಾಳದ
ಮಾತಾಡಿದ ಸಿಹಿ ನೆನಪು...
ಮರತೇನೇನು? ಸಂಗಾತಿ...
ನೋಡುವ ತವಕ...
ನನ್ನಮನದಾಳದಲಿ ಮೂಡಿದೆ..
ನನ್ನಲಿ ನನ್ನಲಿ..ನನ್ನ ಕನಸಲಿ
ನನ್ನ ಬದುಕು ಬಾಳಲಿ ನೀನೇ
ಶೃಂಗಾರ ಶೃಂಗಾರ....
ರಂಬೆ ಮೇನಕೆ ಅವರ್ಯಾರು
ನಿನನಗೇಕೆ ಹೋಲಿಕೆ...
ಅವರಿಗಿಂತ ಅಪ್ಸರೆ...
ಭೂಮಿಗೆ ಇಳಿದ
ಬಂಗಾರದ ಗೊಂಬೆ...ll
ಕಾಮನಬಿಲ್ಲು... ಮೂಡಿದೆ
ನನ್ನೆದೆಯ ತೋಟದಲಿ
ಪ್ರೀತಿಯ ಕಾರಂಜಿ ಹರಿಸು
ನನ್ನೆದೆಯ ತೋಟದಲಿ..
ಅಂದದ ಮೊಗಸಿರಿ.. ಚಲುವೆ
ಚಂದಿರನ ಬೀಳುಪೆ ಒಲವೇ
ಮಾತು ಮರೆಯಲಾಗದ...
ಜೊತೆಗೆ ಪಯಣದ...
ನೆನಪು ನನ್ನಲಿ ನನ್ನಲಿ..
ನನ್ನ ಹೃದಯದ ಗೂಡಲಿ
ಚಂದಿರನನ್ನು ನಾಚಿಸುವ ನಗು ನಿಮ್ಮದು!!
ಅದನ್ನು ಹೊಗಳುವ ಕೆಲಸ ನನ್ನದು?
ತಾರೆಯರಲ್ಲಿ ಉಂಟಾಗಿದೆ ನಿನ್ನ ಮೇಲೆ ಮುನಿಸೊಂದು....
ಆ ಚಂದಿರನನ್ನು ನೀನು ಕದ್ದೆಯೆಂದು!!
ಹುಡುಕುತ್ತ ಬಂದ ನನಿಗೆ ಅಂದು ಆ
ಚಂದಿರ ಕಂಡ ನಿಮ್ಮ ಗುಳಿ ಕೆನ್ನೆ ಯಲ್ಲಿ ಇಂದು!!❤️❤️
ಶಾಲೆಯೊಂದು ದೇಗುಲ
ಮಕ್ಕಳೇ ದೇವರು
ಉಳಿಸೋಣ ಬೆಳೆಸೋಣ
ಸರ್ಕಾರಿ ಶಾಲೆಯನ್ನ||
ಸಮವಸ್ತ್ರದ ಚಿಂತೆ ಇಲ್ಲ
ಶೂ-ಸಾಕ್ಸ್ ಕೊಡ್ತಾರಲ್ಲ
ಶುಲ್ಕ ಪಾವತಿ ಇಲ್ಲವೇ ಇಲ್ಲ
ಖಚಿತ-ಉಚಿತ ಶಿಕ್ಷಣ ಯಾವುದು ಚಿಂತೆ ಇಲ್ಲ
ಉಳಿಸೋಣ ಬೆಳೆಸೋಣ
ಸರ್ಕಾರಿ ಶಾಲೆಯನ್ನ||
ಉಚಿತ ಪ್ರವಾಸ ಕರ್ನಾಟಕ ದರ್ಶನ
ಕಲಿಕಾ ಪ್ರಗತಿಗೆ ಲಭ್ಯವಿದೆ ಶಿಷ್ಯವೇತನ
ಶಿಸ್ತು ಸಂಸ್ಕಾರದ ಗುಣಾತ್ಮಕ ಶಿಕ್ಷಣ
ಇಲ್ಲಿ ಓದಿ,ಆಡಿ ಬೆಳೆದ ಕಾಲವೇ ಮಧುರ ಕ್ಷಣ
ಉಳಿಸೋಣ ಬೆಳೆಸೋಣ
ಸರ್ಕಾರಿ ಶಾಲೆಯನ್ನ||
ಬಡವ ಬಲ್ಲಿದ ಎಂಬ ಭೇದ ಭಾವ ಇಲ್ಲಿ ಇಲ್ಲ
ಆಟ, ಪಾಠ ,ಊಟ ಯಾವುದೂ ಕೊರತೆ ಇಲ್ಲ
ಪ್ರತಿ ವರ್ಷ ಮಾಡುವರು ಆರೋಗ್ಯ ತಪಾಸನೆ ಅದರಿಂದ ಮಕ್ಕಳಿಗೆ ರೋಗದಿಂದ ರಕ್ಷಣೆ
ಉಳಿಸೋಣ ಬೆಳೆಸೋಣ
ಸರ್ಕಾರಿ ಶಾಲೆಯನ್ನ
ಶುಚಿ-ರುಚಿ ಬಿಸಿಯೂಟ
ಬಗೆ ಬಗೆಯ ಆಟ ಪಾಠ
ಹಾಲು ,ಹಣ್ಣು ,ರಾಗಿ ಮಾಲ್ಟ್ ದಿನಾಲು ಒಂದು ಕೋಳಿ ಮೊಟ್ಟೆ
ಪೋಷಕಾಂಶ ಸವಿದ ಮಕ್ಕಳ ರಟ್ಟಿ ಬಲುಗಟ್ಟಿ
ಉಳಿಸೋಣ ಬೆಳೆಸೋಣ
ಸರ್ಕಾರಿ ಶಾಲೆಯನ್ನ||
ಶಿಕ್ಷಕರ ಕೊರತೆ ಇಲ್ಲ
ಅತಿಥಿ ಶಿಕ್ಷಕರು ಇರುವರಲ್ಲ
ಕ್ರಿಯಾಶೀಲ, ಸೃಜನಶೀಲ ಶಿಕ್ಷಕರ ವೃಂದ
ಅವರೊಂದಿಗೆ ಪ್ರತಿದಿನ ಊಟ,ಪಾಠ ಬಲು ಚೆಂದ
ಉಳಿಸೋಣ ಬೆಳೆಸೋಣ
ಸರ್ಕಾರಿ ಶಾಲೆಯನ್ನ||
ಕೊಡುವರಿಲ್ಲಿ ಕುವರಿಯರಿಗೆ ಕರಾಟೆ ತರಬೇತಿ
ಬಾಳಿನಲ್ಲಿ ಬಾರದು ಎಂದಿಗೂ ಭಯದ ಭೀತಿ
ಕಳಿಯುವರು ಮಕ್ಕಳಿಲ್ಲಿ ಒಳ್ಳೆಯ ರೀತಿ-ನೀತಿ
ನೂರಕ್ಕೆ ನೂರು ಪ್ರತಿ ದಿನ ಹಾಜರಾತಿ
ಉಳಿಸೋಣ ಬೆಳೆಸೋಣ
ಸರ್ಕಾರಿ ಶಾಲೆಯನ್ನ||
ರಚನೆ:
ಎಸ್, ಬಿ,ನಿಡಗುಂದಿ
ಪ್ರಭಾರಿ ಮುಖ್ಯೋಪಾಧ್ಯಾಯರು
ಸರ್ಕಾರಿ ಪ್ರೌಢಶಾಲೆ ನರೇಗಲ್ಲ