Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಿನ್ನ ಮಡಿಲಲ್ಲಿ ನಾ ಕಂಡೆ ತಾಯಿ
ಹಾಲು ಕಡಲ ಆ ಮಮತೆಯ!!
ನಿನ್ನ ವಾತ್ಸಲ್ಯದ ಸವಿಯ ಸವಿದು
ನಾನಾದೆನು ನಿಜ ಮಾನವ!!
ಸಹನೆಯ ಗೋಪುರ ಒಳಗೆ
ನೀ ತಿದ್ದಿ ಬೆಳೆಸಿದ ಬೆಳವಣಿಗೆ!!
ನೀ ತೋರಿದ ಬದುಕಿನ ಮಾರ್ಗ
ನನ್ನ ಬದುಕಿಗೆ ಅದೇ ಸನ್ಮಾರ್ಗ!!
ಈ ಬದುಕಿನ ಪುಟಗಳಲ್ಲಿ
ನಿನ್ನ ಲಾಲಿಯೇ ಮೊದಲ ಬರಹ!!
ಆ ದೇವರ ಕಂಡಿಲ್ಲ ನಾನು
ನಾ ಕೈ ಮುಗಿಯುವ ದೈವ ನೀನು!!
- ಪಿ.ಜಿ.ಜ್ಯೋತಿ
25 Nov 2018, 03:39 pm
ನಿನಗಾಗಿ ನಾ ಬರೆದ ಅಕ್ಷರಗಳು
ಒಂದು ಸುಂದರ ಕವನವಾಯಿತು!!
ನಿನಗಾಗಿ ನಾ ಬರೆದ ಕವನಗಳು
ಒಂದು ಸುಂದರ ಪುಸ್ತಕವಾಯಿತು!!
ನಿನಗಾಗಿ ನಾ ಕಾದು ಕಳೆದ ಕತ್ತಲು
ಒಂದು ಸುಂದರ ಇರುಳಾಯಿತು!!
ನಿನಗಾಗಿ ನಾ ಕಾದು ಕಳೆದ ಇರುಳು
ಒಂದು ಸುಂದರ ಬೆಳದಿಂಗಳಾಯಿತು!!
ನಿನಗಾಗಿ ನಾ ನುಡಿದ ಮಾತು
ಒಂದು ಸುಂದರ ರಾಗವಾಯಿತು!!
ನಿನಗಾಗಿ ನಾ ನುಡಿದ ರಾಗವು
ಒಂದು ಸುಂದರ ಹಾಡಾಯಿತು!!
ನಿನಗಾಗಿ ನಾ ಕಂಡ ಕನಸು
ಒಂದು ಸುಂದರ ಕಥೆಯಾಯಿತು!!
ನಿನಗಾಗಿ ನಾ ಕಂಡ ಕಥೆಯು
ಒಂದು ಸುಂದರ ಬದುಕಾಯಿತು!!
- ಪಿ.ಜಿ.ಜ್ಯೋತಿ
25 Nov 2018, 02:51 pm
ನೂರೆಂಟು ಬಣ್ಣದ
ಗೆಜ್ಜೆಯ ನಾ ತಂದು
ನಿನ್ನ ಅನಂತ ನಗುವ
ನಾ ನೋಡಬೇಕಾಗಿದೆ.
ಹಸಿರು ಬಳಿಯ ತೊಡಿಸಿ
ನಿನ್ನ ಉಸಿರಲಿ ನಾ
ನನ್ನೇ ಮರೆತು ಇಂದು
ನಿನ್ನೊಡನೆ ಬೆರೆಯಬೇಕಾಗಿದೆ.
ಮೂಗುತಿಯ ನತ್ತ ನೀಡಿ
ಒಂದು ಮುತ್ತ ನಾ ಬೇಡಿ
ಹೊತ್ತು ಹೊತ್ತಿಗು ನಿನ್ನೊಡನೆ
ನಾ ಸಮಯ ಕಳೆಯಬೇಕಾಗಿದೆ.
ನನ್ನ ಭಾವನೆಗಳನ್ನೆಲ್ಲ
ಸರಮಾಲೆಯನ್ನಾಗಿ ಪೊಣಿಸಿ
ನಿನ್ನ ಕೊರಳಿಗೆ ನಾ
ಮುತ್ತಿನ ಹಾರವಾಗಬೇಕಾಗಿದೆ.
ನಿನ್ನ ಕಾಲಮಣಿಗಂಟಿನ ಗೆಜ್ಜೆಗೆ
ನನ್ನ ಹೃದಯ ಬಡಿತದ
ಸದ್ದ ನೀಡಿ ಆ ಗೆಜ್ಜೆಯ ನಾದ
ಎಂದೆಂದಿಗೂ ನಾನಾಗಬೇಕಾಗಿದೆ.
ಇಂತಿ,,
ಸ್ನೇಹ ಸಿಂಚನ.
- vasu
25 Nov 2018, 09:27 am
ಹೊಂಬೆಳಕಿನ ತೇರಲ್ಲಿ
ತಂಗಾಳಿಯ ಜೋಕಾಲಿ!!
ಜೀಗಾಟವೋ ಹಾರಾಟವೋ
ನನ್ನ ಮನಸು ಇಲ್ಲ ನನ್ನಲ್ಲಿ!!
ಬದುಕಿನಲ್ಲಿ ನಾ ಜಾರಿ
ಕಳೆದು ಹೋದೆ ಯಾಮಾರಿ!!
ಪ್ರೀತಿ ನಶೆ ನನ್ನಲ್ಲಿ ಇರಲು
ಕನವರಿಕೆಯು ನಿದಿರೆಯಲ್ಲು!!
ಬೆನ್ನ ಹಿಂದೆ ನೀ ಇರಲು
ತಿರುಗದಾದೇ ಇದೇ ಮೊದಲು!!
ಸಣ್ಣದೊಂದು ನೆಪವ ಹೂಡಿ
ಕಣ್ಣ ಮುಂದೆ ಹಾದು ಹೋಗು!!
ನನ್ನ ಇರುಳು ನಿನ್ನ ಹಗಲು
ಜೊತೆಗೆ ಬೆರೆಸಿ ದಿನವ ದೂಡು!!
ಪ್ರೀತಿ ನಶೆಯ ಗುಂಗಿನಲ್ಲಿ
ನೀನು ಬಂದು ನನ್ನ ಸೇರು!!
- ಪಿ.ಜಿ.ಜ್ಯೋತಿ
24 Nov 2018, 09:30 am
ಮನಸಿನ ನೊವು
ಮರೆಯದೆ ಹೊದಾಗ..
ಪ್ರೀತಿಯ ಕನಸು
ನನಸಾಗದೆ ಹೊದಾಗ..
ಜಿವನದ ದಾರಿ
ಕಾಣಿಸದೆ ಹೊದಾಗ..
ಬಯಸಿದ ಪ್ರೇಮ
ಸಿಗದೆ ಹೊದಾಗ..
ಹ್ರುದಯ ಧುಖಃದಿಂದ ಬಿಕ್ಕಿ ಬಿಕ್ಕಿ ಅಳುತಲಿತ್ತು
ಮೌನ ಮಾತದಾಗ....
ಮೌನ ಮಾತದಾಗ....
......HD Dharesh.....
- HD Dharesh
23 Nov 2018, 08:05 pm
ಮರಳಿ ಮರಳಿ ನನ್ನನ್ನು
ಕಾಡಿಹುದು ನಿನ್ನಯ ನೆನಪು!!
ವಿರಹದ ಅಂಚಿನಲ್ಲಿ ಸರಿಯದೇ
ಮರಳಿದ ಸುಂದರ ನೆನಪು!!
ಮೇಣದಂತೆ ತಾ ಕರಗಿದರೂ
ಅಳಿಯದು ಆ ನಿನ್ನ ನೆನಪು!!
ಹೂವಂತೆ ಅರಳಿ ಮನದಲ್ಲಿ
ಗಂಧ ಬೀರುವುದು ನೆನಪು!!
ನೆರಳಿಂದ ದೂರವಾದರೂ
ಮತ್ತೆ ಮರಳುವ ನಿನ್ನ ನೆನಪು!!
ಮಸಣದಲ್ಲಿ ಮಣ್ಣಿನ ಸೇರಿದರೂ
ಅಸುನೀಗದು ನಿನ್ನ ನೆನಪು!!
- ಪಿ.ಜಿ.ಜ್ಯೋತಿ
23 Nov 2018, 06:27 pm
ಹಗಲಿರುಳು ನಿನ್ನ ದಾರಿ
ಕಾಯತಿದ್ದ ನನ್ನ ಕಣ್ಣುಗಳಿಗೆ...
ಪ್ರತಿ ಕ್ಷಣವೂ ನಿನ್ನ ನೋಡ
ಬಯಸುತಿದ್ದ ನನ್ನ ಕಣ್ಣುಗಳಿಗೆ...
ಸುತ್ತ ನಿನ್ನ ಸುಳಿವಿಲ್ಲದಿದ್ದರೂ
ಹುಡುಕುತಿದ್ದ ನನ್ನ ಕಣ್ಣುಗಳಿಗೆ...
ಒಮ್ಮೆ ನಿನ್ನ ಕಂಡೊಡನೆ
ಸಂಭ್ರಮಿಸುತ್ತಿದ್ದ ನನ್ನ ಕಣ್ಣುಗಳಿಗೆ...
ಕೊನೆಯದಾಗಿ ನೀ ಕೊಟ್ಟ ಕಾಣಿಕೆ
ಮರೆಯದಂತ ಈ ಕಣ್ಣೀರ ಕಾಣಿಕೆ...
- ಪಿ.ಜಿ.ಜ್ಯೋತಿ
23 Nov 2018, 05:54 pm
ನಿಂತ ನೀರು ಕೊಳವಾಯ್ತು
ಹಂಸಕ್ಕೆ ಒಂದು ನೆಲೆಯಾಯ್ತು!!
ಕೊಳದ ನೀರು ಕೆಸರಾಗಿ
ಕಮಲಕ್ಕೆ ತವರು ಮನೆಯಾಯ್ತು!!
ನೀ ಇರುವ ಊರು ನಿನದಾಯ್ತು
ನಿನಗೆ ದೊರೆತ ವರವಾಯ್ತು!!
ಬಂದು ಬಳಗವೆಲ್ಲ ಇರಲು
ಒಂಟಿ ತನವು ಮರೆಯಾಯ್ತು!!
ಹರಿವ ನೀರು ನದಿಯಾಯ್ತು
ಹರಿದು ಕಡಲ ಸೆರೆಯಾಯ್ತು!!
ಕಡಲ ಸೇರಿ ಉಪ್ಪಾಗಿ
ದಡವ ಬಡಿವ ಅಲೆಯಾಯ್ತು!!
- ಪಿ.ಜಿ.ಜ್ಯೋತಿ
23 Nov 2018, 05:41 pm
ಚಂಚಲ ಮನಸಿನ ಸಂಚಾರ
ಸಾಗದು ಎಂದಿಗೂ ಬಹುದೂರ!!
ಹೆಜ್ಜೆ ಹೆಜ್ಜೆಗೂ ಸಲ್ಲದ ವಿಚಾರ
ಇದುವೇ ಮುತ್ತಿದ ಅಂದಕಾರ!!
ನಿದಿರೆಯಲಿದ್ದರೂ ಕನಸಿನ ಎಚ್ಚರ
ಕೊಂಡೊಯ್ಯುವುದು ಬಹು ದೂರ!!
ಹಗಲಲಿ ಕಲ್ಪನೆ ಕಣ್ಣಿಗೆ ಕಾತುರ
ಮಿಂಚುತಲಿರುವುದೇ ಆಕಾರ!!
ನೆನಪಿನ ಅಂಚಲಿ ಮನಸಿನ ಹತ್ತಿರ
ಸುಳಿದಾಡುವುದೇ ಸಮಾಚಾರ!!
ಚಂಚಲ ಮನಸಿನ ಸಾವಿರ ಪ್ರಶ್ನೆಗೆ
ದೊರಕದೇ ಉಳಿದಿದೆ ಪರಿಹಾರ!!
- ಪಿ.ಜಿ.ಜ್ಯೋತಿ
23 Nov 2018, 05:18 pm
ನಿನ್ನಯ ಮುಂಗುರುಳಿಗಾಗಿ
ಬಯಸಿದೆ ನನ್ನಯ ಬೆರಳು!!
ಆ ಮುಂಗುರುಳು ಸರಿದಾಗ
ನಾ ಕಂಡೆನು ಬೆಳದಿಂಗಳು!!
ಮುಂಗುರುಳ ಸುಳಿಯಲ್ಲಿ
ಮನದಾಸೆ ಸಿಲುಕಿಹುದು!!
ಏಕಾಂತದ ನನ್ನ ಮನವು
ಇಂದು ಚಂಚಲ ಆಗಿಹುದು!!
ಸಂಚಾರಿಯ ಬದುಕಿಗೆ ಒಂದು
ನಿಲುವು ಆ ಮುಂಗುರುಳು!!
ಸುಂದರ ಬಯಕೆಗೆ ಕೊಂಡಿ
ಬೆಸೆದಿಹುದು ಆ ಮುಂಗುರುಳು!!
- ಪಿ.ಜಿ.ಜ್ಯೋತಿ
23 Nov 2018, 02:53 pm