Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರತಿಭೆಗ್ಯಾಕೆ ಭಾಷೆಯ ಬಂಧನ

ಬೆಳಗಲಿಳೆಯಲಿ
ಮನಗಳ ತಣಿಸಲಿ
ಬಂದಿಸದಿರಿ ಅದನು
ಭಾಷೆಯ ಸಂಕೋಲೆಯಲಿ

ವಿಜ್ಞಾನಿಯಾಗಿ ವಿಹರಿಸಬಲ್ಲ
ಕವಿಯಾಗಿ ಕರಗಬಲ್ಲ
ಜಾತಿ-ಮತ ಧರ್ಮದ
ಎಲ್ಲೆ ಮೀರಿ ತಾ ತೇಲಬಲ್ಲ
ಭಾಷೆಯ ಬಂಧನ ಅವನಿಗೆಸಲ್ಲದಲ್ಲ

ಮುಗ್ದ ಮಗುವಿನ ಮನದಲ್ಲಿ
ಆಂಗ್ಲದ ಬೀಜ ಚೆಲ್ಲಿ
ನಿಯಮಗಳ ಬಂಧನದಲಿ
ಬೆಳೆಸದಿರಿ ಪ್ರತೀಷ್ಠೆಯ ಕಣದಲ್ಲಿ

ಮುಗ್ದತೆಯ ಕೊಂದು
ಕೃತಕತೆಯಲಿ ಸಾಗುತಿಹೆವಿಂದು
ಆಂಗ್ಲವೇ ಸರ್ವಸ್ವವೆಂದು
ಮಾತೃಭಾಷೆಯ ಜರಿದು

ಜಗದ ಮೂಲಗಳ
ಮೆಲ್ಲುತ;ಅನುಭವಗಳ
ಸವಿಯ ಉಣಿಸುತ್ತ
ಮರೆಯಲಾಗದ ಕಗ್ಗವನಿತ್ತ
ಡಿವಿಜಿ ಕನ್ನಡಿಗರಲ್ಲವೇ

ಆಂಗ್ಲವ ಕಲಿತರು
ಕನ್ನಡಕಾಗಿ ದುಡಿದರು
ಜ್ಞಾನಪೀಠವ ಅಲಂಕರಿಸಿದ
ಕುವೆಂಪು ನಮ್ಮವರಲ್ಲವೇ

ಮಾಂಸದಮುದ್ದೆ ಮಗುವಾಗಲು
ಮಾತೆಯೇ ಮೂಲ
ಜಗದ ವಿದ್ಯೆ ಮನನವಾಗಲು
ಮಾತೃಭಾಷೆಯೆ ಮೂಲ

ಎಲ್ಲ ಬಲ್ಲವರು ನಾವೆಂಬ
ಮೌಡ್ಯವ ಬಿಡಿರಿ
ಅರಿಯುವುದು ಇದೆಯೆಂಬ
ನಿಜವ ತಿಳಿಯಿರಿ
ಅನ್ಯರ ಜರಿಯುವುದ ಬಿಟ್ಟು
ಬಾಳೋಣ ಮನದ ಕದವ ತೆರೆದಿಟ್ಟು



ಶಾರದ

- ಶಕುಂತಲಾ

30 Dec 2018, 09:50 am

ನಿನ್ನೀ ಮೌನಕ್ಕೆ.!

ನಿನ್ನ ಕಣ್ಣಿನ ಕಾಡಿಗೆ
ನಂಗೆ ಹೇಳುತ್ತಿದೆ.
ನಿನ್ನ ತಿಳಿ ನಾಚಿಕೆಯ
ಚೆಲುವಿನ ಒಲವ ಬಗೆಯನ್ನ.
ನಿನ್ನ ಮಂದ ನಗುವಿಗೆ
ನಾ ಸೋತು ಹೋಗಿರುವೆ.
ಮತ್ತೆ ಏಳಬೇಕಾಗಿದೆ
ನಿನ್ನ ನಗುವ ನಾ ನೋಡಲು.
ನಿನ್ನ ಮುಂಗುರುಳಿಗೆ
ನಾ ಕಾರಣವಾಗಿಹೆ.
ಮರೆ ಮಾಚದೆ ಕೇಳು ನೀ
ನಿನ್ನ ತನುಮನವ ನಾ ತಣಿಸುವೆ.
ನಿನ್ನ ಕುಡಿಹುಬ್ಬ ನೋಟಕ್ಕೆ
ನಾ ಕಾರಣ ಹುಡುಕುತಿಹೆ.
ಒಂದೊಳ್ಳೆ ಹೆಸರನಿಡು
ನಿನ್ನ ನೋಟದ ಈ ಆಟಕ್ಕೆ.
ನಿನ್ನ ಕಿರಣದ ಕಾಂತಿಯೊಳಗೆ
ನಾ ಮುತ್ತಿಗೆ ಬಿದ್ದಿರುವೆ.
ಇಂದಾದರೂ ನೀ ಹೇಳಲೇ ಬೇಕು
ನಿನ್ನೀ ಮೌನಕ್ಕೆ ಕಾರಣವೇನು.?

ಇಂತಿ "ಸ್ನೇಹ ಸಿಂಚನ"

- vasu

25 Dec 2018, 06:49 pm

ಅವಳೊಂದು..

ಅವಳೊಂದು
ಮಾಯಾ ಜಿಂಕೆ,
ಬೆನ್ನು ಹತ್ತಿ
ನೀ ಹೋಗದಿರು.
ಅವಳೊಂದು
ಮರೀಚಿಕೆ,
ಮರುಭೂಮಿಯಲ್ಲೂ
ನೀ ಹುಡುಕದಿರು.
ಅವಳೊಂದು
ಮಂದಹಾಸ,
ಮರುಗಿ ನೀ
ಬೆರಗಾಗದಿರು.
ಅವಳೊಂದು
ಕಾಂತಿ ಕಿರಣ,
ಎದುರು ನಿಂತರೂ
ನೀ ಹೆದರದಿರು.
ಅವಳೊಂದು
ನಿಲುಕದ ನಕ್ಷತ್ರ,
ಮಿತಿ ಮೀರಿ
ನೀ ಆಸೆಪಡದಿರು.
ಇಂತಿ ಸ್ನೇಹ ಸಿಂಚನ

- vasu

25 Dec 2018, 06:31 pm

-ಚುಂಬಕ ನೋಟ-

ಪಂಕಜಾಕ್ಷಿ ಎನ್ನಲೇ,

ಜಲಜಾಕ್ಷಿ, ನಳಿನಾಕ್ಷಿಗಳೆಲ್ಲ

ಒಂದೇ ನಾಮವಲ್ಲವೇ,

ಕಮಲಾಕ್ಷಿಯೇ ಸಾಲದೇ,

ಮೀನಾಕ್ಷಿ ಎನ್ನಲೇ,

ಕಾಮಾಕ್ಷಿ ಎನ್ನಲೇ,

ಶುದ್ಧವಾದ, ಸ್ಪಟಿಕದಂತ

ವಿಮಲಾಕ್ಷಿ ಸಲ್ಲದೇ!!


ಅಕ್ಷಿ ನಿನ್ನದಾದರೂ

ನೋಟ ನನ್ನದಾಗಿದೆ,

ನೂರು ಕಣ್ಣು ನೋಡುತಿರಲು

ದೃಷ್ಟಿ ನಿನ್ನ ಮೇಲಿದೆ,

ಲಜ್ಜೆ ಗೆಟ್ಟ ಪ್ರಾಯವದುವೆ

ಪ್ರೀತಿಯನ್ನು ಬಯಸಿದೆ,

ಸುರತ ನಿರತ ಕಾಮ ಕೇಳಿ

ಬಯಕೆಯಾಗಿ ಮೂಡಿದೆ!!


ಮಾಂತ್ರಿಕತೆ ಕಣ್ಣಲಿದೆ,

ಮಾದಕತೆಯ ನೋಟವಿದೆ,

ಚುಂಬಕತೆಯ ಶಕ್ತಿಯೂ

ನೋಟದಲ್ಲೇ ಅಡಗಿದೆ,

ಮಾಂತ್ರಿಕತೆಯ ಮೆಟ್ಟ ಬಲ್ಲೆ,

ಮಾದಕತೆಯ ಮೀರ ಬಲ್ಲೆ,

ಚುಂಬಕತೆಯ ಪುಳಕದಲ್ಲಿ

ಮಿಳಿತವಾಗುವಾಸೆ ನಲ್ಲೆ!!


-ಡಾ!ಸಿ. ಮುರಳೀಧರ

ಡಿಶಂಬರ, 2018

- ಡಾ!ಸಿ.ಮುರಳೀಧರ

23 Dec 2018, 10:41 pm

ಎಲ್ಲ ಮರೆತಿಹ ಮನವು

ಎಲ್ಲ ಮರೆತಿಹ ಮನವು
ನಿನ್ನ ಮರೆಯದು ಕ್ಷಣವೂ!!
ನನ್ನ ಬದುಕ ಈ ಕುಣಿತ
ನಿನಗೇನೇ ಅದು ಸ್ವಂತ!!

ಒಲುಮೆಯಲಿ ಆಗಸವ
ಮೀರಿಸುವ ನನ್ನ ಒಲವು!!
ನಿನ್ನೊಳಗೆ ಮನೆ ಮಾಡಲು
ಬಯಸುತಿದೆ ಅನು ಕ್ಷಣವೂ!!

ಹೆಸರಿನ ತನುವಿಗಿದೋ
ಉಸಿರನು ನೀ ತುಂಬು!!
ಎದೆಯೊಳಗೆ ಮಿಡಿಯುತಿಹ
ಹೃದಯದಲಿ ನೀ ನೆಲೆಸು!!

- ಪಿ.ಜಿ.ಜ್ಯೋತಿ

23 Dec 2018, 05:00 pm

ನಮ್ಮ ಸ್ನೇಹ

ನೀನು ಸನಿಹ ಇದ್ದರೆ
ಜಗದ ಸಂತೋಷ
ನನ್ನ ಸಮೀಪ.
ನಿತ್ಯವೂ ಬೆಳಗಿದ
ಬಾನಿನ ಬೆಳದಿಂಗಳದಂತೆ!

ನಿಮಿಷವು ನೀ
ದೂರಾದರೆ
ಚಂದಿರನಿಲ್ಲದ ಬಾನಿನಂತೆ
ಎಲ್ಲೆಲ್ಲೊ ಕತ್ತಲೆ ಕತ್ತಲು.

ಕೈ ಜೋಡಿಸಿ ಬೇಡುವೆ
ನಾ ನಿನ್ನ ಬಳಿ
ಧರೆ ಚಂದ್ರನಂತೆ
ನೀನು ನನಗಾಗಿರು.

ಕ್ಷುದ್ರಗ್ರಹಗಳು ಸುಳಿಯದಿರಲಿ
ಬಾರದಿರಲಿ ಮಾರುತಗಳು
ನಮ್ಮಿಬ್ಬರ ಸ್ನೇಹದಲ್ಲಿ.

- Vamu Gavada

23 Dec 2018, 01:53 pm

ಎಲ್ಲೆ ಮೀರಿದ ಒಲುಮೆ

ಎಲ್ಲೆಮೀರಿತಲ್ಲೇ ರಾಧೆ ನಿನ್ನ ಮೇಲಿನ ಪ್ರೀತಿ ಇಂದು...ಅಡ್ಡಿ ಹೇಳದಿರು ವಿರಹದ ವಿರುದ್ಧ ಸಮರ ಸಾರುವ ಆಸೆಯಾಗಿದೆ ಯುಗಳಸ್ನಾನಕ್ಕೆ ಶ್ರೀಕಾರ ಹಾಡಬೇಕಿದೆ ನಿನ್ನೊಡನೆ ಸೇರಿ.

ಒಲವ ಕಲ್ಯಾಣಿಯ ದಡದಲ್ಲಿ ಹುಡಿಮಣ್ಣ ಕೇಸರಚ್ಚಿಕೊಂಡು ನೊರೆಹಾಲ ಸಿಹಿಯಲ್ಲಿ ಮಿಂದೇಳಬೇಕಿದೆ ಜಗವ ಮರೆತು ನಿನ್ನೊಡನೆ ಸೇರಿ.

ಅಂಗೈ ಅರಿದ ಅರಿನಶಿನವ ಕೈಬೆರಳ ತುದಿಯು ಹಚ್ಚಬೇಕಿದೆ ನಿನ್ನ ನುಣುಪಾದ ಪಾದಕೆ ಮುದ್ದಾಡಲು ಬೆರಳಿಗೊಂದು ನೆಪ ಹುಡುಕುವ ಕಾರಣಕ್ಕೆ ತಿಳಿನೀರ ಜೊತೆ ಸೇರಿ.

ಕಡುಪಾಪಿ ಈ ಗಾಳಿ ನನ್ನ ಅನುಮತಿ ಇಲ್ಲದೇನೆ ನಿನ್ನೊಳಗಿನ ಉಸಿರಾಗಿ ಮೆರೆಯುತ್ತಿದೆ ಬುದ್ದಿ ಹೇಳಬೇಕಿದೆ ಅದನ್ನೊಮ್ಮೆ ನಿಲ್ಲಿಸಿ ನೀ ನನ್ನವಳೆಂದು ತೋರಿ ನಿನ್ನೊಳಗೆ ಸೇರಿ.

ಹಣೆಯ ಸಿಂಧೂರ ತುಟಿಯ ಮಂದಾರ ಗಲ್ಲದ ಸಿರಿ ಗಂಧ ಸೀಗೆಯ ಘಮ ಜಾರುತಿರಳು..ತೈಲ ಹಿಡಿದಿಟ್ಟ ಅಧರಗಳ ಸುಧೆ ಬಿಡಲಿಲ್ಲವೇ ಚೆಲುವೆ ನೋಡುತಲಿಂದು ಬರಗಾಲ ಬಂದಂತೆ ಒಡಳಿಗಂಟಿದ ಸೊಂಟದ ವೈಯ್ಯಾರ ನೋಡಲು ವೈಯ್ಯಾರಿ ನಿನ್ನ ಕಂಗಳ ಜೊತೆ ಸೇರಿ.

- ಚುಕ್ಕಿ

22 Dec 2018, 07:48 am

ಭಗ್ನ ಕನಸು

ಅವಳು...

ಮೊದಲ ಸಲ
ಎದೆ ಬಾಗಿಲು ತೆರೆದು
ಒಳ ನಡೆದು ಕುಂತಳು.

ಆದರೆ..

ಚಂಚಲೆಯ ಚಲನೆ
ಚಾಪಲ್ಯದ ಚಮತ್ಕಾರಕ್ಕೆ
ಸೋತ ಹ್ರದಯ
ಹುಚ್ಚುರೋಗಿಯ
ಹಾಸಿಗೆ ಸುಖ ಪಡೆದ.

ಹ್ರದಯ ಮರೆಯಿತು
ಜೇನು ಚಂದ್ರನ ಕನಸು.

- Vamu Gavada

21 Dec 2018, 11:39 pm

ಶುದ್ಧ ಮನಸ್ಸು ಬೆಳೆಸಿಕೊ. ...

ಒಲ್ಲದ ಮನಸ್ಸಿನಿಂದ ಬಣ್ಣ ತುಂಬಿದ
ಪ್ರೀತಿಯು ಕಾಮನಬಿಲ್ಲಾಗಲು.. ಸಾಧ್ಯವೇ

ಬಚ್ಚಿಟ್ಟ ಪ್ರೀತಿಯ ವ್ಯಕ್ತಪಡಿಸದೆ...
ನೀ...ಸೋತಾಗ ಮತ್ತೊಬ್ಬರ ಶಪಿಸುವುದರಲ್ಲಿ
ನ್ಯಾಯವಿದೆಯೇ...

ಕಣ್ಣoಚಲ್ಲಿ ತುಂಬಿದ ಕಣ್ಣೀರ ತಡೆದಿಟ್ಟು
ನಗು.. ಮುಖವ ಮಾಡೆಂದರೆ ಹಿಂಗುವುದೇ
... ತಡೆದಿಟ್ಟ ಕಣ್ಣೀರು

ಒಣಗಿದ ಮರಕ್ಕೆ ಸುತ್ತಿಕೊಂಡು ಬಳ್ಳಿ
ಗಾಳಿ ಬಂದಾಗ ಮರ ಬಿತ್ತೆಂದು ನೊಂದುಕೊಂಡರೆ... ತಪ್ಪುಯಾರದಿಲ್ಲಿ ...

ಮುಖಕ್ಕೆ ಮಸಿಬಳಿದು ಕನ್ನಡಿಯೆದುರು
ನಿಂತು ಸುಂದರನೆಂದು ಕನಸುಕಂಡರೆ
ಮೂರ್ಖತನದ... ಪರಿಯಲ್ಲವೇ

ಎದುರಿನ ಪ್ರಸಂಗ ಸನ್ನಿವೇಶಗಳ ಕಂಡು
ಕೊರಗದೆ... ಮನಸ್ಸಿನಿಂದ ಕಾಣು
..........ಅವಳ

✍️
ಮಂಜು

- ಮಂಜು

21 Dec 2018, 09:18 pm

ನಮ್ಮ ಬಾಳ ಬೆಳಕು

ಹೆಣ್ಣೇ ನಮ್ಮ ಬಾಳಿನ ಬೆಳಕು
ಅವಳಿಲ್ಲದಿದ್ದರೆ ನಮ್ಮ ಬದುಕೆ ಕೊಳಕು|
ಹೆಣ್ಣೇ ನಮ್ಮ ಜೀವನಚಕ್ರ
ಅವಳಿಲ್ಲದಿದ್ದರೆ ಸಾಗದು ಎಂದೂ ಕಾಲಚಕ್ರ||ಪ||

ಅವಳೇ ನಮ್ಮ ಸೃಷ್ಟಿಯ ಮೂಲ
ಅವಳಿಲ್ಲದಿದ್ದರೆ ನಮಗೆ ದೃಷ್ಟಿಯೇ ಇಲ್ಲ|
ಜನಿಸಿದಳು ಪಡೆದು ಹೆಣ್ಣಿನ ರೂಪ
ಎಲ್ಲಾ ನಿಭಾಯಿಸುವಳು ತಾಳಿ ಬಹುರೂಪ||೧||

ಪ್ರಾಣ ಪಣಕಿಟ್ಟು ಜನ್ಮ ನೀಡುವಳು
ನಮಗಾಗೆ ಪುನರ್ಜನ್ಮ ಬೇಡುವಳು|
ತನ್ನ ಜೀವನವ ನಮಗೆ ಮೀಸಲು ಇಟ್ಟು
ಬದುಕುವಳು ತನ್ನ ಆಸೆಗಳ ಸುಟ್ಟು||೨||

ಬರುವಳು ಅಕ್ಕ-ತಂಗಿಯಾಗಿ
ನಮ್ಮ ಕಷ್ಟ-ಸುಖಕ್ಕೆ ಜೊತೆಯಾಗಿ|
ಅಕ್ಕಳಾಗಿ ನಮಗೆ ಅಕ್ಕರೆ ಕಲಿಸಿ
ತಂಗಿಯಾಗಿ ನಮ್ಮ ಅಭಿಮಾನ ಗಳಿಸಿ||೩||

ಎಲ್ಲೋ ಜನಿಸಿ ನಮ್ಮ ವರಿಸಿ
ಬಂದಳು ಆಗಿ ಮನದ ಅರಸಿ|
ದುಡಿಯುವಳು ನಮ್ಮ ಒಳಿತನ್ನೇ ಬಯಸಿ
ಜೊತೆ ಸಾಗುವಳು ಬದುಕನ್ನೇ ಜಯಸಿ||೪||

ಮಗಳಾಗಿ ನಮ್ಮಯ ನೋವು ಮರೆಸಿ
ನಾಯಕ ಮಾಡಿ ಪೌರುಷ ಮೆರೆಸಿ|
ಆರತಿ ಬೆಳಗಿ ಸಾರುವಳು ಕೀರ್ತಿ
ತಾಯಿಯ ಮೂರ್ತಿ ಬಾಳಿಗೆ ಸ್ಫೂರ್ತಿ||೫||

- ಕೆ.ಕೆ.ನಂದಾದೀಪ್(ಕೋಲಾರದ ಕಂದ)

16 Dec 2018, 06:59 pm