Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಏಕೆ ಮೃತ್ಯು ಇಷ್ಟೊಂದು ಅವಸರ ನಿಂಗೆ
ನನ್ನ ಕರೆಸಿಕೊಳ್ಳಲು.....
ನಿನ್ನ ರಾಜ್ಯಕ್ಕೆ .. ನನ್ನ ಸ್ವಂತ ಮನೆಗೆ
ನನ್ನನ್ನೇ ಸ್ವಾಗತಿಸಲು...
ಇನ್ನು ಕೆಲವುದಿನಗಳಷ್ಟೇ ಕಳೆದಿದೆ...
ನಾ ಈ ಭೂಮಿಗೆ ಪ್ರವಾಸಕ್ಕೆ ಬಂದು
ಇನ್ನು ನೋಡಬೇಕಿದೆ ತಿಳಿದು ಸಾಧಿಸುವುದಿದೆ
ಇನ್ನು ಪ್ರವಾಸದ ಅವಧಿ ಬಾಕಿ ಇದೆ
ಇನ್ನು ಗೂಡುಬಿಟ್ಟು ಹಾರದ .......
ಹೊರ ಪ್ರಪಂಚವ ಕಾಣದ ಹಕ್ಕಿನಾನು
ಇನ್ನು ಜಗವನ್ನ ಅರಿಯದ ಹೇಳಸು ಕೂಸಿನ
ಮೇಲೆಕೆ ನಿನ್ನ ಮೃತ್ಯುಪಾಶದ ಪ್ರಹಾರ
ನಾ ಇನ್ನು ಸಾಧಿಸಿಲ್ಲ ಶಿವನ ಸಿದ್ದಿಯ ಮಾರ್ಕಂಡೇಯನಂತೆ ನಿನ್ನ ಮೃತ್ಯು ಪಾಶವ
........... ತಡೆಯಲು
ನಾನೇನು ಮೃತ್ಯುಂಜಯನ... ಕವಚಕುಂಡಗಳ
ದಾನವಿತ್ತು ಕೊಟ್ಟಮಾತಿಗಾಗಿ ಜೀವನವನ್ನೇ
ಅರ್ಪಿಸಿ ..... ಮೃತ್ಯುಂಜಯನೇನಿಸಿಕೊಂಡ
ಧಾನಶೂರ..... ಕರ್ಣನಲ್ಲ
ಜಗದ ನಿಯಮ ಪಾಲಿಸದಿದ್ದರೆ ಕ್ಷಮಿಸು
ಹೇ ಮೃತ್ಯು ನೀಡು ಇನ್ನು ನೀಡು..
ಕೆಲವು ದಿನಗಳ ಕಲಾವಕಾಶವನ್ನ......
......ಮಂಜು.
- ಮಂಜು
14 Jul 2018, 08:15 am
*ಹನಿಗವನಗಳು*
*೧.ಬೆಂಕಿ ಹಚ್ಚಿ*
ನಾವು ಕಂಡ ಕನಸಿನ ಸೌಧಕೆ ಬೆಂಕಿ ಹಚ್ಚಿ ಹೋದೆ
ಅದರೊಳಗೆ ನಾ ಸಾಯುವುದ ಕಾಣದೆ
ನೀನೂ ಬೆಂದು ಹೋಗುವೆಯೆಂದು ತಿಳಿಯದೆ
-----------------------------------------------------------------
*೨.ಕಾಲ್ಗೆಜ್ಜೆ*
ಸದ್ದು ಮಾಡದಿರೇ ಕಾಲಗೆಜ್ಜೆಯೇ
ನಿದ್ರಿಸಿದ ಅವನ ನೆನಪುಗಳು ಎದ್ದೀತು
ಅವನ ನೆನೆದು ಮನ ಸತ್ತೀತು
-----------------------------------------------------------------
*೩.ಅವನ ನೆನಪು*
ಮಿಂಚಿ ಮರೆಯಾಗುವ ಅವನ ನೆನಪುಗಳಿಗೆ
ನನ್ನೆದೆಯೇ ಕಗ್ಗತ್ತಲ ಗಗನ
ಆಗಾಗ ಕೇಳಿಸದ ಚೀತ್ಕಾರದ ಸಿಡಿಲು ಗುಡುಗಿನ ತನನ
- ಶ್ರೀಕಾವ್ಯ
13 Jul 2018, 06:38 pm
ಕನಸಿನಲ್ಲಿ ಬಂದ ಹುಡುಗಿ ನೀನೆತಾನೆ
ಮನಸಿನಲ್ಲಿ ಕುಳಿತ ಹುಡುಗಿ ನೀನೆತಾನೆ
ಎದುರಲ್ಲಿ ಬಂದ ಹುಡುಗಿ ನೀನೆತಾನೆ ನೀನೆತಾನೆ
ಜಗಳ ಮಾಡೋ ಹುಡುಗಿ ನೀನೆತಾನೆ
ಮುನಿಸಿಕೊಳ್ಲೋ ಹುಡುಗಿ ನೀನೆತಾನೆ
ಕೊಬ್ಬು ಜಂಬ ಇರುವ ಹುಡುಗಿ ನೀನೆತಾನೆ ನೀನೆತಾನೆ
ನನ್ನ ಮರಳು ಮಾಡಿದ ಹುಡುಗಿ ನೀನೆತಾನೆ
ಪ್ರೀತಿ ಮಾಡು ಎಂದ ಹುಡುಗಿ ನೀನೆತಾನೆ
ಕೈಕೊಟ್ಟು ಓಡಿಹೋದ ಹುಡುಗಿ ನೀನೆತಾನೆ ನೀನೆತಾನೆ
- ಚೇತನ್ ಬಿ ಸಿ
12 Jul 2018, 06:14 pm
ಹೋಗಿ ಬಾ ಗೆಳತಿ ನೀನಿರುವ ಊರಿಗೆ...
ಈ ಕವನವೇ ನಿನಗೆ ನಾ ಕೊಡುವ ಬೀಳ್ಕೊಡುಗೆ...
ಬಿಡುವಿನ ಸಮಯದಿ ನೀನೋಡು ನನ್ನೆಡೆಗೆ...
ನಿನ್ನಲ್ಲೇ ಹಬ್ಬಿರುವೆ ನೀ ಇಳಿಯೆ ನಿನ್ನನ್ನೊಳಗೆ...
ಹೋಗಿ ಬಾ ಗೆಳತಿ ನೀನಿರುವ ಊರಿಗೆ...
ಮತ್ತೊಮ್ಮೆ ಬರುವಾಗ ನೀ ತಿಳಿಸು ನನಗೆ...
ಒಂದಾಗಿ ಹೋಗುವ ಆ ಮರದ ಕಡೆಗೆ...
ಕ್ಷಣಗಳ ಮಿಂಚಲ್ಲಿ ಒಂದಾಗುವ ಘಳಿಗೆ...
ಹೋಗಿ ಬಾ ಗೆಳತಿ ನೀನಿರುವ ಊರಿಗೆ...
ವಿರಹವೇ ತಾಕದು ಈ ನಮ್ಮ ಪ್ರೀತಿಗೆ...
ಭಾವನೆಯ ಜೊತೆಗೂಡಿ ಇರುವೆ ನಾ ನಿನ್ನೊಳಗೆ...
ಮೌನದಲಿ ಆಲಿಸು ನಾ ನಡೆವ ನೆಡುಗೆ...
ಹೋಗಿ ಬಾ ಗೆಳತಿ ನೀನಿರುವ ಊರಿಗೆ...
ನಿನ್ನೊಳಗೆ ನೀ ಕೊಟ್ಟೆ ನನಗೊಂದು ಜಾಗ...
ಅಲ್ಲಿಂದಲೇ ನೋಡುವೆ ಈ ಪ್ರೀತಿ ಜಗವ...
ನೀನಿತ್ತ ಆಸರೆಗೆ ಬರೆದಿರುವೆ ಈ ಪ್ರೀತಿ ಪದವ ...
ಹೋಗಿ ಬಾ ಗೆಳತಿ ನೀನಿರುವ ಊರಿಗೆ...
ಮೌನದಲಿ ನಾ ನಿಂತು ನಿನ್ನ ನೋಡಿ ನೋಡಿ...
ನಿನ್ನೆಲ್ಲ ಆಟದಲ್ಲಿ ನಿನ್ನೊಳಗೆ ಜೊತೆಗೂಡಿ...
ಹಾಡಾಗಿ ಹಾಡುತಿಹೆ ಅಂತರಾಳದ ದನಿಗೂಡಿ...
ಹೋಗಿ ಬಾ ಗೆಳತಿ ನೀನಿರುವ ಊರಿಗೆ...
ಹೋಗಿ ಬಾ ಗೆಳತಿ ನೀನಿರುವ ಊರಿಗೆ...
ಹೋಗಿ ಬಾ ಗೆಳತಿ ನೀನಿರುವ ಊರಿಗೆ...
---ಮುಕೇಶ್ ದಾತಾರ್ . ರ ---
- ಮುಕೇಶ್ದಾತಾರ್.ರ
12 Jul 2018, 04:37 pm
ಅವರವರ ನೋವಿಗೆ
ಅವರವರ ನಲಿವಿಗೆ
ಅವರವರ ಸುಖ ದುಃಖಕ್ಕೆ
ಸ್ಪಂದಿಸುವನು ವೈದ್ಯ !
ಅವರವರ ಪ್ರೀತಿಗೆ
ಅವರವರ ವಿರಹಕ್ಕೆ
ಅವರವರಲೊಂದಾಗಿ
ಸಂತೈಸುವನು ವೈದ್ಯ!
ಅವರವರ ರೊಚ್ಚಿಗೆ
ಅವರವರ ಕಿಚ್ಚಿಗೆ
ಅವರವರ ರಾಗ ದ್ವೇಷಗಳಿಗೆ
ಹೊರತಾಗಿರುವನು ವೈದ್ಯ!
ಅವರವರ ಚಿಂತನಕೆ
ಅವರವರ ಮಂಥನಕೆ
ಅವರವರ ಯೋಚನಾಲಹರಿಗೆ
ನಿಲುಕುವನು ವೈದ್ಯ!
ಅವರವರ ಭಾವಕ್ಕೆ
ಅವರವರ ಭಕುತಿಗೆ
ಅವರವರ ತೆರನಾಗಿ
ಇರುತಿಹನು ವೈದ್ಯ!
ಡಾ!ಸಿ.ಮುರಳೀಧರ
ಜುಲೈ,2018
- ಡಾ!ಸಿ.ಮುರಳೀಧರ
12 Jul 2018, 11:47 am
ಈ ಸೃಷ್ಠಿಯೊಂದು ಸುಂದರ ಕನ್ನಡಿ...
ಬರೆಯಲಾರೆ ನಾ ಅದರ ಮುನ್ನುಡಿ...
ಬಿಂಬಿಸುತಲೇ ನಿಂತಿದೆ ಈ ಸುಂದರಿ...
ಹೇಳುತ್ತಿದೆ ನೀ ಅಂಟಬೇಡ ಜಡಿ ಜಡಿ...
ಶ್ಲಾಘನೆಗಳ ಜೊತೆಗಿಲ್ಲ...
ಕುರೂಪತೆಗೆ ಆಂಟೋಲ್ಲ...
ಬಿಂಬಿಸುತ ಎಲ್ಲವನು ತಾನು...
ತೋರಿಹಳು ಎಲ್ಲರ ಚಲುವನ್ನು....
ಕೋಪದಲಿ ಕುಪಿತಳಾಗಿ...
ಭಾವದಲಿ ಭಾವುಕಳಾಗಿ...
ಯಾವ ಸ್ಥಿತಿಯು ನಾನಲ್ಲವೆಂದು...
ನೋಡುವಳು ನೀ ಯಾಕೆ ಹೀಗೆಂದು...
ಒಮ್ಮೆ ದರ್ಪಣದ ಈ ಚಲುವೆ...
ಕಂಡಳೋ ನನ್ನ ತನುವೊಳಗೆ...
ಕಾಣದು ದರ್ಪ ಅವಳೊಳಗೆ...
ಬಿಂಬಿಸುವ ಸ್ಥಿತಿಯಾದೆನು ಅವಳೊಳಗೆ...
---ಮುಕೇಶ್ ದಾತಾರ್ . ರ
- ಮುಕೇಶ್ದಾತಾರ್.ರ
12 Jul 2018, 10:03 am
ಮೌನ ಹೊಸತೇನಲ್ಲ
ಮಾತು ಬರಿ ಶಬ್ದವಲ್ಲ
ಇರುಳು ಹಗಲು ಶಾಶ್ವತವಲ್ಲ
ಮಾತು ಬಿಡುಗಡೆ ಅಲ್ಲ
ಮೌನ ಬಂಧನವಲ್ಲ
ಅಲೆಗಳ ಮೌನ ಗಾಳಿಗೆ ತಿಳಿದಿಲ್ಲ
ಗಾಳಿ ಸುಳಿವ ಸದ್ದು ಕಡಲಿಗೂ ತಲುಪಲಿಲ್ಲ
ಕಡಲ ದಡದ ಮೌನ
ಪರ್ವತ ಶಿಖರಕ್ಕೆ ತಲುಪಲಿಲ್ಲ
ಮೌನದಲ್ಲಿ ಮಾತಿನ ಹುಡುಕಾಟವೇಕೆ?
- Acchu love
12 Jul 2018, 08:03 am
ಸಾಂಸ್ಕೃತಿಕ ನಗರ ಮೈಸೂರು
ಚಾಮುಂಡೇಶ್ವರಿಯ ತವರೂರು
ಮಹಿಷಾಸುರನ ಮರ್ದಿಸಿದಳು
ಬೆಟ್ಟದ ಮೇಲೆ ನೆಲೆಸಿದಳು
ನಾಡನು ಕಾಯುವ ಸಲುವಾಗಿ!
ಇದ್ದಕ್ಕಿದ್ದಂತೆ ಬೆಟ್ಟವನೇರುವ
ಬಯಕೆಯು ತುಂಬಿತು
ನನ್ನೀಮನವ
ಎಲ್ಲರ ಸಂಗಡ ನನ್ನ ಪಯಣ
ಸಾಗಿತು ನಾಲ್ಕುಚಕ್ರದ
ವಾಹನದಲಿ
ಬೆಟ್ಟದ ಬಳಿ ಬಳಿ ಸಾಗುತಲಿರಲು
ಬೆಟ್ಟವು ಕಂಡಿತು
ಗಗನದ ಅಂಗಳದ ಅಂಚಿನ
ಮೋಡದ ಮಡಿಲಿನಲಿ
ಮುಂಗಾರಿನ ಮಳೆರಾಯನು
ಮುತ್ತಿನ ಹನಿಗಳ
ಎಲ್ಲೆಡೆ ಚೆಲ್ಲುತಲಿರಲು
ಚುಮುಚುಮು ಚಳಿಯಲಿ
ಗಡಗಡ ನಡುಗುತ ಸಾಗಿದೆವು
ಅಮ್ಮನ ಸನ್ನಿದಿಯಲಿ
ಮೈಸೂರಿನ ಹಿರಮೆಯ ಸಾರುತ
ವರ್ತಕರ ಕಿಸೆಯನು ತುಂಬುತ
ಪ್ರವಾಸಿಗರ ಕಣ್ಣನು ತಣಿಸುತ
ಮೆರೆವಳು ತಾಯಿ ಚಾಮುಂಡಾಂಬೆ
ಶಾರಧ
- ಶಕುಂತಲಾ
11 Jul 2018, 04:22 pm
ಸಂಜೆಯೊಳಗೊಂದು ಮೌನದ
ಮಳೆಯೊಂದು ಸದ್ದು ಮಾಡದೆ
ಸುರಿಯುತಿದೆ..........
ಭೂದೇವಿಯ ಮಡಿಲ ತುಂಬಿ
ಹಸಿರು ಸಿರಿಯ ತುಂಬಿ
ಹರಿಸೋಕೆ...........
ಬಾನಂಗಳವೆ ತುಂಬಿ ಬೆಳಕನ್ನ
ಚೆಲ್ಲುತ್ತಾ ಈಡಿ ಜಗದ ಒಡೆಯೆನೆ
ನಾನೆಂದು ಬೆಳಗುತಿದ್ದ ಆ ಸುರ್ಯ ನ
ಮರೆ ಮಾಡಿ ನನಗಾರು ಸಾಟಿ ಎಂದು
ಬಾನೆಲ್ಲ ತುಂಬಿ ಸುರಿಯುತಿಹುದು
ಸಂಜೆಯೊಳಗೊಂದೂ
ಮೌನದ ಮಳೆ...........
ಮನಸುಗಳ ಮೌನ
ಮರೆಮಾಡುವಂತೆ ಸುರಿಯುತಿದೆ
ಎಲ್ಲರಮನೆ ಮನದಂಗಳದಲ್ಲಿ
ಸಂಜೆಯ ಮಸುಕು ಮಳೆ..........
ಮೌನದ ಮಳೆ..........
- ರಾಗಸಿರಿ....
11 Jul 2018, 04:20 pm
ನನ್ನ ಕಣ್ಣ ವರ್ಷವೆಲ್ಲ
ನಿನ್ನೆದೆಯ ನೆಲದಲ್ಲಿ
ಹಿಂಗಿದ ಮೇಲೂ
ಏತಕೆ ನಾನು ನೀನು
ಬೇರೆನ್ನುವ ಭಾವ
ನನ್ನೆಲ್ಲ ನೋವುಗಳೆಲ್ಲ
ನಿನ್ನ ತೋಳ ತೆಕ್ಕೆಯೊಳಗೆ
ಬಂಧಿಯಾದ ಮೇಲೂ
ನೀ ದೂರ ನಿಂತರೆ
ಸಹಿಸುವುದೇನು ಈ ಜೀವ
ಕತ್ತಲನೆ ಅಪ್ಪಿ ಸುಖಿಸಿದ ಕಣ್ಣಿಗೆ
ಕಾಮನಬಿಲ್ಲ ತೋರಿಸಿ
ರಂಗಿನ ಕನಸ ಬಿತ್ತಿದ ಮೇಲೂ
ನೀನೊಂದು ಕನಸೆಂದರೆ
ಸೇರದೆ ಇರುವೆನೆ ಸಾವ
ಕಂಬನಿಯ ಚುಂಬನದಲೆ
ಕಾಲ ಕಳೆದ ಅಧರಗಳಿಗೆ
ಸಿಹಿಜೇನ ಜೌತಣವಿತ್ತೂ
ಮಾತಿರದ ಬರಿಯ ಮೌನವೆಂದರೆ
ತಾಳಿ ಉಳಿಯಲಾಗುವುದೆ ಆ ನೋವ
ಮೂಲೆ ಸೇರಿ ಅವಿತು ಕುಳಿತ
ಮುಂಗುರುಳ ಬೆರಳಲೆ ರಮಿಸಿ
ಕಿಡಿಗೇಡಿತನದ ಕಿಡಿಯ ಸೋಕಿಸಿ
ಒಂಟಿ ನೀನು ಇನ್ನೆಂದೂ ಎಂದರೆ
ಕಾಡದಿರುವುದೆ ಮನವ
ಹೃದಯದೂರ ಡಾಂಬರು ಕಾಣದ
ಬೀದಿಗಳ ಒಪ್ಪ ಮಾಡಿ ಸಿಂಗರಿಸಿ
ನಿನ್ನೊಲವ ತೇರ ಎಳೆದ ಮೇಲೂ
ಪ್ರೀತಿ ಉತ್ತರವಿರದ ಪ್ರಶ್ನೆಯಾದರೆ
ಮತ್ತೆ ಮನವು ತೆರೆವುದೆ ಪ್ರೀತಿಗೆ ಕದವ
- ಶ್ರೀಕಾವ್ಯ
07 Jul 2018, 04:18 pm