Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
*ಕನಸು-ನನಸು*
ಕನಸಿನಲ್ಲಿ ಕಂಡೆ
ಅದೆಷ್ಟೋ ಹುಡುಗಿಯರನ್ನ
ಯಾರು ಇಷ್ಟವಾಗಲಿಲ್ಲ...
ಮತ್ತೆ ಮತ್ತೆ ಕನಸುಗಳು ಬಿದ್ದು
ನಿದ್ದೆಗೆಡಿಸುತ್ತಿವೆ ಸುಮ್ಮನೆ
ಆದರೂ ನಾ ಸುಮ್ಮನಿರಲಿಲ್ಲ...
ಕೊನೆಗೊಮ್ಮೆ ನಾನೇ ಕನಸನ್ನ ಹೆಣೆದೆ
ಅಪ್ಸರೆಗಿಂತಲೂ ಚೆಂದ ಹುಡುಗಿಯ ಕಲ್ಪಿಸಿಕೊಂಡೆ
ಅದರವಳು ಕೈಗೆ ಸಿಗುತ್ತಿರಲಿಲ್ಲ...
ಹುಡುಕಾಡಿದೆ ಕಲ್ಪನೆಯ ಆ ಹುಡುಗಿಗಾಗಿ
ಮೌನಿಸಿ ಧ್ಯಾನಿಸಿ ತಲೆಕೆಡಿಸಿಕೊಂಡೆ
ಆದರೂ ನಾ ಹುಚ್ಚನಾಗಲಿಲ್ಲ....
ನಿದ್ದೆಯ ಕದ್ದಳೊಮ್ಮೆ ಎದುರಿಗೆ ಬಂದಳೊಮ್ಮೆ
ಮೌನದ ಪ್ರಶ್ನೆಗಳಿಗೆಲ್ಲ, ಕಣ್ಣಲ್ಲೇ ಉತ್ತರಿಸಿ
ನನ್ನಿಂದ ದೂರಹೋಗಲು ಸಿದ್ದಳಿರಲಿಲ್ಲ.....
- ಪ್ರಿಯಾಂಕ
06 Jul 2018, 11:52 am
ಗುರು ನಿನ್ನ ಚರಣಕೆ ಶಿರಬಾಗಿ ನಮಿಸುವೆನು
ಕನಿಕರಿಸಿ ಹರಸೆನ್ನನು
ಮನದ ಕತ್ತಲೆ ಕಳೆದು ಜ್ಞಾನ ದೀಪ್ತಿಯ ಬೆಳಗಿ
ಅರಿವಿನ ಸಿರಿದೀಪವಾಗಿ ಉರಿಸೆನ್ನನು
ನನ್ನ ಅರಿವಿನ ಹೊಳೆಯು
ಉಕ್ಕಿ ಹರಿಯಲಿ ನಿನ್ನ ಕರುಣೆಯಿಂದ
ನನ್ನ ಮನಸಿನ ಕೊಳೆಯು
ತೊಳೆದು ಹೋಗಲಿ ನಿನ್ನ ಒಲುಮೆಯಿಂದ
ನಾ ದೀಪವಾಗಲೆಂಬ ನನ್ನ ಒಡಲಾಸೆ ನಡೆಸು
ನಿನ್ನ ಅರಿವಿನ ಜ್ಯೋತಿಯಿಂದ ದೀಪ ಉರಿಸು
ಜ್ಞಾನದರಿವನು ಹರಿಸು ಕಳೆದು ಹೋಗಲಿ ತಮಸು
ಸುಜ್ಞಾನದೆಡೆಗೆನ್ನ ಸತತ ನಡೆಸು
ನಿನ್ನ ಕರುಣೆಯ ಬೆಳಕಿನಲಿ ನನ್ನಂತರಂಗದ ಚಕ್ಷು
ತೆರೆಸಿ ನೀಡೆನಗೆ ಅರಿವಿನ ಭಿಕ್ಷೆ
ಪರಮ ಜ್ಞಾನಿಯು ನೀನು ಅಜ್ಞಾನಿಯು ನಾನು
ನೀಡೆನಗೆ ಅಪಾರ ಜ್ಞಾನದ ದೀಕ್ಷೆ
ಅಂತರಂಗದ ತೆರೆದು ಬೇಡುತಿರುವೆನು ಗುರುವೇ
ಮನದ ಕಾರಿರುಳ ಬಲು ದೂರ ಸರಿಸು
ನನ್ನದೆಯ ಗುಡಿಯಲ್ಲಿ ನಂದಾದೀಪವ ಉರಿಸು
ಆ ದೀಪದ ಕುಡಿಯೆ ನಾನಾಗಲೆಂದು ಹರಸು
- Prakash Angadi
06 Jul 2018, 09:05 am
ನಾ ಕಂಡ ಕನಸು ನನಸಾಗದೆ
ಜೀವನ ಕತ್ತಲಾಗಿ
ಮನಸ್ಸು ಮೌನವಾಗಿ
ಹೃದಯ ಚೂರಗಿ
ಹೇಳದೆ ಹೊದ ಆ ಪ್ರೀತಿ ಹೃದಯಕ್ಕೆ
ಅವಳ ನೆನಪೆ ಉಸಿರಾಗಿ
ನೋವು ಮನದಲ್ಲಿದೆ
ನಿನ್ನ ಬಳಿ ಹೇಳಲ್ಲ ಇಲ್ಲ ಮೌನಿಯಗಿ ಹೋಗಲ್ಲ
ಹೇಳಿ ಬಿಡು ಹುಡುಗಿ.........
- Ananthkumar Ananth
05 Jul 2018, 11:58 am
ನಾನು ಹಾಲುಗಲ್ಲದ ಕೂಸು
ಭೂಮಿ ಗಗನದಷ್ಟು ಕನಸು
ಏನು ಅರಿಯದ ಮುಗ್ಧ ಮನಸು
ಚಿಟ್ಟೆಗಳ ಜೊತೆ ಸೇರಿ ಹಾರಿ
ಇಳಿಜಾರ ಕಾಮನಬಿಲ್ಲ ಏರಿ
ನಲಿಬೇಕು ಅತ್ತಿಂದಿತ್ತ ಜಾರಿ
ನಾನಾದರು ಪುಟ್ಟ ಪೋರಿ
ಕೂಡಾಕುವರು ಹೆತ್ತವರು ಹೆದರಿ
ನನ್ನ ಮಾಡುವರೆಂದು ಚೋರಿ
ಕಾಮುಕರ ಕಣ್ಣ ನೋಟ
ಕೊಡುವುದೇನು ನನಗೆ ಕಾಟ?
ನೋಡಿ ಹೇಳಿ ನೀವೆ ನನ್ನ ಮೈಯ ಮಾಟ
ಮುಗ್ಧ ಮುಖದ ಎಳೆಯಳು ನಾನು
ಪುಟ್ಟ ಕೈಕಾಲು, ನಗುವು ಸವಿಜೇನು
ನನ್ನ ನೋಡಿದರೂ ಕೆಟ್ಟದೃಷ್ಟಿಯುಟ್ಟುವುದೇನು?
ಸ್ವಲ್ಪವೂ ಕನಿಕರವಿಲ್ಲವೆ ದೇವರಿಗೆ?
ಕಿತ್ತುಕೊಳ್ಳುತ್ತಿರುವ ಬಾಲ್ಯದ ಮುಗ್ಧ ನಗೆ
ಬುದ್ಧಿ ಹೇಳದೆ ಆಡಲುಬಿಡೆಂದು ಹೆತ್ತವರಿಗೆ
ಅವರಿಗೆ ನನ್ನ ಬದುಕೆ ಮುಖ್ಯವಲ್ಲವೇ?
ಅದಕ್ಕೆಂದೆ ನನ್ನ ಕೂಡಿಡುವರಲ್ಲವೇ?
ನನಗೇನಾದರು ಆದರವರಿಗೆ ಗತಿ ಸಾವೆ?
ನಾನೇನು ಮಾಡಲಿ ಈಗ
ಯಾರಿಗೇಳಲಿ ನೋವಿನ ಆವೇಗ
ಜಡಿದು ಕೂರಲೇನು ಕಾಲಿಗೆ ಬೀಗ
ಹತ್ತಿರ ಯಾರು ಬಂದರು ಹೆದರಿಕೆ
ಮೈಮುಟ್ಟಿದರೆಂದರೆ ಎಲ್ಲಿಲ್ಲದ ಅಂಜಿಕೆ
ಎಳೆಯ ಮನದೊಳಗೆ ಈ ಭಾವ ಹುಟ್ಟಬೇಕೆ?
ಎಲ್ಲರೊಡಗೂಡಿ ಜಗವ ಕಾಣುವಾಸೆ
ಉಳಿಸಿ ಸಾಯುವ ಮುನ್ನ ಕನಸು ಮನಸೇ
ಇಲ್ಲದಿರೆ ನಾನೆಂದೂ ನಿಮ್ಮ ಕ್ಷಮಿಸೆ
ನಾನು ಹಾಲುಗಲ್ಲದ ಕೂಸು
ಭೂಮಿ ಗಗನದಷ್ಟು ಕನಸು
ಏನು ಅರಿಯದ ಮುಗ್ಧ ಮನಸು
- ಶ್ರೀಕಾವ್ಯ
04 Jul 2018, 06:05 pm
ಹೇ ಗೆಳತಿ ನಿನ್ನ ಪ್ರೀತಿಯಲ್ಲಿ
ನಾ ಸೋತು ಹೋಗಿರುವೆ.
ನಿನ್ನ ಮಮಕಾರಕ್ಕೆ ನಾ ಶರಣಾಗಿರುವೆ.
ನಿನ್ನ ಬಿಟ್ಟಿರಲಾಗದಷ್ಟು ನಿನ್ನಲಿ
ನಾ ಬಂದಿಯಾಗಿರುವೆ.
ಎಂದೆಂದೂ ನೀ ನನ್ನಿಂದ ದೂರಾಗದಿರು
ನನ್ನ ಒಲವೆ.........
"ವರದರಾಜ್"
- ರಾಜ್
03 Jul 2018, 12:32 pm
ಎನ್ಲಾ ನಾ ಎನ್ನ ಹೇಳಲೊ ?
ನನ್ನೀ ಮಂದವೇದನೆಯಾ...
ನಿನ್ಯಕೋ ಅರಿದೆ ಹೊರಟಲೊ..
ಹೆಂಗಾ ಮನ್ಸೂ ಬರತೈತಿ ನಿಂಗಾ
ಬಾರಿ ಪ್ರಶ್ನಗಳಡಿ ನಿಂತೈತಿ ಏನೋ ನೀನಿ ಪಿರುತಿ,
ಅದಾ ಅಂದು ನೀನೇ ಹೇಳಿದಾದ್ರ ನೆನಪಾಯಿತೇನಾ ನಿಂಗಾ.
ಯಾಕ್ಲಾ ಯಾಕೋ ನನಿಂಗ ಕಾಡಕಟ್ಟಿಯೇನು ..
ನಿನ್ ಮ್ಯಾಗ ಈ ಜೀವ ಮಡ್ಗಿವ್ನಿ ನೋಡು ಲಾ ..
ಈ ಪಿರುತಿ ,ಪಿರಾಣಾ ನಿನ್ ನಂಜೊತೆಯಾಗಿದ್ರಾ ,
ಈ ಪರಪಂಚನೆ ನನೊಂದಿಗಿರೋ ಹಾಂಗಾ ಅನಿಸ್ಟದೆ ಗೆಳೆಯಾ
- Acchu love
03 Jul 2018, 12:38 am
ಎಲ್ಲ ಇದ್ದೂ ಏನೂ ಇಲ್ಲದ ಭಾವ..
ಮೆಲ್ಲ ಮೆಲ್ಲ ಒಳ ನುಸುಳಲು ಯತ್ನಿಸಿವೆ
ನಕಾರಾತ್ಮಕ ಚಿಂತನೆಗಳ ಹಾವ..
ತನು ಮನಗಳು ಬಯಸುತಿವೆ ಸನಿಹ ಬರಲೆಂದು ಸಾವ..
ಬೇಡವಾಗಿದೆ ಬದುಕು, ಕಾಡದಾಗಿವೆ ಕನಸು,
ಮರಗಟ್ಟಿದೆ ಮನಸ್ಸು, ವಿಕಾರವಾಗಿವೆ ವರ್ಚಸ್ಸು
ಏನ ಹೇಳಲಿ, ಯಾರ ಕೇಳಲಿ, ಎಲ್ಲಿ ಹುಡುಕಲಿ
ಪರದಾಡಿಹ ಮನಸ ಸರಿಪಡಿಸುವ ಉಪಾಯವ...
ಅತ್ತ ಇತ್ತ ಎತ್ತ ನೋಡಿದರೆನು,
ಕೂಗಿ ಕೂಗಿ ರೇಗಿ ಹೇಗಿ ಸತ್ತರೇನು
ಚಿತ್ತ ಸುತ್ತ ಸುಟ್ಟ ಸೂತಕದ ಛಾಯೆ..
ಮನವು ಮರುಗಿ, ಅಹಿಸಿ ಸಹಿಸಿ ಸಾಗಿದೆ..
ಅಂತ ಇಂತ ಎಂತ ಕಾಯ್ದರೇನು
ಯಾರು ಎಲ್ಲಿ ಬರುವರು
ಬಂದು ಇಂದು ಮನದ ಮುಸುಕ ತೆಗೆದರೆನು
ಬಾಳಿ ಬದುಕಿ ಹಸಿದು ಬಸಿದು ಮಾಡುವುದಾದರೆನು
ನೀನೆ ತಿರುಗಿ ಬಂದು ನನ್ನ ಬಾಳ್ಗೆ
ಒಲವ ಹೊಸೆದು
ಪ್ರೀತಿ ಬೆಸೆದು
ಮಾಡೆ ನನ್ನ ಬಾಳ ಏಳ್ಗೆ..
- Manju..
02 Jul 2018, 10:54 pm
ಯಾವುದೀ ಎದೆಯ ಸೇರಿದ ಮೌನ
ಎಲ್ಲಿಹುದು ಇದರ ಅಡಗು ತಾಣ
ಎತ್ತ ಸಾಗಿಹುದು ಇದರ ಯಾನ
ಮಾತಿರದೆ ಬಸವಳಿದಿದೆ ಮೂಕ ಮನ
ಎನ್ನೀ ಮನವ ಏತಕೆ ಹೊಕ್ಕಿತೊ
ಎಲ್ಲಿಂದ ತೂರಿ ಬಂದು ಸೇರಿತೊ
ಯಾರ ಪರ ಅಹವಾಲು ತಂದಿತೊ
ಎಡಬಿಡದೆ ಕಾಡಲೆಂದೆ ಬಂದೀತೊ
ಏನದರ ನನ್ನೆ ಗೆದ್ದೆನೆಂಬ ಆಟ
ನೆನಪುಗಳ ಕಾರುಬಾರೇನೆ ರಸದೂಟ
ಕಿಂಚಿತ್ತು ಕರುಣೆಯಿರದ ಇರಿಯೊ ನೋಟ
ಎಲ್ಲಿ ತಿಳಿವುದದಕೆ ಎನ್ನೊಳಗಿನ ತೊಳಲಾಟ
ಮೌನವಿದು ಮಿತಿಯೊಳಗೆ ಸಿಗದಷ್ಟು ವಿಸ್ತಾರ
ನಿತ್ಯ ನೂರಾರು ಸಂಚಿಕೆಗಳ ಪ್ರಸಾರ
ಮಾತಾಗದ ಭಾವವೆಲ್ಲ ಎನ್ನೊಳಗೆ ಅಪಾರ
ಒಮ್ಮೆ ಬಿಡುವುಕೊಟ್ಟರೂ ಇಳಿಸಿಬಿಡುವೆ ಎದೆಯ ಭಾರ
- ಶ್ರೀಕಾವ್ಯ
30 Jun 2018, 05:45 pm
ನೋಟದೂಟ ರುಚಿಯ ಕಂಡು
ಮಿಡಿದ ಒಲವ ನಾಡಿ ತುಡಿತ ನಿಧಾನಿಸಿ ನಿಲ್ಲಿಸುವೆ ಹೃದಯ ಬಡಿತ, ನಿನ್ನ ನೆನಪು ಹೊಕ್ಕಿ ಬಂದ ವೇಳೆಯಲ್ಲಿ ತನಿಬನಿ ಹನಿಗಳ ಸಾಂಗತ್ಯದಲ್ಲಿ.
ಪೊಳ್ಳು-ಸುಳ್ಳು ನಂಬಿಕೆಗಳು ನಗುತಳಿವೆ ನನ್ನ ನೋಡಿ ಈರ್ಷೆಯ ಹೊಂಬಿಸುಲು ನಿನ್ನ ಹೃದಯದಾಸಿಗೆ ತಲುಪಲಾರವೆಂದು.
ಕಣ್ಣ ಕೊಳದ ನಡುವೆ ನಿಂತ ಕುಂಕುಮ ಧೂಳಿ ಬಾಗಿ ನೋಡುತ್ತಿದೆ ನನ್ನೆದೆಯಲಿ ನಿನ್ನ
ರೂಪುರೇಷೆ ಎರಚಲೆಂದು ತನ್ನ ಮೊಗದಲ್ಲಿ.
ಎತ್ತ ನೋಡಿದರತ್ತ ನಿನ್ನ ನಗುವಿನ ಛಾಯೆ ಊಹೆಯಂಚಲಿ ನಿಂತು ಬಿಕ್ಕಿ ಅಳುತಳಿದೆ ಇಂದು
ನನ್ನ ನಗುವ ನೋಡಲೆಂದು.
- ಚುಕ್ಕಿ
30 Jun 2018, 05:36 pm
ನಿನ್ನ ನಗುವ ಕಾಣುತಿರೆ
ಮರೆವೆ ಎಲ್ಲ ನೋವು
ನೀನು ನಗುತಲಿದ್ದರೆ
ನಲಿವುದೆನ್ನ ಮನವು
ನಿನ್ನ ಮುದ್ದು ಮಾತು ಚಂದ
ಕೇಳುತಿರೆ ನಮಗೆ ಆನಂದ
ನೀನು ಆಡೊ ಆಟ ಚಂದ
ನೀನೆ ನನ್ನ ಮುದ್ದು ಕಂದ
ನೀನೆ ಬಾಳ ಬೆಳಕು ಮಗು
ನೀನೆ ನನ್ನ ಉಸಿರು
ನಿನ್ನ ಹೊಳೆವ ಕಣ್ಗಳೆ
ನಮ್ಮ ಮನಕೆ ಹಸಿರು
- Nalanda
29 Jun 2018, 06:54 pm