Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಜೀವ ಮಿಡಿದದ್ದು...
ನೀ ಮೊದಲ ನೋಟದಲ್ಲೇ ಮನಹೊಕ್ಕಿ ಮನಸೂರೆ ಮಾಡಿದಾಗ..
ನಂತರ ಸತಿಪತಿಯಾಗಿ ಮೋಹದ ಒಡಲಲಿ ತೇಲಿದಾಗ
ಬಸಿರ ದೆಸೆಯಿಂದ ಬಂದಾ ಕಂದನ ಮೊದಲು ಎತ್ತಿ ಆಡಿದಾಗ
ಮಿಡಿಯಿತು ಮನಸ್ಸು, ಜೆಂಕರಿಸಿತು ಹುಮ್ಮಸ್ಸು..
ಹೆಚ್ಚಿತು ಆಯಸ್ಸು... ಉನ್ಮಾದದಲ್ಲಿ ತೇಲಿತು ಮನಸ್ಸು..
- Manju..
10 Aug 2018, 08:14 am
ನಿನ್ನ ಕಣ್ ಸನ್ನೆಯಲ್ಲಿ
ಪ್ರೀತಿ ತಂದಿತ್ತು
ಈ ನನ್ನ ಮನಸ್ಸು
ನಿನ್ನ ಕಾಲ ಗೆಜ್ಜೆಯ
ನಾದಕ್ಕೆ ನಾಟ್ಯ ವಾಡಿತು
ಈ ನನ್ನ ಹೃದಯ
ನಿನ್ನ ಲಜ್ಜೆ ಮಾತಿನ
ಮುದ್ದು ಮಾತಿಗೆ
ಹೆಜ್ಜೆ ಹಾಕಿದೆ ನಾ
ನಿನ್ನ ನಗುವು
ಒಂದೇ ಸಾಕು
ನನ್ನ ಮನದ ಮೌನವ
ಮರೆಯಲು
ನನ್ನ ಬಾಳ ಬದುಕಿನ
ಬಂಗಾರ ಜೋತಿ ನೀನು
ನಿನ್ನ ಒಲವೇ
ನನ್ನ ಹೃದಯದ
ಮುತ್ತು,,,,,,
ರಾಜು ಹಾಸನ ಅಶು
- ರಾಜು ಹಾಸನ
09 Aug 2018, 01:58 pm
ಹುಟ್ಟುವಾಗ ಹಾಕಿಲ್ಲ ಅರ್ಜಿ
ಯಾವ ಧರ್ಮದೊಳಗೆ ಪ್ರವೇಶ ಮಾಡಲಿ ನಾ
ಕಿವಿಯಲ್ಲಿ ಕೇಳುತ್ತಾ ಬಂದೆ
ಮಂದಿರ ಮಸೀದಿಗಳ ಸಂದೇಶ ದಿನಾ
ಅನ್ಯ ಧರ್ಮವ ಗೌರವಿಸಲು
ತಾಯಿ ಕೊಟ್ಟಲು ಮಾರ್ಗದರ್ಶನ ಸದಾ
ಧರ್ಮ ರಕ್ಷಣೆಯ ಹೆಸರಲ್ಲಿ
ಗುತ್ತಿಗೆ ಪಡೆದು ಮಾಡಿದರವರು ಧರ್ಮರಾಜಕಾರಣ
ಧರ್ಮ ಧರ್ಮಗಳ ನಡುವೆ
ಬೆಂಕಿ ಉಗುಳಿದರು ಕ್ಷಣ ಕ್ಷಣ
ತಲವಾರು ಕಾಳಗಕ್ಕೆ ಛೂ ಬಿಟ್ಟರು
ಯುವಕರ ಪ್ರತಿ ದಿನ ದಿನ
ರಕ್ತದೋಕುಳಿ ಹರಿದು
ನಗರದಲ್ಲಾಯಿತು ನರಕದರ್ಶನ
ಪ್ರಾಣ ಕಳಕೊಂಡ ಯುವಕರ ತಾಯಿಯ
ಮುಖದಲ್ಲರಿಯಿತು ಕಣ್ಣೀರಿನ ಹನಿಕಂಪನ
ಧರ್ಮರಾಜಕಾರಣದ ನಾಯಕರಿಗೆ
ದೊರಕಿತು ಸ್ವರ್ಗದ ಹಾದಿಯ ಪ್ರದರ್ಶನ
ಹಿಂದುಳಿದ ಯುವಕರಿಗೆ
ಕೊನೆಗೆ ಜೈಲೇ ದರ್ಶನ
ಸಂತೋಷ್ ಬಜಾಲ್
ಮಂಗಳೂರು
- santhoshbajal
09 Aug 2018, 12:12 pm
ಮಗುವಿನಂತ ಮುಗ್ದೆ ಕಣೆ ನೀನು
ನಿನ್ನ ಪ್ರೀತಿಯಲ್ಲಿ ಮಗುವಾಗಿರುವೆನು ನಾನು.
ನನ್ನ ಹೃದಯ ಕದ್ದ ಚೋರಿ ನೀನು
ಆ ನಿನ್ನ ನಿಷ್ಕಲ್ಮಶ ಪ್ರೀತಿಗೆ ದಾಸನಾಗಿರುವೆ ನಾನು
ನನ್ನಿಂದ ಎಂದೂ ದೂರಾಗಬೇಡವೇ ನೀನು
ನಿನ್ನ ಮುದ್ದಾದ ಪ್ರೀತಿಗೆ ಬಂದಿಯಾಗಿರುವೆ ನಾನು.
ಕನಸುಗಳ ಲೋಕದಲ್ಲಿ "ರಾಜ್"
- ರಾಜ್
08 Aug 2018, 12:29 pm
ನಿನ್ನ ಮಾತುಗಳು ಬೇಸಿಗೆಯಲ್ಲಿ
ಅಚಾನಕ್ ಬೀಳುವ ತುಂತುರು ಮಳೆಯಂತೆ,
ಬಿಸಿಲಿದ್ದರೂ ಹನಿ ಉದುರಿ
ಬಾನು ಬುವಿಗೆ ಕಾಮನಬಿಲ್ಲು ಮುಡಿದಂತೆ..
ಹರವಿನ ಕೆರೆಯ ನಡುವಲ್ಲಿ ಕಂಪಿಡುವ
ಕೇದಗೆಯ ಹೂವು ಬಿರಿದಂತೆ..
ಕೇಂದೋಕುಳಿ ಚೆಲ್ಲಿದ ಸಂಜೆಯಲಿ
ಚಂದ್ರ ಅಪರೂಪಕ್ಕೆ ಬಂದು ನಕ್ಕಂತೆ!
ಪಂಚವರ್ಣ ಗಿಳಿಯೊಂದು ರೆಕ್ಕೆ ಬಿಚ್ಚಿ ನಲಿದು
ಕನ್ನವಿಲನು ಅಚ್ಚರಿಗೊಳಿಸಿದಂತೆ..
ವಸಂತ ಕಾಲದಲ್ಲಿ ಮಾತ್ರ ಕೂಗುವ
ಕೋಕಿಲದ ಇಂಚರದ ಸಂಗೀತದಂತೆ..
ಬೆಂಗಾಡಿನಲ್ಲಿ ತಂಪೆರೆಯುವ
ತಿಳಿ ನಿರ ತೊರೆಯಂತೆ..
ಯಾವಾಗಲೋ ಒಮ್ಮೆ ಅರಳಿ
ಕಣ್ಮನವ ಸೆಳೆವ ಕುರಿಂಜಿ ಹೂವುಗಳು
ಅಪರೂಪಕ್ಕೊಮ್ಮೆ ಹೊರಳಿ
ಕಿವಿಗಡರಿ ನಲಿಸುವ ನಿನ್ನ ಮಾತುಗಳು...
- ಶ್ರೀಗೋ.
07 Aug 2018, 09:06 pm
ಅರಿತು ಸುಮ್ಮನಿರು
ನೂವಿನ ಮೇಲೆ ನೂವನ್ನೀಡದಿರು
ಮರೆತು ದೂರವಿರು
ನನಗೆ ನನ್ನದೇ ಕರ್ತವ್ಯಗಳಿವೆ..
ನಾನು ಬರೆಯೋ ಬರಹ
ನನ್ನ ಸಮಾಧಾನಕ್ಕಷ್ಟೇ ಹೊರತು
ಮತ್ತೊಬ್ಬರನ್ನು ನೂಯಿಸಲು ಅಲ್ಲ
ಅದು ನನ್ನ ಗುರಿಯೂ ಅಲ್ಲ.. ಕೆಲವು ದಿನಗಳಿಂದ
ನನ್ನ ಮನಸ್ಸೇಕೊ ಭಾರವೆಲ್ಲ
ಅದಕ್ಕೆ ಕಾರಣ ನೀನಲ್ಲ
ನನ್ನ ನಸೀಬವೆ ಸರಿಯಿಲ್ಲ..
ಆದಷ್ಟು ಸ್ವಲ್ಪ ಸುಮ್ಮನಿರು
ಅರ್ಥವಾಗಿದೆ ಅಂದುಕೊಳ್ಳುವೆ
ಮತ್ತದೇ ವಿಷಯವನ್ನಿಟ್ಟು
ಕೆದುಕದಿರು ನನ್ನ ಭಾವನೆಗಳನ್ನ..
ನೀನೇನೆಂದು ಸ್ವಲ್ಪ ತಿಳಿದಿರುವೆ
ಮನಸ್ಸನ್ನು ಅರ್ಥೈಸಿಕೊಂಡು
ಗಾಯದ ಮೇಲೆ ಬರೆಯೆಳೆಯದೇ
ಸುಮ್ಮನಾಗುವೆ ಎಂದು ಅಂದುಕೊಳ್ಳುವೆ....
- vasu
07 Aug 2018, 02:39 pm
ಮರೆತು ಬಿಡು
ನೀ ಮಾಡಿದ ತಪ್ಪನ್ನೆಲ್ಲಾ
ತೊರೆದು ಬಿಡು
ನೀನಂದು ಕೊಂಡದ್ದನ್ನೆಲ್ಲಾ..
ಹೆಣೆಯದ ಜಡೆ
ಅಷ್ಟೊಂದು ಸುಂದರವಲ್ಲ
ಮಣಿಯದ ನಡೆ
ಅದೇನು ಶುಭ್ರವಲ್ಲ..
ಅರಿತು ನಡೆ
ಇಲ್ಲಾವುದು ಹೂವಲ್ಲ
ಬೆರೆತು ನಡೆ
ಇಲ್ಲಾರೂ ನಿನ್ನವರಲ್ಲ..
ಮರೆತ ಹಾಡ
ಹಾಡುವುದಾದರು ಹೆಗಮ್ಮ
ತೊರೆದ ನಾಡ (ಪ್ರೀತಿ)
ಮತ್ತದರ ಹಂಗೇಕಮ್ಮ..
ಹರಿದು ನೋಡು
ನೀ ಕಟ್ಟಿದ ಪಂಜರವನ್ನೆಲ್ಲ
ಹೊತ್ತು ನೋಡಿ
ನಡೆಯುವರಮ್ಮ ಈ ಜನರೆಲ್ಲ..
- vasu
07 Aug 2018, 11:53 am
ಕವಿ ಹೃದಯವ ತಟ್ಟಿದೆ
ನಿನ್ನುಸಿರಿನ ಗೊರ್ಗೆರೆತ
ನಿನ್ನುಸಿರಿನ ಹೊಡೆತಕ್ಕೆ
ಪದಗಳೇ ಹೊಳೆಯುತಿಲ್ಲ
ಈ ಪಾಪಿ ಹೃದಯಕ್ಕೆ
- ಪ್ರದೀಪರಾಜ್
07 Aug 2018, 10:46 am
ಗಲ್ಲಕೆ ಹಚ್ಚಿದ ಸಿರಿಗಂಧ ಬರಿದಾಗಿದೆ ಪರಿಪೂರ್ಣ ಕಲೆ ಇಲ್ಲದೆ, ಕೆಂದುಟಿಯು ಮಂಕಾಗಿದೆ ಮಾತನಾಡುವವರು ಜೊತೆಗಿಲ್ಲದೆ, ಮೂಗುತಿಯು ಮೌನವಾಗಿದೆ ಕಣ್ರೆಪ್ಪೆಯ ಗಲಭೆ ಇಲ್ಲದೆ ಹಣೆಯತ್ತ ನೋಡಿ, ಹುಬ್ಬೇರಡು ಚಡಪಡಿಸಿದೆ ಕುಂಕುಮದ ಸೊಬಗಿಲ್ಲದೆ.
ಉಂಗುರದ ಬೆರಳ ತುದಿಯಲ್ಲಿ ಹುಬ್ಬೇರಡಿನ ನಡುವಲ್ಲಿ ಹಚ್ಚಲೇನೆ ಸಿಂಧೂರವ ಸಿಂಗಾರಿ ತುಂಬಲಿಂದು ನಿನ್ನಲ್ಲಿ ಸೌಭಾಗ್ಯದ ಸೊಬಗನ್ನು.
ಹಚ್ಚ ಹಸಿರ ಬಳೆಗಳ ತೊಡಿಸಿ ಜಾಜಿಮಲ್ಲಿಗೆ ಜಡೆಯಲಿ ಮುಡಿಸಿ ಝರಿಹಂಚು ಸೀರೆಯುಡಿಸಿ ಬೆಳ್ಳಿ ಕಾಲ್ಗೆಜ್ಜೆ ತೋಡಿಸಲೇನೆ ನಿನ್ನ ಪಾದವ ಅಂಗೈಯಲ್ಲಿರಿಸಿ.
ನಯವಾದ ಅಂಗೈಯಲ್ಲಿ ಮದರಂಗಿಯ ಹರಡಲೇ ,ನುಣುಪಾದ ಉಗುರುಗಳಿಗೆ ನೂರು ಬಣ್ಣ ಸೇರಿಸಿ ನಿನ್ನ ನಗೆಯ ಹಚ್ಚಲೇ,
ನಿನ್ನ ಕೆನ್ನೆ ಮೇಲೆ ಜಾರಿದ ಹನಿಯ ಬೊಗಸೆಯಲ್ಲಿ ಹಿಡಿಯಲೇನೆ ಮನದ ಬೇಗುದಿಯ ಅದರ ತಂಪಲ್ಲಿ ಮರೆಮಾಚಲು.
ಇಂದೊಂದು ದಿನ ನಿನ್ನ ಕದ್ದು ನನ್ನಲ್ಲಿ ಬಚ್ಚಿಟ್ಟು ಮುದ್ದಾಡಲು.
- ಚುಕ್ಕಿ
06 Aug 2018, 09:03 pm
ಕೇಸರಂಟಿದ ಕೈಗಳಲ್ಲಿ ಹಸ್ತರೇಖೆ ಕಾಣುತ್ತಿಲ್ಲ ಉಸಿರ ಬಿಸಿ ಒಣಗಿಸುವುದೇ ಈ ಮಡಿಕೆಯ ಒಡಲನ್ನು! ಎತ್ತಲಿಂದ ತಂದ ಮಣ್ಣೊ ಕಾಲಡಿಯಲಿ ಕರಗೋಗಿ ಚೂಪಾದ ಕಲ್ಲುಗಳ ತೆಗೆದೆಸೆದು ಮೃದುವಾಗಿ ತಿಳಿನೀರಲಿ ಮಿಂದೆದ್ದು ಗಾಲಿಮೇಲೆ ತಿರುಗುತಿಹುದು ಗಿರಗಿರನೆ ಜೋರಾಗಿ.
ಮಂಕಾದ ಕಣ್ಣೆರಡು ಆಯತಪ್ಪದೆ ಹಿಡಿದಿಟ್ಟು ಮೆಲ್ಲನೆ ಸಮಾಧಾನ ಪಡಿಸುತಿವೆ ನಾನಿರುವೆನು ನಿನಗಾಗಿ ನಿನ್ನ ಒಡಲ ಹೊಡೆಯಲು ಬಿಡನೆಂದು ನಾನೆಂದೂ.
ಜೇಡಿಮಣ್ಣ ಹೃದಯದಲ್ಲಿ ಮೂಡಿತೊಂದು ಮುದ್ದಾದ ಮಡಿಕೆ ಬೆಂಕಿಯಲಿ ಸುಟ್ಟು ಗಟ್ಟಿಗೊಂಡು ರಂಗು ಧರಿಸಿ ಕೆಂಪಗಾಗಿ.
ತಂಪಿನ ತವರೂರಿದು ಉದರದಲ್ಲಿನ ಬೇಗೆಯೆಲ್ಲವ ತಣ್ಣೀರ ತಂಪಲ್ಲೆ ಕಿತ್ತೆಸೆಯುವುದು.
- ಚುಕ್ಕಿ
05 Aug 2018, 06:38 pm