Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಸರಿಯಿದ್ದಾಗ ಒಬ್ಬರನೊಬ್ಬರು ಹೊಗಳುವ ಮನ್ನಣೆ..
ಮರೆಯಾದಗ ನಿದ್ದೆಗೆಸುವ ಶಿವರಾತ್ರಿಯ ಜಾಗರಣೆ..
ಖರೆಯಿದ್ದಾಗ ರುಚಿಯನಚ್ಚುವ ಮಂಡಾಳ ಒಗ್ಗರಣೆ..
ಪರಿಬಂದಾಗ ಶೆಟ್ಟರ ಅಂಗಡಿಯಲ್ಲೂ ನಡೆಯದ ಎಂಟಾಣೆ..
ಚೆಂದವಿದ್ದಾಗ ಚುಂಬನಗಳ ಸುರಿಮಳೆ..
ಬಂದಬಿದ್ದಾಗ ಸಿಕ್ಕಲ್ಲಿಗೆ ಚುಚ್ಚುವ ಗೋಡೆಮಳೆ..
ಅಂದವಿದ್ದಾಗ ಸುಂದರಕೆ ಹಾಕುವ ಕೈಬಳೆ..
ಕಂದಆದಾಗ ಹುಚ್ಚನಿಗಾಕುವ ಕಾಲ್ಬಳೇ..
ಸಖತ್ತಾಗಿದ್ದಾಗ ತಣ್ಣನೆಯ ಇಂಪಾದ ಗಾಳಿ..
ಎಕ್ಕುಟ್ಟೋದಾಗ ಗಧ-ಗಧ ನಡುಗುವ ಚಳಿ..
ಮಿಕ್ಕೆಚ್ಚೆದಾಗ ಲೋಕದ ಜ್ಞಾನವಿಲ್ಲದ ಚಾಳಿ..
ಇಕ್ಕಟ್ಟಾದಾಗ ಕಣ್ಣು-ಮುಚ್ಚುವಷ್ಟು ಕೆಟ್ಟ ಹುಳಿ..
ಸುಗ್ಗಿ..
- ಆರ್ ಎಸ್ ಸುಗ್ಗಿ.
02 Oct 2018, 08:45 pm
ಯಾರ ಮಹಲನು ಕಟ್ಟುತ್ತಾ ಕಟ್ಟುತ್ತಾ
ಕುಸಿ ಕುಸಿದು ಕಡಿದು ಬೀಳುವುದು
ಯಾರಿಗೋ ತುಂಬಿ ಕೊಡಲು
ಒಂದೊಂದನೇ ಜೋಡಿಸುತ್ತಾ ಜೋಡಿಸುತ್ತಾ
ಒಡೆದೊಡೆದು ಚೂರಾಗಿ ಚದುರಿಹೋಗುವುದು
ಯಾರ ಗೋಪುರಕೋ
ಮಣ್ಣು ಹೊರುತ್ತಾ ಹೊರುತ್ತಾ
ಮಣ್ಣಲ್ಲಿ ಮಣ್ಣಾಗುವುದು
ಯಾರ ಕೊಳೆ ತೊಳೆಯುತ್ತಾ ತೊಳೆಯುತ್ತಾ
ಮಲಿನವಾಗಿ ನಾರುವುದು
ಇದೆಲ್ಲ ಕಂಡಾಗೆಲ್ಲ
ನಗು
ಅಥವಾ ಅಸಹನೆ
ಅಥವಾ ಹೇಸಿಗೆ ನಿನಗೆ
ಉತ್ಸವ
ಪೂಜೆ
ಮೆರವಣಿಗೆ
ಮತ್ತು
ಒಳಗೊಳಗೇ ಬೇಯುವುದು
ಯಾವುದು ದಿಟವೋ ಯಾವುದು ಸಟೆಯೋ
ಅವಳಾದರೋ ನಿನ್ನ ಒಂದು ಸಿಟ್ಟಿಗೆ
ಶಿರ ಕಡಿಯಲ್ಪಡುವ ದೇವರು
ಹತ್ತಿಗೆ ಹತ್ತಿದ ಬೆಂಕಿ
ಹಬ್ಬಿದ್ದೇ ತಿಳಿಯುವುದಿಲ್ಲ
ನಿನ್ನ ಬುಡ ಸುಡತೊಡಗಿದ ಮೇಲೆ
ಅದೆಲ್ಲವೂ ನಿನಗೂ ತಿಳಿಯದೇ ಇರುವುದೂ ಇಲ್ಲ
ಎನ್ನುವುದು ಪ್ರತಿಕಾರದ ಹಾದಿ
ಪ್ರೀತಿಯ ಪೀಯೂಷದ ರುಚಿ ನೆಕ್ಕಿ
ಮತ್ತಳಾದ ಯಾವ ಒಬ್ಬಳೂ
ಈ ಹಾದಿಯಾಗಿ
ಎಂದೂ ಪಯಣಿಸುವುದಿಲ್ಲ
ನಿನಗೆ ಗೊತ್ತಿರಲಿಕ್ಕಿಲ್ಲ
ಗಾಯಗೊಂಡಷ್ಟೂ ನಗುತ್ತ ಎದೆಯೊಡ್ಡುವ
ರಣಕಣದ ಹುಚ್ಚುಹಿಡಿದ ಯೋಧನಂತೆ
ಅವಳೊಬ್ಬಳು ಭಂಡಳು
ಈಗ ಗೊತ್ತಾಯಿತಲ್ಲವೇ
ಸರಿ ನೀನೀಗ ಹೊರಡು
ಸೋಲು ಗೆಲುವು
ಮೊದಲೇ ನಿರ್ಣಯವಾದ ಯುದ್ಧಕೆ
ಹೊರಡು ನೀನು
ನಿನ್ನ ಖಡ್ಗದ ನಾಲಗೆಗೆ
ನಂಜು ಲೇಪಿಸಿಕೊಂಡು
- ಕಾದಂಬಿನಿ
- ಕಾದಂಬಿನಿ
02 Oct 2018, 04:26 pm
ಜೇಡರ ಬಲೆಯೋಂದು
ಸುಂದರ ಇದೆ ಎಂದು
ಚಂದಿರ ಬಂದಾನು
ಉಯ್ಯಾಲೆ ಆಡಲು!!
ಮೈಯನು ಮರೆತಿರುವ
ಚಂದಿರ ಸಿಲುಕಿರುವ
ಅಂದದ ಬಲೆಯೊಳಗೆ
ಚಂದದಿ ತಾ ಮಲಗಿ!!
ಜೇಡರ ಹುಳುವೊಂದು
ಬೇಟೆಯ ತಾ ಕಂಡು
ಬಲೆಯಲಿ ಸಿಲುಕಿರುವ
ಚಂದಿರನೆಡೆ ಬಂತು!!
ಇರುಳಿನ ಸೆಲೆಯಲ್ಲಿ
ಹೊಳೆಯುವ ಮೈ ಕಾಂತಿ
ಚಂದದಿ ಮಲಗಿರುವ
ಸುಂದರ ಬಲೆಯೊಳಗೆ!!
ಚಂದಿರನನು ಕಂಡಾಗ
ಶುರುವಾಯಿತು ಅನುರಾಗ
ಜೇಡರದು ಒಂದೇ ಕೋರಿಕೆ
ನೀ ಬೇಕು ನನಗೀಗ!!
ದಿಗಿಲಾದ ಚಂದಿರಗೆ
ನೆನಪಾಯಿತು ಆ ಬಾನು
ಮುಗಿಲಿಗೂ ಮಿಗಿಲಾದ
ಉಯ್ಯಾಲೆ ಬೇಕೇನು!!
ತಾರೆಗಳ ಕಥೆ ಹೇಳಿ
ಹಿಂದಿರುಗುವ ಮಾತಿಟ್ಟು
ಕಾಯುವಂತೆ ಹೇಳಿ ಹೊರಟ
ಚಂದಿರನು ನೆಪವೊಡ್ಡಿ!!
ಚಂದಿರನ ಮಾತ ನಂಬಿ
ಕಾಯುತಿರುವ ಜೇಡರಗೆ
ಅವನ ಆಟ ತಿಳಿದಿಲ್ಲ
ಅವನು ಬರನು ಹಿಂದಿರುಗಿ!!
- ಪಿ.ಜಿ.ಜ್ಯೋತಿ
02 Oct 2018, 02:42 pm
ಸತ್ಯಾಗ್ರಹ ಎಂಬ ಪದಕ್ಕೆ ಮಾಡಿದೆ ನೀನು ನಾಂದಿ,
ಅಹಿಂಸಾತ್ಮಕವಾಗಿ ಹೋರಾಡಿ ನೀನು ಸ್ವಾತಂತ್ರ್ಯವನ್ನು ತಂದಿ,
ನಿನ್ನ ಆದರ್ಶವನ್ನು ಮೆಚ್ಚಿ ಪಾಲಿಸಬೇಕು ನಮ್ಮ ಮಂದಿ,
ಜೈ ಹೋ ರಾಷ್ಟ್ರಪಿತ ಮಹಾತ್ಮ ಗಾಂಧಿ,,,,
✍
- shridhartalawar
02 Oct 2018, 01:42 pm
ಬದುಕಿನ ಹಳಿಯ ಮೇಲೆ ಹಾದು ಹೋಗಿದೆ ಸಿಹಿ ಕಹಿಯ ಸವಿ ನೆನಪಿನ ಫಲಕಗಳು...
ಬರೆದಿದ್ದು ಯಾರೋ.. ಅಚ್ಚಳಿಯದೆ ಉಳಿದಿವೆ ಕಳೆದೊದ ಆ ಸುಂದರ ಕ್ಷಣಗಳು....
ಕಳೆದೊದ ಸಮಯ ಮತ್ತೆ ಬಾರದಿದ್ದರೇನು ಹಳೆ ನೆನಪಿನ ಜೊತೆ ಜೀವನದ ಪಯಣ ನಡೆಸೋಣ
ಮೇಣದಾ ಬತ್ತಿ ಹಚ್ಚುವ ಮೂಲಕ ಮತ್ತೆ ಮತ್ತೆ ಆ ಕ್ಷಣವ ಆರದಂತೆ ಆಚರಿಸೋಣ.....
- ishwar
02 Oct 2018, 10:09 am
ಗಡಿಯಾರದ ಮುಳ್ಳು ಗಡಿ ದಾಟಿ ಹೋಗಿದೆ
ಬದುಕಿನ ಚಲನಕ್ಕೆ ಕೈ ಸಿಗದೆ....
ಒಂದೊಂದು ಕ್ಷಣಗಳು ಒಂದೊಂದು ಯುಗವಾಗಿವೆ
ಕಷ್ಟವಾಗಿದೆ ಬದುಕು ಅಂಗ್ಯಯನ ಮುಷ್ಠಿಯಲ್ಲಿ ಗಡಿಯಾರ ಜೊತೆ ಇಲ್ಲದಿರುವಾಗ...
ಆದರೇನು.......
ಗಡಿ ದಾಟದಂತೆ ತಡೆವ ನನ್ನ ಸ್ನೇಹ ಬಳಗ ಜೊತೆಗೂಡಿ ತಡೆ ಹಿಡದಿದೆ
ಬರುವ ಅಡ್ಡ ಗೋಡೆಯ ಮೇಲೆ ಮನೆ ಕಟ್ಟಿ ಬದುಕಿ ತೋರಿಸುವೆ.........
- ishwar
02 Oct 2018, 10:08 am
ಹಿಂದೂಗಳಿಗೆ ರಾಮಣ್ಣ..
ಮುಲ್ಲರಿಗೇ ಅಲ್ಲಾಣ್ಣಾ..
ಕ್ರಿಶ್ಚಿಯನ್ನೆರಿಗೆ ಯೇಸಣ್ಣಾ..
ಅವರ ರೀತಿ-ನೀತಿ ಗೊತ್ತೇನಣ್ಣಾ??
ಲಿಂಗಾಯತರಿಗೆ ಬಸಣ್ಣ..
ಕುರುಬರಿಗೆ ಕನಕಣ್ಣ..
ಆಗಸರಿಗೆ ಅಪ್ಪಣ್ಣ..
ಅವರ ತತ್ವದ-ಸತ್ವ ಪಾಲಿಸಿರೇನಣ್ಣಾ??
ಗೌಡರಿಗೆ ಕೆಂಪಣ್ಣ..
ಬೇಡರಿಗೆ ಮಹರ್ಷಿಣ್ಣಾ..
ಮರಾಠರಿಗೆ ಶಿವಣ್ಣ...
ಅವರ ಶೌರ್ಯದ-ಮೌರ್ಯ ಗೊತ್ತೇನಣ್ಣಾ??
ಹರಿಜನರಿಗೆ ಭೀಮಣ್ಣ..
ಬ್ರಾಹ್ಮಣರಿಗೆ ಕೃಷ್ಣಣ್ಣಾ..
ರೆಡ್ಡಿಯರಿಗೆ ವಾಸಣ್ಣ..
ಅವರ ಜಪದ-ತಪವ ಅರಿತಿರೇನಣ್ಣಾ??
ಮನುಷ್ಯತ್ವಕೆ ಬೆಲೆ ಎಂದಣ್ಣ??
ಜಾತಿ-ಧರ್ಮಕೆ ಕಚ್ಚಾಟ ಯಾಕಣ್ಣ??
ರಾಜಕೀಯದವರ ಆಟಕೆ ಬಲಿ ಬೇಡಣ್ಣ!!
ಕೊನೆಗೆ ಹೋಗುವಾಗ ಸಿಗುವುದು ಚೊಂಬಣ್ಣ!!!
ಸುಗ್ಗಿ..
- ಆರ್ ಎಸ್ ಸುಗ್ಗಿ.
30 Sep 2018, 09:17 pm
ಒಂಟಿ ಒಣ ಎಲೆಯೊಂದು ಉದುರಿಹುದು
ಜನರಿಲ್ಲದಾ ಉದ್ಯಾನದ ಕಲ್ಲು ಬೆಂಚಿನ ಮೇಲೆ..
ಮಟಮಟ ಮದ್ಯಾಹ್ನ ಉರಿಬಿಸಿಲು ಸುಡುತಿಹುದು
ಕಲ್ಲು ಕಾದು ಬಿಸಿ ಹೆಂಚಾಗಿಹುದು..
ಆದರೂ ಉರಿಯಿಲ್ಲ ಎಲೆಗೆ
ಏಕೆಂದರೆ ಉಸಿರಿಲ್ಲ ಅದಕೆ..
ಮರದ ನಂಟು ಇರುವ ವರೆಗೂ
ಹಸಿರೆಲೆ ಎಂಬ ಸನ್ಮಾನ
ಹಕ್ಕಿ ಪಿಕ್ಕಿಗಳಿಗೆ ತಂಪೆರೆದು ಸಾಂತ್ವನ,
ಹೂ ಹಣ್ಣುಗಳ ಬಚ್ಚಿಟ್ಟು ಕಾಯ್ದು
ಅಭಿಮಾನ,
ಇದೇ ಕಲ್ಲು ಬೆಂಚಿನ ಮೇಲೆ ಕುಳಿತು
ಪ್ರೇಮ ಸಲ್ಲಾಪವಾಡಿದ ಜೋಡಿಗೆ
ನೆರಳಿತ್ತು ಸಲಹಿದ ಸಿಹಿ ಸಿಂಚನ.
ಪಟ್ಟನೆ ಬಿದ್ದು ಅಲುಗಿಸಿ ಎಳೆಯ
ಮಳೆ ಹನಿಗಳು ಎಂದೋ ಜಾರಿ
ಹೋದವು ಭೇಟಿಯಾದ ಅರೆಕ್ಷಣದ
ಎಲೆಯನು ಮರೆತು..
ಕೊಂಚವಷ್ಟೇ ನೆನೆಸಿ..
ರಾತ್ರಿಯೆಲ್ಲಾ ಹನಿದು ಮಡುಗಟ್ಟಿ
ಹನಿಯಾದ ಇಬ್ಬನಿ
ಸೂರ್ಯನ ಬರುವಿಕೆಗೆ ಹೆದರಿ
ಮೆಲ್ಲಗೆ ಜಾರಿಕೊಂಡಿದ್ದವು ತಣ್ಣಗೆ ಸವರಿ..
ಹಾಗೋ ಹೀಗೂ ಕಳೆದೇ ಹೋಯ್ತು
ಒಂದು ವರ್ಷ..
ವಸಂತದಲ್ಲಿ ಹುಟ್ಟಿದ ಎಲೆಗೆ
ವಸಂತ ಬರುವ ಮೊದಲೇ ಸಾವು!
ಆದರೂ ಕಂಡಿಲ್ಲ ಎಲೆ ಏನೂ ನೋವು.
ದಿಟ್ಟಿಸಿ ನೋಡಿದರೆ ಬೋಳಾಗಿ ಕಾಣುತ್ತಿದೆ
ತನ್ನ ಹೆತ್ತು ಹೊತ್ತ ಗಟ್ಟಿ ಮರ..
ಹಳೆಯ ಎಲೆಗಳನ್ನೆಲ್ಲ ಕೊಡವಿ
ಮತ್ತೊಮ್ಮೆ ಮೈತುಂಬಿಕೊಂಡು
ತನ್ನ ಇನಿಯ ವಸಂತನ ಬರಮಾಡಿಕೊಳ್ಳಲು..
- ಶ್ರೀಗೋ.
30 Sep 2018, 08:12 pm
ಕನ್ನಡ ಕವನ ಸುಂದರ ಭವನ
ನೆಚ್ಚಿನ ಕವಿಗಳ ಮೆಚ್ಚುಗೆ ತಾಣ!!
ಬರಹದ ಸಾಲು ಬರೆಯುತ ಏಳು
ಕನಸಲು ಎಚ್ಚರ ಕವನಕ್ಕೆ ಉತ್ತರ!!
ಚಿಲಿ ಪಿಲಿ ಹಾಡು ಕವನದ ಗೂಡು
ಬರೆಯುತ ಓದುತ ನೆಮ್ಮದಿ ನೋಡು!!
ಗೆಳೆಯರ ಸಾಲು ಬಳಗವ ಸೇರು
ನಿತ್ಯವೂ ಹರುಷದಿ ನೀ ಒಡನಾಡು!!
ಕವನದ ಜಾಡು ಹಿಡಿಯುತ ಓಡು
ಸಾಗುವ ಖುಷಿಗೆ ನೆಮ್ಮದಿ ನೀಡು!!
ಕನ್ನಡ ಕವನದಿ ನೀ ಅಲೆದಾಡು
ಹೊಸ ಹೊಸ ಭಾವದಿ ನೀ ನಲಿದಾಡು!!
- ಪಿ.ಜಿ.ಜ್ಯೋತಿ
30 Sep 2018, 07:32 pm
ಮುಂಜಾನೆ ಸೂರ್ಯನನ್ನು
ಉಷೆಯು ಕರೆತಂದಿಹಳು!!
ರಂಗೇರಿದೆ ಆ ಬಾನು
ಸಂಭ್ರಮದಲಿ ತಾನು!!
ತೆಂಗಿನ ಗರಿಯನು ಸೀಳಿ
ತುಂಗೆಯಲಿ ಹೊಳೆದಿರುಹ!!
ಬೆಳಗಿರುವ ಸೂರ್ಯ
ಉದಯಿಸಿದ ಸಮಯ!!
ಸೂರ್ಯನ ಉದಯಕ್ಕೆ
ಶರಣಾಯಿತು ಈ ಧರೆ!!
ಜೀವ ಸಂಕುಲಗಳಿಗೆ
ಹೊಸ ದಿನಕೆ ಇದುವೇ ಕರೆ!!
ಇರುಳನು ಕಳೆಯುತಲಿ
ಹಗಲಿನ ಆಗಮನ!!
ಬೆಳಕ ನೀಡಲು ಬಂದಿರುವ
ಆ ಸೂರ್ಯನಿಗೆ ನನ್ನ ನಮನ!!
- ಪಿ.ಜಿ.ಜ್ಯೋತಿ
30 Sep 2018, 07:07 am