Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

*ಮಲೆನಾಡ ಬೆಡಗಿ.......*


*ಮಲೆನಾಡ ಬೆಡಗಿ.......*

*ಮಲೆನಾಡ ಬೆಡಗಿಯ*
*ಮಲ್ಲಿಗೆಯ ಬಣ್ಣವು.*
*ನೋಡುವುದಕ್ಕೆ ಇವಳು,*
*ತುಂಬಾ ಸರಳವು.*
*ಬಟ್ಟಲು ಕಂಗಳಲ್ಲಿಯು,*

*ಕಾಂತಿಯು ಮೂಡಲು.*
*ಮುಂಗುರುಳ ಸಂದಿಯಲ್ಲು,* *ಜೋತಾಡುವ ಕಿವಿಯೋಲೆಗಳು.*
*ಗುಳಿ ಕೆನ್ನೆಗಳ ಮೇಲಲ್ಲು*
*ನಾಚಿಕೆಯು ಮನೆಮಾಡಿರುವದು.*
*ಕೆಂದುಟಿಯ ಅಂಚಿನಲ್ಲು,*
*ಮಂದಹಾಸ ಮೂಡುವ.*
*ಮೃದು ಮನಸ್ಸಿನಲ್ಲು,*
*ಇವಳಿಗ್ಯಾರು ಸಮಇಲ್ಲವೇ......*
*✍️ವಿ.ಎಸ್ಸ್.ಎಚ್ಚ್.....*

- v.s.h

29 Jun 2025, 03:04 am

ಭಾರತರತ್ನ ಅಂಬೇಡ್ಕರ್ ಸಾಹೇಬರು...

ಬಡತನದ ಕುಲುಮೆಯಲ್ಲಿ ಬೆಂದು
ವಿದ್ಯೆಯ ಜ್ಞಾನ ದೇಗುಲದಲ್ಲಿ ಮಿಂದು
ಐಕ್ಯತೆ ಸೌಹಾರ್ದತೆ ವಿಧೇಯತೆ
ಸಮಪಾಲು ಸಮಬಾಳು ಸಮಾನತೆಯ
ಇದೋ ಬಾಬಾ ಸಾಹೇಬರಿಗೆ ನಮನ.

ಕಷ್ಟ ನೋವುಗಳ ಮಧ್ಯದಲ್ಲಿ
ಹರಿಯುವ ನದಿಯಂತೆ
ಸ್ವಚ್ಛಂದವಾಗಿ ಚಲಿಸುವಿಕೆ ಅಲ್ಲಿ ಮುನ್ನುಗ್ಗುವನಂತಹ
ಇದೋ ಬಾಬಾ ಸಾಹೇಬರಿಗೆ ನಮನ.

ಸಮಾಜದ ಸೇವೆಗೆ ಮುಂದಾಗಿ
ಜೀವನವ ಮುಡಿಪಾಗಿಸಿದ
ದೀನ ದಲಿತರ ಸಿಂಧು ವಾಗಿ
ಭಾರತಕ್ಕೆ ರತ್ನವೆನಿಸಿದ
ಇದೋ ಬಾಬಾ ಸಾಹೇಬರಿಗೆ ನಮನ.

ಬರಹದ ಹರಿತದಿಂದ
ಶೋಷಿತ ವರ್ಗಗಳ ಕಣ್ಮಣಿಯಾಗಿ
ಜ್ಞಾನದ ಖಣಿಯಾಗಿರುವ
ಬ್ರಹ್ಮನ ಯುಕ್ತಿಯ ಹೆಚ್ಚಿಸಿದ
ಇದೋ ಬಾಬಾ ಸಾಹೇಬರಿಗೆ ನಮನ.

ಛಲವೆಂಬ ಹೂಲವನ್ನು ಹೊತ್ತು
ಬುದ್ದಿಬಲವೆಂಬ ಬೀಜವನ್ನು ಭಿತ್ತಿ
ಫಸಲಿನ ಶಕ್ತಿಯಲ್ಲಿ ಭಲ ಭೀಮನಾಗಿ
ಸಂವಿಧಾನದ ಶಿಲ್ಪಿಯಾಗಿರುವ
ಇದೋ ಬಾಬಾ ಸಾಹೇಬರಿಗೆ ನಮನ.

ದುಃಖದುನ್ಮಾನಗಳನ್ನು ಸಹಿಸುತ್ತಾ
ಅವಮಾನವನ್ನು ಹೆದರಿಸುತ್ತಾ
ತಾರತಮ್ಯವನ್ನು ಬಿಡಿಸುತ್ತಾ
ಸಮಾನತೆಯ ಹರಿಕಾರನಾಗಿರುವ
ಇದೋ ಬಾಬಾ ಸಾಹೇಬರಿಗೆ ನಮನ.

ಹೆಚ್ಚು ಪದವಿಯನ್ನು ಪಡೆದುಕೊಂಡು
ಅಪಾರ ಜ್ಞಾನವ ತುಂಬಿಕೊಂಡು
ಭಾರತೀಯರ ದಿವ್ಯ ಶಕ್ತಿಯಾಗಿ
ಶ್ರೇಷ್ಠ ವಿದ್ಯಾವಂತ ರೇನಿಸಿಕೊಂಡ
ಇದೋ ಬಾಬಾ ಸಾಹೇಬರಿಗೆ ನಮನ.

ನ್ಯಾಯವೆಂಬ ಪದವಿಯ ಪಡೆದು
ಜನರ ಹಿತಕ್ಕೆ ಹಗಲಿರುಳು ಶ್ರಮಿಸುತಾ
ತಾಯಿ ರೂಪದೀ ಬೆಳಕನ್ನು ಚೆಲ್ಲುವ
ಸ್ವಚ್ಛ ಮನಸ್ಸಿನ ಭವ್ಯ ಪುರುಷರಾದ
ಇದೋ ಬಾಬಾ ಸಾಹೇಬರಿಗೆ ನಮನ.

✍️ವಿ.ಎಸ್ಸ್.ಎಚ್ಚ್.....
ಪ್ರಾ.ಆ.ಸು.ಅಧಿಕಾರಿ.

- v.s.h

29 Jun 2025, 03:02 am

*ಬಣ್ಣವು.......*

*ಎಲ್ಲೆಡೆ ಬರೀ ಬಣ್ಣಗಳದೇ*
*ಮಾತು ಹೋಗುತ್ತಿದೆ..,*
*ಹೋಳಿಹಬ್ಬದ ಗಮ್ಮತ್ತು.,*
*ಈ ಬಣ್ಣಗಳ ನಾಡಿರದಿರೆ.,*
*ಈ ಜಗವು ಏನಾಗುತ್ತಿತ್ತು ಗೆಳೆತಿ.?"*
*ನಸುನಗುತ ಪ್ರಶ್ನಿಸಿದೆ ನಾನು....!*

*ನಕ್ಕು ನುಡಿದ ನನ್ನ ಗೆಳತಿ..*
*ಬರೀ ಸುಣ್ಣದಿಂದಲೇ..*
*ಕಣ್ಣು ತುಂಬುತ್ತಿತ್ತು ಗೆಳತಿ*
*ಕನ್ನಿಕೆಯರೆಲ್ಲಾ ಮನ್ನಣೆ*
*ಇರದೇ ಸೊರಗುತ್ತಿದ್ದರು..*
*ಕಾಜಾಣದ ಕುಹೂ...*
*ಕುಹೂ... ಬರಡಾಗುತ್ತಿತ್ತು.*
*ವಸಂತ ಮಾಸವು ಸಂತನಾಗಿ*
*ಅಡವಿಯನ್ನು ಸೇರುತ್ತಿತ್ತು....!!*

*ಬಣ್ಣದಿಂದಲೇ ಜಗವನ್ನು*
*ನೋಡಲು ಆನಂದ*
*ಬಣ್ಣದಿಂದಲೇ ಜಗದ*
*ನೋಟಕ್ಕೆ ಸನ್ಮಾನ*
*ಇವುಗಳನ್ನು ನೋಡುವ*
*ಕಣ್ಣುಗಳಿಗೆ ತಂಪನ*
*ಅದರಿಂದಲೇ ಎಲ್ಲೆಡೆ*
*ಹರಡುವುದು ಹೃನ್ಮನ ತಣಿಸುವ ಸುಮಧುರದ ಸವಿಗಾನ....!!!*
??????
??????

*✍️ವಿ.ಎಸ್ಸ್.ಎಚ್ಚ.....*

- v.s.h

29 Jun 2025, 02:53 am

*ಶಿವನ ಆಟ-ನೋಟ....*

*ದೃಷ್ಟಿಯನು ಹರಿಸುತ್ತಾ*
*ಕಷ್ಟವನು ನೀಗಿಸುತ್ತಾ*
*ಪುಷ್ಟಿಯನು ಕೊಡುತಿರುವ ಲೋಕಂಕರ ನೀನಾದೆ ಪರಮೇಶ್ವರ.ll*

*ಇಷ್ಟದೇವನು ನೀನು*
*ತುಷ್ಟಿಯನು ನೀಡುತ್ತಿರುವನು*
*ಸೃಷ್ಟಿಯೇ ನೀನಾದೆ ಪರಮೇಶ್ವರ.||*

*ಸ್ಕಂದಗುರುವೇ ಹೇ ಮಹಾದೇವ*
*ಬಂಧನವ ಬಿಡಿಸುತ್ತಾ*
*ಬಂಧುರವನ್ನು ಹೊಸೆಯುವ* *ಭೂತಪಾಲನೆ ನೀನಾದೆ ಪರಮೇಶ್ವರ.ll*

*ಅಂದದಲ್ಲಿ ಕಂಗೊಳಿಸಿ*
*ಸುಂದರದಿ ಕಾಣುವ*
*ಚಂದಿರನ ಧರಿಸಿರುವ* *ಚಂದ್ರಪಾಲ ನೀನಾದೆ ಪರಮೇಶ್ವರ.ll*

*ಎಲ್ಲಾ ಕಡೆ ನೀನು ಇದ್ದು*
*ಕಲ್ಲಿನ ಶಿಲೆಯೊಳಗೂ*
*ಮೆಲ್ಲನೇ ಹೊಳೆದಿರುವ* *ಭೂತೇಶ್ವರನು ನೀನಾದೆ ಪರಮೇಶ್ವರ.ll*

*ಒಳ್ಳೆಯತನವ ಕಾಪಾಡಿ*
*ನಿಲ್ಲಿಸುವನು ನಮ್ಮ ಶಿವ*
*ತಲ್ಲಣವ ತೊಡೆದಾಕೊ ಸರ್ವೇಶ್ವರನು ನೀನಾದೆ ಪರಮೇಶ್ವರ.||*

*ದುಷ್ಟರನು ಮೆಟ್ಟುತ್ತಾ*
*ಶಿಷ್ಟರನು ಸಲಹುತ್ತಾ*
*ನಿಷ್ಟೆಯಲ್ಲಿ ನಡೆವವರನ್ನು* *ಪೊರೆಯುತ್ತಿರುವನೇ ನೀನಾದೆ ಪರಮೇಶ್ವರ.ll*

*ಭ್ರಷ್ಟತೆಯ ತುಳಿಯುತ್ತಾ*
*ನಷ್ಟತೆಯ ಭರಿಸುತ್ತಾ*
*ದೃಷ್ಟಿಯನು ಬೀರುತ್ತಾ* *ಕಾಪಾಡುವನು ನೀನಾದೆ ಪರಮೇಶ್ವರ.||*

*ಲೋಕವನು ಕಾಪಿಟ್ಟು*
*ಬೇಕಿರುವುದನು ಕೊಟ್ಟು*
*ಸೋಕಿಸುವ ತೆಳು ಗಾಳಿ ಹೊಂದಿರುವನೇ ನೀನಾದೆ ಪರಮೇಶ್ವರ.ll*

*ಆಕಾಶದೊಳಗೆಲ್ಲಾ*
*ಹಾಕಿರುವ ಹಾಸಿಗೆಯೊಳಗೆ*
*ಕೋಕಿಲದ ದನಿಯನ್ನು* *ಕೇಳುತಿರುವನೇ ನೀನಾದೆ ಪರಮೇಶ್ವರ.ll*


*✍️✍️ವಿ.ಎಸ್ಸ್.ಎಚ್ಚ.....*
*ಪ್ರಾ.ಆ.ಸು.ಅಧಿಕಾರಿ*

- v.s.h

29 Jun 2025, 02:49 am

*ಕ್ಷಯ/ಟಿಬಿ.......*

*ಕೆಮ್ಮು ಕೆಮ್ಮು ಅಂತ ಏಕೆ ಕುಂತಿಯವ್ವ*
*ಅಕ್ಕ ನಿನಗೆ ಹೆದರಿಕೆಯೇ ಏನವ್ವ*
*ಪ್ರಾಚೀನ ಕಾಲದ ರೋಗ ಇದವ್ವ*
*ಮೈಕೋಬ್ಯಾಕ್ಟೀರಿಯಾ ಎಂಬ ರೋಗಾಣು ವಿನಿಂದ ಹರಡುತೈತವ್ವ*
*ಇದಕ್ಕೆ ಟಿ.ಬಿ ಅಂತಾನು ಕರೀತಾರವ್ವ*
*ಅಕ್ಕ ನೀನು ಭಯಬೀಳ ಬ್ಯಾಡವ್ವ*

*ಗಾಳಿ ಜೊತೆಯಲ್ಲಿ ಆಟ ಆಡುತ್ತೈತವ್ವ*
*ಕೆಮ್ಮು, ಸುಸ್ತು, ಎದೆಯ ನೋವವ್ವ*
*ರಕ್ತ ಮಿಶ್ರಿತ ಕಫಾ ಬೀಳುತೈತವ್ವ*
*ರಾತ್ರಿಯಲ್ಲಿ ಮೈ ಬೆವರು ತೈತವ್ವ*
*ಹಸಿವು ಕೂಡ ಆಗುವದಿಲ್ಲವ್ವ*
*ತೂಕ ಕಡಿಮೆ ಆಗುವದವ್ವ*
*ಇವೆ ಕ್ಷಯದ ಲಕ್ಷಣಗಳು ತಿಳಿಯುವವ್ವ*

*ಸಂಶಯ ಕ್ಷಯ ಎಂದು ಭಾವಿಸವ್ವ*
*ಯಾವುದನ್ನು ನೀ ನಿರ್ಲಕ್ಷಿಸದಿರವ್ವ*
*ಕಫ ಪರೀಕ್ಷೆಯನ್ನ್ನು ನೀ ಮಾಡಿಸವ್ವ*
*ವೈದ್ಯರ ಸಲಹೆಅನ್ನು ನೀ ಹಾಲಿಸವ್ವ*
*ಮಾದರಿಯುಕ್ತ ವ್ಯಕ್ತಿ ನೀನು ಆಗವ್ವ*

*ಉಚಿತ ಚಿಕಿತ್ಸೆಯು ದೊರೆಯುತೈತವ್ವ*
*ರೋಗ ನಿವಾರಣೆಯು ಖಚಿತೈತವ್ವ*
*ಎಲ್ಲಿ ಬೇಕು ಅಲ್ಲಿ ಕೆಮ್ಮ ಬ್ಯಾಡವ್ವ*
*ಅಡ್ಡವಾಗಿ ಕೈ ಕರಚಿಪ್ ಹಿಡಿಯವ್ವ*
*ಕಂಡ ಕಂಡಲ್ಲಿ ನೀ ಉಗುಳದಿರವ್ವ*
*ಎಲ್ಲರಿಗೂ ರೋಗವ ಹರಡಿಸದಿರವ್ವ*

*ನಿಧಾನ ಏಕೆ ಮಾಡತಿಯವ್ವ*
*ಈಗಲೇ ಸರಕಾರಿ ಆಸ್ಪತ್ರೆಗೆ ಹೋಗವ್ವ*
*ಅನುಭಾವಿ ವೈದ್ಯರಲ್ಲಿ ಭೇಟಿಯಾಗವ್ವ*
*ಉತ್ತಮ ಚಿಕಿತ್ಸೆ ಪಡೆದು ಧನ್ಯಳಾಗವ್ವ*

*ಪೌಷ್ಟಿಕ ಆಹಾರ ನೀಡುತ್ತಾರವ್ವ*
*ಆರೋಗ್ಯ ಕಾಳಜಿ ವಹಿಸುತ್ತಾರವ್ವ*
*ನಿಕ್ಷೆಯ ಮಿತ್ರ ಯೋಜನೆ ಐತವ್ವ*
*ಇದೇ ರೋಗಿಗಳಿಗೆ ವರದಾನ ಆಗೈತವ್ವ*

*ಮನೆಗೆ ಬಂದು ಮಾತ್ರೆ ನೀಡುತ್ತಾರವ್ವ*
*ತಿಂಗಳಿಗೊಮ್ಮೆ ತೂಕ ಮಾಡ್ತಾರವ್ವ*
*ಬದಲಾವಣೆಗಳನ್ನು ವಿಚಾರಿಸುತ್ತಾರವ್ವ*
*ಪ್ರತಿ ತಿಂಗಳ ಕೊನೆಗೆ ಆಸ್ಪತ್ರೆಗೆ ಬಾರವ್ವ*

*ತೂಕಕ್ಕೆ ತಕ್ಕಂತೆ ಕೊಟ್ಟ ಮಾತ್ರೆಗಳನ್ನು*
*ನೀ ಸರಿಯಾಗಿ ತೆಗೆದು ಕೊಳ್ಳವ*
*ಕ್ಷಯ ರೋಗದಿ ಮುಕ್ತಳು ನೀನಾಗವ್ವ*
*ಇತರರಿಗೆ ಉದಾಹರಣೆ ನಿನಾಗವ್ವ*
*ಟಿಬಿ ಚಾಂಪಿಯನ್ ಖ್ಯಾತಿ ಪಡೆಯವ್ವ*

*ಎಲ್ಲೆಡೆಯೂ ಆರೋಗ್ಯವವ್ವ*
*ಎಲ್ಲೆಲ್ಲೂ ಆರೋಗ್ಯವವ್ವ*
*ಎಲ್ಲರು ಒಗ್ಗೂಡಿ ಕ್ಷಯ ಓಡ್ಸೋಣವ್ವ*
*ಮುಂದಿನ ಪೀಳಿಗೆ ಸಂರಕ್ಷಿಸೋಣಕ್ಕ*
*ಈ ಮೇಲಿನ ಅಭಿಯಾನವಅವ್ವ*
*ಎಲ್ಲರು ಯಶಸ್ವಿ ಗೊಳಿಸೋಣವ್ವ*
*ಕ್ಷಯ ಮಕ್ತಭಾರತ ನಮ್ಮೆಲ್ಲರ ಕನಸವ್ವ*
*ಎಲ್ಲಒಟ್ಟುಗೂಡಿ ನನಸಾಗಿಸೋಣವ್ವ*

*✍️ವಿ.ಎಸ್ಸ್.ಎಚ್ಚ*
*ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ*

- v.s.h

29 Jun 2025, 02:45 am

*ಸಾರ್ವತ್ರಿಕ ಲಸಿಕೆ.......*

*ಜೀವವನ್ನು ಉಳಿಸಲು ಸಾವನ್ನು ತಡೆಗಟ್ಟಲು ಹಾಕಿಸಿ ಲಸಿಕೆ...*
*ಗಂಭೀರವಾದ ಹಾನಿ ಸಾವಿಗೆ ಕಾರಣವಾಗುವ ರೋಗಗಳ ವಿರುದ್ಧ* *ಹೋರಾಡಲು ಹಾಕಿಸಿ ಲಸಿಕೆ...*

*ವಿಶೇಷವಾಗಿ ಶಿಶುಗಳ ಪ್ರತಿರಕ್ಷಣೆ ಅಭಿವೃದ್ಧಿಸಲು ಹಾಕಿಸಿ ಲಸಿಕೆ...*
*ಹಲವು ದೇಶಗಳಲ್ಲಿ ಒಂದು ಕಾಲದಲ್ಲಿ ನಿರ್ನಾಮವಾದ*
*ದಡಾರ,ಡಿಪ್ತೇರಿಯ, ಪೋಲಿಯೋದಂತ ಸಾಂಕ್ರಾಮಿಕ ರೋಗ ತಡೆಯಲು ಹಾಕಿಸಿ ಲಸಿಕೆ...*

*ಅನೇಕ ಲಸಿಕೆಗಳು ಪ್ರತಿರೋಧಕ ಮಾಡುತ್ತವೆ ಎಂದು ಚಿಂತಿಸದೇ ಹಾಕಿಸಿ ಲಸಿಕೆ...
ನೋವು,ಗಂಟು,ಬಾವು,ಜ್ವರ ಎಂದು ಹೇದರದೆ ಹಾಕಿಸಿ ಲಸಿಕೆ...*

*ಹಲವು ಸಮಸ್ಯೆಗೆ ಪರಿಹಾರ ಎನ್ನುವ ಹಾಗೆ ನೋವಿಗೂ ಪರಿಹಾರ ಇರುತ್ತದೆ ಅದಕ್ಕೆ ಎಂದೆಂದಿಗೂ ತಪ್ಪದೆ ನಿಮ್ಮ ಮಕ್ಕಳಿಗೆ ಹಾಕಿಸಿ ಲಸಿಕೆ...*

*ಒಟ್ಟಿನಲ್ಲಿ ಹನ್ನೆರಡು ಮಾರಕ ರೋಗಗಳನ್ನು ತಡೆಗಟ್ಟಲು ಆರೋಗ್ಯದಿಂದ ಇರಲು ಹಾಕಿಸಿ ಸಾರ್ವತ್ರಿಕ ಲಸಿಕೆ... ಸಾರ್ವತ್ರಿಕ ಲಸಿಕೆ... ಸಾರ್ವತ್ರಿಕ ಲಸಿಕೆ...*

*✍️ ವಿ.ಎಸ್ಸ್.ಎಚ್ಚ್ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ.*

- v.s.h

29 Jun 2025, 02:42 am

*ಗರ್ಭ ನಿರೋಧಕ "ಛಾಯ ಮಾತ್ರೆ" ಮಹಿಳೆಯರೆಗೆ.......*

*ಗರ್ಭ ನಿರೋಧಕ ಹಾರ್ಮೋನ್ ರಹಿತ ಆವಿಷ್ಕಾರ ಛಾಯಾ..*
*ಅನಪೇಕ್ಷಿತ ಗರ್ಭಧಾರಣೆ ತಡೆಯಲು ಇದು ಒಂದು ಪಾಯ..*
*ಒಂದು ಪಾಕೆಟ್ ನಲ್ಲಿ ಇರುವವು ಮಾತ್ರೆಗಳು ಎಂಟು..*
*ವಾರಕ್ಕೆ ಎರಡು ಮೊದಲ ಮೂರು ತಿಂಗಳ ಮಾತ್ರೆಗಳ ನಂಟು..*

*ನಾಲ್ಕನೇ ತಿಂಗಳಿಂದ ವಾರದಲ್ಲಿ ಒಂದು
ಸಲ ಸಾಕು ಈ ಮಾತ್ರೆ..*
*ಮಹಿಳೆಗೆ ಏನೂ ತೊಂದರೆ ಮಾಡದು ಈ ಮಾತ್ರೆ..*
*ಮುಟ್ಟಿನ ಮೊದಲ ದಿನದಂದು ಸೇವಿಸಬೇಕು ಮಾತ್ರೆ..*
*ಬಹಳ ಪರಿಣಾಮಕಾರಿ ಈ ಮಾತ್ರೆಯ ಸೇವನೆ..*

*ದೇಹದಲ್ಲಿ ಎಂದಿಗೂ ಆಗದು ಅಡ್ಡ ಪರಿಣಾಮ..*
*ಅರ್ಹ ಮಹಿಳೆಯರಿಗೆಲ್ಲಾ ಛಾಯ ಒಂದು ಅಮೃತನಾಮ..*
*ಛಾಯ ಒಂದು ಅದ್ಭುತವಾದ ಉತ್ತಮ ವಿಧಾನ..*
*ಅಳವಡಿಸಿಕೊಂಡು ಸಾಗಿಸಿ ನೀವೆಲ್ಲಾ ಸುಂದರ ಜೀವನ..*

*ಅರಿತುಕೊಳ್ಳಿ ಪ್ರತಿಯೊಂದು ಕುಟುಂಬ ಕಲ್ಯಾಣ ವಿಧಾನ..*
*ಇದು ತಜ್ಞರ ಒಂದು ದೊಡ್ಡ ಪರಿಶ್ರಮ..*
*ಮಹಿಳಾ ಸಂಕುಲದ ಒಳಿತೆಗೆ ವರದಾನ.*

*✍️✍️ ವಿದ್ಯಾಶ್ರೀ.ಎಸ್ಸ್.ಎಚ್ಚ್*
*ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ*

- v.s.h

29 Jun 2025, 02:37 am

ನಿನ್ನ ಪ್ರೀತಿಯಾ ರಾಧೆ ❤️

ಪ್ರೀತಿ ಎಂಬ ಪದಕ್ಕೆ ಸ್ಪೂರ್ತಿ ನೀನು
ಸಿಗಲಾರದ ಕೃಷ್ನನ್ನು ಮರೆಯಲಾಗದಷ್ಟು
ಪ್ರೀತಿಸಿ ಬಿಟ್ಟೆ....
ನಾನು ರಾಧೆಯೋ ರುಕ್ಮಿಣಿಯೋ ಗೊತ್ತಿಲ್ಲ
ಆದರೆ..,.
ನನ್ನಿಂದ ದೂರ ಆಗಿದ್ದು ಮಾತ್ರ ನನ್ನ ಕೃಷ್ಣನೇ...
ಜಗತ್ತಿನಲ್ಲಿ ಅತಿ ಪರಿಶುದ್ಧವಾದ ಪ್ರೀತಿ ಎಂದರೆ ಅದು
ಸಿಗಲಾರದ ಪ್ರೀತಿ.....
ಹಣೆಬರಹದಲ್ಲಿ ಇಲ್ಲದವನು ಹೃದಯದಲಿ
ದೇವರಾದನು .....
ಒಳ್ಳೆಯ ಗುಣದವನು ಹಾಲಿನ ಮನಸ್ಸಿನವನು ನನ್ನವನು....
ಸೀತೆಯಂತೆ ಜೊತೆ ಇರಲು ಬಯಸಿದರೆ ವಿಧಿ ರಾಧೇಯಂತೆ ದೂರ ಮಾಡಿತು......
ಕಣ್ ನೋಟ ಕಂಡವನು ಕಣ್ ಅಂಚಿನಲ್ಲಿ ಮರೆಯಾದನು.....
ಮರಿಯಲಾಗದಷ್ಟು ಪ್ರೀತಿ ಕೊಟ್ಟು ಮೌನವಾಗಿ ದೂರವಾದನು....
ನನ್ನವನು ಮರಳಿ ಬಂದನೆಂದು ಖುಷಿ ಆಯ್ತು
ಎದ್ದು ನೋಡಿದಾಗ ಬೆಳಗಿನ ಕನಸೆಂದು ನೋವಾಯ್ತು....
ಅದೃಷ್ಟವಿಲ್ಲದ ಹಣೆಬರಹದಲ್ಲಿ
ವಜ್ರ ಒಂದು ಸಿಕ್ಕಿ ಕೈ ಜಾರಿತು....


ನಿನ್ನ ಪ್ರೀತಿಯಾ ರಾಧೆ ❤️......

- kavya s

25 Jun 2025, 12:24 pm

ತಂಪಾದ ಗಾಳಿ

ತಂಪಾದ ಗಾಳಿಯೊಂದು ಬೀಸಿ
ಮನಕೆ ಮೊದ ನೀಡಿ
ತಣ್ಣನೆಯ ತನು ಆದಂತೆ
ಒಂದೆಡೆ ಮನದ ನೋವು ನೂರಾರು
ಸಾಗುತಿರುವ ದಾರಿಯಲಿ ಇನ್ನೊಂದು
ಖುಷಿಯಿಂದ ನನ್ನವರೊಡನೆ ನಕ್ಕ ಘಳಿಗೆ
ಯಾವುದು ಬೇಡವೆಂದು ದೂರ ಹೊರಟರೆ
ಮತ್ತೆ ಸೇರಿದ ಜಾಗ ಅದೇ ...
ನಾನು ಕಂಡ ನನ್ನ ಸಂಗಾತಿಯಲ್ಲಿಗೆ
ನನ್ನ ಮನೆಗೆ....ನಮ್ಮ ಅಮ್ಮನಡೆಗೆ
?ವೈಶಾಖ್ ಶೆಟ್ಟಿ. ಕೆ

- Vaishak Shetty.k (Vaishak shetty.k)

23 Jun 2025, 09:14 am

ದೊರವಾದ ಪ್ರೀತಿಯನು ನೆನೆದು ನಾ ಹುಚ್ಚನಾದೆ..
ಪ್ರೀತಿಸಿದವಳು ಇನೋಬ್ಬನ ಜೊತೆ ನಗುವುದನ್ನು ನೋಡಿ.
ನನ್ನವಳು ಖುಷಿಯಾಗಿರಲ್ಲಿ ಎಂದು ಹಾರೈಸಿದೆ..
ಅಪರಿಚಿತನ ಮಾತುಗಳು

- Dilan Dilu

22 Jun 2025, 09:53 am