ಜವರಾಯನ ಆರ್ಭಟಕ್ಕೆ
ಹಸಿರು ಜರತಾರಿ ಸೀರೆಯುಟ್ಟ ಭೂತಾಯಿ ,
ಕುಸಿದು ಕುಳಿತಿಹಳು .
ಅಲ್ಲಲ್ಲಿ ಭೋರ್ಗರೆದು ಝರಿಯಾಗಿ ಹರಿಯುತಿದೆ
ಮಳೆ ಹನಿಯು ,
ಅದರ ನಡುವಿನಲಿ
ಪ್ರಕೃತಿಯು ಝಗಮಗಿಸುತಾ ತಂಪನ್ನೆರೆಯುತಿದೆ ಈ ಸುಂದರ ಕ್ಷಣಗಳಲ್ಲಿ.
ನನ್ನ ಕಷ್ಟ-ಕಾರ್ಪಣ್ಯಗಳು ಸವಿಯುತಿದೆ ,
ಪ್ರಕೃತಿಯ ಜೊತೆಗೂಡಿ.
ಮನಮೋಹಕ ದೃಶ್ಯಗಳ ಬಗ್ಗೆ ಮನದಲ್ಲಿ ಹಾಡಿ
ಸದಾ ಹಸಿರು
ಪ್ರಕೃತಿಯೇ ನನ್ನ ಉಸಿರು .
ಸುರಿವ ಮಳೆ ಹನಿ ಹೇಳಿದೆ ಕೂಗಿ
ಮಲಗು ಮಲಗು ಗೆಳತಿ ಹೊತ್ತಾಯಿತು ಎಂದು
ಕನಸಲ್ಲಿ ಕಾರ್ಮೋಡ ಕಾದಿಹುದು
ಸುಂದರ ಕತೆ ಹೇಳಿ ರಾತ್ರಿಯ ದಾಟಿಸಿ
ನಾಳೆಗೆ ನಿನ್ನ ತಲುಪಿಸಲೆಂದು..
ಆ ಚಂದ್ರಮ ಎಲ್ಲೋ ಮರೆಯಾಗಿರುವ ಗೆಳತಿ,
ಒಂದು ನಲ್ನುಡಿಯ ಹೇಳುವುದನು ಮರೆತು..
ಬಾನಲ್ಲಿ ನಡೆದಿದೆ ಮೋಡಗಳ ಕಳ್ಳಾಟ
ನಿನ್ನ ತಂಪಲ್ಲಿ ತೇಲಿಸಲು ಏಕೋ ನೂಕಾಟ..
ನಿದ್ರಾ ದೇವಿ ಕಾದಿಹಳು ನಿನ್ನ ಆವರಿಸಿ,
ನೇವರಿಸಿ ತನ್ನ ತೆಕ್ಕೆಯಲ್ಲಿ ಸಂತೈಸಲು..
ದಣಿದ ನಿನ್ನ ಕಂಗಳಿಗೆ ಬರಲಿ ಸುಖ ನಿದ್ರೆ
ಸಾಲುಗಟ್ಟಿ ನಿಂತ ಕಪ್ಪು ಬಿಳುಪು ಕನಸುಗಳಿಗೆ
ಬಣ್ಣ ಬಳಿವ ಕೆಲಸ ರಾತ್ರಿ ಪುರಾ ನನಗಿರಲಿ,
ಒಂದೊಮ್ಮೆ ಎಚ್ಛೆತ್ತರೆ ನೀನು ಹೊಂಗನಸ
ಹೊದಿಕೆ ಸರಿಪಡಿಸಲೇನು..
ಹೇಳಬೇಕಾಗಿಲ್ಲ ಯಾರೇನೂ
ತುಂಬಾ ಹತ್ತಿರದವ ಅವಳಿಗೆ ನಾನು
ಹೇಳ ಹೊರಟರೆ ನಾನು
ನಿಂತು ನೀವು ಕೇಳುವಿರೇನು???
ಅವಳೆಂದರೆ
ಆಶ್ಚರ್ಯರಿಗಳಿಗೂ ಅಚ್ಚರಿಯ ಕುರುಹು ಅವಳು
ಪ್ರೀತಿಯ ಅಪರಮಿತೆಗೂ ಮಿತಿಯ ಗಡಿಯವಳು
ನನ್ನೆಷ್ಟೋ ಹತಾಶೆಗಳಿಗೆ ಮರಣದಂಡನೆಯ
ದಂಡವಿಧಿಸಿದಳವಳು
ಅವಳೆಂದರೆ
ಉಪಸಂಹಾರಕ್ಕೂ ಮುನ್ನುಡಿಯವಳು
ಈ ಏಕಾಂಗಿಯ ಏಕಾಂತದ ಆಯಸ್ಕಾಂತ ಅವಳು
ಕೊನೆಯಲ್ಲೂ ಕೊನೆಯಾಗದವಳು
ಜಗದ ಗೊಡವೆಯ ಅದ್ಭುತಗಳ ಬೂತ ಅವಳು
ವರ್ತಮಾನದ ಮಾನ ಪ್ರಾಣ ಅವಳು
ಅವಳೆಂದರೆ
ನಾ ಕಂಡ ಸೋಲುಗಳನ್ನು ಸೋಲಿಸಿದವಳು
ನಾ ಕಾಣಬೇಕಾದ ಗೆಲುವ ಮಝಲಿನ ಘಮದವಳು
ಹೆಸರಿಲ್ಲದ ಅನಾಮಿಕ ಹೂವಿನ ಪರಿಮಳದವಳು
ಉತ್ತರವ ಕೇಳಿ ಕೇಳಿ ಸಾಕೆಂಬುದಕ್ಕೂ ಸಾಕಾದವಳು
ಅವಳೆಂದರೆ ನಾನಿಡುವ ಪೂರ್ಣವಿರಾಮಕ್ಕೂ
ಅಲ್ಪವಿರಾಮ ಅವಳು
#ಶಂಭುಗೌಡ_
ಮನಸ್ಸೇಕೋ ಭಾರವನಿಸಿದೇ
ಮನ ತಣಿಸುವ
ನಿನ್ನ ನಗುವಿಲ್ಲದೇ,,,
ಗಿಜಿಗುಡುವ ಸಂತೇಲೂ ಕೂಡಾ
ನೀರವಮೌನ ಭಾಸವಾಂದತಿದೆ
ನಿನ್ನ ಮಾತಿಲ್ಲದೆ,,,
ಬಿಸಿಲಿನ ಬೇಗೆಗೆ ತುಸು ನನ್ನಿ
ಹೃದಯ ಬಡಿತ ಏರುಪೇರದಂತಿದೆ
ನಿನ್ನ ಉಸಿರುವಿಲ್ಲದೆ,,,
ಮನದ ಮೂಲೆಯಲ್ಲಿ ಮುನಿಸು
ನೀನು ಬಂದು ಮನದ ಮಂದಿರ ಬಿಡಿಸು
ಎಷ್ಟು ದಿನ ನನ್ನ ನಿನ್ನ ಭೇಟಿಯ ಮಧುರ ಕ್ಷಣ
ನಿನ್ನ ನೆನೆಪೇ ಕಾಡುತಿದೆ ಪ್ರತಿಕ್ಷಣ
ಚೂರಾದರೂ ಕರುಣೆ ಬಾರದೇ ನನ್ನ ಮೇಲೆ
ಭರವಸೆಯ ಭಾವನೆ ಚೂರಾಗುವ ಮುನ್ನ