ಆ ಬಾನು ಕೂಗಿ ಹೇಳುತ್ತಿದೆ
ನನೆಂದು ಸಿಗದ ಮರಿಚಿಕೆ
ಎಂದು...........
ಆದರೂ ಮನಸು ಎರುತ್ತಲೆ
ಇದೆ ತನ್ನ ಹಟವ ಬಿಡದೆ.....
ಆ ತಾರೆ ನೋಡಿ ನಗುತ್ತಿದೆ
ನಾನೇಂದು ಕೈಗೆಟುಕದ
ನಕ್ಷತ್ರ ಎಂದು........
ಆದರು ಮನಸು ಕೈ
ಚಾಚುತ್ತಲೆ ಇದೆ...........
ಆ ಜರಿಯು ದುಮುಕಿ ಹರಿಯುತ್ತಲೆ
ಇದೆ ನಾನೆಂದು ನಿಲ್ಲಲಾರೆ ಎಂದು....
ಆದರು ಮನಸು ನಿಲ್ಲದೆ
ಅದರಿಂದೆಯೆ ನಡೆಯುತ್ತಲೆ ಇದೆ.........
ಆ ಕಡಲು ಅಬ್ಬರಿಸಿ ನಲಿಯುತ್ತಲೆ ಇದೆ
ನಾನೆಂದು ಮರೆಯಾಗಲಾರೆ ಎಂದು.......
ಆದರು ಮನಸು ಕಣ್ಮುಚ್ಚದೆ
ನೋಡುತಲೆ ಇದೆ....
ನಾ ಬೇಡಿ ಬಂದದ್ದು ನನಗಾಗಿ ಬಂದರು
ಪಡೆದು ಕೊಳ್ಳದೇ ಮನಸು ಅಳುತ್ತಿದೆ.....
ಓ ನನ್ನ ಮನವೆ........
ರಾಗ......
ತಂಪಾದ ಈ ಸಂಜೆಯಲಿ
ಮನಸೇಕೊ ಕೊರಗುತಿದೆ
ಆತಂಕದ ಹೊಳೆಯಲ್ಲಿ
ಹೊರಲಾಡಿ ಬಂದಂತಿದೆ
ಆ ಮುಗಿಲ ಹೊಂಬಣ್ಣ
ನಗುವ ಮೊಗವನ್ನೆ ಬಾಡಿದಂತೆ
ಮಾಡಿದೆ..........
ಮುಳುಗುತಿಹ ಆ ಸುರ್ಯನ
ಕಂಡು ಕತ್ತಲು ನಾನೆದ್ದು ಬರುವೆ
ಎಂದು ನಗುತ ಅಣಕ
ಮಾಡುತ್ತಿದೆ..................
ಕಂಡರು ಕಾಣದಂತೆ ಸಂಚಿನ
ಮಳೆಯೊಂದು ಇಣುಕಿ ನೋಡುತ್ತಾ
ಬಂದು ಬಿಡುವೆ ಎಂದು ಧರೆಯನ್ನೆ
ದಿಟ್ಟಿಸಿ ನೋಡುತ್ತಿದೆ............
ಭಯದ ಹೊಸಿಲಲ್ಲಿ ನಾನಿರುವೆ
ನಿರ್ಭಯವೆ ನಿನೇಲ್ಲಿ ಹೋದೆ ಎಂದು
ಹಕ್ಕಿಗಳು ತನ್ನ ಗೂಡನ್ನ ಹುಡುಕುತ್ತಾ
ಅಲೆಯುತ್ತಿದೆ.......
ಈ ಸಂಜೆಯಲಿ ಮನಸೇಕೊ
ಭಯದಲ್ಲೆ ನಾನೆಲ್ಲಿ ಎಂದು
ತನ್ನೊಳಗೆ ತನ್ನನ್ನೆ
ಹುಡುಕುತ್ತಿದೆ..........
ಈ ಪರಿಯ ತಂಪಾದ ಸಂಜೆಯಲಿ..........
ತಿಂದು-ತೆಗಿದ ಮೇಲೆ ಖಾರಿಲ್ಲಾ-ಉಪ್ಪಿಲ್ಲಾ..
ಉಟ್ಟು-ಬಿಟ್ಟ ಮೇಲೆ ಚೆಂದಿಲ್ಲಾ-ಚಾರಿಲ್ಲಾ..
ಕೆಟ್ಟು-ಕೆರಹಿಡಿದಾಗ ತ್ವರೆಯಿಲ್ಲ-ಕರೆಯಿಲ್ಲಾ..
ಜುಟ್ಟು-ಜಟ್ಟಾದ ಮೇಲೆ ಮಧುವೆಗಿಲ್ಲ-ಮುಂಜಿಗಿಲ್ಲ..