Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಹಂಗಿನ ಕೊಳದಲ್ಲಿ
ಮಿಂದರೂ ಕೊಳೆ ಅಲ್ಲಿ!!
ಮೈಯದು ಶುದ್ಧ ಎಂದರೂ
ಮನಸಿಗೆ ಬಹಳ ತೊಂದರೆ!!
ಯಾರದೋ ಹಂಗಲ್ಲಿ
ಬದುಕಿಗೆ ನೆಲೆ ಎಲ್ಲಿ!!
ಎಲ್ಲೆ ಮೀರಿ ನಡೆವಾಗ
ಬರುವುದೆಲ್ಲಿ ಶುಭ ಯೋಗ!!
ಎಲ್ಲಿಯೋ ನಾನಿದ್ದೆ
ನನ್ನನು ನೀನು ಕರೆತಂದೆ!!
ಹಂಗಿನ ಸುಳಿಯಲ್ಲಿ
ಸುತ್ತಿ ನನ್ನ ತೇಲಿಸಿದೆ!!
ಯಾರದೋ ಈ ಶಾಪ
ನೋಡು ನನ್ನ ಪರದಾಟ!!
ಮೋಸವಾದ ಮನದ ದೋಶ
ಹುಡುಕಿದರೆ ವನವಾಸ!!
- ಪಿ.ಜಿ.ಜ್ಯೋತಿ
24 Jul 2018, 04:43 pm
ನೆನಪಿನ ಪುಟಗಳಲಿ ಸಹಿಹಾಕಿ ಹೋಗುತಿರುವೆ..
ಮನಸನು ಮುರಿದು ಪಯಣ ಮುಂದುವರೆಸಿರುವೆ..
ಬಾನಂಚಿನ ನಿಷ್ಕಲ್ಮಶ ಪ್ರೀತಿಯ ನೀನಿಂದು ತಿರಸ್ಕರಿಸಿರುವೆ..
ಭಾವನೆಗಳ ಮರೆತು ಸಾಧನೆಯ ಕಡೆಗೆ ನಾ ಚಲಿಸಿರುವೆ..
ಕಾಡುತಿರುವ ನೆನಪುಗಳಲೇ ಮಾಡುತಿರುವೆ ಉಸಿರಾಟ..
ಕಗ್ಗತ್ತಲಲಿ ಸಾಗುತಿದೆ ಪ್ರೀತಿಯ ಹುಡುಕಾಟ..
ನಿನ್ನನು ತೊರೆದು ಇಂದು ನಾ ಮಲಗಿರುವೆ ತಾಯಿಯ ಮಡಿಲಲಿ..
ನಿರ್ಧರಿಸಿರುವೆನಿಂದು ಗೆದ್ದೇ ಗೆಲ್ಲುವೆ, ಜೀವನವೆಂಬ ಕಡಲಲಿ..
ಸ್ಫೂರ್ತಿಯ ಚಿಲುಮೆ ಉಕ್ಕಿದೆ.. ಗುರಿ ಕೈಬೀಸಿ ಕರೆಯುತಿದೆ..
ಯಶಸ್ಸಿನ ದಾರಿ ಸಿಕ್ಕಿದೆ.. ಕನಸು ನನಸಾಗುತಿದೆ..
ಹೃದಯದಲಿ ಬೆಸೆದಿರುವ ನಿನ್ನ ನೆನಪು ಕಾಡುತಿದೆ..
ನೀನಿರದೇ.. ಈ ಗೆಲುವೆಲ್ಲಾ ವ್ಯರ್ಥವೆನಿಸಿದೆ..
ವಿಭಿನ್ನ ಆರಂಭ.. ಕಗ್ಗಟ್ಟಿನ ಸಂದರ್ಭ.. ಆದರೂ ಈಡೇರುತಿದೆ ಉದ್ದೇಶ..
ಅದೇ ಮೌನ.. ಅದೇ ಕವನ.. ಸಾರುತಿರುವೆ ನೂತನ ಸಂದೇಶ..
ಜೀವನವೆಂಬ ಈಜು ಕಲಿತ ಮೇಲೆ.. ಪುನಃ ನೀ ಎದುರಾಗಿರುವೆ..
ಹತೋಟಿಯಿಲ್ಲದ ಮನಸಲಿ ಮತ್ತೇ ಪ್ರೀತಿಯ ಚಿಗುರಿಸಿರುವೆ..
ಎದೆಬಡಿತ ಹೆಚ್ಚುತಿದೆ.. ಕಂಗಳ ಸಂಭಾಷಣೆ ನಡೆಯುತಿದೆ..
ಗೆಲುವಿನ ಕಳೆ ಮೊಗದಲಿ ಮೂಡುತಿದೆ.. ಒಲವಿನ ಮಳೆ ಸದ್ಯ ಶುರುವಾಗಿದೆ..
- sandesh
22 Jul 2018, 08:34 pm
ಮರೆತಿರುವಳೆಂದು ಸುಮ್ಮನಿದ್ದೆ
ಮತ್ತೆ ಬಂದು ಯಾಕೆ ನಿಂತೆ ?
ಮನಸ್ಸು ತುಂಬಾ ಭಾರವಾಗಿದೆ
ಮೌನವು ನನ್ನ ದೂರ ತಳ್ಳಿದೆ.
ಮನ್ನಿಸು ದಯಮಾಡಿ ನನ್ನನು
ಮಾಸದಂತ ಪ್ರೀತಿ ನಿನ್ನದು,
ಮೋಸದ ಪ್ರೀತಿ ಕಾಣದ ಹಾಗೆ
ಮೆರೆಸಿದ ನನ್ನೊಲುಮೆ ನೀನು.
ಮೂಕ ಮನದ ಮಾತ ಕೇಳು
ಮೊದಲ ಪ್ರೀತಿ ಕಥೆಯ ಹೇಳು,
ಮತ್ತು ಬರೆಸುವ ನಿನ್ನ ಚಿತ್ರಣ
ಮರೆಸುವುದೆಲ್ಲ ನನ್ನ ನೂವನ್ನ.
ಮೂಲವೆಲ್ಲಿಹುದು ನನ್ನ ಪ್ರೀತಿಗೆ
ಮರೆಯದಂತಿದೆ ನಿನ್ನ ಕಿರುನಗೆ,
ಮಾತು ಮರೆಸಿ ಕರೆಯುವುದು ನನ್ನ
ಮಂಜಿನ ಹನಿಯ ಈ ಬರವಣಿಗೆ...
- vasu
22 Jul 2018, 01:34 pm
ಚಂದ್ರನ್ ತಿರುವ ನಿನ್ನ ಮುದ್ದಾದ ಗುಂಡು ಮುಖದಲ್ಲಿ ಪಟಪಟನೆ ಎಂದು ಬಡಿಯುತ್ತಿರುವ ನಿನ್ನ ಕಣ್ರೆಪ್ಪೆಗಳ ಸನ್ನೆಯಲ್ಲಿ ನಕ್ಷತ್ರದಂತೆ ಮಿನುಗುತ್ತಿರುವ ನಿನ್ನ ಕಣ್ಣಿನಿಂದ ನೋಡಿ ಕ್ಷಣದಲ್ಲಿ ನನ್ನ ಹೃದಯ ನಿಂತುಹೋಯಿತು ಬಾ ನನ್ನ ಒಡತಿ
ಬರಡಾದ ನನ್ನ ಹೃದಯದಲ್ಲಿ ಸೇರಿ ಹೊಸ ಪ್ರೇಮ ಚಿಲುಮೆ ತುಂಬಿ ಮತ್ತೊಂದು ಪ್ರೇಮ ಲೋಕ ಕಟ್ಟೋಣ ಬಾ ನನ್ನ ಗೆಳತಿ
ಶಂಭು
- Sp Spms
21 Jul 2018, 07:00 pm
ಜೀವ್ನ್ದಲ್ಲಿ ಏನೈತೆ ಬರಿ ಮಣ್ಣು
ಇವ್ನ್ ಕಂಡ್ರೆ ಅವ್ನೀಗಾಗಲ್ಲ
ಅವ್ನ್ ಕಂಡ್ರೆ ಇವ್ನೀಗಾಗಲ್ಲ
ಮುಂದೆ ಬಂದ್ರೆ ಹೊಟ್ಟೆ ಉರಿ ಪಡ್ತಾನೆ ಅವ್ನು
ಎಡವಿ ಬಿದ್ರೆ ಗೊಳ್ ಅಂತ ನಗ್ತಾನೆ ಇವ್ನು..
ಜೀವ್ನ್ದಲ್ಲಿ ಏನೈತೆ ಬರಿ ಮಣ್ಣು
ಜಗದಲ್ಲಿ ನಡಿತೈತೆ ದ್ವೇಷ ಮೋಸದ ಕಾರುಬಾರಿ
ಇವನಿಗೆ ಬೇಕು ಇನ್ನೊಬ್ಬರ ಮನಸು ಕೆಡಿಸುವ ಉಸಾಬರಿ
ಅವನಿಗೆ ಸಾಕು ಸಿಕ್ಕಸಿಕ್ಕವರ ಕಾಸು ಕೀಳುವ ಉಸ್ತುವಾರಿ..
ಜೀವ್ನ್ದಲ್ಲಿ ಏನೈತೆ ಬರಿ ಮಣ್ಣು
ಹೆಸರಿಗೆ ಮಾತ್ರ ಬಿದ್ದಿವೆ ನೂರಾರು ಕಾನೂನು
ಹುಡುಕಲು ಹೋದವರು ಸೇರುವರು ಮಣ್ಣು
ಇದು ಅದಲು ಬದಲು ಮಾಡುವವರ ಜಮಾನು..
ಜೀವ್ನ್ದಲ್ಲಿ ಏನೈತೆ ಬರಿ ಮಣ್ಣು
ಈ ನರನಿಗೆ ಅಂಟೈತೆ ಹೆಣ್ಣು ಹೊನ್ನು ಮಣ್ಣಿನ ಮಹಾಮಾರಿ
ಓಡಿಸಲು ಹೋದವರು ಆಗುವರು ಗೋರಿ
ಅಂಟಿಸಿ ಕೊಂಡವರಿಗೆ ಸಿಗುವುದು ಹೆಮ್ಮೆಯ ಗರಿ..
- ಸುರೇಶ್ ಟಿ ವಿ
21 Jul 2018, 04:41 pm
ಜೀವನವೇ ಒಂದು ಯಾನ
ಸಾಗು ಮುಂದೆ ಆಲಿಸುತ್ತ ಮಧುರ ಮಂಗಳಗಾನ
ಸ್ನೇಹಿತ ಬಂದುಗಳೆ ಒಡನಿರುವರು ನೀಡದೆಯೆ ಆಹ್ವಾನ..
ಪಾಪಿ ಪಾತಕಿಗಳೂ ಸನಿಹವಿದ್ದಾರು ಜೋಪಾನ..
ನೀನು ನಿನ್ನವರ ಕಷ್ಟ ಸುಖಗಳಿಗೆ ಕೊಡು ನೀ ಗಮನ
ಬೇಡ ನಿನಗೆ ಯಾನದ ಹೊರತು ಮಧ್ಯಪಾನ
ಅದು ಅರ್ಧದಲ್ಲೇ ಕುಂಠಿತಗೊಳಿಸೀತು ನೀನು ನಿನ್ನವರ ಪ್ರಯಾಣ..
ತೊರಬೆಡ ಅಸಹನೆಯ ಬಿನ್ನಾಣ,
ಶಾಂತಿಯಿಂದ ಕಾಯುವುದೊಳಿತು ಬರುವವರೆಗೂ ನಿನ್ನಯ ನಿಲ್ದಾಣ..
ಅರ್ಧದಲಿ ಇಳಿದವರು ಮಣ್ಣಲಿ ಬಿದ್ದು ಗಾಳಿಯಲಿ ಹಾರುವರು ಸಿಗದೆಯೇ ತಾಣ
ಪೂರ್ಣ ಶಾಂತಿಯಲಿ ಕಾಯ್ದವರು ಗದ್ದುಗೆಗೆ ಏರಿ ಸ್ವರ್ಗದ ಊರಲ್ಲಿ ಮಾಡುವರು ಅಮೃತದ ಸ್ನಾನ..
ತಾಣ ಸಿಗದೆ ಮತ್ತೆ ಹಿಂದೆ ಹುಡುಕಿ ಬಂದವರಿಗೆ ಜಾಡಿಸಿ ಒಡೆಯುವುದು ಯಮನ ಕೋಣ..
- Manju..
21 Jul 2018, 02:07 pm
ನನ್ನ ಮನೆಯ ಅಂಗಳದಲ್ಲಿ
ಹುಣ್ಣಿಮೆಯ ನಗು ಚೆಲ್ಲಿ!!
ಮೋಡ ಕವಿದ ಎದೆಯಲ್ಲಿ
ಇಟ್ಟೆ ನೀನು ರಂಗೋಲಿ!!
ಆಸೆಯ ಬುರುಕನು ನಾನು
ನನ್ನಯ ಆಸೆಯೇ ನೀನು!!
ಮನದ ಈ ಬಾನಂಗಳದಿ
ಬೆಳಗುವ ಆರತಿ ನೀನು!!
ಸಾಗರದ ಮೋಡಿಗೆ ನಿನ್ನ
ಸಿಲುಕಿಸಿದನೇ ಆ ಚಂದ್ರ!!
ನನ್ನ ಪ್ರೇಮದ ಅರಮನೆಯಲ್ಲಿ
ನೀನೇ ನನ್ನ ಒಲವಿನ ಮಂತ್ರ!!
- ಪಿ.ಜಿ.ಜ್ಯೋತಿ
21 Jul 2018, 11:58 am
ಆಟ ಪಾಟ ಊಟ ಓಟ
ಶಾಲೆ ವೇಳೆ ಮಳೆಯ ಕಾಟ
ಚಳಿಯ ರಂಪಾಟ.....
ಕೊಡೆಯ ಪರದಾಟ....
ಬಾಯಿ... ....ಮಿಠಾಯಿ
ಅಂಗೈ ತುಂಬ..ಶಾಯಿ..
ಅಪ್ಪ .....ರುಪಾಯಿ...
ದಾರಿ ಕಾಯೋ ತಾಯಿ
ಸಾವಿರ ಕನಸು...
ಚಿಗುರೋ ಮನಸು
ಚಿಲ್ಲರೆ ಮುನಿಸು....
ಮುಂದಿದೆ ..ಯಶಸ್ಸು...
ರವಿ.....
- Ravi prasad
20 Jul 2018, 11:56 pm
ಸಾಧಿಸಿದವರಿಗೆ ಗೊತ್ತು ಸಾಧನೆಯ ಬೆಲ್ಲದ ರುಚಿಯ
ನಾನೇನು ಬಲ್ಲೇ ಸಿಹಿ ಕಹಿಯಾ
ಮಾಡಿದ್ದರೆ ಕರಾರಾಗಿ ಹೇಳುವೆನಯ್ಯ ನನ್ನ ಸಾಧನೆಯ
ಮಾಡದೇ ಹೇಳುವೆನು ಸಾಧನೆ ಸಿಹಿ ಕಲ್ಪನೆಯ
ಕೇಳಿ ಓದಿರುವೆ ಅವರ ಜೀವನದ ಕಥೆಯ
ಆದ್ರು ತಿಳಿಯಲಿಲ್ಲ ನೋಡಯ್ಯ !!!!!!!!
ಆದರೂ ಹೇಳುತ್ತೇನೆ ಕೇಳಯ್ಯ
ಸಾಧನೆ ಹೇಳುವತಹದು ಅಲ್ಲ.
ಮಾಡುವಂತಹದು!!!
- Prakash Angadi
20 Jul 2018, 09:58 pm
ಗುಂಡಿ ತೆಗೆದ ಅಂಗಿ ತೊಟ್ಟರೆ ಧೀರನಲ್ಲ
ದಮ್ಮು ಎಳೆದು ಗಾಳಿ ಬಿಟ್ಟರೆ ವೀರನಲ್ಲ
ಹಿಂದೆ ಹುಡುಗಿ ಕೂತ ಗಾಡಿ ಒಡೆದರೆ ಶೂರನಲ್ಲ
ಈ ಎಲ್ಲ ಮಾಡಿದ ಮಲ್ಲರ ಮಲ್ಲ ಈಗ ಹಿಂದೆ ಉಳಿದನಲ್ಲ..
ಮಾತೆಗೆ ಮಮತೆಯ ಮಗನಾಗಿ,
ತರುಣೆಗೆ ಸಲಹೆಯ ಸ್ನೇಹಿತನಾಗಿ,
ತಂದೆಗೆ ಬೆವರಿನ ಬೆಂಬಲವಾಗಿ,
ಸೋದರಿಗೆ ಅರಿವಲಿ ಸಲಹುವ ಅಣ್ಣನಾಗಿ,
ಸತಿಗೆ ಸಂತೈಸುವ ಪತಿಯಾಗಿ,
ಜಗಕೆ ಮಣ್ಣಿನ ಮಗನಾಗಿ,
ಹರಿಸು ನಿನ್ನಯ ಋಣವ..
ಈ ಎಲ್ಲರ ಒಳಿತಿಗೆ ಭರಿಸು ಎದೆಯಲಿ ಛಲವ
ಏ ನಲ್ಲ ಆಗು ನೀ ಈ ಎಲ್ಲ ಬಲ್ಲ ಜಗದೇಕ ಮಲ್ಲ
- Manju..
20 Jul 2018, 12:09 pm