ಪ್ರಜಾತಂತ್ರದ ಯಶಸಸ್ಸಿಗೆ ಸೋಪಾನ
ನೀನು ಮಾಡುವ ಮತದಾನ
ಓ ಮಾನ್ಯ.ಮತದಾರ....
ಗಣತಂತ್ರದ ಗೆಲುವಿಗೆ ಮೆಟ್ಟಿಲು
ನೀನು ಬೆಳಗಿಸುವ ಶಾಹಿ ಗುರುತಿನ ಬೆರಳು
ಓ ಅಭಿವೃದ್ಧಿಯ ಹರಿಕಾರ....
"ತಪ್ಪದೇ ಮಾಡು ಇಂದು ಮತದಾನ
ನಿನ್ನಿಂದಲೇ ಆಗಲಿ ಬಲಿಷ್ಟ ರಾಷ್ಟ್ರದ ನಿರ್ಮಾಣ..
ಚಲಾಯಿಸು ನಿನ್ನ ಹೆಮ್ಮೆಯ ಹಕ್ಕನ್ನ
ನನಸಾಗಿಸು ದೇಶದ ಹಿರಿಮೆಯ ಕನಸನ್ನ"....
ನಿನ್ನ ವೋಟಲಿ ಅಡಗಿದೆ
ರಾಷ್ಟ್ರದ ಉದ್ಧಾರ
ನಿನ್ನಿಂದಲೇ ತೊಲಗಬೇಕಿದೆ
ರಾಷ್ಟ್ರದ ಭ್ರಷ್ಟಚಾರ....
ನಿನ್ನ ಒಪ್ಪಿಗೆ ಬೇಕಿದೆ
ಮಾಡೋ ಸೂಕ್ತ ನಿರ್ಧಾರ
ನಿನ್ನ ತೀರ್ಪಿಗೆ ಬೆಲೆಯಿದೆ
ನೀಡೋ ಉತ್ತಮರಿಗೆ ಅಧಿಕಾರ....
ನೂರೆಂಟು ಸಮಸ್ಯೆಗಳನು ಎದುರಿಸಬೇಕಿದೆ
ಅದಕೆ ಹದಿನೆಂಟು ತುಂಬಿದವರ ಮತವಾಗಲಿ ಉತ್ತರ...
ಮತದಾರರಿಂದಲೇ ಸರ್ಕಾರ
ಮತದಾರರಿಗಾಗಿಯೇ ಸರ್ಕಾರ....
ಇಲ್ಲಿ ನಡೆಯೋದು ಪ್ರಜೆಗಳ ಪ್ರಭುತ್ವ
ನೀಡೋ ಪ್ರಾಮಾಣಿಕರಿಗೆ ನಾಯಕತ್ವ....
ಜಾತಿಧರ್ಮದ ಸರಪಳಿಗೆ ಸೋಲದಿರಲಿ ಮನುಷ್ಯತ್ವ
ದೇಶದ ಒಳಿತಿಗೆ ಜನರ ಹಿತಕ್ಕೆ ನೀಡು ಮಹತ್ವ..
ಓ ಮತದಾರನೇ ನೀನೆ ಈ ದೇಶದ ಸಂಪತ್ತು
ಹಣಕ್ಕೆ ವೋಟು ಮಾರಿಕೊಂಡು ಊರಿಗೆ ತರದಿರು ಆಪತ್ತು..
ಮರೆಯದಿರು ಮತದಾರನೇ ಈ ಪವಿತ್ರ ಕರ್ತವ್ಯ
ತಂದುಕೊಡು ದೇಶಕೆ ಸುಂದರ ಭವಿತವ್ಯ...
ನಿನ್ನ ಒಂದೊಂದು ಮತ
ದೇಶಕೆ ಎಂದೆಂದೂ ಹಿತ....
ಮತದಾನ ಮಾಡೋಕೆ
ಇಂದು ಅಭಿಮಾನದಿಂದ ಬಾರೋ....
ಷಾಹಿ ಗುರುತಿನ ಬೆರಳನ್ನು
ನೀನು ಹೆಮ್ಮೆಯಿಂದ ತೋರೋ....
ನಮ್ಮ ನಾಡಿನ ಏಳಿಗೆ
ನಿನ್ನ ವೋಟಿನಿಂದ ನೋಡೋ....
ಈ ದೇಶ ಈ ಜನಕೆ
ಸುಂದರ ನಾಳೆಯ ನೀಡೋ....
ಜಾತಿಧರ್ಮದ ಸಂಕೋಲೆಗೆ ವೋಟು ಮುಡಿದು
ಹಾಳು ಮಾಡದಿರು ಸಮಾಜದ ನೆಮ್ಮದಿ....
ಹಣದ ಗುಂಡಿಗೆ ಮತವ ಸುರಿದು
ದೇಶದ ಭವಿಷ್ಯವನ್ನು ಮಾಡದಿರು ಸಮಾಧಿ....
ಆಸೆ ಆಮಿಷಗಳ ಕುತಂತ್ರಕೆ ಸೋತು
ಜನತಂತ್ರ ವ್ಯವಸ್ಥೆಗೆ ತರದಿರು ಕುತ್ತು....
ಮತದಾನ ನಿನ್ನ ಪವಿತ್ರ ಅಧಿಕಾರ
ಎಲ್ಲಾ ಆಗುಹೋಗುಗಳಿಗೆ ನೀನೇ ಜವಾಬ್ದಾರ....
ಭ್ರಷ್ಟರಿಗೆ ಮಣೆ ಹಾಕದಿರು
ರಾಷ್ಟ್ರ ಪ್ರಜ್ಞೆ ಮರೆಯದಿರು....
ಅರ್ಹ ಪ್ರತಿನಿಧಿಯನು ಆರಿಸು
ದೇಶದ ಮಂದಿಯನು ಬೆಳಗಿಸು....
ನೀನಾಗು ನಾಡಿನ ಜೀವನಾಡಿ
ನಿನ್ನ ವೋಟು ಬರೆಯಲಿ
ನಾಡಿನ ಪ್ರಗತಿಗೆ ಮುನ್ನುಡಿ....
ನೀನಾಗು ದೇಶದ ಭದ್ರ ಬುನಾದಿ
ನಿನ್ನ ವೋಟು ಹಾಡಲಿ
ದೇಶದ ಅಭಿವೃದ್ಧಿಗೆ ನಾಂದಿ....
ಅತ್ತಿತ್ತ ಹೋಗಲೆಂದು
ಹೊರಡುವಾಗ ನೆನಪಾಗುವೆಯಲ್ಲೆ..
ಮನೆ ಹೊರಗೆ ಕಾಲಿಡಲು
ನಿನ್ನ ಮರೆವಿನ ನೆನಪು..
ಹೇಳು, ತೆಗೆದುಕೊಂಡ
ನನ್ನ ಹೊಸ ಚಪ್ಪಲಿಗಳನು
ಎಂದು ಹಿಂದಿರುಗಿಸಬಲ್ಲೆ?
@ಪ್ರೇಮ್@