ಕತ್ತಲ ಅಂಗಳದಲ್ಲಿ ಐದು ಎಸಳಿನ
ಮಿಣುಕು ದೀಪವ ಹಿಡಿದು
ನಿಂತಿರುವಳಿದೋ
ಸಿಂಗಾರಗೊಂಡ ಮನೋಹರಿ,
ಮೆಲ್ಲ ಬೀಸುತ್ತಿದೆ ಗಾಳಿ
ಕೊಂಚ ಕರುಣೆಯನು ತೋರಿ
ತೊಂದರೆಯನೊಡ್ಡದೆ ತರುಣಿಗೆ
ತನ್ನಿರುವಿಕೆಯನು ತೋರದೆ,
ಹಸಿರು ಸೀರೆಯನುಟ್ಟು
ಮುಡಿಗೆ ಮಲ್ಲಿಗೆಯನಿಟ್ಟು
ಗಳಿರು ಹಸಿರು ಬಳೆ
ದೈವ ಭಕ್ತಿಯಲಿ ನವಿರು
ಸಿಂಗಾರಗೊಂಡವಳೇ..
ತುಟಿಯಂಚಲಿ ತುಸು
ನಗುವಿನ ಲೇಪನ,
ಮುಗ್ದ ಮೊಗದಿ ತುಂಬಿದ
ಆಧ್ಯಾತ್ಮ ಪ್ರೇರಣೆಯ ಹೊಳಪು
ಕಿರು ಹಣತೆಯ ಬೆಳಕಿನಲ್ಲಿ
ಮಿರುಗಿಹುದು ಆಕೆಯ
ಶುದ್ಧ ಮನಸಿನ ಮೊಗ.
ಕಪಟ ಮೋಸ ವಂಚನೆಯ ಆಸೆಯ ಸುಳಿಯಲ್ಲಿ ಕೆಟ್ಟದ್ದನ್ನು ಮಾಡುತ್ತಿರುವ ಓ ಮನುಷ್ಯನೇ
ಒಂದು ಸಾರಿ ನೀನ್ನ ಕಣ್ಣ ತೆರೆದು ನೋಡು ಮನುಷ್ಯನೇ ಆ ಪ್ರಕೃತಿಗೆ
ಯಾವುದೇ ತರಹದ
ಕಲಾಪ ಗಳಿಲ್ಲದೆ ಪ್ರತಿಬಿಂಬಿಸುತ್ತದೆ.....
ಮರೆತರು ಮರೆಯಲಾಗದ ನಿನ್ನ ಪ್ರೀತಿ
ಸುಟ್ಟರು ಸುಡದಿರುವ ಹಳೆ ನೆನಪುಗಳು
ಕೊಂದರೂ ಸಾಯದ ಈ ಹಾಳಾದ ಮನಸ್ಸಿನ ಭಾವನೆಗಳು
ಇದಕ್ಕೆಲ್ಲ ಕಾರಣ ನಿನ್ನ ಪ್ರೀತಿ
ಕೆಲವೊಮ್ಮೆ ಹೇಳದೆ ಕೇಳಿದೆ ಬಂದು ಹೋಗುವ ಪ್ರೀತಿಗೆ ಕಣ್ಣೀರಿನ ಪ್ರೀತಿನೆ ಶಾಶ್ವತ ನಾ.........?
ಮನಸ್ಸಿನ ದೇವತೆ ನೀನು,ನನ್ನೊಂದಿಗೆ ಇನ್ನಿಲ್ಲ
ಈ ಜೀವಕ್ಕೆ ಸಂಗಾತಿ ನೀ ಇನ್ನೂ ನನಗಿಲ್ಲ
ಈ ಹೃದಯಕ್ಕೆ ಒಡತಿಯೂ ನೀನು ಎಂದೂ ನಂಬಿದೆ ನಾನು
ಈ ಜೀವದ ಭಾವನೆಗಳನ್ನು ತಲ್ಲಿಸಿದವಳು ನೀನು
ಒಬ್ಬಂಟಿ ಆಗಿರಬೇಕು ಜೀವಿಸಲು ಕಲಿಯಬೇಕು
ನೀ ನನ್ನ ಮರೆತಿರುವೆ ಅದನ್ನು ನೆನೆಸಿ ಕೊರಗಬೇಕು
ನೆನಪಿಸೋ ಮಾತೇ
ಇನ್ನಿಲ್ಲ ನಿನ್ನ ನೆನಪಲ್ಲಿ ಕೊರಗುವುದಿಲ್ಲ
ಪ್ರೀತಿ ಮಾಡಿದ ದಿನವ ಯೋಚಿಸಿ ನೀನು ಎಂದೂ ಅಳಬೇಕು
ನಾನು ನೀಡಿದ ಪ್ರೇಮಕ್ಕೆ ಬದಲು ನೋವೇ ನನಗಿನ್ನು ಸಾಕು
ದ್ವೇಷ ನನಗೆ ಇಲ್ಲ ನಿನ್ನಲ್ಲಿ ಕರುಣೆ ಅನ್ನೋದೆ ಇಲ್ಲ
ನಿನ್ನ ಮೋಸಕ್ಕೆ ಬಲಿಯಾದ ಪಾಪಿ ನಾನು ಇನ್ನೊಂದು ನಿನ್ನ ಮುಂದೆಯೇ ಸಾಧಿಸಿ ಬಾಳುವ ಆಸೆ ಇದೆ ಒಂದೂ
ಮರೆಯಬೇಕು ನಿನ್ನ ನಾನು ಮರೆತು ಜೀವನ ಕಳೆಯಬೇಕು ಇನ್ನೂ
ನಿನ್ನ ಕೈ ಹಿಡಿದು ನಡೆಸುವವನು ಭಾಗ್ಯವಂತನಿರಬೇಕು ಜೀವಿಸುವ ಕಾಲ ನೀನಿನ್ನು ಸುಖವಾಗಿ ಇದ್ದರೆ ಸಾಕು ನೋವು ನನಗಿರಲಿ ಖುಷಿಯು ನಿನ್ನ ಜೊತೆಗಿನ್ನು ಬರಲಿ
ನನ್ನೊಂದಿಗೆ ಕಳೆದ ದಿನವನ್ನು ಕನಸು ಎಂದು ನೆನೆಸು ವಿಧಿಯಾಟದಲ್ಲಿ ಬಲಿಯಾದನೆಂಬ ನೋಡಿ ಬದುಕಲೇ ಇನ್ನೂ