ಅರ್ಪಿಸುವೆ ನನ್ನ ಗುರುಗಳಿಗೆ ನಮನ
ಅವರ ಮೇಲಿದೆ ನನಗೆ ಪ್ರೀತಿ ಅಭಿಮಾನ
ಅದಕ್ಕೆ ಬರೆದೆ ಒಂದು ಕವನ
ಅವರ ಪಾಠದಲ್ಲಿ ನಾವು ಹರೆಸುವೆವು ಗಮನ
ಹೇಳಿಕೊಡುವಿರಾ ನಮಗೆ ಸಮಯದ ಮಹತ್ವವನ್ನ
ನೀವೆಂದರೆ ನಮಗೆ ಜೀವ
ತಿಳಿಸಿಕೊಡುವಿರಾ ನಮಗೆ ಹಾವ ಭಾವ
ನಿಮ್ಮ ಆ ನಗು ಒಂದು ಹೂವು
ಆ ನಗುವಿಗೆ ನಾವು ಸೋತುಹೋದೆವು
ಸೋಲು ಗೆಲ್ಲುವಲ್ಲಿಯೂ ತುಂಬುವಿರಿ ನಮಗೆ ಹುಮ್ಮಸ್ಸು
ಆ ನಿಮ್ಮ ಮನಸ್ಸಂತು ಮೊಗ್ಗಿನ ಮನಸ್ಸು
ನೀವೊಂದು ಚಿನ್ನದ ಗಣಿ
ಮಯೋಜಿನ ಎಳೆಯ ಮೇಲಿನ ಮುತ್ತಿನ ಹನಿ
ನಿಮ್ಮ ಒಂದೊಂದು ಮಾತು ಜೇನಿನ ಹನಿ
ಕೊಣೀವರೆಗೂ ನಾವು ನಿಮಗೆ ಚಿರಋಣಿ
ತಾಯಿಯ ಮನಸ್ಸು
ಅಮೂಲ್ಯವಾದ ಮೊಗ್ಗಿನ ಮನಸ್ಸು
ಆ ತಾಯಿಯ ಕನಸು
ಅಮೂಲ್ಯವಾದ ಕನಸು
ಆ ಕನಸನ್ನು ಮಾಡದಿದ್ದರೆ ನಾವು ನನಸು
ಹೊಡೆದುಹೋಗುವುದು ಆ ಮೊಗ್ಗಿನ ಮನಸ್ಸು
ಒಬ್ಬ ತಾಯಿ
ಅಂದ್ರೆ ಸೀತಮಾಯಿ
ನಮಗಾಗಿ ತ್ಯಾಗ ಮಾಡಿದ ತ್ಯಾಗಮಯಿ
ಹಸಿದಾಗ ಕೈ ತುತ್ತು ಕೊಟ್ಟ ಅನ್ನಪೂರ್ಣೇಶ್ವರಿ ತಾಯಿ
ಪ್ರೀತಿಯನ್ನು ಮೊಗೆದು ಕೊಟ್ಟ ತಾಯಿ
ಧೈರ್ಯವನ್ನು ತುಂಬುವ ತಾಯಿ
ನಿಮ್ಮ ಮಾತಿನ ಅಭಾವ
ಮುಂದಿನ ದಿನ ಬೀರುವುದು ಒಳ್ಳೆಯ ಪ್ರಭಾವ
ಆ ಮಾತುಗಳಿಂದ ಕಲಿಯುವೆವು ನಾವು ಹಾವಭಾವ
ನಮ್ಮ ಹಾವಭಾವದಿಂದ ಸಿಗುವುದು ನಮಗೆ ಗೌರವ
ಅಮ್ಮ ಎಂದರೆ ನನಗೆ ಜೀವ
ಅವಳ ಕನಸನ್ನು ನನಸು ಮಾಡುವುದು ನನ್ನ ಕರ್ತವ್ಯ
ಎಂದಿಗೂ ಹೀಗೆ ಇರಲಿ ನಮ್ಮ ಈ ಭಾಂಧವ್ಯ
ಇನ್ನೆಷ್ಟು ದಿನ ಈ ಒಂಟಿತನ...!
ಕಾಯುತ್ತಿರುವೆ ನಿನ ನೆನಪಲೇ ಪ್ರತಿ ಕ್ಷಣ...
ನೀ ಮರೆತರು ನಾ ಮರೆಯುವುದಿಲ್ಲ
ನೀ ನಾಡಿದ ಮಾತುಗಳನ್ನ...
ಈ ಒಂದೇ ಜನ್ಮ ಸಾಕು..!
ನೀ ನನ್ನ ಜೀವ ಇನ್ನ....
.....ಹನು.ಮ್....
ಆ ಕನಸನಲ್ಲಿ ಒಂದು ಸುಂದರ ಲೋಕ ಕಂಡೆ
ಸುಂದರ ಸ್ವರ್ಗವೇ ನಾಚುವಂತೆ
ಆ ಹಸಿರು ಮರಗಳು,ಆ ಸುಂದರ ಸರೋವರಗಳು,
ಕೈ ಬಿಸಿ ಕರೆಯುವಹಾಗೆ ಆ ಮಿನುಗುವ ನಕ್ಷತ್ರಗಳು
ಅಬ್ಬಾ..! ಮೋಡದ ಮೇಲೆ ತೇಲಾಡುವ ನಾನು ಚಂದಮಾಮನ ಬಿಗಿದಪ್ಪಿ ಮುದ್ದೀಸುವ ಹಾಗೇ
ಕನಸಲ್ಲಿ ಕನಸೊಂದು ಕಂಡೆ.
..ಹನು.ಮ್..
ಕೊರಳ ಇಳಿಜಾರಿಗೆ ತುಸು ಹೆಚ್ಚಿಗೆ
ನಿನ್ನ ಸನಿಹ ಬೇಕೆನಿಸಿದೆ,
ಸಾವಿನಾಚೆಗಿರುವ ಸುಖವ
ಸವಿವರವಾಗಿ ತಿಳಿಸು ಅದಕೆ
ತಡವರಿಸದೆ ನನ್ನವನಾಗಿ.
ಬಯಕೆಗಳಿಗೆ ಮಿತಿಯೊಡ್ಡಿ
ಮೌನದ ಮುಸುಕು ತೊಡಿಸಿ
ಸಾಕಾಗಿದೆ, ನೂರಾರು ಕವನದ
ಸಾಲು ನೀನಾಗಿ ನನ್ನ ಸೇರಬೇಕಿದೆ.
ಅಧರ ಸುಧೆಯ ಸಿಹಿ ಹೆಚ್ಚಾಗಿದೆ,
ಒಲವುಣಿಸಿ ನಿನ್ನ ತುಟಿಗೆ
ಮತ್ತೆ ಸಿಹಿಯ ತುಂಬಿಕೊಳ್ಳಬೇಕಿದೆ.
ಕದ್ದು ಕೊಡುವ ಮುತ್ತುಗಳು ಸಾಲದಾಗಿವೆ
ಸಾಲವಾಗಿ ಪಡೆದ ಕನಸಿಗೆ ನಿನ್ನ ಜೊತೆ
ಸೇರಿ ಜೀವ ತುಂಬಬೇಕಿದೆ.