Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

"ದಿಕ್ಕು ತಪ್ಪಿತ್ತು ನೋಡಾ"

"ಹುಟ್ಟಿಗೂ ಅರ್ಥವಿಲ್ಲ
ಬದುಕಿಗೂ ಅರ್ಥವಿಲ್ಲ
ಸಾವಿಗೂ ಅರ್ಥವಿಲ್ಲ
ಹುಟ್ಟು-ಸಾವುಗಳ ಕದನವ ಕಂಡು,
ಬದುಕು, ದಿಕ್ಕು ತಪ್ಪಿತ್ತು ನೋಡಾ"...

- ಎ.ಆರ್.ರಾಹುಲ್.

- ?.?.?????.

14 Jun 2025, 08:42 am

ನನ್ನವಳ ಒಪ್ಪಿಗೆಗೆ

ನನ್ನೀ
ಹೃದಯ
ಬಯಸಿದೆ
ನಿನ್ನನೇ
ನನ್ನೀ
ಹೃದಯದ
ಬೀದಿಯಲ್ಲಿ
ಮೆರೆಸುವೆ
ನಿನ್ನನೆ

ಮೆರವಣಿಗೆಗೆ ಒಪ್ಪಿಗೆ ನೀಡುವುದೇಯ ನಿನ್ನಿಹೃದಯ
ಶ್ರೀ........

- Bharath K S

13 Jun 2025, 01:33 pm

ನುಗ್ಗೆಕಾಯಿ ಕಬಾಬು ಮಾಡು ಇವಳೇ...

ಲೇ ಇವಳೇ...
ನುಗ್ಗೆ ಸೊಪ್ಪು ನುಗ್ಗೆಕಾಯಿ
ತಗೊಂಡು ಬರ್ತೀನಿ,
ಸೊಪ್ಪು ಹಾಕಿ ಮೋಸಪ್ಪು ಮಾಡಿ
ನುಗ್ಗೆಕಾಯಿ ಕಬಾಬು ಮಾಡು..
ರಾತ್ರಿ ಬಾಗಿಲು ಕಿಡಿಕಿ ಭದ್ರಪಡಿಸು
ಹವಮಾನ ವರದಿ ಹೇಳಿದೆ
ಗುಡುಗು ಮಿಂಚಿನ ಮಳೆ
ಬರುತ್ತೆ ಅಂತ...
ಎಮ್.ಎಸ್.ಭೋವಿ...✍️
.
.
.
.

- mani_s_bhovi

10 Jun 2025, 08:44 pm

ವಸುಂಧರೆ

ಬಾನಿನ ಮರೆಯಲ್ಲಿ ಮೋಡಗಳ ಸಮ್ಮಿಲನ
ಸಂಜೆ ಸೂರ್ಯನ ಹೊಂಬಣ್ಣದ ಬೆಳಕಿನಲಿ ಕಡಲ ಅಲೆಗಳ ಸಂಚಲನ...

ನವ ವಸಂತದ ತಂಗಾಳಿಯಲಿ ಕೋಗಿಲೆಗಳ ಗಾಯನ
ಚಿಗುರಿದ ಮಾಮರದ ಎಲೆಗಳಲಿ ಅರಳಲು ಸಜ್ಜಾಗಿರುವ ಕಾನನ...

ಕಾಮೋ೯ಡದ ಕಗ್ಗತ್ತಲಲಿ ಮಯೂರಗಳ ನತ೯ನ
ಸುರಿವ ವಷ೯ಧಾರೆಯಲಿ ಚಿಗುರುವ ಚೈತ್ರದ ಕವನ...

ಎದೆ ನಡುಗಿಸುವ ಗುಡುಗಿನ ನಡುವಲಿ ಝೇಂಕರಿಸುವ ಸಿಡಿಲಿನ ಗಾನ
ವೃಷ್ಠಿಯ ನಂತರದ ನಿಶ್ಶಬ್ದದಿ ಮೃಗಕಗಗಳ ಕಲರವದ ಗಾನ...

ಸುಡುವ ಕಡಲ ತೀರದಿ ನೀಲಿ ಮುಗಿಲ ತಪ್ಪಲಲಿ ನಡೆವ ದೋಣಿಯ ಯಾನ
ಇದೆಲ್ಲಕ್ಕೂ ಕಾರಣವು ವಸುಂಧರೆಯ ಪರಿಭ್ರಮಣೆಯ ಲಯದ ಚಲನ...

- Kavya Mari

09 Jun 2025, 10:46 pm

ನಿನ್ನ ಬರುವಿಕೆಗಾಗಿ

ನಿಗಿ ನಿಗಿ ಎಂದು ಬೆಂಕಿಯಯಂತೆ ಕಂಗೊಳಿಸುವ
ಗುಲ್ ಮೋಹರ್ ಹೂ
ಬಿಟ್ಟಿರುವ ಮರಗಳ ಸಾಲು

ನೀಲಾಕಾಶದಲಿ ತೆಲಾಡುವ
ಕಪ್ಪನೆಯ ಮೋಡಗಳು
ಹಿಮಾರಾಶಿಯನು ಹೊದ್ದು ಮಲಗಿರುವ ಪರ್ವತಗಳು

ನವಗ್ರಹದೊಳಗಿನ ಅಷ್ಟಾಂಗ ಸುಂದರಿಯರು
ಪಂಚಶೀಲಾದೊಂದಿಗೆ ವ್ರತ
ಕೈಗೊಂಡು
ದಶ ಪಾರಾಮಿತಗಳನ್ನು ಪೂರೈಸಿ
ಸರದಿ ಸಾಲಿನಲಿ ಕಾಯುತ್ತಿದ್ದಾರೆ
ನಿನ್ನ ಬರುವಿಕೆಗಾಗಿ......

ಡಾ ನಾಗೇಶ್ ಮೌರ್ಯ
9743907399

- ಡಾ ನಾಗೇಶ ಮೌರ್ಯ

09 Jun 2025, 05:15 pm

ಮರ ಬಿಡುವ ಪ್ರತಿ ಹೂ
ಪಿಂದೆ, ಕಾಯಿ ಆಗುವುದಿಲ್ಲ!
ಪ್ರತಿ ಪಿಂದೆ, ಕಾಯಿ ಹಣ್ಣಾಗುವುದಿಲ್ಲ,
ಪ್ರತಿ ಹಣ್ಣು ತಿನ್ನಲು ಯೋಗ್ಯವಾಗಿರುವುದಿಲ್ಲ.....!

ಡಾII ನಾಗೇಶ್ ಮೌರ್ಯ

- ಡಾ ನಾಗೇಶ ಮೌರ್ಯ

09 Jun 2025, 05:13 pm

ಅರಹಂತಾನಾಗುವೆ

ಕಡಲ ದಡದಲ್ಲಿ
ನೀ ಇಟ್ಟ ಪ್ರತಿ ಹೆಜ್ಜೆಯನು
ಅಲೆಯಾಗಿ ಅಳಿಸಿಬಿಡುವೆ

ನೀ ತೊಟ್ಟ ಕೈ ಬಳೆಯ ಸದ್ದಿನಲಿ ಬುದ್ಧನ ತಿಸರಣದ ಝೆಂಕಾರವಿದೆ
ನೀ ಇಟ್ಟ ಕುಂಕುಮದಲಿ
ಮೈತ್ರಿಯ ಭಾವವಿದೆ

ನೀ ಮುಡಿದ ಮಲ್ಲಿಗೆಯ
ಪರಿಮಳದಲ್ಲಿ ಧಮ್ಮದ ಸಾರವಿದೆ
ನೀನು ನೀನಲ್ಲದೆ ನಾನಾಗುವ
ಮರುಗಳಿಗೆ ಅರಹಂತಾನಗುವೆ

ಡಾ ನಾಗೇಶ್ ಮೌರ್ಯ
9743907399

- ಡಾ ನಾಗೇಶ ಮೌರ್ಯ

09 Jun 2025, 09:02 am

ಮೌನ

ಮೌನಕ್ಕೆ ಅರ್ಥಗಳು ಹಲವು
ಅನಾರ್ಥ ಅಪಾರ್ಥಗಳು ಕೆಲವು
ತನ್ನ ಬಗ್ಗೆ ಅರಿಯದ ಮನವು
ಅನ್ಯರಿಗೆ ಬುದ್ಧಿ ಹೇಳುವ ನೆಪವು
ಇನ್ನೊಬ್ಬರ ಬೆಳವಣಿಗೆ ಸಹಿಸದೆ
ಹಂಗಿಸಿ ಮಾತನಾಡುವ ಗುಣವು
ಸಹಿಸಿ ಮುನ್ನಡೆಯಲು ಗಟ್ಟಿಇರಬೇಕು
ನಮ್ಮ ಆತ್ಮ ಬಲವು
-ಪಾವನಿ

- Paavani

08 Jun 2025, 10:09 am

ತಾಜ್ ಮಹಲ್

ಜನರ ಆಕರ್ಷಿಸುವ ಮಹಲ್
ಅದರದೇನೋ ಕಮಾಲ್
ಪ್ರೇಮ ಕುಸುಮಗಳು ಅರಳುವಂತೆ
ಮಾಡುವ ತಾಜ್ ಮಹಲ್.


ಚಂದ್ರವರ್ಣದ ಈ ಮಹಲ್
ಪ್ರೀತಿ ಸಂದೇಶ ಸಾರುವುದು ಇದರ ಗೋಲ್ಮಾಲ್
ಜಗದೆತ್ತರದ ಪ್ರೇಮ ಸೌಧವಿದು
ಅಲ್ಲವೇ ಅಲ್ಲ ರಾಜಕೀಯ ಸೌಧವಿದು.

ಕಾಲ ಚಕ್ರ ಉರುಳಿದರು
ಪ್ರೇಮಿಗಳ ಕಥೆಗಳು ಅಳಿಸಲಿಲ್ಲ.
ಅವರ ನೆನಪುಗಳೆ ವಿಸ್ಮಯ
ಆ ಸೌಧವೇ ಅವಿಸ್ಮರಣೀಯ.

- ಮೇಘಾ ಬೆಳಧಡಿ

07 Jun 2025, 09:39 pm

ನನ್ನ ಪ್ರೇಯಸಿಗೆ♥️???

ಕನಸಲ್ಲಿ ನಾ ನೆನೆಯುವೆ ನಿನ್ನ ♥️
ಮನದಲ್ಲಿ ನೀ ನಿಂತು ಕಾಡುವೆ ನನ್ನ ?
ಎಂದೆಂದೂ ಜೊತೆಯಾಗಿ ಇರುವಾಸೆ ಚಿನ್ನ ?
ಒಂದೊಮ್ಮೆ ಬಂದುಬಿಡು ಉಸಿರೋಗೋ ಮುನ್ನ ?


- Karthik.N Karthik

07 Jun 2025, 04:52 pm