Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೀತಿ

ಮನಸ್ಸಲ್ಲೇನೋ ಕಚಗುಳಿ..
ತಡಬಡಿಕೆಯ ಅರೆಗುಳಿ..
ಸಂಯಮವಿರದ ಊರುಗೂಳಿ..
ಬರಿ ಕೊಕೊಕ್ಕೋ ಕಿರಿಚುವ ಹ್ಯಾಟಿಕೋಳಿ..

ಒಬ್ಬರನೊಬ್ಬರನು ಅರ್ಥೈಸುವ ವೇದಿಕೆ..
ದುಃಖವಾದಗ ನೋವನೊರಿಸುವ ಹೊದಿಕೆ..
ಮುಗಿಯದ ಮಾತು-ಪಿಸುಮಾತುಗಳ ಗರಿಕೆ..
ಇಷ್ಟ-ಕಷ್ಟಗಳ ಸಮ್ಮಿಲನದ ಮೌನ ಕೋರಿಕೆ..

ಕೋಳಿ-ಜಗಳಗಳ ಕಾಳಗದ ಗರಡಿಮನೆ..
ಊಹಿಸಲಾರದ ಕನಸುಗಳ ಅರಮನೆ..
ಮಾನ-ಅನುಮಾನಗಳ ಒಣ ಖಾಲಿಮನೆ..
ಇಬ್ಬರಲೊಬ್ಬರು ಕೈ ಬಿಸಿದಾಗ ದೊಡ್ಡ ಸೆರೆಮನೆ!
ಸುಗ್ಗಿ..

- ಆರ್ ಎಸ್ ಸುಗ್ಗಿ.

08 Nov 2018, 09:43 am

ಪ್ರೇಮಿ

ಕಣ್ಣ್ ರೆಪ್ಪೆ ತೆರೆದರು,ಮುಚ್ಚಿದರು
ದುಮ್ಮೀಕ್ಕಿ ಹರಿಯುತ್ತಿದೆ
ಕಣ್ಣ ಕಂಬನಿಯ ಹನಿ
ಪಯಣದ ಹಾದಿ ಮರೆತು

ಕನಸುಗಳೇ ಕಣ್ಮರೆಯಾಗಿವೆ
ಕಾಣದ ಕಡಲಿನತ್ತ
ಮನಸುಗಳೆ ಮಾಯವಾಗಿದೆ
ನೆನಪುಗಳ ನೋವಲ್ಲಿ

ಆದರೂ ನಗುತ್ತಿರುವೆ
ನನ್ನೆರಡು ಕಣ್ಣ್ ಗಳಿಗೆ
ನೋವಾದಿತು ಎಂದು
ಆ ನನ್ನ ಎರಡು ಕಣ್ಣಗಳು ನೀವೇ
ಅಮ್ಮ ಅಪ್ಪ........

ರಾಜು ಹಾಸನ




ರಾಜು ಹಾಸನ

- ರಾಜು ಹಾಸನ

06 Nov 2018, 11:28 pm

ಉಸಿರನುಳಿಸು..

ನಾ ಬಣ್ಣಿಸಲಾರೆ ಹೆಣ್ಣೇ
ನಿನ್ನ ಮೊನಚು ಕಂಗಳ ನೋಟವ,
ನುರಿತ ಯೋಧನೊಬ್ಬ ಹಿರಿದು
ಬೀಸಿದಂತಿದೆ ತನ್ನ ಖಡ್ಗವ!
ನೋಟದ ಇರಿತಕೆ ಗಾಯಗೊಂಡು
ಮರುಗಿ ಒರಗಿದೆ ಹೃದಯವು,
ಇನಿತು ಕರುಣೆ ತೋರು ಚೆಲುವೆ,
ಹನಿ ಪ್ರೀತಿಯನುಣಿಸಿ, ಒಲವ ಹನಿಸಿ
ಉಳಿಸು ನನ್ನೀ ಉಸಿರನು!

- ಶ್ರೀಗೋ.

06 Nov 2018, 08:44 am

ನಿದ್ದೆ ಬರ್ತಾ ಇಲ್ಲಾ

ನಿದ್ದೆ ಬರ್ತಾ ಇಲ್ಲ ಯಾಕೋ ನಿದ್ದೆ ಬರ್ತಾ ಇಲ್ಲಾ
ಚಿಂತಿಲ್ಲಾ ಕನಸಿನ ಕ್ರಾಂತಿ ಇಲ್ಲಾ
ಆದರು ಯಾಕೋ ನಿದ್ರೆ ಬರ್ತಾ ಇಲ್ಲಾ
ನಿದ್ರಾ ದೇವತೆ ನೀ ಬಂದಾಗ ಎಚ್ಚರ ಜೀವನದಲ್ಲಿ ಅಗೋದೇ ಇಲ್ಲಾ....

ಗೊತ್ತು ಗುರಿ ಇಲ್ಲದ ಜಾಗವನ್ನು ನೋಡಲು ಅವಕಾಶ ನೀನು ಕೊಡುವದಿಲ್ಲ
ನೀ ಬರುವ ದಾರಿಯಲ್ಲಿ ಯಾವದೇ ಅಡೆತಡೆ ಇರುವದಿಲ್ಲಾ
ನೀ ಬಂದಾಗ ಮಾತ್ರಾ ನಾವು ನಿನ್ನ ಗುಲಾಮರಾಗಿ ಬಿಡುತ್ತೇವೆಲ್ಲಾ...

ಕೋಪವಿಲ್ಲಾ ತಾಪವಿಲ್ಲಾ ನಿನ್ನ ಮೇಲೆ ನಿದ್ರಾ ದೇವತೆ ಯಾಕೆ ನಿನ್ನ ಕರೆದರು ಬರ್ತಾ ಇಲ್ಲಾ
ರಾತ್ರಿ ಕಳೆದು ಸೂರ್ಯ ಹೊಟ್ಟುವದ್ರೋಳಗೆ ಜಾಗ ಖಾಲಿ ಮಾಡಿಬಿಡ್ತಿಲ್ಲಾ
ಬಂದ್ರು ಕುಡಾ ಕಾಯಂ ವಾಸಸ್ಥಳ ಇಲ್ಲಿ ನಿನಗಿಲ್ಲಾ....

ಬಿದ್ದ ಕನಸುಗಳು ನನಸಾಗುವದ್ರೋಳಗ
ಎಚ್ಚರವ ಮಾಡಿ ಮತ್ತೆ ಮತ್ತೆ ಮಾಯವಗತಿಲ್ಲಾ
ಕನಸು ನನಸ ಆದಾಗ ನಾವುಗಳೇ ಇಲ್ಲಿ ಇರಲು ನೀ ಬಿಡುವದಿಲ್ಲಾ
ಯಾಕ ಹಿಂಗ ಮಾಡ್ತಿ ಹಗಲೆಲ್ಲಾ......

ನಿದ್ದೆ ಬರ್ತಾ ಇಲ್ಲಾ ಯಾಕೋ ನಿದ್ದೆ ಬರ್ತಾ ಇಲ್ಲಾ
ನಿದ್ದೆ ಬಂದಾದ ಮೇಲೆ ಎಚ್ಚರ ಅಗೋದೇ ಇಲ್ಲಾ....

- ishwar

06 Nov 2018, 01:34 am

ನನ್ನ ಚೆಲುವೆ

ಆಚೆಯಾ ಊರಾಗ,
ಅಲ್ಲಿರುವೆ ನೀ ಚೆಲುವೆ..
ಮಾತಾಡೋಣೆಂದರೆ ಮನೆ ದೂರ...!
ಮಾತಾಡೋಣೆಂದರೆ ಮನೆ ದೂರ ಇರಲಿ ಚಿನ್ನ..
ಮನಸಿನ ಮನೆ ಮಾತ್ರ ಬಲು ಹತ್ತಿರ...!!

ಗೆಜ್ಜೆಯ ಹಾಕೊಂಡು,
ಹೆಜ್ಜೆಯ ಹಾಕುತ್ತಾ..
ಸಜ್ಜಾಗಿ ಬರುತೀದಿ ಕನಸಿನಲಿ...!
ಸಜ್ಜಾಗಿ ಬರುತೀದಿ ಕನಸಿನಲಿ ನನ್ನ ಚೆಲುವೆ..
ಕುದ್ದಾಗಿ ಬರಬಾರ್ದೆ ಮನಸಿನಲಿ...!!

- S Anju Doddmani

05 Nov 2018, 11:22 pm

ಹನಿಗಳು

ನಿನ್ನ ಕಂಗಳ ಚೂರಿ ಇರಿತಕೆ
ಹೃದಯ ಗಾಯ ಆಗಿದೆ..
ಅದನು ಮರೆತು ಮುಂದೆ ನಡೆಯಲು
ಮದ್ದು ಈಗ ಎಲ್ಲಿದೆ ?!
***
ಅವಳ ಕಣ್ಣೊಳಗೆ
ಸದಾ ನೀರಾಗಿ
ಇದ್ದು ಬಿಡಲೆಂದು ಇಳಿದೆ..
ಕಣ್ ಮುಚ್ಚಿದಳು..
ಸುಮ್ಮನೇ ನೆಲಕ್ಕಿಳಿದೆ..
***
ಮಳೆ ಬೀಳುವ ಈ ಸಂಜೆ
ಮೌನವಾಗದಿರು ಗೆಳತಿ
ಹನಿ ಹನಿಗಳು ಹೇಳುತ್ತಿವೆ
ಮೋಡದ ವ್ಯಥೆಯ..

- ಶ್ರೀಗೋ.

05 Nov 2018, 10:34 pm

#ಮಾತು ಮೌನದ ಸೆರಗಿನಲಿ

ಮಾತು ಮೌನದ‌ ಸೆರಗಿನಂಚಲಿ
ಕಟ್ಟಿಟ್ಟ ಪುಡಿಗಾಸಿನಂತಾಗಿಬಿಟ್ಟಿದೆ
ಉಸಿರಾಡಲು ಪಾಪ ತುಸುವೂ
ಸ್ವತಂತ್ರವಿರದೇ ಕಷ್ಟವಾಗಿರಬೇಕು

ಜೀವ ಬಾಯಿಗೆ ಬಂದು
ಉಸಿರು ನಿಂತಂತಾಗಿ
ಮೈಯೆಲ್ಲ ತಣ್ಣಗೆ ಕೊರೆಯುತಿರುವಂತಿದೆ
ಜೀವ ಉಳಿಸಿಕೊಳ್ಳಲು ಹಾತೊರೆಯುತಿದೆ

ಹಿಂದೊಮ್ಮೆ ರಾಜನಂತೆ ಮೆರೆದು
ಮನದ ರಾಜ್ಯದಲ್ಲೆಲ್ಲ ಠೀವಿಯಿಂದ
ಸಂಕೋಚ ಸಂಕೋಲೆಗಳೇ ಇರದೆ
ಬದುಕಿದವನಿಗೆ ಸಂಕಟವಾಗಿರಲೇಬೇಕು

ಅದಕೂ ಬಿಡುಗಡೆ ಪಡೆಯುವ ಆತುರ
ನನಗೂ ಆ ಚತುರನ ಸಂಧಿಸುವ ಅವಸರ
ಬಿಡುಗಡೆಯ ದೊರಕಿಸಿ ಅವನ ರಾಜ್ಯಭಾರವ
ನನ್ನೊಳಗೂ ಕಂಡು ಕುಣಿದು ಕುಪ್ಪಳಿಸುವಾಸೆ

ಬಂಧಿಯಾಗಿಸಿ ಮಾತನು ನಿರ್ಭಂದಿಸಿ
ತನ್ನೊಳಗೆ ಗೌಣವಾಗಿಸಿ ನಿಂತಿರುವ
ಘಟಾನುಘಟಿ ಮೌನದ ಹಿಂದೆ ಅಲೆಯುತಿರುವೆ
ಅಮ್ಮನ ಸೆರಗಿನಂಚಿನ ಪುಡಿಗಾಸಿಗೆ ಅಲೆವ ಮಗುವಿನಾಗೆ

- ಶ್ರೀಕಾವ್ಯ

05 Nov 2018, 05:38 am

ಚದುರಂಗ

ಪ್ರೀತಿ,ಕರುಣೆ,ಸ್ನೇಹ,
ಸಂಬಂಧಗಳ ಬಳ್ಳಿಯಲ್ಲಿ
ಆಸೆ, ಅಂತಸ್ತು,ಮೋಹ
ಜೀವನದ ಬಂಡಿಯಲ್ಲಿ
ಕನಸು ಕಣ್ಣಗಳಲ್ಲಿ
ನೆನಪುಗಳು ಮನಸಲ್ಲಿ
ಪ್ರಾಣ ಗಾಳಿಯ ಅಲೆಯಲ್ಲಿ
ಸತ್ತ ದೇಹ ಮಣ್ಣಲ್ಲಿ
ಹುಟ್ಟು ದೇವರ ಮಡಿಲಲ್ಲಿ
ಮರಣ ಭೂತಾಯಿಯ ಮಡಿಲಲ್ಲಿ
ಇಷ್ಟೆ ಜೀವನ

ರಾಜು ಹಾಸನ

- ರಾಜು ಹಾಸನ

04 Nov 2018, 05:04 pm

ರೂಪದರ್ಶಿ

ಆ ತಿಳಿ
ನಗುವ ಮೊಗದಲ್ಲಿ,
ಸಮುದ್ರದ
ಅಲೆಗಳು ರಾಚಲಿ.
ಈ ಖಾಲಿ
ವೇದನೆಯ ಮಠದಲ್ಲಿ,
ನೀನಾಗು ಸ್ವರ
ಸಾಂಗತ್ಯ ನನ್ನಲಿ.
ಈ ಬಾಳ
ಪುಸ್ತಕದ ಪುಟದಲಿ,
ನೂರೆಂಟು ಸಾಲು
ನಿನ್ನದೇ ಜೊತೆಯಲಿ.
ಮಿನುಗೋ
ನಿನ್ನ ಕಣ್ಣಲ್ಲಿ,
ಸ್ಥಾಯಿ ಮಿಂಚು
ಅಬ್ಬರಿಸಿ ನಿಲ್ಲಲಿ.
ರೂಪದರ್ಶಿ
ನೀ ಹೊಳಪಲಿ,
ಹೊಳೆ ಹೊಳೆದು
ನಿಲ್ಲು ನೀ ಈ ಜಗದಲ್ಲಿ.

- vasu

03 Nov 2018, 08:07 am

ಕನ್ನಡದ ಕೂಳಲು

ನಾ ತಂದೆ ನಿನಗೆಂದೆ ಚಂದನದ ಕೊಳಲು
ತುಂಬದರ ಒಳಗೆಲ್ಲ ಕನ್ನಡದ ಉಸಿರು

ಮೈದುಂಬಿಕೊ ಕನ್ನಡವ ಕರುನಾಡಿನಿಂದ
ಅದನ್ನೆಲ್ಲ ನೀನೂದಿ ಕವಿಯಾಗೊ ಕಂದ

ಅಡಿಗಡಿಗೂ ಹೊಮ್ಮುತ ಕನ್ನಡದ ಹೊನಲು
ಘಜಿ೯ಸಲಿ ಕವಿವಾಣಿ ನೀನೂದುತಿರಲು

ಸಪ್ತಸ್ವರಗಳಲಿ ಝೇಂಕರಿಸಿ ಮಧುರ ತರಂಗ
ಸ್ವಾಭಿಮಾನದಲಿ ನೀನೂದು ಕೊಳಲಂತರಂಗ

ಕರುನಾಡ ನರನಾಡಿ ಕೇಳಿ ಕಲರವಕೆ
ಕಂಪಿಸಲು ನೀನೂದು ಕೊಳಲ ಕಣ ಕಣಕೆ

ಬಾನಂಗಳದಿ ಪ್ರತಿಧ್ವನಿಸಿ ವೈಭವದ ಕಂಪು
ನೀನೂದುತಿರೆ ನಭದ ಮೈ ಹಳದಿ ಕೆಂಪು

ಸುಧೆಯಂತ ಸದ್ದಿನಲ್ಲಿ ಕರುನಾಡ ಬೆಳಗು
ಸರ್ವಸ್ವವನ್ನೇ ಊದಿ ಕೊಳಲೊಳಗೆ ಮೊಳಗು

ನಿಲ್ಲಿಸದಿರು ಕಂದ ಕನ್ನಡ ಗೆಲ್ಲುವವರೆಗು
ನೀನುಡಿಸು ನಿನ್ನುಸಿರು ನಿಲ್ಲುವವರೆಗು..

※ ಕವಿ ಶ್ರೀವತ್ಸ ※

- ಶ್ರೀವತ್ಸ

02 Nov 2018, 11:27 pm