Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ವಿಷಕಂಟ

ಜಗವನು ಹೊರತು ಪಡಿಸಿ
ಯುಗದಾಚೆಗೆ ನನ್ನ ಪಯಣ....

ಮೃತ್ಯು ಎಂಬ ಅಸ್ತ್ರದಿಂದ
ಸಂಬಂಧಗಳಿಂದ ದೂರವಾಗ

ಮರೆತು ಜೀವಿಸಬಹುದು..

ಮನಸ್ಸು ಗಟ್ಟಿ ಮಾಡಿಕೊಳ್ಳಬೇಕು..

ದೇವಾನು ದೇವತೆಗಳು ಸಾಗರದ ಅಮೃತಾವನ್ನು ಪಡೆಯಬೇಕು
ಅನ್ನುವಷ್ಟರಲ್ಲಿ ವಿಷ ಬೀಳುತ್ತೆ ..

ಮಹದೇವ ವಿಷ ಕುಡಿದು ವಿಷಕಂಟನಾದ ಅದರ ನೋವನ್ನು ಒಬ್ಬನೇ ಸಹಿಸಿಕೊಂಡ ಹಾಗೇ

ಜೀವನದಲ್ಲಿ ಹುಕ್ಕಿ ಬರುವ ಸಾಗರದ ವಿಷವನ್ನು ಕುಡಿದು ಪ್ರತಿಯೊಬ್ಬರು ವಿಷಕಂಟರು ಆಗಬೇಕು

ಕಾಯುವಲ್ಲಿ ಫಲವಿಲ್ಲ ಗೆಳತಿ
ಏಕಾಂಗಿಯಾ ದಾರಿಯಲ್ಲಿ

- Prakash Angadi

17 Aug 2018, 06:46 am

ಲಂಚ

ಬನ್ನಿ ಬನ್ನಿ ಬನ್ನಿರೊ ಬನ್ನಿ
ಲಂಚ ಎಂಬ ಭೂತವ ಓಡಿಸೋಣ
ಇದರಿಂದ ಮುಕ್ತಿ ಹೊಂದೋಣ...

ಲಂಚ ಪಡೆದವನಿಗೆ
ಜೈಲಿಗೆ ಕಳಿಸೋಣ
ಕಠಿಣ ಶಿಕ್ಷೆಯನ್ನು ವಿಧಿಸೋಣ...

ಲಂಚ ಇಲ್ಲದ ಕೆಲಸ ಮಾಡುವನಿಗೆ
"ಪ್ರಮಾಣಿಕ"ಎಂಬ ಬಿರುದು ನೀಡೋಣ...
ಲಂಚ ತಿನ್ನುವ ನಾಯಿಗೆ
ಬುದ್ದಿ ಕಲಿಸೋಣ ನಾವು
ಬುದ್ದಿ ಕಲಿಸೋಣ...

ಜನರಿಗೆ ಸರಿದಾರಿ ತೋರಿಸೋಣ...
ಲಂಚ ಪಡೆಯುವುದು ಮತ್ತು
ಕೊಡುವುದು ಅಪರಾಧ ಎಂದು
ಸಾರಿ ಸಾರಿ ಹೇಳೋಣ...
ಅರಿವು ಮಾಡಿಸೋಣ ಜನರಲ್ಲಿ...
ಅರಿವು ಮಾಡಿಸೋಣ

ಕನಸಿನ ರಾಜ
ಬಡಮಾರನಹಳ್ಳಿ ಮಂಜುನಾಥ

- Manjunatha BT

15 Aug 2018, 07:19 pm

ಕಗ್ಗತ್ತಲ ಹಾದಿ..

ಮೂಡಲದಿ ಎದ್ದು
ಇಳೆಗೆ ಬೆಳಕು ಹರಿಸುವಾಗ
ನನ್ನ ಗುಡಿಸಲಿನಲ್ಲಿ
ಕವಿದ ಕಗ್ಗತ್ತಲೆಯ
ಕಳೆಯಲಾರನೆ ರವಿ....

ಇರುಳು ತಣ್ಣಗಿರಿಸಿ
ತಾರೆಗಳ ನಡುವೆ ಶಶಿ
ನನ್ನವರ ಮಲಗಿಸುವ
ಮಿಂಚುಳ್ಳಿ ತಾ..
ನನ್ನ ಗುಡಿಸಲಿನಿಂದ ಮರೆಯಗಲಾರ

ನನ್ನ ಉಸಿರಿಗೆ
ಕುತ್ತಗಿ ರಭಸದಿ
ಓಡೊಡಿ ಬರುತಿದೆ
ಗುಡಿಸಲಿಗೆ ಅದೇ ಕತ್ತಲೆ
ಕಗ್ಗತ್ತಲೆ.......

✍️ಪ್ರಣವ್ ಕೆ.ವಿ

- pv creations

15 Aug 2018, 02:41 pm

ಹನಿ

ಕಣ್ಣಂಚಿನ ಹನಿಗೆನು ಗೊತ್ತು
ಮನದಾಳದ ನನ್ನಂತರಾಳದ ನೋವು...
ಆ ಹನಿ ಸಂತೋಷಕ್ಕೂ ಸೈ ದುಃಖಕ್ಕೂ ಸೈ...
ಕಣ್ಣಂಚಿನಲಿ ಸದಾ ಇರುತ್ತದೆ.,,,
ಸಂತೋಷಕ್ಕಾದರೂ ಸರಿ
ದುಃಖಕಾದರೂ ಸರಿ
ಕಣ್ಣೊಳಗಿಂದ ಧರೆಗುರುಳುತ್ತದೆ.,,,
ನೀ ಬಿಟ್ಟೋದರು,,,
ನೀ ಕೊಟ್ಟ ಪ್ರೀತಿ ನನ್ನಂತರಾಳದಲಿ
ಕಣ್ಣು ಮುಚ್ಚುವರೆಗೂ ಸದಾ ಇರುತ್ತದೆ....

- sanjays

14 Aug 2018, 10:57 pm

ಯೋಧ

ಕೈಯಲ್ಲೊಂದು ಬಂದೂಕಿದೆ.. ಎದೆಯಲ್ಲೊಂದು ನೋವು ಇದೆ..
ಬೆನ್ನ ಹಿಂದೆ ಸಾವು ಇದೆ.. ಕಣ್ಣ ಮುಂದೆ ಗುರಿಯಿದೆ..
ಕೊರೆಯೋ ಚಳಿಯೇ ಇರಲಿ.. ಸುಡುವ ಬಿಸಿಲೇ ಬರಲಿ..
ಕ್ಷಣ ಕ್ಷಣವೂ ಹೋರಾಡುತಿರುವೆ.. ಅದೇನೆ ಆಗಲಿ..

ಹೆತ್ತವರ ಅಲ್ಲೇ ತೊರೆದು.. ಮರೆತೇ ಬಿಟ್ಟು ನಿನ್ನ ಒಲವ..
ಕಾಯುತಿರುವೆ ನೀನು ಇಂದು.. ಕೋಟಿ ಜನರ ಪ್ರಾಣವ..
ಆಸೆಯಿರದ ನಿನ್ನ ಬದುಕ್ಕೊಂದು ಸಾವಿಲ್ಲದ ತ್ಯಾಗಚರಿತೆ..
ದೇಶದ ಶಾಂತಿಯು ನೀ ರಚಿಸಿದ ನೆತ್ತರ ಕ್ರಾಂತಿಕವಿತೆ..

ಕಣ್ಣಲ್ಲೆರಡು ಹನಿ ಸುರಿಸಲಾರೆವು ನಾವು..
ದೇಶಕ್ಕೋಸ್ಕರ ರಕ್ತ ಸುರಿಸಿ ಮಡಿವಿರಿ ನೀವು..
ಸಾವಿನ ಸುದ್ದಿ ಮನೆಯವರಿಗೆ ತಲುಪಿದರೇ..
ಆಗುವ ದುಃಖಕೆ ಹೊಣೆ ಖಂಡಿತ ಆ ದೇವರೇ..

ಭಯವನು ಮರೆತು ಜಯ ಸಾಧಿಸೋ ಸೈನಿಕ..
ಇವರಿಗೆ ಗೌರವ ಸಲ್ಲಿಸೋದು ನಮ್ಮ ಕಾಯಕ..
ಜಾತಿ ಭೇದ ತೊರೆದು ತೋರಬೇಕು ನಮ್ಮ ಬಂಧ..
ಆಗಬೇಕು ಪ್ರತಿಯೊಬ್ಬ ಪ್ರಜೆಯೂ ದೇಶಕಾಯೋ ಯೋಧ..

- sandesh

14 Aug 2018, 10:37 pm

ಕವಿಯಾದ ಕಥೆ

ಅಂದು ನಿನಗಾಗಿ ಬರೆದೆನು ಹನಿಗವನಗಳ,,
ಇಂದು ನಿನ್ನಿಂದಾಗಿ ಬರೆಯುತೆಹೆನು ಕಿರುಗವನಗಳ,,
ಅಂದು ನಿನಗಾಗಿ ಬರೆದೆನು ಪ್ರೇಮಗವನಗಳ,,
ಇಂದು ಬರೆಯುತೆಹೆನು ಜೀವನದ ಅನುಭವಗಳ,,
ಅಂದು ನಿನ್ನ ಬಣ್ಣಿಸಲು ಬರೆದೆ ಸುಂದರ ಸಾಲುಗಳ,,
ಇಂದು ಬರೆಯುತಿರುವೆ ಸ್ವಸಾಂತ್ವನದ ಬರಹಗಳ,,
ನಿನಗೆಂದೆ ಬರೆದೆನಂದು ಪ್ರೀತಿಯ ಕವಿತೆಗಳ,,
ಗೀಚುತಿಹೆನಿಂದು ರೋಧನೆಯ ನುಡಿಗಳ,,
ನಿನ್ನ ಪಡೆದ ಖುಷಿಯಲಂದು ಹಾಡಿದೆ ಸ್ವಪ್ನದ ಕಾವ್ಯಗಳ,,
ನಿನ್ನ ಕಳೆದುಕೊಂಡ ನೋವಲಿಂದು ಸಾರುತಿಹೆನು ದುಃಖದ ಸಾರಗಳ,,
✍ನೊಂದ ಪುಂಗವ

- SatyanarayanBadiger

14 Aug 2018, 11:54 am

ಕೈ ಯಾಳಾಗುವ ಕನಸು

ಸುಂದರವಾದ ಮನೆಯ ಕಟ್ಟಿ
ಅದಕೆ ನಿನ್ನೆಸರಿಟ್ಟು
ಬಡವರಿಗೊಂದು ಧರ್ಮಶಾಲೆಯ
ತೆರೆದು ಅದಕೂ ಕೂಡ ನಿನ್ನೆಸರಿಟ್ಟು
ಅನಾಥರಿಗೊಂದು ಆಶ್ರಮ ತೆಗೆದು
ಅದಕೂ ಕೂಡ ನಿನ್ನೆಸರಿಟ್ಟು
ದೊಡ್ಡದಾದ ಆಸ್ಪತ್ರೆಯ ಕಟ್ಟಿಸಿ
ಅದಕೂ ಕೂಡ ನಿನ್ನೆಸರಿಟ್ಟು
ನಿನ್ನ ನೆನಪಿಗೆ ಒಂದು...
ಪ್ರೇಮ ಮಹಲ ಕಟ್ಟಿಸುವೆ
ದುಡಿದು ತಂದ ಸಂಬಳವೆಲ್ಲ
ನಿನ್ನ ಮಡಿಲಿಗೆ ಹಾಕಿ
ಸರ್ವವು ನಿನಗೆ ಅರ್ಪಣೆ ಮಾಡಿ
ನಿನ್ನ ಕೈಯಾಳಾಗುವ ಕನಸು ನನ್ನದು
## ರಜನೀಶ ##

- RajaneeshNandikolmath

14 Aug 2018, 09:02 am

ನನ್ನವಳ ಬಗ್ಗೆ ಕನಸು

ನನ್ನವಳು ಚಂದನದ ಗೊಂಬೆ ಆಗಿರಬೇಕೆಂದೆನಿಲ್ಲ
ಒಂದು ಚೆಂದದ ಮುಗ್ದ ಗೊಂಬೆ ಯಾಗಿದ್ದರೆ ಸಾಕು

ನನ್ನವಳು ವಿಶ್ವ ಸುಂದರಿ ಯಾಗಿರಬೇಕೆಂದೆನಿಲ್ಲ
ನಮ್ಮ ಮನೆಯಲ್ಲಿ ಎಲ್ಲರಿಗಿಂತ ಸುಂದರವಾಗಿದ್ದರೆ ಸಾಕು

ಅವಳಿಗೆ ನಾನೆ ಸರ್ವಸ್ವ ಆಗಿರಬೇಕೆಂದೆನಿಲ್ಲ
ಅವಳ ಹೃದಯದಲ್ಲಿ ನನಗೆ ಸ್ವಲ್ಪ ಜಾಗ ಕೊಟ್ಟರೆ ಸಾಕು

ಅವಳು ದೊಡ್ಡ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕ ಪಡೆದಿರಬೇಕೆಂದೆನಿಲ್ಲ
ನಾ ಕಟ್ಟುವ ಚಿನ್ನದ ತಾಳಿ ಕಟ್ಟಿಕೊಂಡರೆ ಸಾಕು

ನಾ ಬದುಕಿರೊವರೆಗೂ ನಿನ್ನ ಕಣ್ಣಲ್ಲಿ ಒಂದು ಹನಿ ನೀರು ಬರದ ಹಾಗೆ ನೊಡ್ಕತಿನಿ ಅಂತ ಹೇಳಲ್ಲ
ಯಾವತ್ತು ನಿನ್ನಿಷ್ಟದ ವಿರುದ್ಧ ಹೋಗಲ್ಲ ಅಂತ ಮಾತು ಕೊಡ್ತಿನಿ

ಅವಳಿಗೆ ತಂದೆತಾಯಿಗಿಂತ ಹೆಚ್ಚು ಪ್ರೀತಿಸ್ತಿನಿ ಅಂತ ಹೇಳಲ್ಲ ಆದರೆ
ಅವಳಿಗೆ ಅವಳ ತಂದೆಯ ಪ್ರೀತಿ ತೋರಿಸಿ ಅವಳಿಂದ ನನ್ನ ತಾಯಿ ಪ್ರೀತಿ ಪಡೆಯುವ ಆಸೆ,

ಅವಳಂದ, ಅವಳ ಸ್ವಭಾವ ವರ್ಣಿಸುವ ಆಸೆ ಬೆಟ್ಟದಷ್ಟು
ಆದರೆ ಏನು ಮಾಡಲಿ ಅವಳ ಬಗ್ಗೆ ವರ್ಣಿಸಲು ಶಬ್ದಕೋಶದಲ್ಲಿ ಪದಗಳೇ ಸಿಗುತಿಲ್ಲ
###ರಜನೀಶ###

- RajaneeshNandikolmath

14 Aug 2018, 09:00 am

ಮತ್ತದೇ ನೆನಪುಗಳ ಚಿಗಿರು...

ಕಂಡಿದ್ದೆ ಅವಳಲ್ಲಿ,
ಕೋಟಿ ಕನಸು...
ಆಗಲಿಲ್ಲ ಅದರಲ್ಲಿ,
ಒಂದೂ ನನಸು...
ಕನಸುಗಳ ನೆನಪಾಗಬಾರದೆಂದು,
ಮನಸು ಮುನಿಸುಕೊಂಡು...!
ಕನಸುಗಳ ಗಂಟು ಕಟ್ಟಿ,
ಕಡಲ ನೀರಿಗೆಸೆದೆ......
ನೀರಲ್ಲಿ ಬೆರೆತ..
ಕನಸುಗಳು ಆವಿಯಾಗಿ..!
ಮತ್ತೆ ಮೋಡವಾಗಿ..!!
ಮುಂಗಾರು ಮಳೆಯಾಗಿ...!!!
ಧರೆಗೆ ಸುಯ್ಯನೆ ಸುರಿದು...
ಮನದಲ್ಲೀಗ ಮತ್ತದೇ...
ನೆನಪುಗಳ ಚಿಗುರೊಡೆಯುತ್ತಿದೆ....

- S Anju Doddmani

12 Aug 2018, 04:31 pm

ಪರಿಸರ ಈ ಪರಿಸರ ಸೌಂದರ್ಯದ ಆಗರ

ಪರಿಸರ ಈ ಪರಿಸರ ಸೌಂದರ್ಯದ ಆಗರ
ಹಸಿರು ಉಸಿರಿನ ಪರಿವಾರ
ಜೀವ ಸಂಕುಲದ ಉಳಿವಿಗೆ ಇರಲು
ಮನುಕುಲಕೆ ಮುದವನು ಕೊಡಲು
ಈ ಪ್ರಕೃತಿ ಮಾತೆಯು..." ಪ "

ಪರ್ವತ ಸಾಗರ ತೇಗ ಶ್ರೀಗಂಧವನು
ಹೂವು ಮಾವು ಹುಲಿ ಸಿಂಹವನು
ವಿಸ್ಮಯದಿ ಹರುಷದಲಿ ನೀ ನೋಡಲು
ಬನವಿಲ್ಲದೆ ಬಾಳು ಇಲ್ಲವೆಂಬ ನಿಜವ ನೀ ತಿಳಿದರೆ
ಈ ಪ್ರಕೃತಿ ಮಾತೆಯ ಪೂಜಿಸುವೆ ನೀ
ಆ ಸ್ವರ್ಗ ವೇ ಧರೆಗಿಳಿದಂತೆ ಭಾಸವಾಗುವೆ
ಈ ನಿಸರ್ಗವ ಈ ನಿಸರ್ಗವ..‌..

ಹರಿಯುವ ನದಿಯಲಿ ಹರುಷದಲಿ ಈಜಾಡುತ ನೀ
ಚಿಲಿಪಿಲಿ ಹಕ್ಕಿಗಳ ನಿನಾದವ ಆಲಿಸುತ ನೀ..
ಈ ಪ್ರಕೃತಿ ಮಾತೆಯ ಸೌಂದರ್ಯಕೆ ಕರಗಿಹೋಗವೆ ,ಧನ್ಯನಾಗುವೆ..
ಖಗವೇ ಮೃಗವೇ ಇರಲಿ
ಗಿಡವೇ ಮರವೇ ಇರಲಿ..
ಈ ಪ್ರಕೃತಿ ಮಾತೆಯ ಮಡಿಲಲಿ ಬಾಳಿ ಬೆಳಗಲು
ಕರುಣೆ ತೋರು ನೀ
ಅದುವೇ ಸೃಷ್ಟಿಯ ನಿಯಮ ಎಂಬುದು ನೀ ಅರಿತುಕೋ.....

- ಸುರೇಶ್ ಟಿ ವಿ

12 Aug 2018, 03:46 pm