ಒಂದೇ ದಿನಕ್ಕೆ ಕಮ್ಮಿ ಆಗಬಾರದು ನಮ್ಮೆಲ್ಲರ ಕನ್ನಡ,
ಕನ್ನಡವನ್ನೇ ಮಾತನಾಡಿ ಪ್ರತಿದಿನ ನಮ್ಮ ನಿಮ್ಮ ಸಂಗಡ,
ಎಲ್ಲರೂ ಮರೆಯುವುದಕ್ಕಿಂತ ಮೊದಲೇ ಜಾಗೃತಗೊಳಿಸೋಣ ಬನ್ರಿ ದೌಡ,
ದಯಮಾಡಿ ಸಾರಿ ಸಾರಿ ಹೇಳ್ರಿ ಕನ್ನಡದ ಅಭಿಮಾನ ಐತಿ ರಗಡ,,,,
✍
ಹೆಮ್ಮೆಯಿಂದ ಮಾತನಾಡೋಣ ಕನ್ನಡವನ್ನ,
ಏಳೇಳು ಜನ್ಮಕ್ಕೂ ತೀರಿಸಲಾಗದು ಈ ಮಣ್ಣಿನ ಋಣವನ್ನ,
ಇಲ್ಲಿ ಹುಟ್ಟಿರುವುದಕ್ಕೆ ನಮ್ಮ ಪುಣ್ಯವನ್ನ,
ಇನ್ನೊಂದು ಜನ್ಮವಿದ್ದರೆ ದಯಮಾಡಿ ಇಲ್ಲಿಯೇ ನೀಡನ್ನ,,,,
✍
ನನ್ನ ಮದುವೆ ಮೇಲೆ ಸ್ವರ್ಗದಲ್ಲಿ ಆಗಬಾರದು
ಆ ಸ್ವರ್ಗವೇ ಆವತ್ತು ಭೂಮಿಗಿಳಿದಿರಬೇಕು
ನನ್ನ ಸಹೃದಯಿಗಳಿಗೆ, ಬಂಧುಗಳಿಗೆ, ಮಿತ್ರರಿಗೆ
ಅತಿಥಿಗಳಿಗೆ ಹೃದಯದಾಕಾರದ ದ್ವಾರ
ಸ್ವಾಗತಿಸುತಿರಬೇಕು,
ನನ್ನವಳು ವೇದಿಕೆಗೆ ಬರುವಾಗ
ಗುಲಾಬಿಗಳು ಅರಳುತಿರಬೇಕು, ಮಲ್ಲಿಗೆ
ಸುಗಂಧ ಪಸರಿಸುತಿರಬೇಕು, ತಾರೆಗಳ ಮಳೆ
ಸುರಿತಿರಬೇಕು, ಸರಸ್ವತಿ ವೀಣೆ ಮೀಟುತಿರಬೇಕು,
ನವಿಲುಗಳು ನರ್ತಿಸುತಿರಬೇಕು,
ಅವೆಲ್ಲಾ ದಾಟಿ ಅವಳು ವೇದಿಕೆಗೆ ಬಂದಾಗ
ಅವಳಂದಕೆ ನಾ ಸೋತು ಹೋಗಬೇಕು
ಮೊದಲನೆ ಸಾಲಿನಲ್ಲಿ ನನ್ನ ದಿಕ್ಕರಿಸಿದವರು
ಕುಳಿತಿರಬೇಕು ನನ್ನ ನೋಡಿ ಹೊಟ್ಟೆ ಉರಿತಿರಬೇಕು
ಅದು ನೋಡಿ ನಾ ಖುಷಿ ಪಡಬೇಕು.....
##ರಜನೀಷ##
ನೀನೇ ಉಸಿರಾಟ ಎಂದು ನನಗೆ
ತಂದೆ ನೀ ವನವಾಸ ಈ ಈ ಈ ಮನಸಿಗೆ
ಹಗಲು ಇರಳು ನಿನ್ನ ನೋಡದೆ ಇರದ ಕಣ್ಣಿಗೆ, ಮರೆಯಾಗಿ ನಿಂತು ಕೊಂಡೆ ನನ್ನ ಬಾಳಿಗೆ
ದಯಮಾಡಿ ಬೀಳ್ಕೊಡವೆ ನಿನ್ ಈ ಈ ಈ ಹೃದಯಕ್ಕೆ
ಪ್ರತಿಜನ್ಮದಲ್ಲಿ ಸ್ವಾಗತಿಸುವೆ ಮನದಿ ಮಂದಿರಕ್ಕೆ
ನಿನ್ ಹೆಜ್ಜೆ ಮುಂದೆ ಹಿಟ್ಟು ಹಿಂತಿರುಗಿ ನೋಡದಿರು
ನನ್ನ ಮನವು ಆಗುವುದು ಚೂರು ಚೂರು
ಕಣ್ಣು ತೆರೆದು ಕಂಡ ಕನಸು ಹೊರಟಿದೆ ಒಂಟಿಯಾಗಿ
ಅವಳು ಹೋದಳು ನನ್ನಿಂದ ದೂರವಾಗಿ
ಬರೆದು ಬಿಟ್ಟವರಿಗೆ ಅರ್ಥವಾಗಲಿಲ್ಲ
ಬರೆಯದೆ ಇದ್ದವರಿಗೆ ಸುಳಿಯಲಾಗಲಿಲ್ಲ
ಜೀವನದ ಅಣೆಕಟ್ಟನ್ನು ಕಟ್ಟಿ ಬಿಟ್ಟವನೆ
ಮೇಲೆ ಕೂತು ಬಿಟ್ಟ......
ಅದರ ಆಳವೆ ತಿಳಿಯದೆ
ಜೀವವೆ ಸವೆಸಿ ತುಂಬಿಸುತ್ತಿದ್ದರು
ತುಂಬುತ್ತಿಲ್ಲ ಈ ಜೀವನದ ಅಣೆಕಟ್ಟು.....
ಇರುವವರಿಗೇ ಹಸಿದ ಹೊಟ್ಟೆಯೆ
ತುಂಬುತ್ತಿಲ್ಲ........
ಇಲ್ಲದರವರಿಗೇ ಬದುಕಿನ ಬುತ್ತಿಯೆ
ತುಂಬುತ್ತಿಲ್ಲ...........
ನಗಿಸುವ ಮುನ್ನ ಆಡಿಸಿ ಅಳಿಸುವ
ಈ ಬದುಕು ಬರಿ ಒಡಕು......
ಎಂದಿಗು ತುಂಬಲಾಗದ ಒಡಕು.......