Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಒಬ್ಬಂಟಿ ನಾ ಆ ಮಳೆಯಲ್ಲಿ.....

ಗವಿಗಟ್ಟಿದ ಮೋಡದ ನಡುವೆ
ಬಡ ಬಡಿಸುತ್ತಿದೆ ಅಬ್ಬರದ ಸಿಡಿಲು
ಮಳೆ ಮುಯ್ಯುವ ಸಮಯದ ಕವಲು
ಒಬ್ಬಂಟಿಯಾಗಿ ನಿಂತಿರುವೆ ನಾ ಮರದ ಕೆಳಗೆ
ಬರಡು ಭೂಮಿಗೆ ಮಳೆ ಉಯ್ಯಲು
ಸಂತಸ ಪಡಲ ಒಬ್ಬಂಟಿಯ ಭಯದ ನಡುವೆ
ಅಬ್ಬರದ ಮಳೆಯ ಸೂಚನೆಯ ಕಡುಗತ್ತಲು
ಯಾವ ಮಾನವನ ಸುಳಿವಿಲ್ಲ ಅತ್ತಿರದಲ್ಲಿ
ಪ್ರಾಣಿ ಪಕ್ಷಿಗಳೇ ಹೆದರಿ ಗೂಡು ಸೇರಿಕೊಂಡಂತಿದೆ
ಕಾಲ ಭಯದಲ್ಲಿ ಒಬ್ಬಂಟಿ ತನದ ರುಚಿ
.... ತೋರಿಸುತ್ತದೆಂದು ಕಾಣುತ್ತಿದೆ
ಮಳೆಗೆದರಿ ಪೈರು ಮುದುರಿ ಕುಂತಂತಿದೆ
ಸುಂಟರಗಾಳಿಯ ರಭಸಕ್ಕೆ ಮರಗಳು
ಬಳಲಿ ಬೆಂಡಾಗಿವೆ
ಭಯದ ಅಮಲು ಹೆದೆ ಬಡಿತವನ್ನ ಹೇರಿಸುತ್ತಿದೆ
ಎಂದು ಒಬ್ಬಂಟಿ ಯಾದವನಲ್ಲ
ಇಂತಹದೊಂದು ... ಅಪರೂಪದ ಮಳೆಯಲ್ಲಿ
ಚಿಕ್ಕಂದಿನಿದೇಕೋ ಮಳೆ ಸಿಡಿಲ ಕಂಡರೆ
ತಳಮಳ ಹೃದಯದಲ್ಲಿ........


...... ಮಂಜು

- ಮಂಜು

20 Jun 2018, 05:21 pm

ಪ್ರತಿಬಿಂಬ ನೋಡುವ ಹಂಬಲ ಅವಳ ಕಣ್ಣಲ್ಲಿ....

ಮುಂಗಾರು ತುಂತುರು ಮಳೆಯ
ಸೂಚನೆಯ ತಂಗಾಳಿಯಲ್ಲಿ ತೇಲುತಿಹದು
ಕರಾವಳಿಯ ಕಡಲಂತೆ ಕೇಶರಾಶಿ!!
ಸೂರ್ಯನ ಬೆಳಗಿನ ಹೊಂಗಿರಣವನ್ನು
ನಾಚಿಸುವಂತಿಹದು ನನ್ನಾಕೆಯ ಕಣ್ಣೋಟ
ತಡೆದಿಹುದು ಬೆರೆಯೆಡೆಗೆ ದೃಷ್ಟಿ ಹರಿಸದಂತೆ! ಚಂದಿರನಿಲ್ಲದ ಬಾನಿನಲ್ಲಿ......
ಶುಕ್ರನಂತೆ ಕಂಗೊಳಿಸುತಿಹದು ಆಕೆಯ
ಮೂಗಿನಂಚಲ್ಲಿ ಮುದ್ದು ಮುಗುತಿ
ರಚ್ಚೆ ಹಿಡಿದು ಅಳುವ ಪುಟ್ಟ ಮಗುವನ್ನು
ಸಮಾಧಾನ ಪಡಿಸಲು ಸಾಕು....
ಅವಳ ತುಟಿಯಂಚಿನ.... ಕಿರುನಗು
ತಪಗೈದು ಸಾಧಿಸಿದ ಸಾಧಕರ......
ಮುಗ್ದತೆ ಅವಳ ಮುಖದಲ್ಲಿ
ಎಲ್ಲಿ ದೃಷ್ಟಿಯಾಗಿ ಬಿಡುವುದೋ ಎಂದೆನಿಸುತಿಹದು ನನ್ನಾಕೆಗೆ ನನ್ನಿಂದ
ಮನಸ್ಸು ಚಿಟ್ಟೆಯಂತೆ ಹಾರಡುತಿದೆ
ಆಕೆಯ ಗುಂಗಲ್ಲಿ....
ಒಂದು ಪುಟ್ಟ ಸ್ಥಾನಕೊಡು ಗೆಳತಿ...
ನಿನ್ನಿ ಹೃದಯದಲ್ಲಿ ಸೇವಕನಾಗಿ
ದುಡಿವೆ ನಿನಗಾಗಿ ನಾ ಎಂದೆದು...

ಒಂದು ಬಾರಿಯಾದರೂ ಅವಳೆದುರು ನಿಂತು
ನೋಡಬೇಕು ನನ್ನ ಪ್ರತಿಬಿಂಬ ಆಕೆಯ
ಕಣ್ಣಲ್ಲಿ........


ಮಂಜು

- ಮಂಜು

20 Jun 2018, 11:21 am

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ....

ಗೆಳೆಯನಾಗಿ ಬಂದಾ ಸ್ನೇಹಿತ ನೀ.......
ನಿನ್ನೆಲ್ಲಿಂದಲೋ ಬಂದೆ ,ಅಪರಿಚಿತನಂತೆ ಪರಿಚಿತನಾದೆ ....
ಇಂದು ಎಂದು ಬಿಡಲಾಗದ ಸಂಬಂಧದಂತೆ ಅಣ್ಣ ನಾ ಸ್ಥಾನ ತುಂಬಿದವ ನೀ ......

ಇಂದು ಅದೇ ಅಣ್ಣನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳ ಕೋರುತಲಿರುವೆ .....

ನೂರಾರು ವರ್ಷಗಳ ಕಾಲ ಸುಖವಾಗಿ ಬಾಳು ಎಂದು ಆಶಿಸುವ ಪುಟ್ಟ ಮನಸ್ಸು ನನ್ನದು ಅಣ್ಣ

- Acchu love

20 Jun 2018, 12:24 am

ಸ್ನೇಹಾನೇ ಹೀಗೆ

ಹೇಗೆ ತೀರಿಸಲಿ
ನಾ ನಿನ್ನ ಪ್ರೀತಿಯ ಋಣವನು
ಗೆಳೆಯಾ...
ತೀರಿಸಿದರೂ
ತೀರಿಸಲಾರದು
ಸಾಕಷ್ಟಿದೆ........
ಸಾಕಾಗದೇನೋ
ನಾ ಪಡೆದು ಬಂದರೂ
ಏಳೇಳು ಜನುಮಾ......
ಸ್ನೇಹನಾ ಹೀಗೆ!

- shruthi AS

19 Jun 2018, 09:51 pm

ಎಲ್ಲ ನಶ್ವರ ಮಾನವ.....

ನಾನು ನನ್ನದು ಎನ್ನುವುದು
ಕ್ಷಣಕಾಲದ ಮಾತುಗಳಷ್ಟೇ
ಇಂದು ನೀ ಒಡೆಯ ನಾಳೆ
ಇನ್ನಾರೋ ಯಾರು ಬಲ್ಲವರು
ನಾನು ನನ್ನಿಂದಲೇ ಎಂದವನ ಸ್ಮಶಾನಕ್ಕೆ
ಭೇಟಿಕೊಂಡೆಂದ ಪರಮಾತ್ಮ
ಯಾರು ನೀಡಿದರು ಹುಟ್ಟು ಮಾತ್ರ ನಿನಗೆ ಗೊತ್ತು
ಮರಣ ಬಗ್ಗೆ ಪರಿಚಯ ಕೂಡ ನಿನಗಿಲ್ಲ
ಬರುವಾಗ ನೀ ಅಳುತ್ತಲೇ ಬರುವೆ
ಹೋಗುವಾಗ ಅಲವರನ್ನು ಅಳಿಸುವೆ
ಅವರು ನನ್ನವರು ಇವರು ನನ್ನವರೆನ್ನುವೆಯಲ್ಲ
ಹೊರಡುವಾಗ ಜೊತೆಗೆ ಬರುವವರ್ಯಾರು
ಎಲ್ಲವೂ ನನ್ನಿಂದಲೇ ಎನ್ನುವ ಅಗತ್ಯವಿಲ್ಲ
ಅದಕ್ಕೆ ಕಾರಣಕರ್ತರು ಇದ್ದೇ ಇರುತ್ತಾರೆ
ನೀ ಬರುವ ದಿನಾಂಕ ನೀ ತಿಳಿದಿರುವೆ
ನಿನ್ನ ಜೀವನದ ಕೊನೆಯ ದಿನಾಂಕ ನಿ ಬಲ್ಲೆಯ
ಅಂಹಕಾರ ಜಂಭದಿಂದ ಬೀಗಬೇಡ
ಇಂತವರು ಮಣ್ಣಲ್ಲಿ ಮಣ್ಣಾದ ಚರಿತ್ರೆ ಅಲವು

ಬರುವಾಗ ಹೊತ್ತುತಂದದ್ದು ಏನು ಇಲ್ಲಾ ಎಂದ ಮೇಲೆ ಹೋಗುವಾಗ ಕೊಂಡೊಯ್ಯಲು ಏನಿದೇ

ಯಾರಿಗಾಗಿ ಯಾವುದಕ್ಕಾಗಿ ಹೊಡೆದಾಟ
ಬಡಿದಾಟ ನೀನೇ ಶಾಶ್ವತವಲ್ಲವೆಂದಮೇಲೆ

ಷಡ್ಯಂತ್ರಗಳ ರೂಪಿಸಿ ದುರ್ಯೋಧನ ಗೆದ್ದದ್ದೇನು
ಅಧರ್ಮದ ರೂವಾರಿ ರಾವಣ ಸಾದಿಸಿದ್ದೇನು

ಮಾನವ ಧರ್ಮಕ್ಕೆ ತಲೆ ತಗ್ಗಿಸಿ ನಿ ಬಾಳು

ಇರುವ ವರೆಗೆ ದುಡಿದು ನಿನ್ನೆ ಹೆಸರ
ಭೂಮಿಯಲ್ಲಿ ಬಿತ್ತಿ ಹೋಗು ಕರ್ಣ ನಂತೆ


ಮಂಜು

- ಮಂಜು

19 Jun 2018, 08:36 pm

ಸಿಹಿ ಸಮರ❤

ಪ್ರತಿ ಕ್ಷಣಕು ಬದಲಾಗುವ ಈ ಅಸ್ಥಿರ ಮೋಡ ಕವಿದ ಬಾನಿನಲಿ
ಮೋಡಗಳ ನಡುವೆ ಬಿಡುಗಡೆಗಾಗಿ ಕಾದಿವೆ ಆ ಚಂದ್ರ ತಾರೆಗಳು.
ಈ ಇರುಳಿನ ಬಿಡುಗಡೆಯ ಸಿಹಿ ಸಮರದಲಿ
ಆ ಚುಕ್ಕಿ ಚಂದ್ರರ ನಡುವಲಿ ಹುಡುಕಿರುವೆ ನಿನ್ನನೇ, ನೆನೆಯುತಲಿ ನಿನ್ನನ್ನೇ... !

- Vijaykiran NC

19 Jun 2018, 07:28 pm

ಮೌನ ಹಿತವಾಗಿದೆ..

ನಿನ್ನ ಮೌನ ಹಿತವಾಗುತ್ತಿದೆ ಹುಡುಗಿ
ಹಾಗಂತ ನಾನೇನು
ಎಂದೂ ಧ್ಯಾನಕೆ ಕುಳಿತವನಲ್ಲ...
ಗಿರಿಶಿಖರ ಏರಿ ನೆಮ್ಮದಿಗಾಗಿ
ಹುಡುಕಾಡಿದವನಲ್ಲ...
ತಪಸ್ಸಿಗೆ ಕುಳಿತು
ಮೌನವನು ಒಲಿಸಿಕೊಂಡವನಲ್ಲ...
ಆದರೂ ಆ ನಿನ್ನ ಮೌನ
ಅದ್ಯಾಕೋ ನನಗಿಷ್ಟ ಕಣೆ ಹುಡುಗಿ...

- ಪ್ರಿಯಾಂಕ

19 Jun 2018, 12:28 pm

ಗಾಳಿ ಗೋಪುರ

ಮೂರು ದಿನದ ಬದುಕಿನೊಳ್ಗ
ಎಷ್ಟು ಕನಸು ಕಟ್ತದ್ನೋಡು ಈ ಜೀವ
ಗಾಳಿ ಬೀಸಿ ಗೋಪುರ ಮಣ್ಣ ಸೇರಿದ್ರ
ಸಹಿಸೋರ್ಯಾರೇಳು ಆ ನೋವ

- ಶ್ರೀಕಾವ್ಯ

18 Jun 2018, 06:06 pm

ಬೆಳ್ದಿಂಗಳು

ಬದ್ಕಲ್ಲಿ ಅಮಾವಾಸ್ಯೆ ಕತ್ಲನ್ನೇ ಕಂಡಿದ್ದೀ ಜೀವ
ಎಂದೂ ಎದ್ರಿದ್ದಿಲ್ಲೇನೊ ಕಣೆ
ಆದ್ರ ಹುಣ್ಮೆ ಬೆಳ್ದಿಂಗ್ಳಂಗಿರೋ ನಿನ್ಕಣ್ಣ
ಕಂಡ್ರೆ ಎದೆ ಝಲ್ ಅಂದಂಗಾಗ್ತದೆ ಯಾಕೇಳೆ ಜಾಣೆ

- ಶ್ರೀಕಾವ್ಯ

18 Jun 2018, 06:06 pm

ಪ್ರೀತಿ

ಹಸಿವು ಕಾಣದು ನಿದಿರೆ ಬಾರದು
ನಾನು ನಿನ್ನ ಕೈಸೆರೆ
ನಾನು ನಿನ್ನೊಳು ನೀನು ನನ್ನೊಳು
ಎಂಥ ಮಧುರ ಭಾವನೆ
ಹೇಗೆ ಹೇಳಲಿ ನನ್ನ ಮನದ ಭಾವನೆ
ಕೊಂದಾದರು ಬಿಡು
ನೀ ಹೀಗೆ ಕಾಡಬೇಡ ಎನ್ನ
ಬೀಸುವ ತಂಗಾಳಿಯಂತೆ
ನಿನ್ನ ನೆನಪದು ಮನೋಹರ
ನೀ ನನ್ನ ಹೃದಯದಲ್ಲಿ ಅಜರಾಮರ
ನನ್ನ ಜೀವವು ನಿನ್ನಲೆ
ಒಂದಾಗಿ ಹೋಗಿದೆ ಪ್ರಿಯತಮ

- Hani

18 Jun 2018, 12:24 pm