Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನೆನೆದವರ ಮನದಲ್ಲಿ ನೆಲೆಮಾಡಿಕೊಂಡಿರ್ಪ
ಗುಂಗೆಹುಳದ ವಂಶಸ್ಥೆ
ನಾರಿ ಕುಲಜಾತಿಯ ಬಿದಿರಿನ ಗಳದ ನೆಂಟರ ದೇಹದ
ಗಾರ್ದಭ ಕಂಠದಲ್ಲಿ ಇಂಪಾಗಿ ಹಾಡುವ
ತುಸು ತೆಳ್ಳನೆ ಕುಂಬಳಕಾಯಿ ಗಾತ್ರದ
ವಗ್ಗರಣೆಯಲ್ಲಿನ ಸಾಸುವೆ ಸ್ವಭಾವದ
ಬಸಿಯಲಿಟ್ಟಿರುವ ಶ್ಯಾವಿಗೆಯಂತ ನೀಳಕೇಶದ
ರುಚಿಯಾದ ಗೋಡಂಬಿ ಹಣ್ಣಿನಂತ ನಾಸಿಕದ
ಗೋಧಿ ಕಡುಬಿನಂತೆ ಸಣ್ಣದಾದ ಕಿವಿಯ
ತುಸು ಸಣ್ಣವಾದರು ಕಬ್ಬಿನಕೋಲಿನಂತ ಕಾಲಿನ
ಸುಮ್ಮನಿರೆ ಕಪ್ಪು, ಸಿಡಿದೇಳೆ ಕೆಂಪು ಬಣ್ಣದ
ಒಟ್ಟಾರೆ ಹಂಗೂ ಹಿಂಗೂ ನನ್ನ ಮನದೊನ್ನೆ(ಮನದನ್ನೆ).
- Chaitra Maha Rudraswamy
29 Jul 2018, 01:11 pm
ಕ್ಷಣ ಕಾಲ ತೆರೆದಿಡುವೆ ನನ್ನಿ ಎದೆಯನ್ನ ನೋಡು ಭಾ ಗೆಳತಿ ನನ್ನೊಳಗೆ ನಿನ್ನ... ಅಲ್ಲಲ್ಲಿ ಹುದುಗಿಹುದು ನೀ ಬಿಟ್ಟ ಹೂ ಭಾಣ ಕತ್ತೊಗೆದು ಅಪ್ಪಿಕೋ ಕಣ್ಮುಚ್ಚುವ ಮುನ್ನ....
- prasad
28 Jul 2018, 08:55 pm
ಬೆಳ್ಳಿ ಮೋಡದ ನಡುವೆ
ಬಯಕೆ ಬಟ್ಟಲ ಹಿಡಿವೆ
ಕಳ್ಳಿ ಹಂಗೆ ನಡೆವೆ
ಚುಕ್ಕಿ ತಾರೆಯ ನಡುವೆ
ಯಾರಮ್ಮಿ ಯಾರಮ್ಮಿ
ಹೆಸರು ಹೇಳಮ್ಮಿ
ಬೆಳದಿ೦ಗಳು ನೀನೆನಾ....
ನಿನ ದಾರಿ ಕಾದೆ ನಾ....
ಸುಮ್ಮನೆ ಕುಂತರು
ಸುರಿದಿದೆ ಸೋನೆ
ನಿ ನೋಂತರಾ ನಶೆ
ನಿನ್ ಸೇರೋದೆ ಆಸೆ
ಬೆಳದಿಂಗಳು ನೀನೆನಾ....
- Ravi prasad
27 Jul 2018, 10:53 pm
ಕಿಶೋರನಾಗಿದ್ದಾಗ
ಜಗದ ಜನರ ಮನಸ್ಸನ್ನು ಬದಲಾಯಿಸುವ ಕನಸಕಂಡೆ,
ಸಾಧ್ಯವಾಗಲಿಲ್ಲೆನಗೆ ಸಾದಿಸಲದನು;
ವಿದ್ಯಾರ್ಥಿಯಾಗಿದ್ದಾಗ
ಛಾತ್ರ ಸಂಘಟನೆಯ ಮೂಲಕ ಅವರ ಮನಃ ಪರಿವರ್ತನೆಯ ಕನಸ ಕಂಡೆ,
ಸಾಧ್ಯವಾಗಲಿಲ್ಲೆನಗೆ ಸಾದಿಸಲದನು;
ಯುವಕನಾಗಿದ್ದಾಗ
ಯುವ ಶಕ್ತಿಯ ಸಂಘಟನೆಯ ಮೂಲಕ ಅವರಲ್ಲಿ ಬದಲಾವಣೆಯ ಆಶೆ ಪಟ್ಟೆ,
ಸಾಧ್ಯವಾಗಲಿಲ್ಲೆನಗೆ ಸಾದಿಸಲದನು;
ಗೃಹಸ್ಥಾಶ್ರಮದಲಿ
ಅರ್ಧಾಂಗಿಯಲ್ಲಾದರೂ ಬದಲಾವಣೆ ತರಲು
ಶತ ಪ್ರಯತ್ನವ ಪಟ್ಟೆ,
ಸಾಧ್ಯವಾಗಲಿಲ್ಲೆನಗೆ ಸಾದಿಸಲದನು;
ಮಕ್ಕಳಾದ ಮೇಲೂ
ಛಲ ಬಿಡದೆ ಅವರಲ್ಲಾದರೂ ಬದಲಾವಣೆಯ ಪರ್ವ ಬಯಸಿದೆ,
ಸಾಧ್ಯವಾಗಲಿಲ್ಲೆನಗೆ ಸಾದಿಸಲದನು;
ಮರಣ ಶಯ್ಯೆಯಲಿರುವಾಗಲನಿಸಿತ್ತು
ಇಷ್ಟೆಲ್ಲಾ ಸೋಲುಗಳ ಬದಲು ನನ್ನಲ್ಲೇ ಬದಲಾವಣೆ ತಂದುಕೊಳ್ಳಬೇಕಿತ್ತೆಂದು,
ಸಮಯ ಸರಿದು ಹೋಗಿತ್ತು ಸಾದಿಸಲದನು.
*ಗುರುಪೂರ್ಣಿಮ, ಜುಲೈ, 2018
ಡಾ!ಸಿ.ಮುರಳೀಧರ
- ಡಾ!ಸಿ.ಮುರಳೀಧರ
27 Jul 2018, 04:30 pm
ಮುದ್ದು ಮಾಡುತಾ
ಮನವ ಕಲಕುತಾ
ಮನೆಯ ಬೆಳಗುತಾ
ಬೆಳೆದೆ ನೀನು ನನ್ನ ತಂಗಿ
ಜಗಳ ಜಗ್ಗುತಾ
ಜಗವ ನೋಡುತಾ
ಜಿಗಿದು ಆಡುತಾ
ಜೊತೆಯಾದೆ ನೀ ನನ್ನ ತಂಗಿ
ಹರುಷ ಚಿಮ್ಮುತಾ
ಹರೆಯ ಮೆರೆಯುತಾ
ಹಿರಿಯಳಾಗಿ ಮರುಗುತಾ
ಹೊರಟು ನಿಂತಳು ನನ್ನ ತಂಗಿ
ತೆರೆಯ ಮರೆಯಲಿ
ಬರುವ ಕಂಬನಿ
ಹೇಳುತಿದೆ ನೂರು ಕಾಲ
ಬಾಳಿಬದುಕು ನೀ ನನ್ನ ತಂಗಿ
ಇಂತಿ ನಿನ್ನ ಸಹೋದರ....
- vasu
26 Jul 2018, 06:52 pm
ಅನುಮಾನಿಸದಿರು ನೀ ಎನ್ನ ಪ್ರೀತಿಯಾ
ಕಗ್ಗತ್ತಲಲ್ಲಿ ಜೀವನ ಕಳೆದಂತೆ ಬಾಸವಾಗುತ್ತಿದೆ...
ಎನ್ನ ನೋಯಿಸದಿರು ನೀನಿ ಚುಚ್ಚು ಮಾತುಗಳಲ್ಲಿ
ತಾಳಲಾರೆ ಅದ ಸಹಿಸದಷ್ಟು ಚಿತ್ರಹಿಂಸೆಯಾಗುತ್ತಿದೆ
ಏಕೋ ,ಏಕೋ ಈ ಅನುಮಾನದ ಆಟ ,,
ಬೇಡವೋ, ಬೇಡ ಅನುಮಾನ ತಕ್ಷಣ ಮರೆತು
ಹೊಸದಾಗಿ ಪ್ರೀತಿಸು ಬಾ ನನ್ನ
- Acchu love
26 Jul 2018, 04:58 pm
ಸೋತು ಬಂದಿಹೆನು ...
ಕಿಡಿ ಆರಿಸಿ ಆಸೆ ತೋರಿಹೆನು..
ಬೀದಿ ನಾಟಕದ ಬಯಲಿಗೆ...
ಬಣ್ಣ ಬಳಿದಿರುವೆನು.....
ಬಾಡಿಗೆ ಮನೆಯಲಿ ..
ಬಾಗಿಲ ಮುಚ್ಚಿ...
ಬಯಕೆಯ ಬಯಸಿ...
ಬಂಧಿಸಿದೆ ಮನಸ್ಸನ್ನು...
ತುಸು ತುಪ್ಪ ತುಟಿಗೆ...
ಕೂಸು ಕೈಗೆ...
ಕಾಸು ಕಡಲಿಗೆ...
ಮೀಸೆ ಮಣ್ಣಿಗೆ...
ದೇಹ ಮಸಣಕೆ....
ರವಿ ...
- Ravi prasad
25 Jul 2018, 10:56 pm
ಬಾನಾಗ ಚುಕ್ಕಿ ಮೂಡ್ಯಾವ
ಆಡಾಕ ಚಂದ್ರಮನ ಕರೆದಾವ
ನೋಡು ಬಾರಯ್ಯ ಅವರಾಟವ
ತಿನ್ನಲೀಕ ತಂದೀನಿ ಊಟವ
ಸೂರ್ಯ ಹೊಂಟು ಬಾಳೊತ್ತಾಯ್ತು
ಹಕ್ಕಿ ಚಿಲಿಪಿಲಿ ನಿಂತು ಎಷ್ಟೊತ್ತಾಯ್ತು
ಲತೆಯಲ್ಲರಳಿದ ಹೂವೂ ಬಾಡೋಯ್ತು
ಆಡಾಕ ನಿಂತ ನಿಂಗ ಲೋಕಾನೆ ಮರೆತೋಯ್ತು
ಹಿಂಡಿಂಡು ಗೆಳೆಯಾರು ಸೇರಿ
ಹಳ್ಳಕೊಳ್ಳದೊಳಗ ಹಾರಿ
ಊರೂರು ತಿರುಗಿ ಮರಗಳೇರಿ
ಆಡಿದ್ದು ಸಾಕೋ ಹಿಡಿ ಹಟ್ಟಿ ದಾರಿ
- ಶ್ರೀಕಾವ್ಯ
25 Jul 2018, 09:35 pm
ನಾವು ಹುಡುಗರೇ ಹೀಗೆ ಗೆಳೆಯ,
ಎಲೆ ಮರೆಯ ಕಾಯಿಗಳ ಹಾಗೆ.
ಕಣ್ಣೀರ ತಡೆಯಲು ಪನ್ನೀರ ಕುಡಿವೆವು,
ಧಗೆಯನ್ನು ಹಿಡಿದಿಟ್ಟು ಹೊಗೆಯನ್ನು ಬಿಡುವೆವು,
ಉಷೆಯನ್ನು ಕೆಣಕದೆ ನಶೆಯಲ್ಲಿ ತೇಲುವೆವು,
ಪುಂಡ ಪೋಕರಿಗಳೆಂಬ ಬಿರುದೊಡನೆ ಬೀಗುವೆವು...
ಬಯಸಿದ ಬೆಡಗಿಗಾಗಿ ಬದುಕನ್ನೆ ನೀಡುವೆವು,
ಕಡೆಯಲ್ಲಿ ಅವಳಿಂದ ಚೊಂಬನ್ನು ಪಡೆವೆವು,
ಮನೆಯವರ ನೆಮ್ಮದಿಗೆ ಮೂರ್ಗಂಟು ಹಾಕುವೆವು,
ಹುಟ್ಟಿದ ಮಗುವಿಗೆ ಆ ನಲ್ಲೆಯ ಹೆಸರನ್ನೇ ಇಡುವೆವು.
ಹೌದು ನಾವು ಹುಡುಗರೇ ಹೀಗೆ,
ನಮಗೆ ಬೆಲೆ ಕೇವಲ ಕೈಯಲ್ಲಿ ಕಾಸಿರುವ ವರೆಗೆ,
ಇತರರಿಗೇ ದುಡಿವೆವು ಕಡೆಯುಸಿರ ವರೆಗೆ,
ನಮ್ಮದೇ ಕಥೆಯ ದುರಂತ ನಾಯಕರಾಗುವೆವು ಕಡೆಗೆ.
ಹೌದು ನಾವು ಹುಡುಗರೇ ಹೀಗೆ,
ಎಲ್ಲವನ್ನೂ ಎದುರಿಸಿ ಕೀರ್ತಿಯನ್ನೇ ಬಯಸದ ಹಾಗೆ,
ನಾವು ಹುಡುಗರೇ ಹೀಗೆ..........
- ನಾಗೇಶ್ ಎಸ್ ವೈ.
- ನಾಗು
25 Jul 2018, 08:23 pm
ಚಾಚು ಕೈಗಳ ನೀಲಾಕಾಶದ ತುದಿಗೆ
ಕಾಲಿರಲಿ ನೆಲಕೆ ತಾಗಿ
ನೆಲದ ನುಡಿಗೆ ಕಿವಿಯಾಗಿ ನೀ
ಸಾಗುತಿರು ಪಥಿಕ.
: : : : : : : :
ಬಾಳು ಬರಿ ಸಿಹಿಯಲ್ಲ ,ಸಿಹಿಯಾದುದು ಬಾಳಲ್ಲ
ಕಲ್ಪನೆಯ ಕಥೆಯಿದು ,ಸರಿ ತಪ್ಪನಳೆಯಬೇಡ
ಇದು ಕೊಡುವ ಉಡುಗರೆಗಳ ಹೊತ್ತು ನೀ
ಸಾಗುತಿರು ಪಥಿಕ.
:: :: :: :: :: ::
ಈ ಬಾಳ ಪಥದಲ್ಲಿ ನೀನಿರು ಏಕಾಂಗಿ
ನಿನ್ನವರಲ್ಲ ನಡುವೆ ಬರುವ ಅವರಿವರು
ನೀನೆಂದರೊಮ್ಮೆಮ್ಮೆ ನೆರಳಿಗು ಬೇಸರ
ಒಬ್ಬಂಟಿ ಮೋಡದಂತೆ ನೀ ಸಾಗುತಿರು ಪಥಿಕ.
- gourish
25 Jul 2018, 12:25 pm