Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಹೇಗೆ ಬದುಕಲಿ ನಾನು, ಏಕೆ ಬದುಕಲಿ ನಾನು?
ಹೇಗೆ ಬದುಕಲಿ ನಾನು, ಏಕೆ ಬದುಕಲಿ ನಾನು?
ನನ್ನವರೆ ನನಗೆ ಎರಡು ಬಗೆವಾಗ,
ಬದುಕಿನಲಿ ನೋವೇ ತುಂಬಿರುವಾಗ,
ಕಂಬನಿಗೆ ಬೆಲೆಯೇ ಇಲ್ಲದಿರುವಾಗ,
ಏನ ಸಾಧಿಪೆನೆಂದು ಬದುಕಲಿ ನಾನು?
ಹೇಗೆ ಬದುಕಲಿ ನಾನು, ಏಕೆ ಬದುಕಲಿ ನಾನು?
ಹೇಗೆ ಬದುಕಲಿ ನಾನು, ಏಕೆ ಬದುಕಲಿ ನಾನು?
ನನ್ನಿಂದ ಯಾರಿಗೂ ಸಂತೋಷವಿರದಾಗ,
ಮಾಡಿದ ತ್ಯಾಗಕ್ಕೆ ಬೆಲೆಯೆ ಇರದಾಗ,
ನನ್ನವರು ಎಂದು ಯಾರೂ ಇರದಾಗ,
ಯಾವ ಪುರುಷಾರ್ಥಕ್ಕಾಗಿ ಬದುಕಲಿ ನಾನು?
ಹೇಗೆ ಬದುಕಲಿ ನಾನು, ಏಕೆ ಬದುಕಲಿ ನಾನು?
ಹೇಗೆ ಬದುಕಲಿ ನಾನು, ಯಾರಿಗಾಗಿ ಬದುಕಲಿ ನಾನು?
*********
ಇಲ್ಲ ಬದುಕುವೆ ನಾನು, ಇನ್ನು ಬದುಕುವೆ ನಾನು
ಇಲ್ಲ ಬದುಕುವೆ ನಾನು, ಇನ್ನು ಬದುಕುವೆ ನಾನು
ಎರಡು ಬಗೆವವರನ್ನು ಎದುರಿಸುವುದಕ್ಕಾಗಿ,
ನೋವುಗಳ ಛೇದಿಸಿ ನಲಿವುದಕ್ಕಾಗಿ,
ಕಣ್ಣೀರ ಹನಿಗಳಿಗೆ ಅರ್ಥ ಕಲ್ಪಿಸುವುದಕ್ಕಾಗಿ,
ಆಗಸದಿ ಹಾರುವ ಗಾಳಿಪಟವಾಗಿ,
ಹೌದು ಬದುಕುವೆ ನಾನು, ಇನ್ನು ಬದುಕುವೆ ನಾನು
ಹೌದು ಬದುಕುವೆ ನಾನು, ಇನ್ನು ಬದುಕುವೆ ನಾನು
ಚಪ್ಪಾಳೆಗಳಿಗಲ್ಲ ಆತ್ಮತೃಪ್ತಿಗಾಗಿ,
ಬರಲಿರುವ ಅನಿಯಮಿತ ಸಂತೋಷಗಳಿಗಾಗಿ,
ಜನಿಸಿರುವ ಪರಮಮೂಲ ಉದ್ದೇಶಕಾಗಿ,
ಕೆಣಕಿದರೆ ಉಕ್ಕುವ ಜ್ವಾಲಾಮುಖಿಯಾಗಿ,
ಹೌದು ಬದುಕುವೆ ನಾನು, ಇನ್ನು ಬದುಕುವೆ ನಾನು
ಹೌದು ಬದುಕುವೆ ನಾನು, ಇನ್ನು ಬದುಕುವೆ ನಾನು
ಹೊಸದಾಗಿ ಬದುಕುವೆ ನಾನು, ನನಗಾಗಿ ಬದುಕುವೆ ನಾನು........
ಭಾವುಕ(ನಾಗು)
- ನಾಗು
25 Aug 2018, 01:57 pm
ಸಾವಿರ ಕನಸನೊತ್ತ ಭಾಸ್ಕರನು ಮೂಡಿದ
ಕಾರ್ಮೋಡಗಳೇ ತುಂಬಿದ್ದರೂ ಬೆಳದಿಂಗಳ ನಗೆ ಚೆಲ್ಲಿದ
ನಗುವಿನಲ್ಲೆ ಜಗದೆಲ್ಲೆಡೆ ಪ್ರಖಶಿಸಿಯೇ ಬಿಟ್ಟ
ಕಾರ್ಮೋಡಗಳೆಲ್ಲವೂ ಚದುರಿ ಸರಿದವು ಬದಿಗೆ
ಸೂರ್ಯ ನಗುಬೀರಿದ ಪ್ರಭಾವದಿ
ಬಾನು ಬೆಳ್ಳಿಪರದೆಂತೆ ಹೊಳೆದುಬಿಟ್ಟಿತ್ತು
ಇಡೀ ದಿನದಿ
- ಎಸ್.ಬಿ
25 Aug 2018, 06:58 am
ದೇಹ ತಂದೆಯಾದರೆ
ಜೀವ ತಾಯಿ
ನನ್ನೆರಡು ಕಣ್ಣುಗಳೆ
ನನ್ನ ತಂಗಿಯರು
ನನ್ನವಳೇ ನನ್ನುಸಿರು...
❤
- RajaneeshNandikolmath
25 Aug 2018, 01:58 am
ಸೋತಕದ ಛಾಯೆಯೊಳಗೆ ಸೋತು ಬದುಕಿದ ಬದುಕಿದು....
ಅರಳಬೇಕೆಂದರೇಗೆ ಅರಳುವುದು ಸುಟ್ಟ ಗಾಯಗಳೇ ನೋವನ್ನುನಿಸುವಾಗ
ನೆಮ್ಮದಿಯ ಎಲ್ಲಿ ಹುಡುಕಲಿ ನಾನು ನನ್ನ ಸುತ್ತಲು ಸ್ಮಾಶನವೇ ಕಂಡಾಗ
ಬದುಕು ಇಷ್ಟೇ ....
- ಎಸ್.ಬಿ
24 Aug 2018, 11:44 pm
ನಗುವೇ ಜೀವನ ಎಂದವರಾರು
ನಕ್ಕಿದ್ದು ಗೊತ್ತಿಲ್ಲ
ನಕ್ಕವರು ಎಂದಿಗೂ ಸುಖಿಗಳೆಂದು ಹೇಳುವಂತಿಲ್ಲ
ನಗುನಗುತಾ ಬಾಳಿದವರು ಅಂದವಾಗಿ ಕಾಣಲೆಂದಷ್ಟೆ
ನಗುವುದು ಸಹಜವಾದರೂ ನಗುವುದು ಅನಿವಾರ್ಯವಾದರೂ
ನಗು ಅವರ ಬಾಳಿಗೆ ಮಾವನ ಮನೆ
- ಎಸ್.ಬಿ
24 Aug 2018, 06:26 pm
ಎಲ್ಲವೂ ಇದೆಯೆಂದು ಹಿಗ್ಗಬೇಡ ಯಾವುದೂ ಇಲ್ಲವಾಗಬಹುದು,,
ಏನೂ ಇಲ್ಲವೆಂದು ಕುಗ್ಗಬೇಡ ಎಲ್ಲವೂ ನಿನ್ನದಾಗಬಹುದು,,
ಬಂದ ಭಾಗ್ಯವನು ಒದೆಯಬೇಡ ಮತ್ತೆ ಬಾರದೇ ಇರಬಹುದು,,
ಬರದ ಭಾಗ್ಯವನು ಕರೆಯಬೇಡ ಇದ್ದ ಭಾಗ್ಯವೂ ಮರೆಯಾಗಬಹುದು,,
ಅನ್ಯರ ಜೀವನಕ್ಕೆ ಹೋಲಿಕೆ ಮಾಡಬೇಡ ನಿನ್ನ ಜೀವನ ಹಾಳಾಗಬಹುದು,,
ಹೊಂದಿಕೊಂಡು ಹೋಗುವುದ ಕಲಿ ಬದುಕು ಬೆಳಗಬಹುದು,,
ಬದುಕೆಂಬುದೇ ಒಂದು ಭಾಗ್ಯವಿಹುದು,,
ಬಂದಂತೆ ಬಯಸಿದರೆ ಸಂತಸದಿ ಆನಂದಿಸಬಹುದು,,
✍ನೊಂದ ಪುಂಗವ
- SatyanarayanBadiger
24 Aug 2018, 03:49 pm
ಸಾಧಿಸಲು ಹೊರಟೆ,
ಸವೆದು ಹೋದೆನು,,!
ಗೆಲ್ಲಲು ಹೊರಟೆ,
ಸೋತು ಹೋದೆನು,,!
ಪ್ರೀತಿಸಲು ಹೊರಟೆ,
ಮೋಸ ಹೋದೆನು,,!
ನೋವ ಮರೆಯಲು ಹೊರಟೆ,
ಮರೆಯಾಗಿ ಹೋದೆನು,,!
ತಿಳಿಸಲು ಹೊರಟೆ,
ತಿಳಿಗೇಡಿಯಾಗಿ ಹೋದೆನು,,!
ಅರ್ಥೈಸಲು ಹೊರಟೆ,
ಅರ್ಥವಿಲ್ಲದವನಾಗಿ ಹೋದೆನು,,!
ಪೂಜಿಸಲು ಹೊರಟೆ,
ಪುಣ್ಯವಿಲ್ಲದೇ ಹೋದೆನು,,!
ಭಕ್ತಿ ಬೆಳಗಲು ಹೊರಟೆ,
ಮುಕ್ತಿಯಿಲ್ಲದೇ ಹೋದೆನು,,!
ತ್ಯಾಗಿಯಾಗಲು ಹೊರಟೆ,
ಕಳೆದುಕೊಂಡ ಯೋಗಿಯಾಗಿ ಹೋದೆನು,,!
ಕಾಣದ ಕಡಲ ಕಾಣಲು ಹೊರಟೆ,
ಕವಿಯಾಗಿ ಹೋದೆನು,,!
✍ನೊಂದ ಪುಂಗವ
- SatyanarayanBadiger
22 Aug 2018, 12:40 pm
ನೊಂದು ಬೆಂದಿದೆ ಕೊಡಗು
ಪ್ರಕೃತಿಯ ಉಸಿರೇ ಹುದುಗಿ ಹೋಗಿದೆ
ಹಸಿರೆಂಬ ಕಾನನ ಬರಿದಾಗಿದೆ
ಸೋಗಸಾದ ಮನ ತಣಿಸುವ ಪ್ರಕೃತಿ ಮರೆಯಾಗಿದೆ
ಅರಿಯದೆ ಹೋಯಿತು ಕೊಡವರ ಕೊಡುಗೆ
ಮರೆತೇ ಬಿಟ್ಟಿತ್ತು ಪ್ರಕೃತಿ ಕ್ಷಣಗಳಿಗೆ
ಮತ್ತೇ ಸಿಂಗಾರಿಸಿಕೋ ಪ್ರಕೃತಿ ಮಾತೆ
ನಿನ್ನ ಹಚ್ಚಹಸಿರಿನ ವೈಯಾರವ
ಕೊಡಗಿಗಷ್ಟೇ ಅಲ್ಲ ಬೇಕಿದೆ ನಿನ್ನ
ಹಚ್ಚಹಸಿರಿನ ಸಿಂಗಾರ ಕಂಗಳು ಇಡೀ ನಾಡಿಗೆ
- ಎಸ್.ಬಿ
20 Aug 2018, 02:21 pm
ಹೋಗಬೇಡವೇ ಗೆಳತಿ ನಡು ನೀರಲಿ ಕೈಯ ಬಿಟ್ಟು,,
ನಡೆಯಬೇಡ ಪ್ರೀತಿಯ ಅರ್ಧದಲ್ಲೇ ವಿರಾಮ ಕೊಟ್ಟು,,
ದೂರ ಸರಿದು ಮಾಡದಿರು ನನ್ನೀ ಅಂತರಂಗಕೆ ಪೆಟ್ಟು,,
ನಗದಿರು ನನ್ನ ಪ್ರೇಮದರಮನೆಯ ಸುಟ್ಟು,,
ಅನ್ಯರ ಸುಳ್ಳಿನ ಮಾತುಗಳಿಗೆ ಹೋಗದಿರು ಕೆಟ್ಟು,,
ನನ್ನ ಪ್ರೀತಿಗೆ ತೋರಿಸದಿರು ಮಾಡಿ ನೀ ಬೆಟ್ಟು,,
ನನ್ನ ಎದೆಯಾಳದ ನಿನ್ನ ಮೇಲಣ ಪ್ರೇಮವು ನೂರು ಪಟ್ಟು,,
ಮರೆಯಾಗದಿರು ಮನದಲಿ ನೆನಪಿನ ಸಸಿಯ ನೆಟ್ಟು,,
ತೊರೆಯದಿರು ಮೋಸಗಾರನೆಂಬ ಕಟು ನಾಮವನಿಟ್ಟು,,
ಮರಳಿ ಬಂದು ನನ್ನ ಎದೆಯಾಳದಲಿ ಪ್ರೀತಿಯ ಗುಡಿಯ ಮತ್ತೊಮ್ಮೆ ಕಟ್ಟು,,
✍ನೊಂದ ಪುಂಗವ
- SatyanarayanBadiger
19 Aug 2018, 05:47 pm
ಜಾತಿ ಧರ್ಮ ಮತವೆಂಬ ಭೇದದಲಿ
ಮುಳುಗಿದ್ದ ಸಮಾಜವು
ಇಂದು ಬೇಡುತ್ತಿದೆ ಸಿಕ್ಕರೆ ಸಾಕು ಅನ್ನ ನೀರು
ಬದುಕಬೇಕೆಂಬ ಆಸೆಯಲಿ
ಹೊಡೆದಾಡಿದರು ಅಂದು
ಇದೇ ಜಾತಿ ಧರ್ಮದ ಕಲಹಕ್ಕೆ
ಕ್ಷಣ ಮಾತ್ರದಿ ಕೊಳಚೆಯಾಗಿತ್ತು ಬದುಕು,
ಮನುಷ್ಯ ಜಗತ್ತಿನಲ್ಲಿ ಶೂನ್ಯ ಎಂದು ಸಾರಿತು
ಭೇದಭಾವ ಮಾಡಿ ಬದುಕಿದವರೂ ಉಳಿಯಲಿಲ್ಲ ಐಷರಾಮಿ ಬದುಕನ್ನು ಬಂಗಾರವಾಗಿಸಲಿಲ್ಲ
ಬರಡಾಯಿತು ಬದುಕು
ಒಂದೇ ಕ್ಷಣಮಾತ್ರದಿ ಪ್ರಕೃತಿ ಮುನಿಸಿಗೆ
- ಎಸ್.ಬಿ
19 Aug 2018, 02:00 pm