Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೀತಿ

ಲೋಕದಲ್ಲಿ ತಾಯಿ ಪ್ರೀತಿಯೊಂದೇ
ನಕಲು ಮಾಡಿರದ ಮೊಟ್ಟ ಮೊದಲ ಸ್ವಮೇಕು.
ಉಳಿದ ಪ್ರೀತಿಗಳೆಲ್ಲ ಅದನ್ನು ಕಂಡು
ನಕಲು ಮಾಡಲು ಹೋಗಿ ಸೋತ ರಿಮೇಕು!

- ಶ್ರೀಗೋ.

18 Jul 2018, 09:38 am

ನನ್ನವಳು ಸುಂದರಿ

ನನ್ನ ಕವಿತೆಗಳಿಗೊ
ಗೊತ್ತಿಲ್ಲ ಗುರಿಯಿಲ್ಲ...

ಹೊಗಳಲೇ ಬೇಕು
ಅನ್ನೊ ಹುಚ್ಚು..
ಎನಗಿಲ್ಲ....
ಹೊಗಳದೇ ಇರದೇ ಇರಲೂ...
ಸಾಧ್ಯವಿಲ್ಲ...
ನಿನ್ನ ಹೊಲಿಕೆ ಆ ಚಂದ್ರ ತಾರೆಗಳು...
ಸಾಕಗಲ್ಲ...
ಆದರೂ...
ನಿನ್ನ ಚೆಲುವಿಗೆ
ಬರಿ ಮಾತೆ ಸಾಕಗಲ್ಲ...
ನೀನೊ ಹುಣ್ಣಿಮೆಯ
ಚಂದಿರನಂತೆ
ನಾನೊ ಸಾಗರದ ಅಲೆಯಂತೆ...

- Vishwa Shilpi

18 Jul 2018, 12:42 am

ಕಣ್ಣೀರು ಬಿದ್ದಾವು ಜೋಪಾನ..

ಕೆರೆ ಬತ್ತಿ ಬರಡಾದ
ಭೂಮಿಯನ್ನು ಹೋಲುತಿದೆ..!!
ನಿನ್ನ ನೆನೆದು ನಾ ಬರೆದ
ಕವನದ ಈ ಸಾಲು...............!!
ನಗುತಲೇ ನೀ ಓದು
ನುಡಿ ಮುತ್ತು ಖುಷಿ ಕೊಡಲಿ..!!
ಮೈ ಮರೆತು ಅಳಬೇಡ
ಕಣ್ಣೀರು ಬಿದ್ದಾವು ಜೋಪಾನ.!!

- ಪಿ.ಜಿ.ಜ್ಯೋತಿ

17 Jul 2018, 06:00 pm

ತವರು ಮನೆ ತೋಟದಲಿ

ತವರು ಮನೆ ತೋಟದಲಿ
ಕೆಂಡ ಸಂಪಿಗೆಯ ಹೂ ಅರಳಿ!!
ಮುಡಿದವರ ಮುಡಿ ಸೇರಿ
ಸಾಗಿಹುದು ಬಲು ದೂರ!!

ಮುಡಿದವರ ಮುಖದಲ್ಲಿ
ಮಂದಹಾಸವು ಅರಳಿ!!
ಘಮಿಸುತಲೇ ಬಾಡಿಹುದು
ಸಂಪಿಗೆಯು ತಾ ನರಳಿ!!

ಬಾಡಿರುವ ಹೂವಿಗಿದೋ
ಮೊದಲಿನ ಬೆಲೆಯೆಲ್ಲಿ!!
ಮುಡಿದವರು ಎಸೆದಿಹರು
ಯಾವುದೋ ಮೂಲೆಯಲಿ!!

ಮೂಲೆಯಲಿ ಬಿದ್ದಿರುವ
ಹೂವನು ಕನಿಕರಿಸುವರಾರು!!
ಮರಳಿ ಕೊಂಡೊಯ್ಯುವರೇ
ಬಂದು ಹೂವ ತವರಿನವರು!!

- ಪಿ.ಜಿ.ಜ್ಯೋತಿ

17 Jul 2018, 05:34 pm

ನೀ ಮುನಿದರೇ

ನೀ ಮುನಿದರೇ ನಾ ಬೆದರುವೆ
ನೀ ನಗುತಿರೇ ನಾ ಒಲಿಯುವೆ!!
ನನ್ನ ಮನದಲಿ ನಿನ್ನ ಸನಿಹವು
ದೂರ ಇದ್ದರೂ ಜೋಡಿ ಜೀವವು!!

ಪ್ರತೀ ಜನುಮ ಹೀಗೇ ಶರಣಾಗಿ
ಇರುವ ಆಸೆ ನಿನ್ನ ಒಲವಿಗೆ!!
ವರವಾಗಿ ನೀನು ದೊರೆತ ಮೇಲೆ
ಹಾಲು ಜೇನು ಈ ಬದುಕಿಗೆ!!

ಸಂಸಾರವೆಂಬ ನೌಕೆಯಲ್ಲಿ ಇಂದೇ
ಸಾಗಿಬಿಡಲೀ ನಮ್ಮ ಪಯಣವು!!
ಸಾಕಾರಗೊಂಡ ಬದುಕಿನಲ್ಲಿ
ನಿತ್ಯ ಪರವಶವು ನಮ್ಮ ಪ್ರೇಮವು!!

- ಪಿ.ಜಿ.ಜ್ಯೋತಿ

17 Jul 2018, 05:20 pm

ತವರಿಗೆ ಬಾ ಎಂದೆನ್ನ ಕರೆವವರು ಯಾರಿಲ್ಲ

ಅಂದು ತವರಲಿ ನಾ ಬೀಗಿ ಉರಿಯುತ್ತಿದ್ದೆ
ನಾನೇ ಈ ತವರಿನ ಹಣತೆ ಎಂದು!!
ಮುದ್ದಿಸಿದರೂ ಎಲ್ಲ ಮುದ್ದು ಮಗಳೆಂದು
ಹಬ್ಬದ ಸಡಗರವ ಅನುದಿನವೂ ತಂದು!!

ಹರೆಯದಲಿ ಚಿಗುರಿಹ ಮುಗ್ಧ ಒಲವೊಂದು
ಬೆಳೆಯಿತು ಮರವಾಗಿ ಹಸಿರಲೇ ಮಿಂದು!!
ಜಾತಿಗೋಪುರವ ಕಟ್ಟಿ ಪೂಜಿಸುವರೆದುರು
ಪ್ರೀತಿಗೆ ಅಪ್ಪಣೆಯ ಬಯಸುತಲಿ ನಿಂದೆ!!

ವಿರಹದಲಿ ಬೆಂದಿಹ ಮನವು ಚಂಚಲವಾಗಿ
ಸಂಚರಿಸ ಹೊರಟಿತು ಅಲೆಮಾರಿಯಾಗಿ!!
ಕಲ್ಲಾದ ಮನದೆದುರು ಎಷ್ಟೇ ಬೇಡಿದರೂ
ಎಳ್ಳಷ್ಟು ಬೆಲೆ ಕೊಡದೆ ಕಡೆಗೆಣಿಸಿದರು!!

ಊರ ನಡುವಿನ ದೇಗುಲದಿ ನನ್ನ ಮದುವೆ
ವಧುವು ನಾನಾಗಿರಲು ಯಾರಿಲ್ಲ ಜೊತೆಗೆ!!
ನಾ ಬಯಸಿದ ಒಲವು ವರವಾಗಿ ನಿಂತಿರಲು
ವರನ ಮನೆಯವರೆದುರು ಒಬ್ಬಂಟಿ ನಡಿಗೆ!!

ಸುಖ ದುಃಖದ ಜೊತೆ ವರುಷ ಉರುಳಿರೆ
ಸಂತಸದ ಸಂಗತಿ ಉದರದಲಿ ಇಹುದು!!
ನವ ಮಾಸ ಕಳೆಯುವ ಹಾದಿಯಲಿ ಇಂದು
ಒಂಟಿ ಮನಸದು ಕೊರಗುತಿದೆ ನೊಂದು!!

ಕೈ ಹಿಡಿದು ಕೊಂಡೊಯ್ದ ಬದುಕು ಸುಂದರ
ದೇವರೇ ನೀಡಿದ ವರದಾನ ಈ ವರ!!
ತವರಿಗೆ ಬಾ ಎಂದೆನ್ನ ಕರೆವವರು ಯಾರಿಲ್ಲ
ಹಬ್ಬದ ಸಡಗರವೂ ನನ್ನ ಪಾಲಿಗಿಲ್ಲ!!

- ಪಿ.ಜಿ.ಜ್ಯೋತಿ

17 Jul 2018, 04:53 pm

ಜೀವನ ಒಂದು ಮಾರಾಟದ ಸಂತೆ...

ಜೀವನ ಒಂದು ಮಾರಾಟದ ಸಂತೆ...
ಯಾಕಾಗಿ ಕಟ್ಟುವೆ ಚಿಂತೆ ಕಳೆಗಳ ಕಂತೆ...
ಅದರಲ್ಲಿ ನೀ ಒಂದು ಕೊತ್ತಂಬರಿ ಕಂತೆ ...
ಕಳೆಗಳ ಕಿತ್ತೊಗೆ ಮಾಡದೆ ನೀ ಚಿಂತೆ...

ಚಿಂತೆಯ ತಲ್ಲಣದಿ ನರ್ತಿಸುವೆ ಏಕೆ...
ಮನ ಶಕ್ತಿಯು ಕುಂದುವುದು ಜೋಕೆ...
ವ್ಯರ್ಥ ಚಿಂತೆಗಳು ಆಳಾಗುವುದು ಬೇಕೇ...
ಸಾರ್ಥಕ ಚಿಂತನದಿ ನೀ ಮಿಂದು ಕಾಣುವೆ ಏರಿಕೆ...

ಎಲ್ಲಿಂದ ಯಾಕಾಗಿ ಬರುತಿದೆ ಈ ಚಿಂತೆ...
ಕ್ಷಣ ಕ್ಷಣವೂ ನೋಡಿಕೊ ಅದರಲ್ಲಿ ಕುಂತೆ ...
ನೋಯುವ ಮನವೇರಲಿ ಬೇಯುವ ಚಿತೆ...
ಚಿಂತೆಯ ಮೂಲ ಕಂಡು ಆಗುವೆ ನಿಶ್ಚಿತಂತೆ...

ಬಂದ ಚಿಂತೆ ಬರಲು ಬಿಟ್ಟರೆ ನೀ ಅದರಂತೆ...
ಬಂದು ಹೋಗುವವು ನೆಂಟರು ಬಂದು ಹೋದಂತೆ...
ಯಾವ ಚಿಂತೆಯು ನಿನಗಂಟದು ಎಂದು ತಿಳಿದಂತೆ...
ಕಳಚುವವು ಭವದ ನಂಟು "ಅದು" ನಿನ್ನರಿವಿಗೆ ಬಂದಂತೆ...

ಅರಿವಿನ ಗುರು ನಿನ್ನೊಳಗೆ ಆವರಿಸಿ ನಿಂತಂತೆ...
ಚಿಂತೆಗಳ ತಂತಿಯನು ಬಿಗಿದು ಮೀಟಿದಂತೆ...
ಸುಜ್ಞಾದದ ಸ್ವರಗಳು ತಾನಾಗೇ ಸೃಜಿಸಿದಂತೆ...
ಮುಳ್ಳಾದ ಚಿಂತೆಗಳು ಹೂವಾಗಿ ಅರಳಿದಂತೆ...

---ಮುಕೇಶ್ ದಾತಾರ್ . ರ---

- ಮುಕೇಶ್ದಾತಾರ್.ರ

17 Jul 2018, 04:37 pm

ಯವ್ವನದ ಯೋಗ

ಮೌನ ಮಾತಾದಾಗ
ನುಡಿ ಮುತ್ತುಗಳಿಗೆ
ಅದುವೇ ಶುಭ ಯೋಗ....!!

ಬದುಕು ಬರಡಾದಾಗ
ಇಬ್ಬನಿಯ ಸ್ಪರ್ಷವೂ
ತರುವುದು ಶುಭ ಯೋಗ..!!

ಕಾಲ ನಿಲ್ಲದೇ ಓಡುವಾಗ
ಕಳೆದ ಅನುಭವದ ಪಯಣದಿ
ದೊರೆವುದು ಶುಭ ಯೋಗ.!!

ಮುಪ್ಪು ತನು ಆವರಿಸಿದಾಗ
ಮನ ಅದನು ಒಪ್ಪದಾಗ
ಪ್ರತಿ ಕ್ಷಣವೂ ಯವ್ವನದ ಯೋಗ....!!

- ಪಿ.ಜಿ.ಜ್ಯೋತಿ

17 Jul 2018, 11:32 am

ಸಿರಿಗಂದ ಹಚ್ಚು ಬಾರೆ..

ಸಿರಿಗಂಧ ಹಚ್ಚ ಬಾರೆ
ಸಿಂಧೂರದ ಸೊಬಗು ತೋರ ಬಾರೆ,
ನನ್ನವಳ ಕೈಯೀಗ ಬರಿದಾಗಿದೆ
ಒಂದೆರೆಡು ಬಳೆಗಳನು ತೋಡಿಸಬಾರೆ.

ಮುಡಿ ಇಂದು ತಾನೇಕೊ ಮುನಿದಂತಿದೆ
ಮೈಸೂರ ಮಲ್ಲಿಗೆಯ ಮುಡಿಸ ಬಾರೆ,
ಕಲಕಳಿಸಿ ನಗುವ ಮೊಗ ನಗೆ ಮರೆತಿದೆ
ತುಟಿಯ ಮೇಲಿನ ಮಚ್ಚೆ ನಗು ಚೆಲ್ಲಿದೆ.

ಹಪಹಪಿಸಿ ಹೃದಯಸುಧೆ ಹಾಲಾಗಿದೆ
ಹಾಲ್ಗೆನೆಯ ಸವಿಯ ಚೂರುಣಿಸ ಬಾರೆ.

- ಚುಕ್ಕಿ

16 Jul 2018, 09:57 pm

ಮಳೆ ಮಳೆ

ಮಳೆ ಮಳೆ ಜಿಟಿ ಜಿಟಿ ಮಳೆ
ಹಳ್ಳ ಕೊಳ್ಳ ಕೆರೆ ತುಂಬುವ ಮಳೆ
ನದ ನದಿಗಳು ತುಂಬಿ ಹರಿಯುವ ಮಳೆ
ರೈತರಿಗೆ ಬಿತ್ತಿ ಬೆಳೆ ಬೆಳೆಯುವ ಮಳೆ.

ಬರಗಾಲ ನೀಗಿಸುವ ಜಿಟಿ ಜಿಟಿ ಮಳೆ
ಡ್ಯಾಂ ತುಂಬಿಸುವ ಮಳೆ ಮಳೆ ಹೊಳೆ
ಮಳೆನಾಡಿನ ಮಳೆ ಹನಿ ಹನಿ ಮಳೆ
ಸಂಪತ್ತು ಸೃಷ್ಠಿಸುವ ಜೀವ ಉಳಿಸುವ ಮಳೆ.

ರಾಜಕೀಯ ಗೊತ್ತಿಲ್ಲ ಅನ್ಯಾಯ ಗೊತ್ತಿಲ್ಲ ಮಳೆಗೆ
ಮಳೆಯ ನಂಬಿ ಬದುಕ ಕಟ್ಟಿ ಬಾಳ ಸಾಗಿಸುವರು
ಮಳೆ ಇಲ್ಲದೆ ಬೆಳೆ ಇಲ್ಲ, ಬೆಳೆ ಇಲ್ಲದೆ ಆಹಾರ ಇಲ್ಲ
ಮಳೆ ಇಲ್ಲದೆ ಏನು ಇಲ್ಲ ಇಲ್ಲ, ಮಳೆ ಮಳೆ ಜೀವ ಮಳೆ.

-ಹೆಚ್.ವಿರು ತಾವರಗೊಂದಿ.

- Viru Tvg T.v.

15 Jul 2018, 10:10 pm