Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಕೊರಳುಗಚ್ಚಿದ ತುಂಟ ಗಾಳಿಗೊಂದು ಹೆಸರಿಡಬೇಕಿದೆ ನಿನ್ನ ಪರಿಚಯ ಮಾಡಿಕೊಡುವೆ ಹೊಸ ಹೆಸರಾಗುವುದು ನಿನ್ನ ಉಸಿರು.
ತಿಳಿಯದ ಭಾಷೆಯ ಹಾಡೊಂದ ಕೇಳುತಿರುವೆ ಅರ್ಥವಾಗದಿದ್ದರೂ ಹಿತವಾಗಿದೆ ನಿನ್ನಂತೆ ಮಧುರವಾಗಿ.
ಹೊತ್ತಿಗೆ ಮುನ್ನ ಎಚ್ಹೊತ್ತ ಕನಸು ನಿನ್ನಂತೆ ತೋಚುತ್ತಿದೆ, ತನುವಿಗೆ ತಿಳಿಯದ ತವಕ ಮನಕೆ ಹೇಳದ ಮರುಕ.
ನಿಂತ ಗಡಿಯಾರದ ಮುಳ್ಳುಗಳು ನಾವು ದೂರದಲ್ಲಿ ನಿಂತರೂ ಒಂದೇ ಕಾಯ ಒಂದೇ ಕಾರ್ಯ.
ಮುಗಿಯದ ಮಾತುಗಳ ಪಟ್ಟಿಯೊಂದ ನೀಡುವೆ ಮನದಲ್ಲಿ ಬಚ್ಚಿಡು ನೆನಪುಗಳ ಹಾಡಿಗೆ ಸಾಲಾಗುವುದು ಮುಂದೆ ಮೆಲಕು ಹಾಕುತ್ತಾ ಕುಂತಾಗ.
- ಚುಕ್ಕಿ
13 Dec 2018, 09:54 pm
ತಂಗಾಳಿಯೇ ನಿನ್ನ ನೆನಪಾಗಿ
ತಿಂಗಳ ಬೆಳಕೇ ನಗುವಾಗಿ!!
ನೀನಿಲ್ಲದ ಕ್ಷಣವೂ ಜೊತೆಯಾಗಿ
ನಾ ಕಳೆಯುವೆನು ಗೆಳತಿ ಹಿತವಾಗಿ!!
ನಿದಿರೆಯಲಿ ಬಂದೆ ಕನಸಾಗಿ
ಕನಸದು ತುಂಬ ಸೊಗಸಾಗಿ!!
ಮನಸಿನಲಿ ನೀನೇ ಒಲವಾಗಿ
ನೆಲೆಸಿರುವೆ ಗೆಳತಿ ಸ್ಥಿರವಾಗಿ!!
ಬದುಕಿನ ತುಂಬ ಸುಖವಾಗಿ
ಇಲ್ಲದೇ ಇರುವೆ ನೀ ನೆಪವಾಗಿ!!
ಎಲ್ಲವನೂ ಮರೆಸುವ ಮನವಾಗಿ
ಇರಬೇಕು ನೀ ಎಂದೂ ನನಗಾಗಿ!!
- ಪಿ.ಜಿ.ಜ್ಯೋತಿ
11 Dec 2018, 04:13 pm
ಕಾದ ಹೆಂಚು ಕೆಂಪನೆ ಜಗಮಗಿಸುತ್ತಿತ್ತು
ಅಂತರಂಗದಲಿ ಕೋಲಾಹಲ ಮುಗಿಲು ಮುಟ್ಟಿತ್ತು
ಸಂಭ್ರಮದ ಸಂತೆ ನಗುವನ್ನು ಮರೆತಂತಿತ್ತು
ಮೌನ ಅಸನೀಯವಾಗಿ ರೋಧಿಸುತ್ತಿತ್ತು!
ಏನಾಯಿತು ಯಾಕೆ ಹೀಗಾಯಿತು?
ವದನದಲಿ ಮರೆಯಾಗದ ಪ್ರಶ್ನಾರ್ಥಕ
ಅರ್ಥ ಸಿಗದೆ ಕಲ್ಪನೆಯತ್ತ ಜಾರುವ ಮನ
ಕ್ಷಣಿಕ ಮೌನಕೆ ಸೆರೆಯಾಗುವ ತವಕ!
ಅವಳು, ಅವಳೆಂದರೆ ಅಚ್ಚುಮೆಚ್ಚು ಹೃದಯಕೆ
ಗರಿಗೆದರಿ ಕನಸುಕಟ್ಟಿದ ಆ ಕ್ಷಣಗಳು
ಮೋಸದಳಿಂದವಳು ಮರೆಯಾಗಿ, ಖುಷಿಯ ಮನಸು
ನುಚ್ಚೂನೂರಾಗಿ ನೆಲಸೇರಿದ ಕನಸುಗಳು!
ತಿಳಿಸಿ ಹೇಳಲಿ ಹೇಗೆ ನಾ ನೆರೆದವರ ಮುಂದೆ
ನಿಂತು ತಲೆತಗ್ಗಿಸಲು ತಪ್ಪಿಲ್ಲ ಯಾವುದು ನನ್ನದು
ಮೋಡ ಕರಗಿ ತಿಳಿಯಾದರೂ ನಾಳಿನ ಚಿಂತೆ
ಅವಮಾನ ಸಹಿಸಲು ಅವಳನ್ನೇ ಮರೆಯಬೇಕಂತೆ!!!
✍
ಪ್ರಿಯಾಂಕ ಬಿಜೂರು
- ಪ್ರಿಯಾಂಕ
11 Dec 2018, 12:46 pm
ಅವಳ ಮುಗ್ದತೆ ನೋಡಿ ಪ್ರೀತಿಸಲೇ
ಅವಳ ಗುಣ ನೋಡಿ ದ್ವೇಷಿಸಲೆ
ಅವಳು ಮಾಡಿದ ಅನ್ಯಾಯಕ್ಕೆ ದಿಕ್ಕರಿಸಲೆ
ಅಥವಾ ಹಾಳಾಗಿ ಹೋಗಲಿ ಅಂತ ಕ್ಷಮಿಸಲೆ
ಏನು ಮಾಡಲಿ ನಾ ಏನು ಮಾಡಲಿ
ನನಗೆ ಒಂದೂ ದೋಚದಾಗಿದೆ
ಅವಳ ಮುಂದೆ ಸೋಲಲು ಇಷ್ಟವಿಲ್ಲ
ಹಾಗಂತ ಗೆಲ್ಲಲ್ಲು ಮನಸಾಗುತಿಲ್ಲ
ಅವಳನ್ನ ದಿಕ್ಕರಿಸು ಅಂತ ಹೊರಮನಸು
ಅವಳೇ ಬೇಕು ಅಂತ ಒಳಮನಸು
ನಾ ಏನು ಮಾಡಲಿ ಅವಳ ಹೇಗೆ ಒಪ್ಪಿಸಲಿ
ಅವಳ ಮನಸು ಹೇಗೆ ಗೆಲ್ಲಲಿ
ಯಾರ ಮುಂದೆ ಹೇಳಿಕೊಳ್ಳಲಿ, ಯಾರ
ಸಹಾಯ ಬೇಡಲಿ ಭಾರವಾಗಿದೆ ಮನಸು
ಇದನೆಲ್ಲ ನೋಡಿ ಕಂಡು ಕಾಣದಂತೆ
ಮೌನ ವಾಗಿರುವನುನು ಈ ಮೌನಿ
#ಮೌನಿ#
- RajaneeshNandikolmath
10 Dec 2018, 07:23 pm
ಮರೆತು ಹೋದರು ಜಗವನು,
ಮರೆಯಲಾಗದೆ ಅವಳನು.
ಕಣ್ಣ ಕಂಬನಿಯು ಹೇಳುತ್ತಿದೆ...
ಹೋಗು.. ಹೋಗಿ ಹುಡುಕಿ ಬಾ
ನಿನ್ನ ಆ ಪ್ರೀತಿಯನು ಎಂದು.
ಹುಡುಕಿ ಹೋದರು ಸಿಗದ
ಪ್ರೀತಿಯಾಗಿ....
ಕಂಡರು ಕಾಣದಂತೆ,
ಕೇಳಿದರು ಕೇಳದಂತೆ,
ಮೌನದಲಿ ಕುಳಿತಿರುವಾಗ
ನಾನೆಲ್ಲಿ ಹುಡುಕಲಿ!!!?
- ಚಿರು
09 Dec 2018, 07:56 pm
ಮನಸು ಮನಸಿನ
ಪ್ರೀತಿಯ ಬೆಸುಗೆ
ಇಬ್ಬನಿ ತಬ್ಬಿರುವ
ಇಳೆಯದು ರವಿಗೆ!!
ಹುಸಿ ಮುನಿಸಿನ ಖುಷಿ
ಸಲ್ಲಾಪದ ಬಿಸಿ
ಕೈ ಬೀಸಿ ಕರೆಯುತಿದೆ
ನನ್ನನು ಬಳಿಗೆ!!
ಹಗಲು ಇರುಳಿನ
ಸಮ್ಮತಿಯ ಜೊತೆಗೆ
ನೆರಳದು ಬೇಡಿದೆ
ನಿನ್ನಯ ಅಪ್ಪುಗೆ!!
ಕನಸಲಿ ನನಸಲಿ
ನಿನ್ನನೇ ಬಯಸಿದೆ
ಮನಸಿನ ತುಂಬ
ನೀನೇ ಸಂಚರಿಸಿದೆ!!
ನನ್ನಯ ಉಸಿರಲಿ
ನಿನ್ನಯ ಹೆಸರಿದೆ
ಏರಿಳಿತದ ಜೊತೆ
ಖುಷಿಯನು ಕಂಡಿದೆ!!
ಮನಸಿನ ಕೆರೆಯಲಿ
ಒಲವಿನ ಕಮಲವು
ಚೆಲುವನು ಬೀರುತ
ಅರಳಿ ತಾ ನಗುತಿದೆ!!
- ಪಿ.ಜಿ.ಜ್ಯೋತಿ
09 Dec 2018, 05:25 pm
ಇರುಳಗತ್ತಲ ಮರೆತು
ಒಲವ ಹಾಡನು ಕಲಿತು,
ಹುಡಿಮಣ್ಣ ಘಮವ ಹಂಚಿಕೊಳ್ಳುತ್ತಿವೆ ಜೋಡಿ ದೀಪ ಜೊತೆಯಾಗಿ ಇಂದು.
ಬಿಸಿಯ ಶಾಖಕೆ ಬೆಂದು ಬೆವರ ತಾಪಕೆ ನೊಂದು ಮತ್ತೆ ಉಸಿರ ಪಡೆಯುತ್ತಿವೆ ಎಣ್ಣೆಯಲಿ ಮಿಂದು.
ಬತ್ತಿ ಬೇಡಿದ ಹೆಸರು ಮಣ್ಣಿಗಂಟಿದ ಕೆಸರು
ಮೈಯ ತುಂಬಿದೆ ಇಂದು
ಬಿಡದ ನಂಟಿನ ಪಸರು.
ನೆರಳು ನಾಚಿದೆ ನೋಡು
ಮಿಲನ ಭಾಷೆಯ ಅರಿತು,
ಜಿನುಗು ಜಾವದ ಕುರಿತು
ನುರಿತ ಮನವನು ಅರಿತು.
ತುತ್ತತುದಿಯಲಿ ಬೆಳಕು
ಕಣ್ಣು ಮುಚ್ಚಿದ ಘಳಿಗೆ
ಕತ್ತಲಾವರಿಸಿತು ಮತ್ತೆ
ಆಡಲು ಮಾತು,
ಬೂದಿ ಬಣ್ಣವ ಹಚ್ಚಿ
ನೆಲದಿ ನಿನ್ನ ರೂಪಕೆ ಇಂದು
ಜೋಡಿ ದೀಪದಿ ಕುಂತು..
- ಚುಕ್ಕಿ
09 Dec 2018, 06:36 am
ನೀನು ಇರದ ಬದುಕಿಗೆ
ಕಣ್ಣ ಹನಿಯ ಕಾಣಿಕೆ
ನೀನಿತ್ತು ದೂರ ಸರಿದೆ
ಮತ್ತೆಂದು ಬಾರದೇ!!
ನಿನ್ನ ನೆನಪೊಂದಿಗೆ
ಇರಲು ಈ ನನ್ನ ಬದುಕು
ಬೆರೇನು ಬಯಸದೇ
ಒಂಟಿ ತಾನೆಂದಿದೆ!!
ನಾ ಕಂಡ ಕನಸಿಗೆ
ಬೆಳಕನು ನೀ ಚೆಲ್ಲದೇ
ಮರೆಯಾಗಿ ನಿಂತೆ ನೀನು
ಕಣ್ಣೆದುರು ಬಾರದೆ!!
ಸಣ್ಣ ಹಠದೊಂದಿಗೆ
ನನ್ನ ಈ ಹೃದಯವು
ನಿನ್ನಯ ಬರ ಕಾಯುತ
ಮರಳಿ ಬಾ ಎಂದಿದೆ!!
- ಪಿ.ಜಿ.ಜ್ಯೋತಿ
08 Dec 2018, 07:36 pm
*ಪಲ್ಲವಿ*
ಪದ ಪದಗಳು ಸೇರಿ ಹಾಡಲು ಪಲ್ಲವಿ
ಕಣ್ಣ ನೋಟವಿದು ಹಂಚಿ ಪ್ರೀತಿ ಮನವಿ
ನಯನ ನಾಚಿ ಬರೆದು ಒಲವ ಮುನ್ನುಡಿ
ಅನು ಪಲ್ಲವಿಯ ರಾಗ ಪ್ರೇಮಕೆ ಕೈಗನ್ನಡಿ
ಒಲಿದ ಒಲವಿನಲಿ ಸಾಗಿಹ ಪಯಣ
ಸವಿಯಲು ಸವಿಯಾದ ಸಿಹಿ ಹೂರಣ
ಕಷ್ಟವಿಲ್ಲವು ಜೀವಕೆ ನೋವಿನ ಚಾರಣ
ಮೆಚ್ಚಿದ ಮನವು ಜೊತೆಯಿರುವ ಕಾರಣ
ಹಾಡುವ ಹಾಡಿಗೆ ಶೃತಿ ಜೊತೆ ಸೇರದಿರೆ
ಮೂಡುವ ಚರಣಗಳಲಿ ಇಂಪಿಲ್ಲ
ಪದಗಳು ಹದಮೀರಿ ಲಯ ತಪ್ಪಿದರೆ
ಹೃದಯದ ಭಾವಗೀತೆಯು ಸೊಗಸಿಲ್ಲ
ಬೆರೆತ ಉಸಿರಿನದು ಮಧುರವಾದ ಗಾನ
ನಲಿದು ಒಲಿದಿಹ ಸುಲಲಿತ ಯಾನ
ಸಪ್ತಸ್ವರಗಳ ಅರಿತ ಅನುರಾಗದ ಹೂಬನ
ತಾಳ ತಪ್ಪದ ಗೆಜ್ಜೆಯ ಸದ್ದಿಗೆ ಹೆಜ್ಜೆಹಾಕಿದ ನರ್ತನ
*ರತ್ನಾ ಬಡವನಹಳ್ಳಿ*
- ರತ್ನಾಬಡವನಹಳ್ಳಿ
08 Dec 2018, 05:53 am
ನಾ ಕಂಡ ನಾಡು
ಸಕ್ಕರೆಯ ಬೀಡು
ಕಲ್ಪನೆಯ ಕಡಲು
ಕಾವೇರಿ ತಾಯಿಯ ಮಡಿಲು
ವನದೇವತೆ,ಜಲದೇವತೆಯ
ಸಂಗಮ ಈ ಬಯಲು
ಭರಚುಕ್ಕಿ ,ಗಗನಚುಕ್ಕಿಯು
ಬರಿಸಿತು ನಮಗೆಲ್ಲ ಅಮಲು
ತಲಕಾಡಿನೆಡೆಗೆ ನಮ್ಮೆಲ್ಲರ ಓಟ
ಮರಳಿನೊಂದಿಗಿನ ಸೆಣಸಾಟ
ಪಂಚಲಿಂಗಗಳ ದರ್ಶನದ ಆಟ
ಮರೆಯಾಯಿತು ಅರ್ಕೆಶ್ವರನ ನೋಟ
ಕಷ್ಣರಾಜ ಒಡೆಯರ ಕೊಡುಗೆ
ಕಾವೇರಿ ಉಳಿದಳು ಕರುನಾಡಿಗೆ
ವಿಶ್ವೆಶ್ವರಯ್ಯನವರ ಜಾಣ್ಮೆಗೆ
ನವ ವಿಜ್ಞಾನಿಗಳ ಮೆರವಣಿಗೆ
ಹಸಿರು ಮಡಿಲಲ್ಲಿ
ಮುಡುಕುತೊರೆಯಲ್ಲಿ
ಕೊರಕಲಲ್ಲಿ ಸಾಗಿ
ಗಿರಿಗಳಲ್ಲಿ ಬಾಗಿ
ಕೊಳಕ ತೊಳೆಯುತಿಹಳು
ತ್ಯಾಗಮಯಿ ಕಾವೇರಿತಾಯಿ
ಸಾಂಸ್ಕ್ರತ ನಗರಿಯ ರಾಣಿ
ಮಹಿಷಾಸುರನ ಸಂಹಾರಿಣಿ
ಅರಮನೆಗೆ ನಮ್ಮ ಬೇಟಿ
ಮೃಗಾಲಯವ ದಾಟಿ
ರಸ್ತೆಯ ಇಕ್ಕೆಲಗಳಲ್ಲಿ
ಹಸುರಿನ ಮೆರವಣಿಗೆಯಲ್ಲಿ
ಸಾಗಿದೆವು ಶ್ರೀರಂಗಪಟ್ಟಣದೆಡೆಗೆ
ಶ್ರೀರಂಗ, ನಿಮಿಷಾಂಬನ ದರ್ಶನಕೆ
ಸಂಭ್ರಮದ ವಾತಾವರಣ
ನೀಡಿದ ಕಾಲನು ಆಮಂತ್ರಣ
ಅಂದು ಸಕ್ಕರೆ ನಾಡಿಗೆ
ಯಮರಾಜನ ನಡಿಗೆ
ಮುವತ್ತು ಮಂದಿಯ ಮರಣ
ಹೃತಾತ್ಮರ ಕೂಡಿತು ಅಂಬಿಯ ಪ್ರಾಣ
ದು:ಖ ಮಡುಗಟ್ಟಿತು ಎಲ್ಲೆಲ್ಲು
ಹನಿಗಟ್ಟಿತು ಎಲ್ಲರ ಕಣ್ಣಲ್ಲು
ಜಗ್ಗದ-ಕುಗ್ಗದ ಸರದಾರ
ಮರಳಿ ಬಾ ಹಮ್ಮೀರ
ಶಾರಧ
- ಶಕುಂತಲಾ
06 Dec 2018, 06:46 pm