Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನೋವಲ್ಲೂ ನಲಿವಲ್ಲೂ ಇಡೀ ದಿನ
ಹಂಬಲಿಸಿದೆ ಮನ
ಕಾಡುತಿಹ ನೋವಿಗೆ ನೆನಪೆಂಬ
ಪ್ರಶ್ನೆಗಳ ಸಮಾಗಮ!
ನಿನ್ನೊಲವ ಬಯಸುವ ಮನಸ್ಸಿಂದು
ನಿನ್ನನ್ನೆ ನೆನೆದು ಕುಳಿತಿದೆಯಿಂದು
ಮನಸ್ಸಿನಾ ಕನಸೆಲ್ಲವು
ಕಣ್ಣಲ್ಲೆ ನೀರಾಯಿತು ಇಂದು
ಒರೆಸುವಾ ಸಂತೈಸುವಾ ಮನಸ್ಸು
ದೂರವಾಯಿತು...
ಜೊತೆಯಿದ್ದರು, ಇರದಂತೆ ನಟಿಸಿದರು
ಕಾಣುವಾ ಕಲ್ಪನೆ ನಿನದೊಂದೆನೆ
ಒಪ್ಪುಗೆಯಾ ಅಪ್ಪುಗೆಯಾ ಕನಸ್ಸೆಲ್ಲಾ
ಹೇಳಲು ಆಗದ ವೇದನೆ
ಜೊತೆಯಾಗುವುದು,ಒಂದಾಗುವುದು
ಮನಸ್ಸಿನ ಎಲ್ಲಾ ಕಲ್ಪನೆ...
- Harini (Hani)
05 Feb 2019, 12:04 am
ಉಳಿಸಿ ಬಿಡು ನನ್ನನ್ನೊಮ್ಮೆ ನಿನ್ನ ರಾತ್ರಿಯ ಕನಸುಗಳಲ್ಲಿ ನನಸಾಗಿ.
ಉಳಿಸಿ ಬಿಡು ನನ್ನನ್ನೊಮ್ಮೆ
ಹಗಲಿನಲ್ಲಿನ ತೀರದ ವಿರಹಕೆ ರಾತ್ರಿಯಾಗಿ.
ಉಳಿಸಿ ಬಿಡು ನನ್ನನ್ನೊಮ್ಮೆ ಮನದ ಹಾಳೆಯ ಮೇಲೆ ಬಣ್ಣದ ಅಕ್ಷರವಾಗಿ.
ಉಳಿಸಿ ಬಿಡು ನನ್ನನ್ನೊಮ್ಮೆ
ಮನೆಯ ಹೊಸ್ತಿಲ ಮೇಲಿನ ಮಾಸದ ಅರಿಶಿನವಾಗಿ.
ಉಳಿಸಿ ಬಿಡು ನನ್ನನ್ನೊಮ್ಮೆ
ಬಿಸಿ ಹಾಲಿನ ಮೇಲೆ ಮೃಧು ಕೆನೆಯಾಗಿ.
ಉಳಿಸಿ ಬಿಡು ನನ್ನನ್ನೊಮ್ಮೆ
ಒಲವ ದಾಹಕ್ಕೆ ನೀರಾಗಿ, ನಿನ್ನ ಮುದ್ದಾದ ನಗುವಿನ ಹಿಂದೆ ಕಾರಣವಾಗಿ.
ಉಳಿಸಿ ಬಿಡು ನನ್ನನ್ನೊಮ್ಮೆ ನಿನ್ನಲ್ಲಿ ನೀನಾಗಿ❤
- ಚುಕ್ಕಿ
03 Feb 2019, 03:01 pm
ಮಾತಿನಲ್ಲಿ ಮೌನ
ಆದರೆ ಇದರಲ್ಲೂ್ಂಟು
ಭಾವ, ನಂಬಿಕೆ, ಸನ್ನೆ, ಗೌಪ್ಯತೆ ಹಾಗೂ ಸಂಕೀಪ್ಷತೆ!
ಈ ಮೌನಮಾತು ತಲುಪಿ, ಸಂಚಲಿಸಿ
ಶಬ್ದಕೋಶ ತಡಕಿ, ಅರ್ಥೈಸಿ,
ತನು ಮನ ದರಿಸಿ ನರನಾಡಿಗಳಲ್ಲಿ ಆವರಿಸಿ
ಪ್ರತಿಬಿಂಬಿಸುವಲ್ಲಿ ಯಶಸ್ವಿ!
- ಮದುರ
- ಮದನ್
02 Feb 2019, 06:32 am
ತಿಂಗಳ ಚಂದ್ರನ
ಬೆಳ್ಳಿಯ ಬಟ್ಟಲು
ಮಮತೆಯ ತುತ್ತನ್ನು
ಕಂದಗೆ ನೀಡಲು!!
ಮುಗಿಲನು ಏರಲು
ಬೆಳದಿಂಗಳ ಮೆಟ್ಟಿಲು
ತಾರೆಯ ಜೊತೆಯಲಿ
ಕಂದನು ಆಡಲು!!
ಮಿಂಚಿನ ಬಳ್ಳಿಯು
ತೊಟ್ಟಿಲ ಕಟ್ಟಲು
ಮೋಡದ ಹಾಸಿಗೆ
ಕಂದಗೆ ಮೀಸಲು!!
ತಂಗಾಳಿಯು ಬೀಸುತ
ಜೋಗುಳವ ಹಾಡಲು
ಚೆಂದದ ಸ್ವಪ್ನವು
ಕಂದನು ವಿರಮಿಸಲು!!
- ಪಿ.ಜಿ.ಜ್ಯೋತಿ
31 Jan 2019, 07:15 pm
ಕಣ್ಣಳತೆಯ ದೂರದಲ್ಲಿ
ನಾ ಬಂದು ನಿಂತರೂನೂ
ನೋಡಲಾರದೇ ನನ್ನ ನೀನು
ಮರೆಮಾಚುವುದು ಏನನು!!
ಮಾಯದ ಪರದೆಯೊಂದು
ಮುಸುಕಿರಲು ನಿನ್ನನು
ಕಂಡರೂ ಕಾಣದಂತೆ ಇರುವ
ನಟನೆಯೂ ನಿನ್ನದೇ!!
ಪ್ರೀತಿಯ ಆಳಕೆ ಇಳಿದು
ಸಂಭ್ರಮಿಸುತಿರಲು ನಾನು
ನೆನಪು ಅಳಿಸಿದಂತೆ ನಟಿಸಿ
ತೊರೆದೆಯಾ ನನ್ನನು ನೀನು!!
ಯಾವ ತಪ್ಪಿಗಾಗಿ ಈ ಶಿಕ್ಷೆ
ಮರಳಿ ನೀಡು ಪ್ರೀತಿಯ ಭಿಕ್ಷೆ
ಪರದೆ ಸರಿಸಿ ಒಮ್ಮೆ ನೋಡು
ಕಾದಿರುವೆ ನಿನಗಾಗಿ ನಾನು!!
- ಪಿ.ಜಿ.ಜ್ಯೋತಿ
31 Jan 2019, 07:04 pm
ಪ್ರೇಮ ಎಂಬ ಕಣ್ಗಳೆರಡು
ರೆಪ್ಪೆ ಅದಕೆ ಕಾವಲು!!
ಕಣ್ಣ ಅಪ್ಪಿ ಕಾಯುತ್ತಿದ್ದರೂ
ಮನದ ನೋವ ಅರಿಯದು!!
ಬೀಸಿ ಬರುವ ತಂಪು ಗಾಳಿ
ನಿನ್ನ ನೆನಪ ತರುವುದು!!
ಉಕ್ಕಿ ಬರುವ ಕಣ್ಣ ನೀರ
ರೆಪ್ಪೆ ತಾನು ತಡೆಯದು!!
ಕಣ್ಣ ನೀರು ಕೆನ್ನೆ ಮೇಲೇ
ಹರಿದು ಕೊರಳ ಸೇರಿತು!!
ಕೊರಳಿನಿಂದ ಎದೆಗೆ ಜಾರಿ
ಮನದ ನೋವ ಕೇಳಿತು!!
ಮಿಡಿಯುತಿರುವ ಹೃದಯವು
ನಿನ್ನ ಹೆಸರು ನುಡಿಯಿತು!!
ನೀನು ಇರದೆ ಉಳಿಯಲಾರೆ
ಎಂಬ ಸತ್ಯವ ತಿಳಿಸಿತು!!
ನೀನು ಒಂದು ನೆನಪು ಮಾತ್ರ
ಎಂಬುದೇ ಇಂದು ಸತ್ಯವು!!
ಮರೆಯಬೇಕು ಅಂದರೂನೂ
ನಿನ್ನ ನೆನೆಯುವೆ ನಿತ್ಯವೂ!!
- ಪಿ.ಜಿ.ಜ್ಯೋತಿ
31 Jan 2019, 03:16 pm
ತಂಪು ಗಾಳಿಯೇ
ನೀ ಉಸಿರ ಮಾಯೆಯೇ
ನೀಡು ಉಸಿರನು
ಜಡ ದೇಹವು ಇಲ್ಲಿದೇ!!
ನನ್ನಯ ಕಾಯವು
ಅದು ನನ್ನನು ಕಾಯದೇ
ನನ್ನನೇ ತೊರೆಯುವ
ಮನಸನು ಮಾಡಿದೆ!!
ದಾರಿಯು ಕಾಣದಂತೆ
ಇರುಳು ಕವಿದಿರುವಾಗ
ಬೆಳಕ ತೋರಲು ನನಗೆ
ಹಣತೆಯೂ ದೊರೆಯದೀಗ!!
ಕಣ್ಣನು ಮುಚ್ಚಿ
ನಾ ಸುಮ್ಮನೇ ಮಲಗಲು
ಅರಿಯದೇ ಬಂದರು
ನನ್ನ ಪ್ರಾಣವ ಒಯ್ದರು!!
ಪ್ರಾಣವೇ ಇಲ್ಲದೇ
ಜಡ ದೇಹವು ಮಲಗಿದೆ
ಮರು ಪ್ರಾಣದ ಭಿಕ್ಷಯ
ಈ ದೇಹವು ಬೇಡಿದೆ!!
- ಪಿ.ಜಿ.ಜ್ಯೋತಿ
31 Jan 2019, 03:12 pm
ಕಡಲಿನಾಳದ ಮುತ್ತು
ಕೊರಳ ಸೇರುವ ಹಾಗೆ
ಮನಸಿನಾಳದ ಪ್ರೀತಿ
ನಿನ್ನ ಸೇರಲಿ ಬೇಗ!!
ತಾನೇ ತನ್ನನು ಮರೆತು
ಕೋಗಿಲೆಯು ಹಾಡುವಂತೆ
ನಾನು ನನ್ನನೇ ಮರೆತು
ನಿನ್ನ ಕಾಯುತ ನಿಂತೆ!!
ಹೂವು ಗಂಧವ ಬೀರಿ
ದುಂಬಿಯನು ಕರೆವಂತೆ
ಕರೆಯಲಾರೆಯಾ ನೀನು
ನನ್ನನು ಬಳಿ ಬರುವಂತೆ!!
ಇರುಳ ಆ ಬಾನಿನಲಿ
ಹೊಳೆವ ಚಂದ್ರನ ಕಾಂತಿ
ಇಳೆಯಲ್ಲಿ ನಾ ಕಂಡ
ಬೆಳದಿಂಗಳೇ ನೀನಂತೆ!!
- ಪಿ.ಜಿ.ಜ್ಯೋತಿ
31 Jan 2019, 03:11 pm
ಅಂದ ಚೆಂದದಲ್ಲಿ
ಮನಸೆಳೆಯುವೆ
ಬಣ್ಣದೋಕುಳಿಯಲ್ಲಿ
ಮಿಂದಿರುವೆ
ಭಾವಾಂತರಂಗಕೂ
ಲಗ್ಗೆ ಇಟ್ಟಿರುವೆ
ಸುಮ್ಮನಿರಲಿ ಹೇಗೆ ಹೇಳು ನನ್ನೊಲವೆ?
ನಲಿವೆ, ಬಣ್ಣಗಳ ಮಾತು ಉಲಿವೆ
ನನ್ನೊಲವೆ..!!
- preethi
30 Jan 2019, 09:30 pm
ನನ್ನವನ ಮೇಲಿನ ಪ್ರೀತಿಯನ್ನ
ಘೋಷಿಸುವಾಗ
ಹಿಡಿದಿದ್ದ ಧ್ವನಿವರ್ಧಕಕ್ಕೂ
ಅವನ ಮೇಲೆ ಪ್ರೀತಿಯಾಯಿತಂತೆ
- preethi
30 Jan 2019, 09:23 pm