Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಉರಿಬಿಸಿಲಲಿ ಬಳಲಲು
ಹೊಂಗೆ ಮರದ ತಂಪಂತೆ ನೀನು
ದಾಹಕೆ ಗಂಟಲು ಒಣಗಲು
ಸನಿಹದ ಸಲೆಯಲಿ ಹರಿವ ಜುಳು ಜುಳು ನೀರಂತೆ ನೀನು...
ನೀನಿಲ್ಲದೇ ನಾನಿರುತಿರಲಿಲ್ಲ ಅಮ್ಮ..
ಈ ಭೂಮಿಗೆ ನನ್ನ ತನುವನು ನೀಡಿ
ತನುವಿಗೊಂದು ಜೀವವ ನೀಡಿ
ಜೀವಕೊಂದು ಜೀವನವನು ನೀಡಿ
ಮನಕೆ ತಾಳ್ಮೆಯ ಬುದ್ದಿ ನೀಡಿ
ಮನಕೆ ಕನ್ನಡಿಯಾಗಿ
ಒಳಿತಿಗೆ ಪ್ರತಿದಿನ ಪ್ರಾರ್ಥನೆ ಮಾಡಿ
ಕುಡಿಗೆ ಗುಣಗಳ ಅರ್ಪಣೆ ಮಾಡಿ
ಮಕ್ಕಳಿಗೆಲ್ಲ ವ ದಾನವ ಮಾಡಿ
ಮಧುರ ವೃಂದಾವನದ ಯಶೋಧೆಯಂತೆ
ಕಂಗೊಳಿಸುವ ನಿನ್ನ ದರ್ಶನದಲ್ಲಿ ದೇವರ ಕಾಣುವೆನಮ್ಮ..
ಕಾಳ ರಾತ್ರಿಯಲಿ ದೀಪವಾಗಿ
ಕಷ್ಟದ ದಿನಗಳಿಗೆ ಜೊತೆ ಜೊತೆಯಾಗಿ
ಅಧೈರ್ಯ ತುಂಬಿದ ಮನಕೆ ಧೈರ್ಯವಾಗಿ
ಸೋತ ಮನಸ್ಸಿಗೆ ಹುರುಪಿನ ಕನಸುಗಳಾಗಿ
ಎಲ್ಲವ ನೀಡಿ ಏನು ಬಯಸದ ಕರುಣಾಮಯಿ ನೀನಮ್ಮ...
ಆಡದೆ ಕೇಳದೆ ಮನವನು ಅರಿತು ಆಶೀರ್ವಾದದಿ ವರವನು ಕೊಡುವ ನನ್ನಯ ದೇವರು ನೀನಮ್ಮಾ...
ನೀನಿಲ್ಲದೇ ನಾನಿಲ್ಲಮ್ಮ...
ಅಮ್ಮ ಅಮ್ಮ ನನ್ನಯ ದೇವರು ನೀನಮ್ಮಾ...
- Manju..
23 Jun 2018, 07:59 pm
ಬಾಲ್ಯಸರಿದು ಹರೆಯ ಸುರಿದು
ತನುಮನ ಬಯಕೆಗಳ ಗೂಡಾಗಿದೆ
ಅಂಗಾಂಗಗಳಲಿ ಆಸೆ ಕಾರಂಜಿ ಪುಟಿದು
ಹೃದಯ ಹರುಷದಲಿ ಹಾಡಿದೆ
ಮಾತುಗಳು ಸದ್ದಿಲ್ಲದೆ ಸೆರೆಯಾಗಿವೆ
ಮನವೆಂಬ ಮೌನಕೋಟೆಯಲಿ
ಭಾವನೆಗಳು ಬಂಧಿಯಾಗಿವೆ
ಸಂಕೋಚದ ಸಂಕೋಲೆಯಲಿ
ಒಲವ ಕಣ್ಣೋಟ ಮನವ ಭೇದಿಸಿದೆ
ಪ್ರೀತಿಯ ಸೆಳೆತಕೆ ಮೌನ ಮರೆಯಾಗಿದೆ
ಭಾವಗಳು ಬಂಧ ಕಳಚಿ ಬಾನಲಿ ಹಾರಾಡಿವೆ
ಸಂಕೋಲೆ ಕೊಂಡಿ ಕಡಿದು ನಾಚಿಕೆ ನಸುನಕ್ಕಿದೆ
ಮೂರುಗಂಟ ನಂಟಿನ ತಾಳಿ ತಾಳ್ಮೆಯ ತರಲಿ
ಏಳುಹೆಜ್ಜೆಯ ಗುರುತು ಎಡವದೇ ಇರಲಿ
ತನುಮನಗಳ ಮಿಲನದಿ ನಾನಾದೆ ಸಂಗಾತಿ
ತಿಳಿಯದೇ ರತಿಮನ್ಮಥ ನಾಚಿದ ಸಂಗತಿ
*ರತ್ನಾ ಬಡವನಹಳ್ಳಿ*
- ರತ್ನಾಬಡವನಹಳ್ಳಿ
23 Jun 2018, 05:11 pm
ನನ್ನೆಲ್ಲಾ ನೋವುಗಳನು ಕ್ಷಣದಲ್ಲೇ ಮರೆಮಾಚುವ ನಗುವು ನೀನು, ಮನಸು ಕಂಡ ಮನಮೋಹಕ ಮಾಯೆ ನೀನು, ನೆನ್ನೆಯಲ್ಲಿ ಅಡಗಿದ್ದ ನನ್ನ ನೆರಳಿನ ಛಾಯೆ ನೀನು, ನಾಳಿನೆಡೆಗೆ ನನ್ನ ನಡಿಸುವ ಆಸೆ ನೀನು.
ಒಲವುಣಿಸಿದ ಅಮೃತಕೆ ಸಿಹಿ ತುಂಬಿದ ಪ್ರೀತಿ ನೀನು, ನನ್ನೆದೆಯ ಪುಟ್ಟ ಗುಡಿಸಿಲಲ್ಲಿ ಹೃದಯ ಹಚ್ಚಿದ ನಂದಾದೀಪ ನೀನು.
ಏನೆಂದು ಹೇಳಲಿ ನಾನಿಂದು ನಿನಗೀಗ ಸವಿಯಾದ ಈ ಬಾಂಧವ್ಯಕೆ ಹೊಸತಾದ ಜಗವ ಹುಡುಕುವ ಆಸೆ ನಿನ್ನೊಡನೆ ನಗುತಿರಲಿ ಯಾವ ಅಡ್ಡಿ ಆಮಿಷೆಗಲಿಲ್ಲದೆ.
ಕೊರಡು ಕೊನರಿ ತಡವರಿಸಿ ತಂದ ನಿನ್ನ ವಿಳಾಸ ಸರಸರನೆ ಡಬಡಬಿಸುವ ಹೃದಯಕ್ಕೆ ಕೊಟ್ಟು ಭಾರ ತೀರಿಸಿಕೊಳ್ಳುವ ಆಸೆ ಸದ್ದು ನಿಲ್ಲಿಸೆಂದು ನಿನ್ನ ಇನಿಯನ ಮನವ ಸೇರಿ.
ಕಣ್ಣ ಹನಿಯಲ್ಲಿ ಭಾಗಿಯಾದ ನಿನ್ನ ಕಂಬನಿಗೆ ಹಂಚಿಕೊಡುವ ಆಸೆ ನನ್ನ ಹೃದಯವ ನೆಲೆಯಾಗಿ ನನ್ನೊಡನೆ ಬಾಳೆಂದು ಒಂದೇ ಉಸಿರಾಗಿ ಗೆಳೆಯ.
- ಚುಕ್ಕಿ
23 Jun 2018, 05:07 pm
ಬಾನರವಿ ಪಡುವಣದಿ ದಣಿದು ನಿಂತಿರಲು
ತಂಗಾಳಿ ಮುಂಗುರಳ ಸವರಿ ನಗುತಿರಲು
ಕೈ ಹಿಡಿದು ಕಡಲ ತೀರದಿ ಹಾಕಿದೆವು ಹೆಜ್ಜೆ
ಪಾದ ಸೋಕಿ ಅಡಗುವ ಅಲೆಗೂ ಕೊಂಚ ಲಜ್ಜೆ
ಹಿಡಿದ ಕರಗಳಿಗೆ ನಾವು ಒಂದೆನ್ನುವ ಭರವಸೆ
ನೋಟದಲಿಲ್ಲ ತನುವ ಕೆರಳಿಸುವ ಆಸೆ
ಮನದ ಕಣಕಣದಿ ಮಧುರ ಭಾವ
ಅರಿತ ಜೀವ ಕಾಣದೆಂದು ವಿರಹದ ನೋವ
ಬಂಧ ಬೆಸೆವ ನಂಟಿಗೆ ಸಾಕ್ಷಿ ಅಗ್ನಿಯ ಒಡಲು
ನಾನೇ ಎಂಬ ಅಹಂನ ಆಹುತಿ ನೀಡಲು
ಸಿಕ್ಕಿದೆ ಪ್ರೀತಿ ಮನಕೆ ಮಣಿವ ಒಲವು
ದಿಟ್ಟ ನಿಲುವಿಗೆ ದಕ್ಕಿದೆ ಗತ್ತಿನ ಗೆಲುವು
ಮೆಲ್ಲನುಲಿವ ಬೆಳ್ಳಿ ನೂಪುರ
ಬೆವರಲಿ ಮಿಂದು ಕರಗಿದ ಸಿಂಧೂರ
ಹಸಿರು ಗಾಜಿನಬಳೆಗಳು ನಕ್ಕವಂದು
ಮಧುರ ಮಿಲನಕೆ ಸಾಕ್ಷಿ ನಾವಾದೆವೆಂದು
*ರತ್ನಾ ಬಡವನಹಳ್ಳಿ*
- ರತ್ನಾಬಡವನಹಳ್ಳಿ
23 Jun 2018, 05:07 pm
ಧ್ವನಿ ಎತ್ತಿ ಮಾತನಾಡದ ಮೌನ ಎಂದಿಗೂ
ಎಲ್ಲಾ ಗೊಂದಲಗಳಿಂದ ಹೊರಬರುವುದು
ಬೇರೊಂದು ಊರಲ್ಲಿ ಊಹೆಗಟ್ಟಿ
ಬದುಕಿತಿರುವ ಜನರು
ಹೆಚ್ಚಂತೆ ಗಂಡು ಹಾಳಂತೆ ಹೆಣ್ಣು!!
ಊರ ಸುತ್ತುವ ಅಲೆಮಾರಿಗೆ ವರಮಾನವಿತ್ತರಂತೆ
ಸೂರ್ಯ ಕಣ್ತೆರೆವ ಮುನ್ನ ಎದ್ದ ಹೆಣ್ಣಿಗೆ ನಡುಹೊತ್ತು ಜಾರಿದರೂನು
ಕೆಲಸ ಕಾರ್ಯಗಳು ನಿಲುಕಿಲ್ಲದೆ
ನೀಡಿದರೂ ಆಜನ್ಮ ಕರ್ಮವೆಂದು
ದುಡಿದು ಹಾಕಲಿವರಿಗೆ!!
ತಾರತಮ್ಯದ ತುಲಾಭಾರವೇತಕೆ
ಉಸಿರಾಡುವ ಉಸಿರಾಗುವ ಗಾಳಿಗೆ
ಭೇದವಿಲ್ಲದ ಮೇಲೆ!!
ಸಾವ ನೋವನೊತ್ತು ಜನ್ಮವಿತ್ತವಳ
ಉದರದಲ್ಲೇ ಸಮಾನತ್ವ ಇಲ್ಲದಾಯಿತು
ಎಷ್ಟೇ ಕಾಲ ಮುಂದುವರೆದರೂನು
ನಾನಿಂದು ಬರೆಯುವ
ಕವನದ ಪದಗಳಲ್ಲೂ ಸಹ!!
- ಚುಕ್ಕಿ
22 Jun 2018, 08:01 pm
ನಾ ಕಂಡೆ ಗೆಳತಿ ನಾಕಂಡೆ ನಿನ್ನ.....
ನವಿಲು ಗರಿ ಬಚ್ಚಿ ಕುಣಿಯುತ್ತೀದೆ ಗೆಳತಿ,...
ಪ್ರತಿ ನವಿಲು ಗರಿಯಲ್ಲಿ ನಾ ನಿನ್ನ ರೂಪವ ಕಂಡೆ ಗೆಳತಿ
ಗಗನದಲ್ಲಿ ಕಾಮನಬಿಲ್ಲ ಕಂಡೆ ನಾ ಗೆಳತಿ...
ಪ್ರತಿ ಬಣ್ಣದಲ್ಲು ನಿನ್ನ ಮಗವಾ ಕಂಡೆ ಗೆಳತಿ
ಮಳೆಯಲ್ಲಿ ಮಳೆ ಹನಿ ಕಂಡೆ ಗೆಳತಿ...
ಪ್ರತಿ ಹನಿಯಲ್ಲು ನಾ ನಿನ್ನ ನೆನೆದೆ ಗೆಳತಿ....
ದೀಪವು ಬೆಳುಗುವುದಾ ಕಂಡೆ ಗೆಳೆತಿ....
ಪ್ರತಿ ಕಿರಣದಲ್ಲು ನಾ ನಿನ್ನ ನಗುವ ಮಗವಾ ಕಂಡೆ ಗೆಳತಿ...
ನಾ ಕಂಡೆ ನಿನ್ನ ಗೆಳತಿ,ನಾ ಕಂಡೆ...
- Girish
22 Jun 2018, 01:37 am
ಮೌನವನು ತಾಳದಿರು
ಮನವೆ...........
ನಿನ್ನ ಮೌನಕೆ ನಾನಾಗಿಬಿಡುವೆ
ಮೂಗ.....
ನೀನಾಡುವ ಮಾತುಗಳಿಗೆ
ನಾ ಹಂಬಲಿಸುವೆ ಸದಾ...............
ಕೇಳದಿರು
ಏನಿದೇ ಅದರಲಿ ?
ಜೇನಿದೆ ಅದರಲಿ
ನಿಜ ಹೇಳುವುದೇ ಆದರೆ
ನನ್ನ ಜೀವವೂ ಇದೆ
ಅ ದ ರ ಲಿ !
- shruthi AS
22 Jun 2018, 12:09 am
ಗಂಧದ ಗೊಂಬೆ ಚಂದದ ಸೀರೆಯುಟ್ಟು ಬಂದಂತಿದೆ ನಿನ್ನ ನೋಡುತಿರಳು ಚೆಲುವೆ.
ಕಣ್ಣ ಅಂಚಿಗೆ ಕೊಂಚ ಹೇಳು ನೋಟದ ಚೂರಿಯಿಂದ ಚುಚ್ಚದಿರಳು ನನ್ನ ಎದೆಗೆ
ಎಡವಿ ಬೀಳುವೆನೆಂದು ಭಯವಾಗಿದೆ
ನನಗೆ ನಿನ್ನ ಕಿರುನಗೆಯ ಕೊನೆಯಲ್ಲಿ.
ಮುಂಗುರುಳ ಮುನಿಸು ತಾಳಲಾರೆನೆ ಬೆಡಗಿ ಬಾಡಿಹೋದೀತು ನನ್ನ ನಗುವು ಏಕದಾಟಿಗೆ.
ಕೈಬೆರಳ ಹಿಡಿದ ಸೆರೆಗ ಕೆಳಗಿಳಿಸು ಒಮ್ಮೆ ತುಸು ಮೆಲ್ಲನೆ ಉಸಿರಾಡುವೆ ಇನ್ನಾದರೂ ಬಾಗಿದ ನಡು ನೋಡಿ.
ಪಾದದಂಚಿಗೆ ಮೆತ್ತಿದ ಅಂದವ ಸ್ವಲ್ಪ ಕರಗಿಸಿ ಬಿಡುವ ಆಸೆ ಕಾಲ್ಗೆಜ್ಜೆ ತೊಡಿಸಿ ನಿನ್ನ ಕಿರುಬೆರಳಿಗಂಟಿದ ಮಣ್ಣ ಒರೆಸಿ
ನನ್ನ ಪ್ರೀತಿಯ ಬೆರೆಸಿ.
- ಚುಕ್ಕಿ
21 Jun 2018, 10:25 pm
ನನ್ನ ಜೀವನದ ಈ ನಮ್ಮ ಬೇಟಿಯ
ಕೋನೆಯ ದಿನ ಮುಸ್ಸಂಜೆಯಲ್ಲಿ.
ಹಿಂದಿರುಗಿ ನೋಡದೇ
ಮುನ್ನಡೆಯುವ ವೇಳೆಯೂ
ಹಿಂದಿನಿಂದ ಒಂದು ಕರೆಗಾಗಿ
ಮನಸ್ಸು ಆಶಿಸಿದರೆ
ಅಗಲುವಿಕೆಯ ಆ ಮೂಕ ವೇದನೆಯನ್ನು
ಪ್ರೀತಿ ಎನ್ನಬಹುದು….!!
ನನ್ನ ಕನಸುಗಳನ್ನ ಕಳೆದುಕೊಂಡ ..
ತಂಪಾದ ಮುಸ್ಸಂಜೆ ಇದು...!!
- ನಗುವ ಮನಸ್ಸಿನ ಹುಡುಗ ಶಿವು
- Shivakumara
21 Jun 2018, 08:17 pm
ಕಾಯುತ್ತಿರುವೆ ನಾ ಒಂದಲ್ಲಾ ಒಂದು ದಿನ
ನೀ ನನ್ನ ಬಳಿ ಬರುವೆ ಎಂದು..
ನನ್ನ ಉಸಿರು ನಿಲ್ಲುವವರೆಗೂ ನಾ ನಿನಗಾಗಿ ಕಾಯುತ್ತಿರುವೆ
ಮತ್ತೆ ನನ್ನ ಬಳಿ ಬರುವೆಯಾ ನಿನ್ನ ಬಿಟ್ಟು ಇರಲು ಸಾಧ್ಯವಿಲ್ಲ ಗೆಳೆಯ ನಿನ್ನ ಮಾತು ಕೇಳದೆ ನಿನ್ನ
ಧ್ವನಿಯನ್ನು ಕೇಳದೆ ನಾ ಹೇಗೆ ಇರಲೊ ಗೆಳೆಯ...
ನಾ ಸಾಯುವವರೆಗೂ ನಿನಗಾಗಿಯೇ ಕಾಯುತ್ತೇನೆ.
ನೀ ಮತ್ತೆ ನನ್ನ ಬಳಿ ಬರಲ್ಲ ಅಂತ ಗೊತ್ತಿದ್ದರು ನಾ ಕಾಯುತ್ತಿರುವೆ ನಿನ್ನ ಪರಿಶುದ್ಧವಾದ ಪ್ರೀತಿ ನಾ...
-ನಗುವ ಮನಸ್ಸಿನ ಹುಡುಗ ಶಿವು
- Shivakumara
21 Jun 2018, 03:07 pm