ಆರಂಭದ ಅಭ್ಯಾಸ ಸಂಕಲ್ಪ ಮಾಡಲಿ,
ಉತ್ತಮ ಆರೋಗ್ಯಕೆ ಸೂರ್ಯ ನಮಸ್ಕಾರವಿರಲಿ.
ಒತ್ತಡಗಳ ಭಾರವಿಳಿಸಿ ಶಾಂತಿ ತರುವುದು,
ನೆತ್ತರಿನ ಪಾಚಿ ಕಳಚಿ ಶುದ್ಧಗೊಳಿಸುವುದು.
ಪ್ರಾಣಾಯಾಮ, ಧ್ಯಾನವನ್ನು ಮನುಜ ಮಾಡಬೇಕಿದೆ,
ಸದೃಢತೆಯ ಚೈತನ್ಯವು ಅದರ ಲಡಗಿದೆ.
ನಾನೇನು ಎಂಬ ಅರಿವ ಮೌನ ಕೊಡುವುದು,
ಏಕಾಗ್ರತೆ ನೆಲೆಸಿ ಗ್ರಹಿಕೆ ಮೊಳಕೆಯೊಡೆವುದು.
ಆಲಸ್ಯವ ದೂರ ಸರಿಸಿ ಮುಂಜಾವಿನಲಿ,
ಸರ್ವಶಕ್ತಿ ಪಡೆಯಬಹುದು ಯೋಗ ಮಾಡುತ್ತಲಿ.
- nagamani Kanaka
21 Jun 2025, 09:06 pm
ಇಂದು ಜರುಗಿದ ಅತೀ ಭಾರದ ಸಮಸ್ಯೆಯೂ..
ಮುಂದೊಂದು ದಿನದ ಹಗುರದ ಸಂತೋಷವೂ..
ಇಲ್ಲಿ ಎಲ್ಲವೂ ಕ್ಷಣಕ್ಕಿಂತ ಅತ್ಯಂತ ಬಲು ಕ್ಷಣಿಕವೂ..
ಓ ಮನವೇ ನೀ ಹೇಳು ಏತಕ್ಕೇ ಮಂಕಾಗಿ ಅಳುವೂ...
ಇನ್ನು ನಾ ಬಯಸುವ ಯವುದೂ ಶಾಶ್ವತವೂ ಎಲ್ಲಿಹುದು..
???
ಇಂದು ಜರುಗಿದ ಅತೀ ಭಾರದ ಸಮಸ್ಯೆಯೂ..
ಮುಂದೊಂದು ದಿನದ ಹಗುರದ ಸಂತೋಷವೂ..
ಇಲ್ಲಿ ಎಲ್ಲವೂ ಕ್ಷಣಕ್ಕಿಂತ ಅತ್ಯಂತ ಬಲು ಕ್ಷಣಿಕವೂ..
ಓ ಮನವೇ ನೀ ಹೇಳು ಏತಕ್ಕೇ ಮಂಕಾಗಿ ಅಳುವೂ...
ಇನ್ನು ನಾ ಬಯಸುವ ಯವುದೂ ಶಾಶ್ವತವೂ ಎಲ್ಲಿಹುದು..
???
ಬರೆಯಲಿ ನಾ ಏನನ್ನ
ಬರೆಯಲೆಂದೆ ಬರೆದೆ ನಮ್ಮುಡುಗಿ ಸೌಂದರ್ಯ ನ
ಮಳೆಯಿಂದ ಭೂಮಿಯ ಪ್ರಕೃತಿ ಹಸಿರಾದರೆ
ಅವಳ ಹೆಸರೇ ನನ್ನೆದೆಯ ಉಸಿರಾಯಿತು
ಜೂಲಿಯಟ್ ಅಂದ ROMEO
ಮರುಳುಗೊಳಿಸಿದರೆ
ಇವಳ ನಗು ಈ SMIRK SANJU ನಿದ್ದೆ ಕೆಡಿಸಿತು
ಕನಸಲ್ಲಿ ಬಂದು ಕಾಡುತಿರುವೆ ನನ್ನ
ಎದುರಿಗೆ ಯಾಕೆ ಬರದೆ ಇರುವೆ ಚಿನ್ನ
ಕನಸಲ್ಲಿ ಬಂದು ನಿದ್ದೆ ಕೆಡಿಸುವ ಬದಲು
ಎದುರಿಗೆ ಬಂದು ಜಗವ ಮರೆಸು ?
"ಹೇಗೆ ವರ್ಣಿಸಲಿ ನಿನ್ನ
ಸ್ವರಗಳಲ್ಲಿ ವರ್ಣಿಸಲಾಗದ
ಸೌಂದರ್ಯ ನಿನ್ನದು..
ವ್ಯಂಜನಗಳಲ್ಲಿ ಅಳೆಯಲಾಗದ
ವ್ಯಕ್ತಿತ್ವ ನಿನ್ನದು...
ಪದಗಳಲ್ಲಿ ಪೋಣಿಸಲಾಗದ
ಪ್ರೀತಿ ನಿನ್ನದು...
ಆದರೆ ನಿನ್ನ ಈ ವರ್ತನೆಯ ಕಂಡು
ನಾ ಹೇಳಿದೆ ಬರಿ ಎರಡು
ಯೋಗವಾಹಗಳಿಂದ
ನಿ ಬಯಸಿದ್ದು ನನ್ನಿಂದ ಕೇವಲ,
ಅಂ...ಅಃ..ಎನ್ನುವ ಎರಡಕ್ಷರ
ವೆಂದು"...
- ಎ.ಆರ್. ರಾಹುಲ್.
ಕಟ್ಟಡಗಳು ಉರುಳಿದವು
ಕನಸ್ಸುಗಳು ಭಗ್ನಗೊಂಡವು
ಶಾಂತಿಯ ಜೀವನ ಕೋಲಾಹಲಗೊಂಡಿದೆ
ಕಣ್ಣು ಮುಚ್ಚಿ ನಿದ್ದೆ ಮಾಡಲಾಗುತ್ತಿಲ್ಲ
ಸತ್ತವರೆದುರಲ್ಲಿ ಅನ್ನ ಹೇಗೆ ಉಣ್ಣಲಿ
ನಿಟ್ಟುಸಿರಲಿ ಸುಮ್ಮನೇಕೆ ಕೂರಲಿ
ಕೇಳುತ್ತೇನೆ ಅವರಿಗೆ
ನೀವು ಮನುಷ್ಯರೇ?
ನಿಮ್ಮಿಬ್ಬರ ತೆವಲಿಗೆ ನಮಗೇಕೆ ಶಿಕ್ಷೆ?
ಪ್ರಶ್ನಿಸಲೇ ಬೇಕು ನಿನ್ನಂತಯೇ
ಬುದ್ಧ..........!
ಮರಳಿ ಕರೆಯಲಿ ಹೇಗೆ
ತಿರುಗಿ ಬಾರದವನು ನೀನು,,
ಮಿಂಚಂತೆ ಮಾಯವಾದೆ
ಸಿಡಿಲು ಬಡಿದಂತೆ ಬಿಟ್ಟು
ಈ ಕಣ್ಣೀರಿಗೆ ಕಾರಣ ಏನೆಂದು
ಹೇಳಲಿ ಕೇಳಿದವರಿಗೆ ನಾನು,,
ಕನವರಿಕೆ ನಿನ್ನದೇ ಕನಿಕರಿಸಿ
ಬಂದುಬಿಡು ಅಪ್ಪ ಒಮ್ಮೆ
ಕನಸಲ್ಲಿ ಕಂಡಂತೆ...
ಎಮ್.ಎಸ್.ಭೋವಿ...✍️
.
.
.
.