Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸ್ಪರ್ಧಾಲೋಕ

ಸ್ಪರ್ಧಾ ಸಾಗರದಲ್ಲಿ
ಕುಂಟುತ್ತಾ ಸಾಗುವ
ಕೂರ್ಮನು ನಾನಾದೆನೆ

ಸ್ಪರ್ಧಾಂಗಣದಲ್ಲಿ
ವೀರಾಗ್ರಣಿಗಳ ಹೋರಾಟದಲ್ಲಿ
ಕೂಪ ಮಂಡೂಕನಾನಾಗಿಹೆನೆ

ತಯಾರಿಯ ತೊರೆದು
ತೋರಿಕೆಯ ಮೆರೆದು
ಮಿತ್ಯಲೋಕದಧಿಪತಿನಾನಾದೆನೆ

ಉತ್ತರನ ಪೌರುಷದಿ
ಹಿರಿಮೆಯ ಬಯಸಿ
ಸ್ವಪ್ನಲೋಕದ ಸುಂದರಿನಾನಾದೆನೆ

ಗುರಿಯಿಂದ ಸರಿದು
ಗುಲಾಮಗಿರಿಗೆ ಒಲಿದ
ಬಲಿಪಶುನಾನಾದೆನೆ

ಸಾಧಿಸುವ ಛಲವಿಲ್ಲದೆ
ನಿರ್ಧರಿಸುವ ಬಲವಿಲ್ಲದೆ
ಸವೆಯುತಿಹುದು ಕಾಲ



ಶಾರದ

- ಶಕುಂತಲಾ

27 Mar 2019, 04:44 pm

ತನುವಿನ ತಾರೆ


ಗೆಳತಿ,
ಕಳೆದ ರಾತ್ರಿಯ ನೆನೆದು ದಿನ ಕಳೆಯಬೇಕಿದೆ,
ಆಡಿದ ಮಾತುಗಳೆಲ್ಲವು ಪ್ರತಿ ಅಕ್ಷರ
ನೆನಪಿಟ್ಟು ನಿನ್ನ ಹೆಸರಂತೆ ಹಾಡಬೇಕಿದೆ!!

ನಿನ್ನ ನೆನೆದು ನನ್ನಲ್ಲಿ ಆಡಿಕೊಂಡ
ಮಾತುಗಳೆಲ್ಲವು ನಿನ್ನ ಎದೆಯ ಸೇರದೆ ಬೇಸರಗೊಂಡಿವೆ, ಹಾಲಿನೊಡನೆ ಅರೆದ
ಸಿರಿ ಗಂಧ ಘಮಗೊಟ್ಟು ನಿನ್ನ ಕೂಗುತಿದೆ,
ಜೊತೆಯಾಗು ಸಂಗಾತಿ ಕಣ್ಣ ರೆಪ್ಪೆ ಮುಚ್ಚದೆ
ನಿನ್ನ ಕಾಯಬೇಕಿದೆ.

ಒಂಟಿತನ ಒಡೆದ ಸದ್ದು ಜಂಟಿಯಾಗಿ
ನಾವಾಗಬೇಕಿದೆ, ತೆರೆ ಸರಿಸಿ ಕಣ್ಣ ಮಿಂಚಿಗೆ
ರೂಪವಾಗು ಸೊಂಟದ ಮೇಲಿನ ಮಚ್ಚೆಯ
ಸುತ್ತಳತೆ ನೋಡಬೇಕಿದೆ.

ಮುಸ್ಸಂಜೆ ಮರೆಯಾದರೆ ನಾಚಿ ಕೂರಬೇಡ
ರಾತ್ರಿಯ ಲೆಕ್ಕ ಇನ್ನೂ ಚುಕ್ತಾ ಮಾಡಬೇಕಿದೆ,
ತುಂಟ ನಗೆಯ ಬೀರಿ ಓಡಿ ಹೋಗಬೇಡ
ಜಡೆಯ ಎಳೆದು ಕೊರಳಿಗೊಂದು ಸವಿಮುತ್ತ ನೀಡಬೇಕಿದೆ, ಮುಂಜಾವಿನ ತಂಪಿಗೆ
ಸೊಂಪಾಗಿ ನಿದುರಿಸಬೇಡ ತುಳಿಸಿಕಟ್ಟೆಯ
ಸುತ್ತುವಾಗ ಒದ್ದೆ ಬೆನ್ನ ಕದ್ದು ನೋಡಬೇಕಿದೆ.
❤❤❤

- ಚುಕ್ಕಿ

25 Mar 2019, 07:00 pm

ನನ್ನಮ್ಮಿ

ನನಗೆ ಇಷ್ಟ ನನ್ನ ಮಮ್ಮಿ
ಎಲ್ಲ ಕೊಡಿಸುತ್ತಾಳೆ ಮಮ್ಮಿ
ಮುದ್ದುಮಾಡುತ್ತಾಳೆ ಜಾಸ್ತಿ
ನನ್ನ ಪಾಲಿಗೆ ಅವಳೇ ಆಸ್ತಿ
ಎಷ್ಟು ಗೊಳಿ ಕೊಂಡರು
ಸಿಟ್ಟು ಬರದು ಅಂದರು
ನನ್ನ ನಗುತ್ತಾಳೆ ಬಂದು
ಎಲ್ಲ ಚಿಂತೆ ಬಿಟ್ಟು ಬಂದು

- YASHASWINISRATHOD

21 Mar 2019, 04:34 pm

ಹೃದಯಕೆ ಹಚ್ಚಿದ ಬಣ್ಣ


ವಿರಹಕೆ ಒಡೆದು ಚೂರಾದ
ಹೂಗಳ ಮೈಸಿರಿ ನಿನ್ನ ಸೇರಿ
ಬಣ್ಣವಾಗಿಹುದು ನನ್ನೆದೆಯ
ಮೀಟಿ ರಂಗೆರಚಿಕೊಳ್ಳಲು.

ಹೃದಗಳ ಮೃದು ಗುದ್ದಾಟಕೆ
ಗುಲಾಬಿ ನಾಚಿ ಕೆಂಪಾಯಿತು,
ಇಳಿಸಂಜೆ ಜಾರುತಿರಳು
ಮುಂಜಾನೆಯ ನಿನ್ನ ನೆನಪು ತುಸು
ಕೋಪಗೊಂಡು ಕಂದಾಯಿತು.

ಕಪ್ಪಾದ ಆಗಸದಲ್ಲಿ ಮೋಡ
ಮುದ್ದಾಡಿ ಕರೆತಂದ ಚಂದಿರನ
ತಂಪು ಬಿಳುಪಾಯಿತು,
ನೀ ಮುಡಿಸಿದ ಸಂಪಿಗೆ ಸರಸದಿ
ಸಾವನಪ್ಪಿ ,ಅಪ್ಪುಗೆಯ ಬಿರುಸಿಗೆ
ನೆಲಕ್ಕೆ ಜಾರಿ ಹಳದಿಯಾಯಿತು.

ಕಣ್ಣ ಸೇರಿ ಪ್ರೀತಿ ಆಳ ತಿಳಿಯುವ
ಕಿಡಿಗೇಡಿ ಮನಕೆ ನಿನ್ನ ಪ್ರೀತಿ
ಅಂತ್ಯವಿಲ್ಲದ ನೀಲಿಯಾಯಿತು,
ಒಳ ಬಂದ ತಪ್ಪಿಗೆ ಹೊರಬಿಡದೆ
ಶಿಕ್ಷೆ ನೀಡಿ,ಅನುನಿತ್ಯ ಕಿತ್ತಾಡಿ ಮತ್ತೆ
ಮುದ್ದಾಡಿ ನಿನ್ನೊಲವಿನ ಬಣ್ಣವೊಂದು ಕಿತ್ತಾಳೆಯಾಯಿತು.

ಒಲವ ಮಳೆಗೆ ಕಾದು ಕಾದು ಒಣಗಿದ್ದ
ನೂರಾಸೆ ವಸಂತದ ಚಿಗುರು ಸವಿದು
ನಿನ್ನುಸಿರಲಿ ಹಸಿರಾಯಿತು, ನಿನ್ನಲ್ಲಿ ನನ್ನಂತೆ
ನನ್ನಲ್ಲಿ ನಿನ್ನಂತೆ ಹಪಹಪಿಸಿ ಹಸನಾಗಿ
ಹಾಳಾಯಿತು ಈ ಪ್ರೀತಿ ಪೋಲಿಗಳ
ಸಹವಾಸದಲ್ಲಿ ಹೆಸರಿಲ್ಲದ ಬಣ್ಣವಾಗಿ.

- ಚುಕ್ಕಿ

20 Mar 2019, 09:32 pm

ಹೋಳಿ ಸಂಭ್ರಮ

ಹಬ್ಬ ಹಬ್ಬ ಹೋಳಿ ಹಬ್ಬ
ಬಗೆ ಬಗೆ ಬಣ್ಣ ಹಚ್ಚೋ ಹಬ್ಬ..
ಹಬ್ಬ ಹಬ್ಬ ಹೋಳಿ ಹಬ್ಬ
ಬಾಳಿಗೆ ಒಲವಿನ ಬಣ್ಣ ತುಂಬೋ ಹಬ್ಬ..

ಹಾದಿ ಬೀದಿ ಊರೆಲ್ಲ
ಏಳೇಳು ಬಣ್ಣದ ಸವಿಬೆಲ್ಲ..
ಮನೆಮಂದಿ ತನುಮನವೆಲ್ಲ
ಒಲವಿನ ಪಾತರಗಿತ್ತಿ ಆಯ್ತಲ್ಲ..

ರಂಗಿನ ಬಳಗ ಸೇರೋಣ
ಬಣ್ಣದ ಕಡಲಿಗೆ ಧುಮುಕೋಣ..
ನಾಚಿಕೆಯಿಂದ ಓಡೋರ ಹಿಡಿಯೋಣ
ತನುವಿನ ತುಂಬ ಕಾಮನಬಿಲ್ಲನು ಬರೆಯೋಣ..
ಮಳೆಯಲಿ ನೆನೆದಂತೆ
ಓಲವಿನ ಓಕುಳಿಯಲಿ ಕುಣಿಯೋಣ..
ನವಿಲಿನ ಗರಿಗಳಂತೆ
ಶ್ವೇತ ವಸ್ತ್ರಗಳ ಮಾಡೋಣ..

ಬಣ್ಣದ ಸಂಭ್ರಮ ಸಂತಸದ ಸರಿಗಮ
ಬೆರಗಾಗಿ ನಿಂತಿವೆ ರಂಗು ರಂಗಿನ ಕುಸುಮ
ಧರೆಗಿಳಿವೆ ಎಂದನು ಬಾನ ಚಂದ್ರಮ..
ನಮಗಿಲ್ಲಿ ಜಾತಿ ಧರ್ಮದ ಬೇಧವಿಲ್ಲ
ಪ್ರೀತಿ ಸ್ನೇಹದ ಬಣ್ಣ ಹಚ್ಚೋಣ ಬಂದವರಿಗೆಲ್ಲ..
ಆ ಪರಶಿವನಿಂದ ಕಾಮನ ಭಸ್ಮವಾದಂತೆ
ನಾವೆಲ್ಲ ದ್ವೇಷರೋಷವ ದಹನ ಮಾಡೋಣ..

- suresh

20 Mar 2019, 07:58 am

ಮತವೇ ದೇಶದ ಪ್ರಗತಿಗೆ ಮೂಲ

ಮತವೇ ದೇಶದ ಪ್ರಗತಿಗೆ ಮೂಲ
ಮತದಾರರಿಂದಲೇ ಆಗೋದು ಎಲ್ಲ...
ಮತ ನೀಡಿದರೆ ದೇಶ ಪ್ರಬಲ
ಮತ ನೀಡದಿದ್ದರೆ ದೇಶ ದುರ್ಬಲ..
ಇಲ್ಲಿ ಪ್ರಜೆಗಳೇ ಪ್ರಭುಗಳು
ಇಲ್ಲಿ ಜನರೇ ಪರಮಾಧಿಕಾರಿಗಳು..

ಯಾರೇ ಆಳಲಿ ಐದು ವರುಷ
ಅಭಿವೃದ್ಧಿ ಆಗಬೇಕು ನಮ್ಮ ದೇಶ...
ಮತ ನೀಡುವುದು ನಮ್ಮ ಧರ್ಮ
ಹಿತ ಕಾಯುವುದು ಅವರ ಕರ್ಮ...
ನಿಮ್ಮ ಕೆಲಸ ಏನೇ ಇರಲಿ ಆಮೇಲೆ ಮಾಡಿ
ದೇಶಕ್ಕಾಗಿ ಮೊದಲು ಮತದಾನ ಮಾಡಿ...

ಥೂ ! ಹೊಲಸು ರಾಜಕೀಯ ಅನ್ನದಿರಿ
ಹಸನು ಮಾಡೋದು ನಿಮ್ಮ ಕರ್ತವ್ಯ ಮರೆಯದಿರಿ...
ಥೂ ! ಭ್ರಷ್ಟ ರಾಜಕಾರಣ ಅನ್ನದಿರಿ
ರಾಷ್ಟ್ರದ ಮೇಲೆ ಅಭಿಮಾನ ತೋರಿರಿ...
ಹದಿನೆಂಟು ತುಂಬಿದವರೇ ಮತದಾನ ಮಾಡಿ
ನೂರೆಂಟು ತೊಂದರೆ ನಿರ್ಮೂಲನೆ ಮಾಡಿ...

ಮಾರಿಕೊಳ್ಳದಿರಿ ಹಣಕ್ಕೆ ನಿಮ್ಮ ಅಮೂಲ್ಯವಾದ ಮತವನ್ನು
ಮರೆಯದಿರಿ ನಮಗಿಂತ ದೇಶವೇ ಹೆಚ್ಚು ಎಂಬುದನ್ನು...
ತುಳಿಯದಿರಿ ಜಾತಿಧರ್ಮದ ಹಾದಿಯನ್ನು
ಆರಿಸಿ ತನ್ನಿರಿ ದೇಶಪ್ರೇಮದ ಪ್ರತಿನಿಧಿಯನ್ನು..
ಬೆರಳಲಿ ಬೆಳಗಿಸಿ ಇಂದು ಇಂಕನ್ನು
ತೊಲಗಿಸಿ ದೇಶಕೆ ಕವಿದ ಮಂಕನ್ನು...

- suresh

19 Mar 2019, 08:51 am

ಹುಟ್ಟು ಹಬ್ಬದ ಶುಭಾಶಯಗಳು ಆನಿ

ನನ್ನ ಪ್ರೀತಿಯ ಗೆಳತಿಗೆ ಇಂದು ಹುಟ್ಟು ಹಬ್ಬದ ಶುಭಾಶಯಗಳ ಕೋರುತಳಿರುವೆ ತುಂಬು ಹೃದಯದಿ.....

ಅಪರಿಚಿತಳಂತೆ ಬಂದು ,ಎಲ್ಲಾ ಸಂಬಂಧಗಳಿಗೂ ಮೀರಿದ ಸಂಬಂಧಿಯಾಗಿ ಜೊತೆಗೆ ಬಂದವಳು ನೀ ...

ಪ್ರತಿಯೊಂದು ಹಂತದಲ್ಲೂ ಸದಾ ನನೊಂದಿಗೆ ಇದ್ದು ದೈರ್ಯ ತುಂಬಿದವಳು ನೀ ...

ಆ ನಿನ್ನ ತಾಯಿಗೆ ಕೋಟಿ ನಮನಗಳು ತಾಯಿ

ನಿನ್ನಂತ ಮುದ್ದು ಮನಸಿನ ಸ್ನೇಹಿತಳನ್ನು ನಮಗಾಗಿ ಕೊಟ್ಟಿದಕ್ಕೆ .......

ಇಂದು ಜನುಮ ದಿನದ ಹಾರ್ದಿಕ ಶುಭಾಶಯಗಳು ಆನಿ ..........

By Asu

- Acchu love

19 Mar 2019, 12:38 am

ಸ್ವಾಗತ ಸುಸ್ವಾಗತ

ಸ್ವಾಗತ ಸುಸ್ವಾಗತ
ಏನೇ ಬರಲಿ ಹೃದಯಪೂರ್ವಕ ಸ್ವಾಗತ...
ಸ್ವಾಗತ ಸುಸ್ವಾಗತ
ನೋವೇ ಆಗಲಿ ನಗುನಗುತ ಸ್ವಾಗತ...
ಗೆಳೆಯರೇ ಓ ಗೆಳೆಯರೇ
ಈ ಲೋಕವೇ ನಮ್ಮ ಸ್ನೇಹಿತ...
ದಿನದಿನವೂ ಅನುಕ್ಷಣವು ಮನವಾಗಲಿ ಜಗ ಎನಿಸಲಿ ಹೊಸ ಸಂತೋಷ ಸಂಗೀತ...

ಸೂರ್ಯ ಮುಳುಗುವ ಹಾಗೆ ಚಂದ್ರ ನಗುವ ಹಾಗೆ ಜೀವನ
ನಿನ್ನೆಯ ಯಾತನೆ ನಾಳೆಯ ಯೋಚನೆ ಯಾಕೆ ಸುಮ್ಮನೆ
ಈ ದಿನವೇ ನಗುತಿರಬೇಕು ನೀನು ಕಿಲಕಿಲನೆ...
ಬಾಳಬಂಡಿ ನಡೆಸು ನೀನು ಜೊತೆಯಾಗಿ ಸಾಗುತ
ನಾನು ನನ್ನದು ಎಲ್ಲ ನಾಶವಾಗೋದು ಖಚಿತ
ಪ್ರೀತಿ ಸ್ನೇಹ ಒಂದೇ ಎಂದೆಂದೂ ಶಾಶ್ವತ...

ಮರುಭೂಮಿ ಇರುವ ಹಾಗೆ ನದಿ ಹರಿವ ಹಾಗೆ ಜೀವನ
ದ್ವೇಷರೋಷ ಏಕೆ ನಿನಗೆ ಧನಕನಕ ಬರದು ಕೊನೆಗೆ
ಒಲವಿನ ಕಡಲಿಗೆ ನೀನು ಧುಮುಕು,ಪರರ ಒಳಿತಿಗಾಗಿ ಬದುಕು...
ನಕ್ಕರೆ ನಿನ್ನ ಬಾಳು ಸುಂದರ ನಗಿಸಿದರೆ ನಿನ್ನ ಹೆಸರು ಅಮರ
ಸುಳ್ಳು ಮೋಸ ಎಲ್ಲ ನಾಶವಾಗೋದು ಖಚಿತ
ದಾನ ಧರ್ಮ ಒಂದೇ ಎಂದೆಂದೂ ಶಾಶ್ವತ...

- suresh

18 Mar 2019, 07:57 am

ಅಜರಾಮರ

ಅವಳ ನೆನಪಿನ ಗುಂಗಲಿ ಲೋಕವ ಮರೆತೆನು
ಅವಳ ಕೈಹಿಡಿದು ಅದ್ಭುತವ ನಡೆಸಲು
ನಾ ನಿನ್ನಯ ಭಕ್ತನು ನನ್ನಯ ಪಾಡುನೋಡು
ಓ ದೇವರೇ...ಓ ದೇವರೆ ನೀನೊಮ್ಮೆ ಕಣ್ತೆರೆದು ನೋಡು
ಅವಳ ಕೈ ಹಿಡಿದು ನಡೆಯಲು ನಾ ಯಾರೊ
ನನ್ನ ಬಾಳಲ್ಲಿ ಬರಲು ಅವಳ್ಯಾರೊ?

ನಾ ಸಾಧಿಸುವ ಛಲಕೆ ಸಾರ್ಥಕತೆಯು ಅವಳೆ
ನನ್ನ ಕನಸನ್ನು ನನಸಾಗಲು ಅದೃಷ್ಟವು ಅವಳೆ
ನನ್ನ ಪ್ರೀತಿಯ ದಾರಿಯಲ್ಲಿ ಅವಳೊಂದು ಕನಸಂತೆ
ಈ ಕನಸನ್ನು ನನಸಾಗಲು ಅವಳು ಇರಬೇಕಂತೆ
ನನ್ನ ಪ್ರೀತಿಯು ಸಾಗಲಿ ಕಷ್ಟನಷ್ಟದ ದಾರಿಯಲಿ
ನಂಬಿಕೆಯು ಹುಟ್ಟಲಿ ಅವಳ ನೋಡಿದ ಕ್ಷಣದಿಂದ
ನನ್ನೊಲವಿನ ಬದುಕು ಅವಳು, ಆ ಬದುಕೆ ನನದಾಗಲಿ

ಕಣ್ತುಂಬ ನಿನ್ನ ಬಿಂಬ ತುಂಬುತ ಭಾರವಾಗಿದೆ ಮನಸು
ನೋವು ನುಂಗುತ ಸಹಿಸುತಲಿ ಕೊರಗುತಿರುವೆ
ಮೌನಿಯಾಗಿ, ಅಳಿಸಿ ಬಿಡು ದೇವರೆ ನಿನ್ನ ಹಸ್ತದಲಿ
ಅವಳನ್ನು ಕರುಣಿಸು ದೇವರೆ ಈ ಕ್ಷಣದಲಿ
ಅವಳ ಮನಸಲಿ ಏನಿದೆ ನನಗಂತು ತಿಳಿಯದು
ನನ್ನ ಮನಸಿನ ಮಾತನು ಹೇಳಲು ಆಗದು
ಒಂದಾದರೆ ನಾವಿಬ್ಬರು ನೋಡಲು ಕಣ್ ಸಾಲದು
##ಮೌನಿ##

- RajaneeshNandikolmath

15 Mar 2019, 02:42 am

ಮಾತು

ಹೃದಯದ ಮಾತು
ಒಂದೊಂದು ಮುತ್ತು
ಜಿಹ್ವೆಯ ಮಾತು
ತರುವುದು ಆಪತ್ತು
ಯೋಚಿಸಿ ಯಾವೊತ್ತು
ಬರಬೇಕು ಶಬ್ದಸಂಪತ್ತು
ಸೌಜನ್ಯದ ಮಾತು
ಇರಲಿ ನಮ್ಮೊಂದಿಗೆ ಯಾವತ್ತು




ಶಾರದ

- ಶಕುಂತಲಾ

14 Mar 2019, 04:43 pm