Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮುತ್ತಿನ ಮನೆ

ಮುತ್ತಿನ ಮನೆಯ ಉಪ್ಪರಿಗೆಯ ಮೇಲೆ
ಸಂಜೆ ತೂಗುತ್ತಿತ್ತು ಒಂದು ತೂಗುದೀಪ!!
ಹಿತ್ತಲ ತುಂಬೆಲ್ಲ ಚಿನ್ನದ ಬೆಳಕ ಚೆಲ್ಲಿ
ಸಣ್ಣಗೆ ಉರಿಯುತ್ತತ್ತು ಪುಟ್ಟ ದೀಪ!!

ಮುತ್ತಿನ ಜಗುಲಿಯಲಿ ಸುತ್ತಲು ಜನ ಇದ್ದು
ಕಾಯ ಬೀಸಿ ಆಡುತ್ತಿದ್ದರು ಪಗಡೆಯಾಟ!!
ನಕ್ಕು ನಗುತಿರುವ ಪುಟ್ಟ ಮೊಮ್ಮಕ್ಕಳಿಗೆ
ಅಜ್ಜಿ ಇಡುತಿದ್ದಳು ಕೈ ತುತ್ತಿನ ಊಟ!!

ಮುತ್ತಿನ ಅಂಗಳಕೆ ಚಿತ್ತಾರದ ರಂಗೋಲಿ
ತಿದ್ದಿ ತೀಡಿದ ಬಣ್ಣ ಬಲು ಚೆಂದವಣ್ಣ!!
ಕೈಯ ಬಳೆಗಳ ನಾದ ಹಾಡುತಿರಲು ಹಾಡ
ಕಾಲಗೆಜ್ಜೆಯ ಸದ್ದು ಕುಣಿದಿಹುದು ನೋಡ!!

ಮುತ್ತಿನ ಕಂಬಕ್ಕೆ ಮೆತ್ತಿರುವ ಚಿತ್ತಾರ
ಎತ್ತಿ ಹಿಡಿದಿಹುದು ಬಲು ಎತ್ತರದ ಚಪ್ಪರ!!
ಎತ್ತ ನೂಡಿದರತ್ತ ಸಂತಸದ ಝೆಂಕಾರ
ಹೂವಂತೆ ಹಣ್ಣಂತೆ ಎಲ್ಲೆಲ್ಲೂ ಶೃಂಗಾರ!!

- ಪಿ.ಜಿ.ಜ್ಯೋತಿ

23 Nov 2018, 02:22 pm

ಮುನಿಸು

ಮುನಿಸು ಕದಡಿತು ಮನವ
ಬತ್ತಿತು ಪ್ರೀತಿಯ ಕುಂಭವ
ಹಲವು ಬದಲಾವಣೆ ಮಾಡಿಕೊಂಡೆ ನಿನಗಾಗಿ
ಮುನಿಸು ಜೀವನದ ಸೊಗಸ ಮುದುಡಿತು
ಇದೇನು ಹೊಸತಲ್ಲ ಬಿಡಿ ಎಂದು ಹೇಳಿ ಹೊರಟೆ
ಆದರೆ ಹೆಚ್ಚಾಗಿ ಹೊಂದಿಕೊಂಡು ನಡೆದು ಬಂದ ಹಾದಿಯನ್ನು ಆಗಾಗ ಮೆಲುಕು ಹಾಕುತ್ತಾ
ಬಿಡು ಈ ಮುನಿಸು ಕಾಣೋಣ ಸುಂದರ ಸ್ನೇಹದ ಸಿಹಿಯ

- ರಘು

23 Nov 2018, 10:17 am

ಮುನಿಸೇಕೆ ಮಗುವಂತೆ

ಮುನಿಸೇಕೆ ಮಗುವಂತೆ
ಮುಧವಾಗಿ ಬಳಿ ಬಾರೆಯಾ
ಅತಿಯಾಗಿ ಸಖಿ ನೀನು
ಕೊಡಬೇಡ ಬಿಸಿ ಭಾದೆಯಾ

ಮೌನ ಸಾಕು ಏನಾರ ಹೇಳು ಜೀವ
ಯಾಕೆ ಹೀಗೆ ತುಂಬಾನೆ ಕಾಡೋ ಭಾವ

ತೊಳಲಾಡಿದೇ ನನ್ನಾ ಎದೆ
ಅರಿವಿಲ್ಲವೇ ನಿನಗೇ ಇದೂ

ಮುನಿಸೇಕೆ ಮಗುವಂತೆ
ಮುಧವಾಗಿ ಬಳಿ ಬಾರೆಯಾ


ಪೂರ್ತಿಯಾಗಿ ನೀನು
ಸಂತೃಪ್ತ ಇಲ್ಲವೇನು
ಈ ನನ್ನ ಪ್ರೀತಿ ನಿಂಗೆ ಭಾರವೇ

ಕಣ್ಣ ಮುಂದೆ ನೀನು
ಬಾ ನಿಂತು ಹೇಳು ಸಾಕು
ನನ ಆಸೇ ಏಕೆ ಭೂದಿ ಮಾಡುವೇ

ಬೆಧರುವ ತರದಿ ಎದೆಯಲಿ ನೋವು
ಒಲವಿದು ಘೋರ ಯಾಕಿಥರ

ಹುಸಿ ಆಡದೇ ನುಡಿ ಗೆಳತಿಯೇ
ಬಳಿ ಧಾವಿಸೀ...ಕೊಡು ಖುಷಿಯನೂ


ಸಂಗಾತ ನೀನು ಇರದೆ
ಸಂತೋಷ ಇಲ್ಲ ಮನದಿ
ಮುಂದೇಗೆ ಹೇಳು ನಲ್ಲೆ ಸಾಗೋದು

ಇಷ್ಟು ಕೋಪವೇಕೆ
ನೀ ನಿಂತೆ ದೂರ ಯಾಕೆ
ಒಬ್ಬಂಟಿ ನಾನು ಏನು ಮಾಡೋದು

ಪ್ರೀತಿಸ ಬೇಕು. ಪ್ರೇಮಿಸೋ ಮನವ
ಆದರ ತೋರಿ ಆಲಂಗಿಸು

ದಿನಕಾಯುವೇ ನಿನದಾರಿಯ
ಯುಗದಂತಿದೇ...ಕ್ಷಣ ಓ ಪ್ರಿಯೇ

ಅತಿಯಾಗಿ ಸಖಿ ನೀನು
ಕೊಡಬೇಡ ಬೀಸಿ ಭಾದೆಯಾ

#################
"ಮಧುಕೇಶವ್.ಎಂ.ಗಡೀಹಳ್ಳಿ"

- Rapper Boy Madhukeshav

22 Nov 2018, 09:23 pm

ತೊಟ್ಟಿಲು ತೂಗಲು

ತೊಟ್ಟಿಲೊಂದು ಅತ್ತಿತ್ತ ತೂಗಲು
ಮನೆ ತುಂಬ ಕಂದ ನಡೆದಾಡಲು
ಎಲ್ಲೆಲ್ಲೂ ನಗುವೇ ತುಂಬಿದೆ
ಮನೆ ಮನದಾಗ ಸಂತಸ ಉಕ್ಕಿದೆ

ನೀ ಮಡಿಲ ಸೇರುವ ಮುನ್ನ
ಈ ಜೀವಕೆ ಸಾವೇ ಚೆನ್ನ
ಬಂಜೆ ಎಂದು ಕಾಡಿದರೆಲ್ಲ ನನ್ನ
ಮನೆಯವರಿಗೂ ಬೇಡವಾಗಿದ್ದೆನೊ ಚಿನ್ನ

ನನ್ನದೋ ಬರಡು ಭೂಮಿಯ ಮನ
ನಿನ್ನಪ್ಪನ ಎದೆಯಲಿ ಬರಿಯ ಮೌನ
ನಿನ್ನಜ್ಜಿ ಅಜ್ಜನ ಕಣ್ಣಲಿ ನೋವಿನ ಯಾನ
ಎಲ್ಲರೊಳಗೂ ನಿನಗಾಗಿಯೇ ಧ್ಯಾನ

ಎದುರು ಮನೆಯ ಕಂದನ ನೋಡಿ
ಬೈಗುಳ ತಿಂದಿದ್ದೆ ಮುದ್ದು ಮಾಡಿ
ಖಾಲಿ ಖಾಲಿ ಮಡಿಲು ಕಾಡಿ
ಹರಿಸಿದ್ದೆ ಮುಗಿಯದ ಕಣ್ಣೀರ ಕೋಡಿ

ನೀ ಸೇರಿದೆ ವರದಂತೆ ಮಡಿಲಿಗೆ
ಹೊತ್ತು ತಂದೆ ತಾಯ್ತನದ ಕೊಡುಗೆ
ಸುಖ ಶಾಂತಿ ನೆಮ್ಮದಿ ಎಲ್ಲರ ಪಾಲಿಗೆ
ಕಾಯುವೆ ಬಿಸಿಯುಸಿರು ತಾಗದಂತೆ ನಿನಗೆ

- ಶ್ರೀಕಾವ್ಯ

21 Nov 2018, 05:59 pm

ನಾನಿನ್ನೂ ಜೀವ ಹಿಡಿದಿರುವೆ.

ನೂವುಗಳ ಸಾಲಿನಲ್ಲಿ
ಸತ್ತು ಬದುಕುತ್ತಿರುವೆ.
ನೆತ್ತರದ ಹನಿ ಸುರಿಸಿ
ಕತ್ತಲಿನ ಕೋಣೆಯಲ್ಲಿರುವೆ.
ಒಂದಲ್ಲ ಒಂದು ದಿನ
ನೀ ಬೆಳಕಾಗಿ ಬರುವೆ ಎಂದು.!

ನಿನ್ನ ನಲಿವಿನಲ್ಲಿ
ನಾ ಸ್ವರ್ಗ ಕಂಡಿರುವೆ.
ಅಂದದ ಅರಮನೆಯ ಕಟ್ಟಿ
ಒಬ್ಬನೇ ನಾನಿಲ್ಲಿ ಕೂತಿರುವೆ.
ಒಂದಲ್ಲ ಒಂದು ದಿನ
ನೀ ಬಂದೇ ಬರುವೆ ಎಂದು.!

ತಲ್ಲಣಗೊಂಡಿರುವ ನನ್ನೀ
ಮನಸ್ಸಿಗೆ ನಾನೇ ಹೂ ಹಾಸಿರುವೆ.
ಕಸಿವಿಸಿಯ ನೂವ ನುಂಗಿ
ತುಸು ಆಸೆಯ ಬತ್ತಳಿಕೆಯ ಹೆಣೆದಿರುವೆ.
ಒಂದಲ್ಲ ಒಂದು ದಿನ ನೀ
ಜೊತೆಯಾಗುತ್ತಿಯಾ ಎಂಬ ಭರವಸೆಯಿಂದ
ನಾನಿನ್ನೂ ಜೀವ ಹಿಡಿದಿರುವೆ.

- vasu

20 Nov 2018, 10:22 pm

ಅವಳಿಲ್ಲದ ಈ ಕವಿತೆ

ಬಣ್ಣದ ಬದುಕು
ಘಾಸಿಗೊಂಡು ನಿಂತಾಗ
ಗೊತ್ತಿಲ್ಲದೇ ಉದಯಿಸಿದ್ದು
ಅವಳಿಲ್ಲದ ಈ ಕವಿತೆ.
ಚಿನ್ನದ ಗೊಂಬೆ
ಕೈಗೆ ಸಿಗದಾದಾಗ
ಜೋತೆಯಾಗಿ ನಿಂತದ್ದು
ಅವಳಿಲ್ಲದ ಈ ಕವಿತೆ.
ಹುಣ್ಣಿಮೆಯ ಚಂದಿರನು
ನನ್ನಿಂದ ದೂರ ಸರಿದಾಗ
ಬೆಳದಿಂಗಳಾಗಿ ಬಂದದ್ದು
ಅವಳಿಲ್ಲದ ಈ ಕವಿತೆ.
ಕಾಣದ ಕೈಗಳು
ಕತ್ತು ಹಿಸುಕುತ್ತಿದ್ದಾಗ
ಕಸುವ ನೀಡಿದ್ದು
ಅವಳಿಲ್ಲದ ಈ ಕವಿತೆ.
ಕಣ್ಣೀರ ಹನಿ ಕೂಡ
ನನ್ನ ಕೈ ಬಿಟ್ಟು ಹೊಂಟಾಗ
ಸಾವರಿಸಿ ಮತ್ತೆ ಹುರಿದುಂಬಿಸಿದ್ದು
ಅವಳಿಲ್ಲದ ನನ್ನ ಈ ಕವಿತೆ.

ಇಂತಿ ಸ್ನೇಹ ಸಿಂಚನ

- vasu

18 Nov 2018, 11:58 am

ಮೌನದ ಮಡಿಲಿನಲಿ

ಮೌನದ ಮಡಿಲಿನಲಿ
ಮಾತಿಗೆ ಮರಣ ಶಯೈಯ
ಜೋ‌ ಜೋ ಲಾಲಿ

ಮಾತಿರದೆ ಮಾತಾಗದೆ
ಅಳಿಯದುಳಿದ ಭಾವಗಳಿಗೆಲ್ಲ
ಮೌನದ ಜೋ‌ ಜೋ ಲಾಲಿ

ಹೊರಬರದೆ ಹೊರೆಯಾದ
ನೋವಿನ ಮನಕೆ
ತಳಮಳದ ಜೋ ಜೋ ಲಾಲಿ

ಕೊನೆಯಿರದ ಚಿರಾಯುವೆಂದು
ಬೀಗುವ ಕಳವಳಕೆ ಬೇಕಿದೆ
ಬದುಕುಳಿವ ಮಾತಿನ ಜೋ‌ ಜೋ ಲಾಲಿ

- ಶ್ರೀಕಾವ್ಯ

17 Nov 2018, 08:02 pm

ಕಡಲು..

ಕಣ್ಣಿಗೆ ಕಾಣದು..
ಕಡಲ ದಡವು...!
ಕೈಗೆ ಸಿಗದು..
ಕಡಲ ಒಡಲು...!!

ಕಡಲು ಕರುಣಿಸಿದರೆ..
ಪ್ರಕೃತಿಯೇ ಪಾವನ...!
ಕಡಲು ಮುನಿಸಿಕೊಂಡರೆ..
ಪ್ರಪಂಚವೇ ಪ್ರಳಯ...!!

-- ಎಸ್ ಅಂಜು ದೊಡ್ಮನಿ
9741442810

- S Anju Doddmani

16 Nov 2018, 09:30 pm

ನಾನು

ನನ್ನ ಬಣ್ಣ ಸ್ವಲ್ಪ ಕಪ್ಪ,
ನಾನು ಎಂದಿಗೂ ಮಾಡುವುದಿಲ್ಲಾ ತಪ್ಪ,
ದಯಮಾಡಿ ನನ್ನನ್ನ ಒಪ್ಪ,
ಹಾಕಿಸ್ತೀನಿ ಊರತುಂಬೆಲ್ಲ ಹೋಳಿಗೆ ತುಪ್ಪ,,,,

- shridhartalawar

16 Nov 2018, 03:21 pm

ಸ್ವಲ್ಪ ಹರಯ ಸಾಲದಾಗಿದೆ

ಸುಳಿವಿಲ್ಲದೆ ಹೇಗೆ?
ನುಸುಳಿ ಬಂತೋ ಒಲವಮಾಸ
ಬದುಕುಬಯಲೋಳಗೆ
ನಿತ್ಯ ವಸಂತ.!

ಮುಗಿಲಿಲ್ಲದೆ ಹೇಗೆ?
ಸುರಿಯಿತೋ ಸ್ವಾತಿ
ಎದೆಯ ಚಿಪ್ಪಿನೊಳಗೆ ಅಗಣಿತ
ಮುತ್ತುಗಳಿನ್ನು ಜೀವಂತ.!

ಕಣ್ಣಕೊಳದೊಳಗೆ
ನೀ ಹೇಗೆ ಇಳಿದೆ?
ಕಂಡ ಕಂಡ ಕನಸ್ಸುಗಳೆಲ್ಲ
ಕಾಮನಬಿಲ್ಲು.!

ಯಾವ ಮಾಮರದ ಚಿಗುರು
ಸವಿಯಬೇಕು
ಗಡುಸಗುತ್ತಿದೆ ಸೊಲ್ಲು.!

ಸರ್ರನೆ ಬರುವ ಕಾಲವೆ
ನೀ ಬೇಗನೆ ಬಾರದಿರು
ಸ್ವಲ್ಪ ಹರಯ ಸಾಲದಾಗಿದೆ.!

ಅರಿಯದೆ ಬಂದ ಹರಯ
ಏನೋ..! ಒಂಥಾರ ಹಾಯಾಗಿದೆ.!

●○ ಯನವೆ....

- Venkatesh N.

16 Nov 2018, 12:51 pm