ಕಲ್ಲು ಹೃದಯದ ಮೇಲೆ ಕೆತ್ತನೆಯ ಪ್ರೀತಿ
ಎಂದಿಗು ಅಳಿಸಲಾಗದ ವಿಶ್ವಾಸ ಪುಸ್ತಕದ ನೀತಿ
ಜಗಳ ಮನಸ್ತಾಪದ ನಡುವೆಯೂ ಅರುಳುವದು ಸುವಾಸನೆಯ ರೀತಿ
ಇಬ್ಬರ ನಡುವಿನ ಪ್ರೀತಿ ಕ್ಷಮೆಯಲಿ ನಿಲ್ಲುವದು ಮೂರ್ತಿ.....
ಕೆಲವಮ್ಮೆ ಅನಿಸುವದು ಕಳೆದುಕೊಂಡನೆಂಬ ಭೀತಿ
ಮತ್ತೆ ಮತ್ತೆ ಮನಸು ಗಟ್ಟಿಗೊಳಿಸುವ ಪರಿಯ ರೀತಿ
ಅಳುಕಿದರು ಬಳುಕಿದರು ಮತ್ತೆ ಎದ್ದು ನಿಲ್ಲುವದು ಪ್ರೀತಿ
ಇತಿಹಾಸ ಪುಟಗಳ ತಿರುವಿ ಹಾಕಿದರು ಬರೀ ಕಥೆಗಳ ನೀತಿ.....
ನನ್ನ ನೆಚ್ಚಿನ ಗುರುಗಳೇ
ಪರೀಕ್ಷೆ ಬಂತು ಹತ್ತಿರ
ಓದುವುದಿದೆ ಬೃಹತ್ ಸಾಗರ..
ಪ್ರಶ್ನೆಗಳಿವೆ ನೂರಾರು ಸಾವಿರ
ನೆನಪಿಗೆ ಬರುತ್ತಿಲ್ಲ ಉತ್ತರ..
ನನ್ನ ನೆಚ್ಚಿನ ಗುರುಗಳೇ
ಓದಲು ಪುಸ್ತಕ ತೆರೆದರೆ ತಲೆಯಲಿ ನೂರೆಂಟು ವಿಚಾರ
ಬರೆಯಲು ಪೆನ್ನು ಹಿಡಿದರೆ ಮನದಲಿ ಆಡುವ ಆಸೆ ಅಪಾರ..
ಹೇಗೆ ಓದಲಿ ಅವನ ತರ
ಏನು ಬರೆಯಲಿ ಇವನ ತರ
ನೀವು ಹೇಳುವಿರಿ ನಾನಾತರ..|ಪ|
ಉತ್ತರಗಳು ನೋಡಿದರೆ ಮಾರುದ್ದ
ಲೆಕ್ಕಗಳೆಂದರೆ ನನಗೆ ವಿರುದ್ಧ..
ವಿಷಯದ ಅರ್ಥ ಅರ್ಧಂಬರ್ದ
ಗುರುಗಳು ಕಲಿಸೋಕೆ ಸದಾಸಿದ್ಧ
ನಾನು ಪಾಸಾಗೋಕೆ ಕಟಿಬದ್ಧ..
ಹೇಗೆ ಓದಲಿ ಅವನ ತರ
ಏನು ಬರೆಯಲಿ ಇವನ ತರ
ನೀವು ಹೇಳುವಿರಿ ನಾನಾತರ..
ಅನುಸರಿಸು ಮನೆಯಲಿ ಓದುವ ವೇಳಾಪಟ್ಟಿ
ಶಿಕ್ಷಕರು ಹೇಳುವರು ನಾಕೈದು ತಟ್ಟಿ..
ಓದಿದರೆ ನಾವ್ ಇವತ್ತು ಬೇಕಾಬಿಟ್ಟಿ
ನಾಳೆ ಫೇಲಾಗೋದು ಗ್ಯಾರಂಟಿ..
ಹೇಗೆ ಓದಲಿ ಅವನ ತರ
ಏನು ಬರೆಯಲಿ ಇವನ ತರ
ನೀವು ಹೇಳುವಿರಿ ನಾನಾತರ..
ನೆಂಟರ ಮನೆಕಡೆ ತಿರುಗಿ ನೋಡಬೇಡ
ನೆಟ್ಟಗೆ ಶಾಲೆಗೆ ಬರೋದು ಮರಿಬೇಡ..
ಆಟ ಆಡುವುದಕ್ಕಂತೂ ಹೋಗಲೇ ಬೇಡ
ಹೋಂವರ್ಕ್ ಬರೆಯುವುದನ್ನು ತಪ್ಪಿಸಲೇ ಬೇಡ..
ಹೇಗೆ ಓದಲಿ ಅವನ ತರ
ಏನು ಬರೆಯಲಿ ಇವನ ತರ
ನೀವು ಹೇಳುವಿರಿ ನಾನಾತರ..
ಟಿವಿ ಮೊಬೈಲ್ ನೋಡುವುದು ಮರೆತು ಬಿಡು
ಉತ್ತರ ಹತ್ತುಸಲ ಬರೆದು ಕಲಿತು ಬಿಡು..
ಆರೋಗ್ಯದ ಕಡೆ ಹೆಚ್ಚು ಒತ್ತು ನೀಡು
ಬೆಳಿಗ್ಗೆ ಬೇಗ ಎದ್ದು ಓದಲು ಕುಂತು ಬಿಡು..
ಹೇಗೆ ಓದಲಿ ಅವನ ತರ
ಏನು ಬರೆಯಲಿ ಇವನ ತರ
ನೀವು ಹೇಳುವಿರಿ ನಾನಾತರ..
ಓದಲೇಬೇಕು ಇಲ್ಲಾಂದ್ರೆ ಬಿಡಲ್ಲ ಈಜನ
ಬರ್ತಾವೆ ನೂರಾಒಂದು ಬೈಗುಳ ಪ್ರತಿದಿನ..
ಅದಕ್ಕೆ ಪಾಸ್ ಆದ್ರೆ ಸಮಾಧಾನ
ಏನಾದ್ರೂ ಫೇಲಾದ್ರೆ ಅವಮಾನ
ಫಸ್ಟ್ ಬಂದ್ರೆ ಬಹುಮಾನ
ನನಗೂ ಬೇಕು ಒಂದು ಸ್ಥಾನಮಾನ
ಹೇಗೆ ಓದಲಿ ಅವನ ತರ
ಏನು ಬರೆಯಲಿ ಇವನ ತರ
ನೀವು ಹೇಳುವಿರಿ ನಾನಾತರ..
ಅನುಭವಿಸಿದವರು ಅರಿತು ಹೇಳುವರು
ಕೈಕೆಸರಾದರೆ ಬಾಯಿ ಮೊಸರು..
ವಿವೇಕರು ಸಂದೇಶ ಸಾರುವರು
ಏಳುಎದ್ದೇಳು ಗುರಿ ಮಟ್ಟುವ ತನಕ ನಿಲ್ಲದಿರು..
ಹೆತ್ತವರು ಬುದ್ಧಿಮಾತು ಹೇಳುವರು
ಈಗ ಕಷ್ಟಪಟ್ಟವರು ಮುಂದೆ ಸುಖವಾಗಿರುವರು..
ಶತೃಗಳು ದ್ವೇಷದಿಂದ ಹೇಳುವರು
ನಿನ್ನ ಕೈಯಲ್ಲಿ ಆಗಲ್ಲ ನೋಡ್ತಾ ಇರು..
ಗೆಳೆಯರು ಧೈರ್ಯದಿಂದ ಹೇಳುವರು
ಏನೇ ಆಗಲಿ ನಾವ್ ಇರ್ತಿವಿ ಮಾಡು ಗುರು..
ನಿಲ್ಲೋದಿಲ್ಲ ಎಂದು ಈ ಜಗದ ಕಾಲ ಚಕ್ರ
ಬಿಡೋದಿಲ್ಲ ನಿನ್ನ ಏಳುಬೀಳಿನ ಈ ಜೀವನಚಕ್ರ..
ನಿಲ್ಲದೆ ಅಳುಕದೆ ಈಜು ವಿದ್ಯೆಯ ಸಮುದ್ರ
ತಪ್ಪದೆ ಸೇರುವೆ ನೀನು ಗೆಲುವಿನ ತೀರ..
ಬಾನಾಡಿಗಳು ನಾಡಿಗೆ ಬರಲು
ಬಿಡನು ಸುಮ್ಮನೆ ಬಾಳಲು...
ಜೀವಜಂತುಗಳು ಆಡವಿಯ ಮಡಿಲಲ್ಲಿರಲು
ಬಿಟ್ಟನು ಧಗಧಗನೇ ಹೊತ್ತಿ ಉರಿಯಲು..
ರೋಧಿಸಲು ಉಸಿರಿಲ್ಲ
ರಕ್ಷಿಸಲು ಯಾರಿಲ್ಲ....
ತನ್ನ ಬೆಳೆ ಬೇಯಿಸಿ ಕೊಳ್ಳಲು
ಬನವ ಮಾಡಿಕೊಂಡ ಉರುವಲು...
ತನ್ನ ದುರಾಸೆಯ ಕೋಟೆ ಕಟ್ಟಲು
ವನವ ಮಾಡಿದ ಬಟಾಬಯಲು..
ಇವನ ಆಸೆಗೆ ಕೊನೆಯಿಲ್ಲ
ಪರಿಸರ ರಕ್ಷಣೆ ಬೇಕಿಲ್ಲ....
ಗಂಟೆಗಟ್ಟಲೇ ಭಾಷಣ ಬಿಗಿದರೆ
ನಿಸರ್ಗ ಬೆಳೆವುದೇ?
ಮಾತಿನಲ್ಲಷ್ಟೇ ಕಾಳಜಿ ಮೆರೆದರೆ
ಪ್ರಕೃತಿ ಉಳಿವುದೇ?
ದಯೆಯಿರಲಿ ಎಂದು ಘೋಷಣೆ ಕೂಗಿದರೆ
ವನ್ಯಮೃಗಗಳು ಬದುಕುತ್ತವೆಯೇ?
ಇವನ ಹೊಟ್ಟೆಕಿಚ್ಚು ಸಾಯಲಿಲ್ಲ
ಕಾಳ್ಗಿಚ್ಚು ಆರಲಿಲ್ಲ...
ಕಾಡು ಹೊತ್ತಿ ಉರಿದರೆ
ನಾಡು ಸುಡುಗಾಡು...
ಕಾನನ ಬರಿದಾದರೆ
ಜೀವನ ನಶ್ವರ....
ಸಸ್ಯಸಂಕುಲ ಸೆಲೆ ರಕ್ಷಿಸಿದರೆ
ಜೀವಸಂಕುಲಕ್ಕೆ ನೆಲೆ...
ಪರಿಸರ ಬೆಳೆಸಿದರೆ
ಸಂಸಾರ ಬಂಗಾರ....
ವೋಟು ವೋಟು ಹಾಕಣ್ಣ
ಅದುವೇ ನಿನ್ನ ಹಕ್ಕು ತಿಳಿಯಣ್ಣ..
ವೋಟು ವೋಟು ಹಾಕಣ್ಣ
ಸರ್ಕಾರ ಆರಿಸುವ ಹಕ್ಕು ನಿನ್ನದಣ್ಣ..
ಇಲ್ಲಿ ಪ್ರಜೆಯೇ ಪ್ರಭು ಎಂಬ ನಿಜವನ್ನಾ
ಮತದಾನ ಮಾಡುವ ಮೂಲಕ ತೋರಿಸಣ್ಣ..
ನಿನ್ನ ಬೆರಳಲ್ಲಿ ಬೆಳಗಿಸು ಇಂದು ಶಾಹಿ ಗುರುತನ್ನಾ
ಉತ್ತಮ ಭವಿಷ್ಯದಲಿ ಬಾಳಲಿ ಎಂದೆಂದೂ ಈ ದೇಶ ಈ ಜನ||
ನೋಟು ಗಿಫ್ಟು ಎಂಬ ಆಮಿಷಕೆ ನೀ ಒಳಗಾಗಬೇಡ
ನಾಡಿನ ಏಳಿಗೆ ನಿನ್ನ ಕರ್ತವ್ಯ ಎಂಬುದ ಮರೆಯಬೇಡ..
ಧರ್ಮ ಜಾತಿ ಅಂತ ನೀನು ನೋಡಬೇಡ
ದೇಶದ ಪ್ರಗತಿಗೆ ದುಡಿವ ಶಕ್ತಿಯ ಮರೆಯಬೇಡ..
ಮತದಾರನೇ ಮಾಡು ದೃಢನಿಶ್ಚಯ
ನೀನಾಗಬೇಕು ರಾಷ್ಟ್ರಕೆ ಭದ್ರ ಅಡಿಪಾಯ
ಜಾರಿ ಮಾಡು ನಮ್ಮ ಸಂವಿಧಾನದ ಆಶಯ..
ಭ್ರಷ್ಟಚಾರ ಮುಕ್ತ ಸರ್ಕಾರ ನಮಗೆ ಬೇಕಣ್ಣ
ಜನಸೇವೆ ಮಾಡಲು ಸ್ಪಷ್ಟ ಬಹುಮತ ನೀಡಣ್ಣ
ಜನಹಿತ ಕಾಯುವ ನಾಯಕ ಆರಿಸಿ ಬರಬೇಕಣ್ಣ..
ಪ್ರಜಾತಂತ್ರದ ಯಶಸ್ಸು ವೋಟು ಹಾಕುವ ಪ್ರಜೆಯಿಂದ ನೋಡಣ್ಣ
ಮತದಾರನೇ ನೀನು ಜಾಗೃತನಾಗು
ದೇಶದ ಒಳಿತಿಗೆ ಮುಂದಾಗು
ಬಲಿಷ್ಟ ರಾಷ್ಟ್ರವ ಕಟ್ಟುವವನಾಗು..
ನನ್ನ ಬಾಳ ಪಯಣಕೆ ನಿನ್ನ ದಾರಿ
ಕಾಯುತಿರುವೆ ನಾ...
ನೀ ಬರುವೆ ಎಂಬ ಆತ್ಮವಿಶ್ವಾಸದಿಂದ
ನನ್ನ ಕಾಯುವಿಕೆ ನೋಡಿ ಜಾತಕ ಪಕ್ಷಿ ನಗುತಿಹುದು
ನನ್ನ ಕಾಯುವಿಕೆಗೆ ಬೆಲೆಯಿಲ್ಲವೆಂದು
ನನ್ನವರೆ ನನಗೆ ಹಿಯಾಳಿಸುತಿಹರು
ನಿನಗೆ ಸ್ವಾಗತಿಸಲು ನೀ ಬರುವ ದಾರಿಯಲ್ಲಿ
ನನ್ನ ಸಿಹಿಗನಸಿನ ಗುಲಾಬಿ ಬೆಳೆದಿರುವೆ
ಆ ದಾರಿ ಈಗ ನನ್ನ ಬರಡಾಗ ಹೃದಯದಂತಾಗಿದೆ
ಈ ಬರಡಾದ ಹೃದಯಕ್ಕೆ ನಿನ್ನ ಪ್ರೀತಿಯೆಂಬ
ಎರಡನಿ ನೀರನೆರೆದು ಬಿಡು ಗೆಳತಿ
ಒಂದು ಜೀವ ಉಳಿಸಿದ ಪುಣ್ಯ ನಿನಗೆ ತಟ್ಟುವುದು
ಯಾರನ್ನೊ ಕಟ್ಟಿಕೊಂಡು ಅವನ ಗುಲಾಮಳಾಗಿ
ಬಾಳುವ ಬದಲು, ನನ್ನನ್ನೊಮ್ಮೆ ರಾಜನಾಗಿ ಕಾಣು
ಆಗ ನೀನೆ ರಾಣಿಯಾಗಿ ಮೆರೆಯುವೆ.....
##ಮೌನಿ##
ಈ ಜೀವ್ನನೇ ಹಂಗೆ ನೂರೆಂಟು ರಿವರ್ಸ್ಗೇರು
ಅವ್ನು ಹೇಳ್ದಂಗೆ ಓಡುಸ್ಬೇಕು ನಮ್ಮ ತೇರು..
ಇಟ್ಟವ್ನೇ ಹಳ್ಳ ಗುಂಡಿ ನಮ್ಮ್ಗಳ ಬುದ್ಧಿ ಕಲಿಸೋಕೆ
ಹೋಗುವಾಗ ಅಕ್ಕಪಕ್ಕ ಅಕ್ಕರೆ ನೀಡೋ ಕಾಣಿಕೆ
ನಿಲ್ಲಿಸುವಾಗ ನಿನ್ಗೂ ಬರ್ಲಿ ಸ್ವಲ್ಪ ಪುಣ್ಯ ಲೆಕ್ಕಕ್ಕೆ
ಸುಳ್ಳು ಮೋಸ ಸುಳಿಯದಿರಲಿ ನಿನ್ನ ಪಯಣದಲಿ
ಸ್ನೇಹ ಎಂಬ ನಿಲ್ದಾಣ ಕಟ್ಟು ನಿನ್ನ ದಾರಿಯಲ್ಲಿ