Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಚಿಂತೆ

ಖಾಲಿ ದಿನಗಳು
ಅವರು ಮನಸ್ಸಿನಲ್ಲಿ ನೋವಿನಿಂದ ಬರೆಯುತ್ತಾರೆ
ಇದು ಕವನ ಅಲ್ಲ.
ಶಾಂತಿಯಿದ್ದರೂ ಸಹ
ಈ ದೇಹಕ್ಕೆ
ಯಾವುದೇ ಪರಿಹಾರವಿಲ್ಲ
ಸಮುದ್ರವು ಉಸಿರಾಗಿದೆ
ಮಳೆಕಾಡು ಸ್ಫೋಟಿಸಿದೆ,
ಆದರೆ ಹೃದಯವು ಸುಸ್ತಾಗಿರಲಿಲ್ಲ.

- Prakash Angadi

29 Jun 2018, 09:49 am

ಕಣ್ಣೀರ ಮೀನೇ..

ಕಣ್ಣೀರಲ್ಲಿ ಆಡುತಿರೋ ಮಿಂಚುಳ್ಳಿಯ ಮೀನೇ
ನಿನ್ನ ಒಳ ಗುಂಡಿಗೆಯಲಿ ಇರೋ ಬಣ್ಣವಾದರು ಏನೇ ?
ಹಿಡಿಯಲು ಹೋದರೆ ಜಾರಿ ಹೋಗೋ ಜಾಣೆ
ಬಳಿಯಲ್ಲಿ ಬಂದರೆ ಈ ನಾಚಿಕೆ ಏಕೋ ಕಾಣೆ.

ಎಲ್ಲೋ ಹುಟ್ಟಿ ಏನೋ ಮುಟ್ಟಿ ಹೇಗೋ ಬೆಳೆದೆ ನೀನು
ಕನಸು ಕಟ್ಟಿ ಗುಂಡಿಗೆ ತಟ್ಟಿ ಕೂಡಿಕೊಂಡೆ ನಾನು
ಇದು ಈರ್ವರೂ ಸೇರಿ ಹೊಸೆದ ಕಾದಲ ಹಾರವೇನೋ
ಅದು ನೂರು ಏಡುಗಳ ದಾಟಿ ತಾಳಿಕೊಳ್ವದೇನೋ..

ಹೆಜ್ಜೆಗಳು ಒಂದೊಂದೂ ತುಂಬಾ ವಜ್ಜೆಯಂತೆ
ಮಜಲುಗಳು ನೂರಾರು ಸುಡುವ ಮೆಟ್ಟಿಲಂತೆ
ನಡೆವ ಹಗ್ಗ ತೂರಾಡಿ ತಲೆ ಸುತ್ತುತಿಹುದು
ನೆಲ ಮಾತ್ರ ಎಟುಕದಂತೆ ದೂರ ಸಾಗುತಿಹುದು..

- ಶ್ರೀಗೋ.

28 Jun 2018, 08:11 pm

ಸಡಗರ ಸಂಭ್ರಮ

ಸಡಗರ -ಸಂಭ್ರಮ
ತುಂಬಿದೆ ಮನೆಯ ಅಂಗಳ
ಮಕ್ಕಳಿಗೆ ಕುಣಿದು ಕುಪ್ಪಳಿಸುವಾಸೆ
ವಯಸ್ಕರಿಗೆ ಕಬಳಿಸುವಾಸೆ
ಒಡೆಯರಿಗೆ ನಿಭಾಯಿಸುವ ತವಕ
ಮಹಿಳೆಯರಿಗೋ ಶುಚುಗೊಳಿಸಿ
ಅತಿಥೇಯರ ಉಪಚರಿಸುವ ತವಕ

ಅರಿಷಿಣ- ಕುಂಕುಮ ,ಹಸಿರು
ತೋರಣದಿಂದ ಸಿಂಗಾರಗೊಂಡಿದೆ
ಮನೆಯ ಮಹಾದ್ವಾರ
ಹಣತೆಯ ಹೊಂಬೆಳಕಲಿ ,ಘಮಿಸುವ
ಹೂ ಮಾಲೆಯಿಂದ ಬೆಳಗುತಿದೆ
ದೇವರ ಮನೆಯ ಅಂಗಳ

ಊರ ಮಾರಿಯರಿಗೆ
ದೀಪೋತ್ಸವದ ಸಂಭ್ರಮ
ಕುರಿ,ಕೋಳಿ,ಮೇಕೆಗೆ
ಕಾಯುತಿದೆ ಮಸಾಲೆಯ ಘಮ

ಮೂಕ ಪ್ರಾಣಿಗಳ ಅಂತಿಮ ಯಾತ್ರೆ
ನರರಿಗೆ ಉತ್ಸವದ ಜಾತ್ರೆ
ಕಾಲನು ಬಂದು ಸೆಳೆದಾಗ ನರನ
ಗೋಳಿಡುವರು ಈ ಜನ
ಕಾಲನು ಹಿಡಿದು ಕತ್ತರಿಸುವಾಗ
ಅರಸುವುದು ಒಡತಿಯ ತಾನಾಗ
ಮೂಕವೇದನೆಯ ಮುಗಿಸುವುದು
ಮೌನದಲಿ ಪರರತೃಪ್ತಿಗಾಗಿ

- ಶಕುಂತಲಾ

28 Jun 2018, 09:13 am

ಚೆಲುವೆ ವರ್ಣನೆ

ಭೂಮಿಯ ಮೇಲಿನ
ಮನಮೋಹಕ ನರ್ತಕಿ ನೀನು,

ಕೋರೆ ಚಂದಿರನ ಹೋಲುವ
ಮುಂಗುರುಳ ಚೆಲುವೆ ನೀನು,

ಚಿರ ನಿದ್ರೆಗೆ ಜಾರುವಾಗಲು ಬರುವ
ಕನಸು ನೀನು,

ಇನ್ನೇನಿದೆ ಹೊಗಳಲು ಚಲುವ
ಪದ ಪುಂಜ ನೀನು,

ಮುಂದೆ ವರ್ಣಿಸಲು ಪದಗಳಿಲ್ಲ
ಇನ್ನೇನು ಮಾಡಲಿ ನಾನು,

ಚಂದಿರನಲ್ಲಿ ನಿನ್ನ ನೋಡುತ್ತಾ ಮಲಗಲೇ
ನಿನ್ನ ಸುಂದರ ಸಂದೇಶಕ್ಕಾಗಿ ಕಾಯಲೇ,

- Varungowda

27 Jun 2018, 06:23 pm

ಒಣ

ಒಣ ಮರದ ಬದುಕು ನನದು
ಚಿಗುರು ಕಾಣುವ ಬಯಕೆ ಬೆಳೆದು,

ಬದುಕ ಬಯಕೆಯ ಅರಿತು
ಹಸಿರ ಬಣ್ಣದಿ ಬೆರೆತು,

ಸ್ವಚ್ಚಂದ ಮರವಾಗಿ
ಬದುಕೆಂಬ ಕಡಲ ತೀರದಿ ಬಾಗಿ,

ಸ್ಪರ್ಶಿಸಬೇಕು ಭುವಿಯ.........!

ಬರವಣಿಗೆಗಾರ
ವರುಣ್ ಗೌಡ

- Varungowda

27 Jun 2018, 06:12 pm

ಹನಿ-ಅಣಕ

ಕಣ್ಣೀರ ಕಡೆಯ ಹನಿಯೂ ಅವಳ ಹೆಸರೇಳಿ ಹೊರಬಂದಿತ್ತು
ಕಾಣದ ಕಡಲೆಡೆಗೆ ಜೀವನ ಪ್ರಯಾಣ ಮೊದಲಾಗಿತ್ತು
ನೆನಪುಗಳ ಬೀದಿಯಲ್ಲಿ‌ ನೆನಪುಗಳ ಮಾರಣಹೋಮ ನಡೆದಿತ್ತು
ಎದೆಯ ಚಂದ್ರಿಕೆಯಲ್ಲಿ‌ ಅಚ್ಚೊತ್ತಿದ್ದ ಅವಳ ಹೆಜ್ಜೆ ಗುರುತು ನನ್ನನ್ನೆ ಅಣಕಿಸುತ್ತಿತ್ತು

- Abhisara Varnika

27 Jun 2018, 09:27 am

ನಾ ನನ್ನ ಅಗಲಿದಲ್ಲಿ..

ನನ್ನವರಲ್ಲದವರೆಲ್ಲ ಕರುಣೆ ತೋರಿ
ಕಣ್ಣೀರಾಕುವರು ನನ್ನ ಪಾರ್ಥಿವ ದೇಹ ನೋಡಿ,
ಗುಣಗಾನವ ಮಾಡಲಾರಂಭಿಸುವರು ನಾ ಮಾಡದಿರುವ ಮಾಡಿರುವ ಸರಿ ತಪ್ಪುಗಳ ಎಣಿಸಿ ಜವರಾಯನಿಗೆ ಲೆಕ್ಕ ಕೊಡಲೆಂದು ಶರೀರ ಸುಡುವ ಮುನ್ನ ಅಳುವ ನೆವದಲ್ಲಿ!!

ನನ್ನ ನಾ ಅಗಲಿದಲ್ಲಿ ನೆಂಟಸ್ತಿಕೆಯ ನಂಟು ಹಾಕಿ ಕೂಡಿಟ್ಟ ಗಂಟು ದೋಚಲು ಹಾಜರಾಗುವರು ನನ್ನ ಧನ, ಮಾನ ಮರ್ಯಾದೆಗಳನ್ನು ಹರಾಜಾಕಳು!!

ಉಸಿರಾಡುವ ಉಸಿರಿಗೆ ತುತ್ತು ಅನ್ನ ಹಾಕಲಾಗದವರು ಹೆತ್ತ ತಂದೆ-ತಾಯಿ ಅಣ್ಣ- ತಂಗಿ ,ತಮ್ಮ ಎಂದು ಬಾಂಧವ್ಯ ಬೆಳೆಸಿಕೊಳ್ಳುವರು ಮಣ್ಣ ಅಡಿ ಅಲುಗಾಡದೆ ನಾ ಮಲಗಿರಲು ಕಾಲ ತೊಳೆದು ಹಾಲು ಹಾಕಿ ನನ್ನ ನೆತ್ತಿಗೆ!!

ನನ್ನ ಕಟ್ಟಿಕೊಂಡ ಪಾಪದವಳು ಹೆಂಡತಿಯೊಬ್ಬಳ ಗೋಳೋಯ್ಯುಕೊಳ್ಳುವರು ಹಣೆಯ ಸಿಂಧೂರ ಅಳಿಸಿ ಬಳೆಯ ಹೊಡೆದು ರಕ್ತ ಸುರಿಸಿ,
ಕಾಲುಂಗುರ ಕಿತ್ತೆಸೆದು ಮಾಂಗಲ್ಯವ ಮಾರಿ ತಿಂದು!!

ಬಂದೂಕುಗಲಿಲ್ಲದ ಉಗ್ರರಿವರು,
ಹೆಸರುವಾಸಿ ಆಗದ ದರೋಡೆಕೋರರು
ಇವರು ಎತ್ತ ನೋಡಲಿ ಈ ಸತ್ತ ಜನರ
ಕುಖ್ಯಾತ ನಟನೆಯ,
ಹೇಗೆ ಸಾರಲಿ ಪದಗಲಿಲ್ಲದ ಪ್ರತಿಭೆಯ!!

ನೀಲ ಕೇಶ ರಾಶಿಯ ತಗೆಸಿ, ಈಚಲು ಚಾಪೆ ನೆಲಕ್ಕೆ ಹಾಸಿ ಮೂರು ತುಂಡಾದ ಕಂಬಳಿ ಹೊದಿಸಿ ನೂಕದಿರಿ ನನ್ನವಳ
ರಂಗು ಮಾಸಿದ ಸೀರೆಯುಡಿಸಿ ಇರಲಿ ಜೀವಂತ ನನ್ನ ನಗು ಅವಳಲ್ಲಿ ,ಹಣೆಯ ಸಿಂಧೂರ ಜರುಗದೆ ಹಣೆಯಲ್ಲಿ ಘಮಗುಡುವ ಮಲ್ಲಿಗೆ ಅವಳ ಶಿಗೆಯಲ್ಲಿ......

ನಾನಿರುವೆ ನನ್ನವಳ ಪ್ರತಿಯೊಂದು ಉಸಿರಲ್ಲಿ!!

- ಚುಕ್ಕಿ

27 Jun 2018, 06:04 am

ಕೊನೆಯ ಮಾತು..

ಆ ಒಂದು...
ದಿನದ ಬೇಟಿ
ಮಾಡಿತು ನನ್ನ
ಹೃದಯ ಲೂಟಿ
ಹಾಯಾಗಿದ್ದೆ...
ನನ್ನ ಲೋಕದಲಿ
ಹೇಗೋ ಬಿದ್ದೆ
ನಿನ್ನ ಪ್ರೀತಿಯಲಿ
ಗೊತ್ತಾಗದೇ...
ಬೆಳೆಯಿತು ಸಲುಗೆ
ಗಗನವೇ ಆಯಿತು
ನಮ್ಮ ಮೇಲ್ಹೊದಿಗೆ
ಗೊತ್ತಾಯಿತು...
ನೀನಿನ್ನು ಸಿಗುವುದಿಲ್ಲ
ಗಮನವಿಟ್ಟು ಕೇಳು
ನಿನ್ನೆಂದಿಗೂ ಮರೆಯುವುದಿಲ್ಲ
ಮರು ಜನ್ಮ...
ಅಂತೆನಾದರೂ ಇದ್ದರೆ
ಮರೆಯದೇ ಬಂದು ಸೇರು
ನಂಪ್ರೀತಿಗದೇ ಉಡುಗೊರೆ

ಇಂತಿ ನಿನ್ನ ಪ್ರೀತಿಯ
ಸ್ನೇಹಿತ...

- vasu

25 Jun 2018, 12:27 am

ಪ್ರೀತಿ ಮಾಯೆ

ಹೇ ಹೃದಯ ಹೇಗೆ ಮರೆಯಲ್ಲಿ ಅವಳನ್ನು
ನಿನ್ನ ಪ್ರತಿ ಬಡಿತದಲ್ಲು ಅವಳ ಹೆಸರು ಕೂಗುವಾಗ
ಪ್ರತಿ ಕ್ಷಣದಲ್ಲೂ ಅವಳ ನೆನೆಯುವಾಗ
ಆಕೆ ಪ್ರೀತಿಯಲ್ಲಿ ಏನೂ ಜಾದು ಮಾಡಿದಳೊ ತಿಳಿಯುತ್ತಿಲ್ಲ
ಪ್ರತಿ ಕ್ಷಣವು ಈ ಹೃದಯ
ಅವಳ ಪ್ರೀತಿಯನ್ನೆ ಬಯಸುತ್ತಿದೆ
ಆದರೆ ಆಕೆ ಇಂದೂ ಮಾಯವಾದಳೂ ಎಲ್ಲಿ.
ಆಕೆಗಾಗಿ ಕಾಯುತಿರುವೆ ನಾ ಇಲ್ಲಿ...

"ವರದರಾಜ್"

- ರಾಜ್

24 Jun 2018, 07:51 am

ನೀ ನನ್ನ ಕನಸು..

ನೀ ನನ್ನ ಕನಸು..
ಹಾಗಾಗಿ ನನ್ನೆಲ್ಲ ಕನಸನು ನೀ ನನಸಾಗಿಸಿಹೆ..

ನೀ ನನ್ನ ಇಂದನ..
ಹಾಗಾಗಿ ನನ್ನ ಜೀವವೆಂಬ ಪ್ರಪಂಚವ ಇನ್ನೂ ನೀ ತಿರುಗುತಿಸಿಹೆ..

ನೀ ನನ್ನ ನಕ್ಷತ್ರ..
ಹಾಗಾಗಿ ನನ್ನ ಕಷ್ಟ ಕಾರ್ಮೊಡಗಳ ಮದ್ಯೆ ನೀ ಮಿನುಗುತಿಹೆ..

ನೀ ನನ್ನ ಬೆಳಗು ದೀಪ..
ಹಾಗಾಗಿ ಮುಂದಿನ ಮಾರ್ಗ ನೀ ತೋರುತಿಹೆ..

ನೀ ನನ್ನ ದ್ವನಿ..
ಹಾಗಾಗಿ ನಿನ್ನದೆ ದನಿಯಲ್ಲಿ ನನ್ನ ಮನದಲ್ಲೂ ಸದ್ದನು ಮಾಡುತಿಹೆ..

ನೀ ನನ್ನ ಸೂರ್ಯ..
ಹಾಗಾಗಿ ನನ್ನ ಬಾಳಿನ ಬೆಳಕಾಗಿ..
ನನ್ನ ಜೀವನದ ತೋಟದಿ ನಗುವಿನ ಹೂಗಳ ಅರಳಿಸಿಹೆ..

ನೀನನ್ನ ಚಂದ್ರ..
ಹಾಗಾಗಿ ಪ್ರತಿ ರಾತ್ರಿಯೂ ನನ್ನ ಜೊತೆ ಜೊತೆಯಾಗಿಹೆ..
ಹಾಗಾಗಿ ನೀ ನನ್ನ ಬಾಳಾಗಿ, ಬೆಳಕಾಗಿ, ಒಲವಾಗಿ, ಜೀವಕ್ಕೆ ಜೀವವಾಗಿಹೆ...

- Manju..

23 Jun 2018, 09:06 pm