Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸಾಧನೆ

ಕವಿ ಮಾಡುವುದು ಕಲ್ಪನೆ
ಕವಿ ಶಾಶ್ವತ ಅಲ್ಲ
ಕವಿತೆ ಶಾಶ್ವತ..
ಶಿಲ್ಪಿ ಮಾಡುವುದು ಕೆತ್ತನೆ
ಶಿಲ್ಪಿ ಶಾಶ್ವತ ಅಲ್ಲ
ಶಿಲೆ ಶಾಶ್ವತ..
ನಾವು ಮಾಡಬೇಕು ಸಾಧನೆ
ನಾವು ಶಾಶ್ವತ ಅಲ್ಲ
ನಮ್ಮ ಸಾದನೆ ಶಾಶ್ವತ..

- Lucky

29 Aug 2018, 08:46 pm

ಮಗ್ದ ಮನಸಿನ ಮುದ್ದು ಹುಡುಗ

ಮುದ್ದು ಮುದ್ದು ಮನಸ್ಸಿನ
ಪೆದ್ದು ಹುಡುಗ...
ಮೀನ ಮೀನ ಮಿನುಗುವ
ಚಂದಾ ಮಾಮ..

ನೀ ಇರುವ ಕಡೆಯಲ್ಲ
ಪ್ರತಿನಿತ್ಯ ಸಂಕ್ರಾಂತಿ....
ನೀ ಹೊದಾ ಕಡೆಯಲ್ಲ
ಹರುಷದ ನವರಾತ್ರಿ...
ಬಾ ನಮ್ಮ ಅಂಗಳಕ್ಕೆ
ನಗುನಗುತ್ತಾ....

ಯಾರನ್ನು ನೋಯಿಸದ
ಮೊಗ್ಗಿನ ಮನಸು ನಿನ್ನದು
ಎಲ್ಲಾರು ಹೊಗಳುವ
ರಾಜನ ರೂಪ ನಿನ್ನದು
ನಮ್ಮ ಮನ ಅಳುವ
ಮಹಾರಾಜ ನೀನೇ....

ನಮ್ ಎದೆಯ ಆಳದಲ್ಲಿ
ನಲಿಯುವ ನಗು ನಿನ್ನದು
ಎಲ್ಲರ ಮುಖದಲ್ಲಿ
ಮಿನುಗುವ ಖುಷಿ ನಿನ್ನದು..
ನಲಾಯುತಾ ಕುಣಿಯುತಾ
ಬಾಳು ನೀ ನೂರು ವರುಷ...

- Lucky

29 Aug 2018, 05:19 pm

ಕನಸಿನ ನಾವಿಕ

ನೇಸರ ಬರುವ ಮುನ್ನ ನಿನ್ನ ನೆನಪಿನೂ ಬಿಂಬಿಸು
ಕಂಬನಿ ಜಾರುವ ಮುನ್ನ ಕೈಹಿಡಿದು ನಡೆಸು
ಮೇಣವೂ ಕರಗು ಮುನ್ನ ಮನಸಿನಲಿ ನೆನಸು
ಸೂರ್ಯನು ಮುಳುಗುವ ಮುನ್ನ ನನ್ನನ್ನು ತಣಿಸು

ನಕ್ಷತ್ರಗಳು ಮಿನುಗುವ ಮುನ್ನ ನೆನಪನು ಜ್ಞಾಪಿಸು
ಚಂದ್ರನೂ ನಾಚಿಸುವ ಮುನ್ನ ನಗೆಯನೂ ಬರಿಸು
ಕನಸುಗಳು ಮೂಡುವ ಮುನ್ನ ನನ್ನನ್ನು ಪ್ರೀತಿಯಿಂದ ಮಲಗಿಸು

ಕನಸಲೂ ನಿನ್ನ ಪ್ರೀತಿಯ ಹರಿಸು

- Prakash Angadi

29 Aug 2018, 05:09 pm

ಚೆಲ್ಲಿಬಿಡಿ ಹೊರಗೆ

ಚೆಲ್ಲಿ ಬಿಡಿ ಅಳಿದುಳಿದ್ದದ್ದನ್ನೆಲ್ಲ
ಮನೆಯಲಿ ತಿನ್ನದೆ ಕೊಳೆತದ್ದು
ಹೆಚ್ಚಾಗಿ ಬೇಯಿಸಿ ಉಳಿದದ್ದು
ಚೆಂದವಿಲ್ಲವೆಂದು ಮೂಲೆಯಲಿ ಬಿದ್ದದ್ದು
ಎಲ್ಲವನ್ನು ಚೆಲ್ಲಿಬಿಡಿ ಹೊರಗೆ

ಹೇಳಿ ತೀರಲಾಗದಂತ ಹಸಿವು
ಪುಟ್ಟ ಹೊಟ್ಟೆ ಬೆನ್ನಿಗಂಟಿದೆ
ಹಿಡಿ ಮಾಂಸವೂ ಇರದೆ ಹೊರಬಂದ
ಎದೆಯೆಲುಬು ಹಾಳು ಜಗವ ನೋಡಿ ನಗುತಿದೆ
ತಾಳಲಾರೆನಿನ್ನು ಚೆಲ್ಲಿಬಿಡಿ ಹಳಸಿದ್ದಿದ್ದರು ಹೊರಗೆ

ಚೆಲ್ಲುವುದ ನಿಲ್ಲಿಸಿ ಬಿಟ್ಟೀರಿ ಕಸದತೊಟ್ಟಿಗೆ
ಈ ಪಾಪಿ ಜನರು ತಿಂದು ಬದುಕಿಬಿಟ್ಟಾರೆಂದು
ತಿರುಗಿ ಮನೆ ಮನೆ ಬೇಡಿ ಬಂದರೂ
ಮುಷ್ಟಿಯಷ್ಟು ತಿನ್ನಲು ಏನು ನೀಡಲಾಗದವರು ನೀವು
ಎಂಜಲು ಹಳಸಿ ಅಳಿದುಳಿದ್ದದ್ದು ಎಲ್ಲವ ಚೆಲ್ಲಿಬಿಡಿ ಹೊರಗೆ

ಸಿಕ್ಕಿದ್ದನ್ನ ಬಾಚಿ ಹಂಚಿ ತಿಂದು ಬದುಕಿ ಬಿಡುತ್ತೇವೆ
ಪಾಪಿ ಹಸಿವು ಬೇಡವೆಂದರು ಬಿಡದು
ಕಸದೊಳಗೆ ಬಿದ್ದ ನಾಯಿ ಹಂದಿ ತಿಂದು ತೇಗಿ
ಬಿಟ್ಟುಹೋದ ಹಿಡಿ ಅನ್ನವನ್ನಾದರು ತಿನ್ನುತ್ತೇವೆ
ಹಾಳು ಜೀವವ ಉಳಿಸಲಾದರು ಚೆಲ್ಲಿಬಿಡಿ ಹೊರಗೆ

- ಶ್ರೀಕಾವ್ಯ

28 Aug 2018, 06:01 pm

ನೀನೇಕೆ ಕನಸಾದೆ

ನೀನೇಕೆ ಬರಿ ಕನಸಾದೆ ಒಲವೇ
ಕನಸಲೂ ನಿನದೇ ಕನವರಿಕೆ ಜೀವವೇ
ನೀ ನೆನಪಾದರೆ ನಾ ಮೌನಿ
ನಿನ್ನ ನೆನಪಲೆ ಸದಾ ಧ್ಯಾನಿ

ಭುವಿಯ ಬಯಸಿ ಬಿದ್ದ ಮಳೆಹನಿ
ನೆನೆಸಿ ನೋಯಿಸಿ ತರುತಿದೆ ಕಂಬನಿ
ನೀನೇಕಾದೆ ಎಲೆ ಅಂಚಿನ ಇಬ್ಬನಿ
ಹಿಡಿದರೆ ಜಾರಿ ಹೋಗೊ ನೀರಹನಿ

ಬೆಂಕಿಹಚ್ಚಿ ನಡೆದೆ ಕಂಡ ಕನಸಿಗೆ
ನೀನೆ ಬೇಕಿದೆ ಅರೆಬೆಂದ ಮನಸಿಗೆ
ಕೈ ಹಿಡಿದು ನಡೆವಾಸೆ ಜೊತೆಜೊತೆಗೆ
ಶರಣಾಗಲಾಗದೆ ನನ್ನೊಲವ ಈ ಪ್ರೀತಿಗೆ

ಸಾಲು ಸಾಲು ಕನಸ ಮಳಿಗೆ ತೆರೆದು
ಕಾದು ಕುಳಿತಿರುವೆ ನಿನಗೆ ಹಾತೊರೆದು
ಬಂದುಬಿಡು ಒಲವೇ ಪ್ರೀತಿಧಾರೆ ಎರೆದು
ನಾ ನಿನ್ನ ಪ್ರೇಮಬಂಧವ ಹೊಸೆದು

- ಶ್ರೀಕಾವ್ಯ

27 Aug 2018, 10:50 pm

ತಿಳಿಯಲೇ ಇಲ್ಲ !

ನೀ ನಡೆದ ದಾರಿಯಲ್ಲಿ
ನೂರಾರು ಬಾರಿ ನಡೆದಿರುವೆ
ನೀ ಹಿಂತಿರುಗಿ ನೋಡುವವರೆಗೂ
ತಿಳಿಯಲೇ ಇಲ್ಲ ನಿನ್ನ ಹೆಜ್ಜೆಗುರುತು
ನನ್ನ ಪಾದವನ್ನು ಮುದ್ದಾಡುತಿರುವುದು
ನಿನ್ನ ಉಸಿರು ನನ್ನನು ನಿನ್ನೆಡೆಗೆ ಸೆಳೆಯುತಿರುವುದು ❤️

- ಚುಕ್ಕಿ

27 Aug 2018, 09:27 pm

ನನ್ನ ಕಣ್ಣೀರು ಮರೆಯದೆ ಒರೆಸು... ಗೆಳತಿ

ನಿನ್ನ ಬಳಿ ಮಾತಾನಡದ ಪದಗಳನ್ನು
ಕಾಗದದ ಮೇಲೆ ಚೆಲ್ಲಿದೇನೆ
ದಯವಿಟ್ಟು ಓದಿಬಿಡು ,
ಕೆಲವು ಕಡೆ ಪದಗಳಿಲ್ಲ
ನನ್ನ ಕಣ್ಣೀರಿದೆ
ಅದನ್ನ ಅಲ್ಲಿ ಯಾದರು ಮರಿಯದೆ ಒರಸಿಬಿಡು !
ಮುರಳಿಧರ ವಿನಾಯಕ ಟೈಲರ್ ಕೇಸರಹಟ್ಟಿ

- Murali.T

27 Aug 2018, 08:59 pm

ಕಾಯುತ್ತಿರುವೆ ನಿನಗಾಗಿ...

ಕಾಯುತ್ತಿರುವೆ ನನ್ನ ಸಾವಿಗಾಗಿ
ಓ ಸಾವೆ ಬಂದು ಸೆರಬಾರದೆ ನನ್ನ..
ಈ ಜನ್ಮವು ಇನ್ನೆಂದೂ ಬೇಡ ನನಗೆ
ಬೇಗ ಬಂದು ಸೆರು ನನ್ನ...
ಓ ಹೃದಯ ವಾಸಿಯೇ...
ನೀ ಇಲ್ಲದ ಜೀವನ ಬೇಕಿಲ್ಲ ನನಗೆ..
ಮುರಳಿಧರ ವಿನಾಯಕ ಟೈಲರ್ ಕೇಸರಹಟ್ಟಿ ...

- Murali.T

27 Aug 2018, 05:50 pm

ಹೇಳಲಿಲ್ಲ ನೀ ಕಾರಣ

ಕಂಬನಿಯು ಕಣ್ಣಿಂದ
ಜಾರುವ ಮುನ್ನ
ಕೇಳಲೇ ಇಲ್ಲ ನನ್ನ.
ಕಣ್ಣಿಂದ ನೀ
ದೂರವಾಗುವ ಮುನ್ನ
ಹೇಳಲೇ ಇಲ್ಲ ನೀ ಕಾರಣ...

- vasu

26 Aug 2018, 08:08 pm

ಕಡಲಯಾನದ ನಡುವೆ

ಕಡಲದಡೆಯ ಮೂಡಿರುವ ನನ್ನ ಹೆಜ್ಜೆ
ಗುರುತಿನ ಜೊತೆಗೆ
ಮಾತು ಮಣ್ಣಾಯಿತು
ನಿನ್ನ ಗೆಜ್ಜೆಯ ಶಬ್ದಕ್ಕೆ ಮೌನ ಕಲ್ಲಾಯಿತು.

ನಿನ್ನಯ ಹೃದಯದ ಹೂವಿನ ಚಪ್ಪರದಲಿ
ಉಸಿರು ಮಾತಾಯಿತು
ಆಸೆ ಹಾಡಾಯಿತು
ನೆನಪಿನ ಅಂಬರವೇ
ಹೆಪ್ಪೊಡೆದು ನೀರಾಗಿ ಶಿಲೆಗೆ ಉಸಿರಾಯಿತು

ಮೌನವಾಗಿದ್ದು ಧನಿಯು ಬಿಗಿಯಾಗಿತೂ
ಭಾವ ಲಘುವಾಯಿತು
ಸಹಿಸೋ ಮೇಣವಾಗಿ ಕರಗೋ ಮನಸ್ಸುಯಾಯಿತು
ಅಲೆಯು ಭೋರ್ಗರೆಯಿತು ಹಡಗು ಸರಿದಾಡಿತು
ದಿಗಂತವು ಹತ್ತಿರವಾಗಿ ದೇಹವೂ
ಕಡಲಾಯಿತೂ

ನನ್ನವಳ ಕಾದಿರುವಿಕೆಗಾಗಿ.....

- Prakash Angadi

25 Aug 2018, 10:47 pm