Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಮ್ಮ

ಅಮ್ಮ ನೀನು ಕ್ಷಮಯಾ ಧರಿತ್ರಿ ನಾ ಅರಿಯದೇ ಹೋದೆ ನಿನ್ನ ಪರಿಸ್ಥಿತಿ ಊರ ಜಾತ್ರೆಯಲ್ಲಿ ಬಣ್ಣ ಬಣ್ಣದ ಆಟಿಕೆಯನ್ನು ಕೇಳಿದೆ.. ಕಡು ಕಷ್ಟದಲ್ಲಿದ್ದರೂ ಕೇಳಿದ್ದನ್ನು ನೀಡಿದೆ. ತಾನು ಪಟ್ಟ ಕಷ್ಟ ಮಕ್ಕಳು ಪಡಬಾರದೆಂಬ ಹಂಬಲ ಮಕ್ಕಳಿಗೆ ನೀಡಿದೆ ಜೀವನದುದ್ದಕ್ಕೂ ನಿನ್ನ ಬೆಂಬಲ ಅಮ್ಮನಿಲ್ಲದ ಜೀವನ ನಶ್ವರ ಅಮ್ಮ ನೀ ಎಂದೆಂದಿಗೂ ಅಜರಾಮರ

- Anjali

08 Jul 2025, 10:35 pm

neenu

ನಾ ಕಂಡ ಕನಸು ನೀನು
ನನ್ನ ಮನೆಯ ಕಮಲಾಕ್ಷಿ ನೀನು
ಎಂದು ಮುಗಿಯದ ಕಾದಂಬರಿ ನೀನು
ನನ್ನ ಹಳೆ ಜನ್ಮದ ಕರ್ಮದ ಪಲ ನೀನು
ಕಾರ್ಮೋಡ ತುಂಬಿದ ಬದುಕಿಗೆ ಬೆಳಕಾದೆ ನೀನು
ಇಂದು ನನ್ನ ಬರಹಕ್ಕೆ ಕವನಾಳದೆ ನೀನು
...
...
....

- Soubhagya

08 Jul 2025, 07:31 pm

ಮೋಡ

ಕಾರ್ಮೊಡದಂತ್ತಿದ್ದ ಬದುಕಿನಲ್ಲಿ ನೀ ಬಂದೆ ಇನ್ನಾದರೂ ಹೊಸ ಬೆಳಕು ಬರಬಹುದೆಂಬ ಭರವಸೆಯಲ್ಲಿ ನಾನಿದ್ದೆ..............ನೀ ತಂಪಾದ ಗಾಳಿಯಂತೆ ಬಂದು ಕಾರ್ಮೊಡ ಸರಿಸಿದೆ.. ಬಂತಲ್ಲಾ ಬೆಳಕು ಎಂದು ಕುಣಿದು ಕುಪ್ಪಳಿಸಿದೆ. ಅದೆಷ್ಟೋ ಕಾಲದಿಂದ ಮರೆತು ಹೋದ ನಗುವನ್ನು ನೀ ನೆನಪಿಸಿದೆ.... ಬದುಕಲ್ಲಿ ಎಂದೂ ಕಾಣದ ಸಂತೋಷವ ನಾ ಕಂಡೆ..... ❤️ಅಂಜಲಿ

- Anjali

08 Jul 2025, 02:16 pm

ನೀನು ನಿನನಾಗು

ಜೀವನವೇ ಕಷ್ಟ ಆದರೂ ಜೀವಕ್ಕೆ ಅದೇ ಇಷ್ಟಾಬದುಕು ಬರಡಾದರೂ ನೀನು ಅದರಲ್ಲಿಯೇ ಇರೂ, ಸುಮ್ಮನೆ ಸಾಗಿಸು ಜೀವನಾ, ನಡೆಯುವುದು ಎಲ್ಲವು ನಿಗೂಢವೇ ಸಂದನಾ.ನಿನ್ನನ್ನು ನೀನು ಅರಿತುಕೊ ಮೋದಲು, ನೀನು ನೀನಾಗಿಯೇ ಇರೂ ಯಾವಾಗಲೂ, ಬದುಕು ಸುಂದರ, ಅರಿತು ನಡೆದರೇ ಇರುವುದು ಜೀವನ ಸಾರ,

- ಮಂಜುಳಾ ನಾಗರಾಜ

08 Jul 2025, 07:25 am

ಕಪ್ಪು ಮೊಗದ ಚಂದಿರನೇ
ಪ್ರೀತಿ ಎಂಬ ಪದಕ್ಕೆ ಸ್ಪೂರ್ತಿಯಾದವನೇ
ಸೀಗಲಾರದ ಚಂದಿರನನ್ನು ಮನಸಾರೆ
ಪ್ರೀತಿಸೀ ಬಿಟ್ಟೇನೆ...
ಪ್ರಕೃತಿ ಉಸಿರಾಡುವ ಗಾಳಿಗೆ ಆಕೃತಿಯಿಲ್ಲವೋ
ನನ್ನ ಈ ಪ್ರೀತಿಗೆ ವರ್ಣಿಸುವ ಅಕ್ಷರಗಳಿಲ್ಲದಂತಾಯಿತೆ...
ಪರಮಾತ್ಮ ಗೋಪಾಲನಿಗೆ ಸಿಗದ ಪ್ರೀತಿ
ನನಗೆ ಸಿಗುವುದುಂಟೆ...
ಸೀತೆಯಾಗಬೇಕೆಂದು ಬಯಸಿದವಳಿಗೆ
ವಿಧಿ ರಾದೆಯಂತೆ ದೂರ ಮಾಡಿತು
ಯಾವುದು ನನ್ನ ಭಾಗ್ಯದಲ್ಲಿಲ್ಲವೋ
ಅದನ್ನು ಬಯಸಿ ಪ್ರಯ್ಯೋಜನವಿದೀಯೇ.....


--ನಿನ್ನ ರಾದೆ.....❤️

- Pk

06 Jul 2025, 06:41 pm

"ಏಳು-ಬೀಳು

ಬದುಕಿನಲ್ಲಿ "ಏಳು-ಬೀಳು" ಇದೆ ಹೊರತು, ಏಳಿಸುವವರಿಲ್ಲ. ಇಲ್ಲಿ ನೀವು ಬಿದ್ದರೆ ನೀವೇ ಏಳಬೇಕು.
ಬಿದ್ದ ಗಾಯದ ನೋವು ಮರೆಸುವಂತ ಹೆಜ್ಜೆಯಿಡಬೇಕು.
ಮಾಸಿದ ಗಾಯದ ಕಲೆ ತಲುಪಿದ ಗುರಿಗೆ ಕಳಶವಾಗಬೇಕು...
ನಮಸ್ಕಾರಗಳು ಶುಭದಿನ
l

ಬದುಕಿನಲ್ಲಿ "ಏಳು-ಬೀಳು" ಇದೆ ಹೊರತು, ಏಳಿಸುವವರಿಲ್ಲ. ಇಲ್ಲಿ ನೀವು ಬಿದ್ದರೆ ನೀವೇ ಏಳಬೇಕು.
ಬಿದ್ದ ಗಾಯದ ನೋವು ಮರೆಸುವಂತ ಹೆಜ್ಜೆಯಿಡಬೇಕು.
ಮಾಸಿದ ಗಾಯದ ಕಲೆ ತಲುಪಿದ ಗುರಿಗೆ ಕಳಶವಾಗಬೇಕು...
ನಮಸ್ಕಾರಗಳು ಶುಭದಿನ
l

- writer Vijaykumar Barli

05 Jul 2025, 05:00 pm

?❤️ ನಮ್ಮ ಕನ್ನಡ – ನಮ್ಮ ಅಭಿಮಾನ ?❤️

❤️ ನನ್ನ ಭಾಷೆ ಕನ್ನಡ, ನನ್ನ ಹೆಮ್ಮೆ,
? ಹೃದಯದಲ್ಲಿ ಹಾಡುವ ಶಬ್ದಗಳ ಮೊಮ್ಮೆ.
? ವಚನ, ಕಾವ್ಯ, ಸಾಹಿತ್ಯದ ದಾರಿ,
? ಕನ್ನಡವೇ ನನಗೆ ಅಮೂಲ್ಯ ವಜ್ರದ ಹಾರಿ.

? ಬೇರೆ ಭಾಷೆ ಕಲಿಯುವೆನು, ಗೌರವ ಕೊಡುವೆನು,
? ಆದರೆ ಕನ್ನಡದ ಮಣ್ಣಿಗೆ ನಮನವೊಪ್ಪುವೆನು.
?️ ಎಲ್ಲಿ ಹೋಗಿದರೂ ಗುರುತಿಸೋ ನಾಣೆ,
? ಕನ್ನಡದ ಅಬ್ಬರವೇ ನನ್ನ ಪರಮ ಧ್ವಜನೆ! ❤️

- writer Vijaykumar Barli

04 Jul 2025, 10:06 pm

ಹೇಗೆ ವರ್ಣಸಿಲಿ ನಿನ್ನ

"ಹೇಗೆ ವರ್ಣಿಸಲಿ ನಿನ್ನ ಸ್ವರಗಳಲ್ಲಿ ವರ್ಣಿಸಲಾಗದ ಸೌಂದರ್ಯ ನಿನ್ನದು.. ವ್ಯಂಜನಗಳಲ್ಲಿ ಅಳೆಯಲಾಗದ ವ್ಯಕ್ತಿತ್ವ ನಿನ್ನದು... ಪದಗಳಲ್ಲಿ ಪೋಣಿಸಲಾಗದ ಪ್ರೀತಿ ನಿನ್ನದು... ಆದರೆ ನಿನ್ನ ಈ ವರ್ತನೆಯ ಕಂಡು ನಾ ಹೇಳಿದೆ ಬರಿ ಎರಡು ಯೋಗವಾಹಗಳಿಂದ ನಿ ಬಯಸಿದ್ದು ನನ್ನಿಂದ ಕೇವಲ, ಅಂ...ಅಃ..ಎನ್ನುವ ಎರಡಕ್ಷರವೆಂದು

- writer Vijaykumar Barli

04 Jul 2025, 08:44 am

ತಾಯಿ -ಹೆಂಡತಿ

ರಕ್ತ ಹಂಚಿಕೊಂಡು ಹುಟ್ಟಿದ ಮಗನಿಗೇ ತುತ್ತಿಟ್ಟು ಸಾಕಿ ಸಲಹುವ ತಾಯಿ ದೇವತೆಯಾದರೇ.?

ಯಾವುದೇ ರಕ್ತ ಸಂಬಂಧವೂ ಕೂಡ ಇಲ್ಲದೇ! ತಾಳಿ ಎನ್ನುವ ಒಂದೇ ಒಂದು ಬಂಧನಕ್ಕೆ ಶರಣಾಗಿ ನಮ್ಮ ಮನೆಗೆ ಬಂದು ನಾವು ತಿಂದ ಎಂಜಲು ತಟ್ಟೆ ತೊಳೆಯುವ ಹೆಂಡಿತಿಯೂ ಕೂಡ ದೇವತೆಯೆ....

- writer Vijaykumar Barli

03 Jul 2025, 05:48 pm

ಪ್ರೀತಿಯ ದೇವತೆ

ತುಂಬ ವರ್ಷಗಳ ಸ್ನೇಹವಲ್ಲ ಅವಳದು
ತಾಯಿಯ ಪ್ರೀತಿಯ ತೋರಿದವಳು
ಮುಗ್ಧತೆಯ ಪ್ರತಿ ರೂಪ ಇವಳು
ಸ್ನೇಹದ ನೈಜ ಅರ್ಥ ಇವಳು...

ಅಕ್ಕ ಎಂಬ ಜವಾಬ್ದಾರಿಯ ಹೊತ್ತವಳು
ನನ್ನ ಪ್ರತಿ ಕೀಟಲೆಯನ್ನು ಸಹಿಸಿದವಳು
ಪ್ರತಿ ಏಳು ಬೀಳಲ್ಲೂ ಜೊತೆಗಿದ್ದವಳು
ಅತ್ತಾಗ ಮಗುವಿನಂತೆ ಸಮಾಧಾನ ಮಾಡಿದವಳು
ಭಯ ಪಟ್ಟಾಗ‌ ಧೈರ್ಯ ತುಂಬಿದವಳು

ಆಕಸ್ಮಿಕವಾಗಿ ಪರಿಚಯವಾದವಳು
ಇಂದಿಗೆ ನನ್ನ ಪಾಲಿಗೆ ಪ್ರಾಣ ಸ್ನೇಹಿತೆಯಾಗಿಹಳು
ಸಾವಿರ ನೋವಿದ್ದರೂ ಅವರೊಂದಿಗಿನ ಒಂದು ಮಾತು
ನನ್ನ ಎಲ್ಲಾ ದುಃಖ ಮರೆಸುವ ಶಕ್ತಿ ಅವಳದು....

ಪ್ರೀತಿಯ ದೇವತೆ ನೀನು...
ನಿನ್ನ ಪ್ರೀತಿಗೆ ಸ್ನೇಹಕ್ಕೆ ಹಾತೊರೆಯುವ ಮಗುವು ನಾನು...


೦೧/೦೭/೨೦೨೫
??

- Jyothi

01 Jul 2025, 05:33 pm