Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನಸು

ಮನಸಿನ ಆಳದಲ್ಲಿ ಅಡಗಿರುವ
ಚಲುವೆ ನೀನು...
ನನ್ನಯ ಬಾಳಿನಲ್ಲಿ ಬಂದಿರುವ
ಬೆಳಕು ನೀನು...

ಕಣ್ಣಲ್ಲಿ ಕಂಬನಿಯಾಗಿ ತುಂಬಿರುವ
ರೂಪ ನಿನ್ನದೇ...
ಮಾತಲ್ಲಿ ಮಮತೆಯ ಹಗೆ ಬರುತಿರುವ
ಹೆಸರು ನಿನ್ನದೇ ..

ಕಾಣದ ಕಾಡಿನಲ್ಲಿ ಹಾರುವ
ಹಕ್ಕಿ ನೀನು...
ಸಂಜೆಯ ವೇಳೆಯಲ್ಲಿ ಬೀಸುವ
ಗಾಳಿ ನೀನು...


ನನ್ನೆದೆ ಗುಡಿಯಲ್ಲಿ ನೆಲೆಸಿರೂ
ದೀಪ ನೀನು...
ನಿನ್ನನು ಕಾಯುವಾ ಒಂಟಿಯಾ
ಸೇನೆ ನಾನು....

- Lucky

04 Aug 2018, 05:14 pm

ಕೋರ್ಟ್ ಆವರಣ

ಇಂದು ಕುಳಿತಿರುವೆ ನಾ ಕೋರ್ಟ್ ಆವರಣದಿ
ನನ್ನ ಹೆಸರಿನ ಬುಲಾವಿಗೆ ಕಿವಿ ಕೊಡುತ್ತಿರುವೆ ಕೆಲ ಸಮಯದಿ
ಸುತ್ತಲೂ ನೋಡುವರು ಜನ ನನ್ನ ಅನುಮಾನದಿ
ನಾ ಬಂದಿಲ್ಲ ಇಲ್ಲಿ ಯಾವ ಕೊಲೆ ದರೋಡೆ ಪ್ರಕರಣದಿ

ಬಂದಿರುವೆ ನಾನು
ಬಡವರ ಲೂಟಿಗೈಯುತ್ತಿದ್ದ ಬ್ಲೇಡ್ ಕಂಪೆನಿಗಳೊಂದಿಗೆ ಪ್ರತಿಭಟಿಸಿ
ಇಂತಹ ಕೇಸು ಎದುರಿಸಲು ನಾನು ಸರಿಯಲ್ಲ ಹಿಂದೆ ಯಾವ ಅಭ್ಯಂತರದಿ
ಒಟ್ಟಾರೆಗಾಗಿ ಬಡವರಿರಬೇಕು ಸದಾ ಸಂತೋಷದಿ.

ಸಂತೋಷ್ ಬಜಾಲ್
ಮಂಗಳೂರು

- santhoshbajal

04 Aug 2018, 11:54 am

ಬಯಲು ಸೀಮೆ

ಸುಡುವ ಸೂರ್ಯ ಮರೆಯಾಗಿದ್ದಾನೆ
ತಂಪಾದ ಮೋಡ ಚಲಿಸಲಾರಂಬಿಸಿದೆ
ಸುತ್ತ ತಂಗಾಳಿ ಬೀಸಲಾರಂಬಿಸಿದೆ

ಹನಿ ಹನಿ ಬೀಳುವ ಮಳೆರಾಯನಲ್ಲಿ ಜೋರಾಗಿ ಕೂಗಿ ಕೇಳಬೇಕೆಂದೆನಿಸಿದೆ

ಬಯಲು ಸೀಮೆ ಭಾಗಕ್ಕೂ ಮಳೆ ಸಿಂಪಡಿಸುತ್ತಿರುವೆಯಲ್ಲವೇ ? .......

ಸಂತೋಷ್ ಬಜಾಲ್
ಮಂಗಳೂರು

- santhoshbajal

03 Aug 2018, 09:31 am

ಸ್ವರ್ಗ

ಸಿಹಿಗನಸು ನಾ ಕಾಣುತಿರಲು
ಹಸಿರು ಜರತಾರೆ ಸೀರೆಯುಟ್ಟು
ನೀಲಾಗಸಕೆ ಬೆಟ್ಟವು ಮುತ್ತಿಡುತಿರಲು
ಹಕ್ಕಿಗಳ ಚಿಲಿಪಿಯ ಆ ನಾದದಲಿ
ಜಲಪಾತಗಳ ಭೋರ್ಗರೆತದ ಆ ಸದ್ದಿನಲಿ
ಹೂವಿನ ಪರಿಮಳ ಹರಡುತಿರಲು
ನಮ್ಮದೊಂದು ಪುಟ್ಟ ಅರಮನೆ ಅಲ್ಲಿರಲು
ಗೆಳತಿ ನೀ ಆಗ ನನ್ನ ಜೊತೆಗಿರಲು
ಇದೇ ನಿಜವಾದ ಸ್ವರ್ಗ ಕಾಣಾ....
##ರಜನೀಷ##

- RajaneeshNandikolmath

02 Aug 2018, 06:28 pm

ಸಾರ್ಥಕ

ಕಥೆ ಕವನ ಬರೆಯವ ಕವಿ ನಾನಲ್ಲ
ಆ ಯೋಗ್ಯತೆಯು ಯನಗಿಲ್ಲ ಮನಸಲಿ
ಬರುವ ಭಾವನೆಗಳು ಗೀಚುವ ನಾವಿಕನು..

ಪ್ರೀತಿ, ಪ್ರೇಮದ ಮೇಲೆ ಮನಸಿಲ್ಲ
ದ್ವೇಷ, ಅಸುಯೆ, ನನಗೆ ಪರಿಚಯವಿಲ್ಲ
ಸ್ನೇಹದ ಅರ್ಥ ನನಗೆ ತಿಳಿದಿಲ್ಲ

ಪ್ರೀತಿಸಲು ಹುಡುಗಿರಮೇಲೆ ನಂಬಿಕೆಯಿಲ್ಲ
ದ್ವೇಷ, ಅಸೂಯೆಗೆ ಶತ್ರುಗಳಿಲ್ಲ
ಈ ಜೀವಕ್ಕೆ ಎರಡು ಜೀವದ ಗೆಳೆಯರು ಸಾಕು

ವೀರಭದ್ರನಿಗೆ ಪ್ರಿಯ ಭಕ್ತನಾಗಿ
ಅಪ್ಪ ಅಮ್ಮನಿಗೆ ಪ್ರೀತಿಯ ಮಗನಾಗಿ
ಅಜ್ಜಿ ತಾತನ ಕಣ್ಣಲ್ಲಿ ನಾನೊಬ್ಬ ಅರ್ಹನಾಗಿ
ರೋಗಿಗಳಿಗೆ ಒಬ್ಬ ಒಳ್ಳೆಯ ವೈದ್ಯನಾದರೆ
ನಾ ಬದುಕಿದ್ದು ಸಾರ್ಥಕ ದೇವಾ
##ರಜನೀಷ##

- RajaneeshNandikolmath

02 Aug 2018, 06:26 pm

ಕಾದೈತೆ ನಿನ್ನೊಲವಿಗಾಗಿ

ಮನದಲ್ಲಿ ಹೂವರಳಿ ,ನಿಂತೈತಿ ನೋಡಾ ನನ್ನೀ ಪ್ರೀತಿ ಹೂವಾ ..

ಕಾದೈತೆ ನೋಡಾ ನನ್ನೀ ಪ್ರೇಮದ ಪರಿಯ ...

ಬಾರಯ್ಯ ನನ್ನೊಲವಿನ ಊರಿಗಾ ,ಮನಸಾ ಆಸೈತೆ ನಿನ್ನಾಸರೆಯಾ ಬಯಸಿ.......

ಒಮ್ಮೆ ನೋಡಾ ಬಾರ ನನ್ನೀ ಪ್ರೇಮದ ಊರಾ ...

ನನ್ನೀ ಹೃದಯದ ಒಡೆಯನೇ ನೀನೆಂದು ಏಳೇಳು ಜನ್ಮದಾಗು......

- Acchu love

02 Aug 2018, 04:44 pm

ಇದ್ದರೆಷ್ಟು ,ಬಿಟ್ಟರೆಷ್ಟು

ಪರರ ಕಷ್ಟವನರಿಯದವ
ದಿನಾ ದೇವರಿಗೆ ದೀಪ, ಕರ್ಪೂರವ
ಹಚ್ಚರೆಷ್ಟು ,ಬಿಟ್ಟರೆಷ್ಟು

ಊರ ಜನರ ಬದುಕು ಭಾವನೆಗಳ
ನೋವು, ನಲಿವುಗಳನ್ನರಿಯದವ
ಊರ ಮಂದಿರದ ಆಡಳಿತಾಧಿಕಾರಿ
ಆದರೆಷ್ಟು ,ಬಿಟ್ಟರೆಷ್ಟು

ದುಡಿಯುವ ಕಾರ್ಮಿಕರಿಗೆ
ಕನಿಷ್ಟ ಕೂಲಿಯ ನೀಡದ ಒಡೆಯ
ಊರಾಚೆಗಿನ ತಿರುಪತಿಗೆ
ಹಣ, ಬಂಗಾರ, ವೈಡೂರ್ಯವ
ಕೊಟ್ಟರೆಷ್ಟು , ಬಿಟ್ಟರೆಷ್ಟು

ದೀನ ದಲಿತರುಗಳ
ಹಿಂದುಳಿದ ವರ್ಗಗಳ
ಕಷ್ಟ ಕಾರ್ಪನ್ಯಗಳಿಗೆ
ಸ್ಪಂಧಿಸಲಾಗದ ಸರಕಾರ
ಇದ್ದರೆಷ್ಟು ,ಬಿಟ್ಟರೆಷ್ಟು.

ಸಂತೋಷ್ ಬಜಾಲ್
ಮಂಗಳೂರು

- santhoshbajal

02 Aug 2018, 03:14 pm

ಇರುಳಿನ ಸಂಗಾತಿ

ಇರುಳಲ್ಲಿ ಒಂಟಿಯಾಗಿ ಸಾಗುತ್ತದ್ದರೂ
ಒಂಟಿತನ ನನ್ನ ಕಾಡುತ್ತಿರಲಿಲ್ಲ.......
ಏಕೆಂದರೆ ಚಂದಿರನು ಸಂಗಾತಿಯಂತೆ
ನನ್ನನು ಹಿಂಬಾಲಿಸಿ ಬರುತ್ತಿದ್ದ.......
ಆದರೇ......
ಹುಣ್ಣಿಮೆಯಾದರೂ ಇಂದೇಕೋ
ಅಮಾವಾಸ್ಯೆಯಂತೆ ಕಗ್ಗತ್ತಲು........
ಕಾರ್ಮೋಡವು ಕವಿದಿರುವ ಬಾನಿನಲ್ಲಿ
ಸಂಗಾತಿಯಂತಿದ್ದ ಚಂದಿರನ ಸುಳಿವೆಲ್ಲಿ..
............‌

- ಪಿ.ಜಿ.ಜ್ಯೋತಿ

31 Jul 2018, 01:44 pm

ಹೆಣ್ಣೆಂದರೆ..

ಹೆಣ್ಣೆಂದರೆ..

ಹೆಣ್ಣೆಂದರೆ ಮಣ್ಣಾದರೂ ಎಲ್ಲರೊಳ ಮನದಿ ಮರೆಯಾಗದ ಮಾಯೆ..

ಸತಿಯಾಗಿ ಜಿನುಗಿ ಮಿನುಗಿ ಮೋಹದ ಮಡಿಲಲಿ ಮುಳುಗಿಸುವ ಛಾಯೆ..

ಹುಟ್ಟಿನಿಂದ ಸಾವಿನೊಂದಿಗೆ ಜೊತೆಯಲಿ ಸಂತೈಸುವ ತಾಯೇ..

ತನ್ನಾಸೆಯನ್ನೆಲ್ಲ ತೊರೆದು ಮಕ್ಕಳ ಸಲಹುವ ಕರುಣಾಮಯಿ ಲಕ್ಷ್ಮಿಯು ಇವಳೇ..

ಒಳಿತು ಕೆಡುಕುಗಳ ಅರಿವನು ಕಲಿಸುವ ದೇವಿ ಶಾರದೆಯು ಇರುವಳು ಇವಳೊಳಗೆ...

ಕಂದ ಅಂದ ಚೆಂದ ಬಂಧ ಹುಟ್ಟಿಂದ ಸಾವಿಂದ ಎಲ್ಲವೂ ಬೇಸದಿದೆ ಇವಳಿಂದ..

- Manju..

31 Jul 2018, 10:34 am

ಹೃದಯ ಹೇಳಿತು...

ಸಂತೋಷದ ಹೃದಯವು ವಿಪರೀತವಾಗಿ ಪಿಸುಗುಟ್ಟಿತು..
ಅವರು ಅನೇಕ ನಿರ್ಬಂಧಗಳನ್ನು ಹೇರಿ ಹುಡುಗಿಯ ಹೆಸರಿನಲ್ಲಿ ನಿನ್ನನ್ನು ಸೆರೆಹಿಡಿದಿದ್ದರೂ
ನಾನು ನಿನ್ನೊಳಗೆ ಇರುವ ಪಕ್ಷಿಯಾಗಿದ್ದೇನೆ.

ಪವಿತ್ರ ಹೃದಯ ರಹಸ್ಯವಾಗಿ ಹೇಳಿದ್ದು,
ಒಂದು ದಿನ ನೀನು ಪ್ರಪಂಚದ ಮುಂದೆ
ನಿಲ್ಲುವಂತೆ ಮಾಡುತ್ತೇನೆ..
ಮತ್ತು ಅದು ನಿಮ್ಮನ್ನು ನೋಡುತ್ತದೆ ಮತ್ತು ನಾವು ಹುಡುಕುತ್ತಿದ್ದೇವೆಂದು ಹೇಳುತ್ತೇವೆ.

ನಾನು ಒಬ್ಬ ಹುಡುಗಿ
ನಿಮ್ಮ ಕುರುಡು ನಂಬಿಕೆಗಳ ಖುಷಿಯೊಳಗೆ
ಎಂದಿಗೂ ನನ್ನನ್ನು ಇಡಬೇಡಿ..
ನನ್ನನ್ನು ಪಾಪವೆಂದು ಪರಿಗಣಿಸಬೇಡಿ
ನಾನು ಮಾಡದಿರುವ ಪಾಪ ನಿಮಗೆ ಶಾಪವಾಗಬಹುದು...
ಹೌದು ನಾನು ಉತ್ಸಾಹಭರಿತ ಕನಸೊಂದಿಗೆ ಒಬ್ಬ ಹುಡುಗಿಯಾಗಿದ್ದೇನೆ,
ಹೌದು, ನಾನು ತಾಯಿಗೆ ಆರೈಕೆಯೊಂದಿಗೆ
ಮತ್ತು ತಂದೆಗೆ ಧೈರ್ಯವಿದ್ದೇನೆ.

ಆಳವಾದ ಕತ್ತಲೆಯಲ್ಲಿ ಒಂದು ಮೋಂಬತ್ತಿ ಕೂಡ ಹೊಳೆಯುತ್ತದೆ ಎಂದು ನೆನಪಿಡಿ.
ನಾನು ನನ್ನ ಬಡತನದ ಕತ್ತಲೆಯಲ್ಲಿ ಮತ್ತು
ನನ್ನ ಪದಗಳ ಹಿಂದೆ ನಾನು ಮರೆಮಾಡುವ ಧೈರ್ಯದಿಂದಾಗಿ ನಾನು ಬಹಳಷ್ಟು ದಿನವನ್ನು ಬಲಪಡಿಸುವೆನು,
ನಾನು ನಿನ್ನ ಹೃದಯದಲ್ಲಿ ಎಂದಿಗೂ ಆಕರ್ಷಕ ನಟನಾಗಿರುತ್ತೇನೆ

- ಚುಕ್ಕಿ

31 Jul 2018, 08:05 am