ಓ ಮನಸೇ....
ನೀ ಖಾಲಿಯಾದಾಗ..!
ನೀನೇನೊ ತುಂಬಿಕೊಂಡೆ..
ನೂರು ನೆನಪುಗಳ..!
ಕೋಟಿ ಕನಸುಗಳ...!!
ಆದರೆ...
ನನ್ನ ಹೃದಯ ಖಾಲಿಯಾದಾಗ..!
ನೂರು ಕೈ ಒರೆಸಿದರೂ,
ನಿಲ್ಲುತ್ತಿಲ್ಲ ಕಣ್ಣೀರು.....
ಭಾರವಾಗಿ ಹೋಗಿದೆ,
ಈ ಮನದ ಉಸಿರು...
ಒಮ್ಮಯಾದರೂ ಕೇಳಲಿಲ್ಲ...!
ನೀ ನನ್ನ ಒಪ್ಪಿಗೆ......
ನೋವಲ್ಲೇ ಸಾಗುತಿರುವೆ...!
ನೀ ಮಾಡಿದ ತಪ್ಪಿಗೆ.....
ನಿನ್ನ ಬರುವಿಕೆಗಾಗಿ
ಕಾಯ್ದುಕುಳಿತಿರುವ
ಈ ನನ್ನ ಕೊಲ್ಲಲು
ಬೇರಾವ ಆಯುಧಗಳ
ಜರೂರತ್ತಿದೆ ಹೇಳು ಹುಡುಗಿ|
ನೀನೊಮ್ಮೆ ತಿರುಗಿ
ನೋಡದೆ ಹೋದರಾಯ್ತು.
ಸಣ್ಣ ನಗುವೊಂದ
ಬೀರದೆ ಇದ್ದರಾಯ್ತು.
ಮೌನದ ಅಸ್ತ್ರ ಎಸೆದರಾಯ್ತು.
ಆ ಕ್ಷಣವೆ
ಈ ನಾನು
ಸತ್ತಂತಲ್ಲವೇನೆ ಹುಚ್ಚು ಹುಡುಗಿ.
ಬದುಕಲಿಲ್ಲ ನಾನು ನಿಮ್ಮ ಹಾಗೆ.
ಮೈಯ ಮಾರಿಕೊಂಡರೂನು
ಮನಸ ಮಾರಿಕೊಂಡವಳಲ್ಲ,
ನಿಮ್ಮ ದೃಷ್ಟಿಯಲ್ಲಿ ಕೆಟ್ಟವಳು
ಅನಿಸಿಕೊಂಡರೂನು
ಕನಸುಗಳಿಗೆ ಕೊಳೆ ಅಂಟಿಲ್ಲ!!
ಮೊಗಕೆ ಬಣ್ಣ ಬಳಿದರೂನು
ಬಣ್ಣ ಬದಲಿಸಿ ಬದುಕಲಿಲ್ಲ,
ಕೈ ಚಾಚಿ ದುಡ್ಡು ಪಡೆದರೂನು
ಇನ್ನೊಬ್ಬರ ಬೆವರ ಹನಿಯ ದೋಚಲಿಲ್ಲ!!
ಬದುಕಲಿಲ್ಲ ನಾನು ನಿಮ್ಮ ಹಾಗೆ.
ಹೊಟ್ಟೆಗಾಗಿ ಬಟ್ಟೆ ಕಳಚಿದರೂನು
ಮತ್ತೊಬ್ಬರ ಕಣ್ಣ ಹನಿ ಕುಡಿದು ನನ್ನ
ದಾಹ ನೀಗಿಸಿಕೊಂಡವಳಲ್ಲ!!
ಸೂಳೆ ಎಂದ ಮಾತು ಕೇಳಿ
ನೋಂದರೂನು ಅಸೂಹೆಯಿಂದ
ನಿಮ್ಮ ಮನೆಗಳ ಒಡೆಯಲಿಲ್ಲ,
ಸೇರಗಾಸಿ ನನ್ನ ಮಕ್ಕಳ ಹೊಟ್ಟೆ
ತುಂಬಿಸುವುದು ನನಗೆ ಒಮ್ಮೆಯೂ
ತಪ್ಪು ಎನಿಸಲಿಲ್ಲ!!
ಅಳುವ ಕಣ್ಣಿಗೂ ಆಸೆಯುಂಟು
ನಗುವ ತುಟಿಗೂ ನೋವುಂಟು,
ಉಳಿಸಿಬಿಡಿ ನನ್ನನ್ನು ಇತಿಹಾಸದಲ್ಲಿ
ಹೆಸರಿಲ್ಲದೆ ಉಸಿರಾಡುವ ಪುಸ್ತಕದ
ಕಥೆಯಂತೆ, ಹೇಳಿದರೂ ನಿಮಗೆ
ತಿಳಿಯದ ನನ್ನ ಮನಸಿನ ವ್ಯಥೆಯಂತೆ!!
ಕಣಗಿಲದ ಕುಸುಮದಲಿ
ನಿನ್ನ ಮೊಗವ ಕಂಡೆ
ಮುದ್ದಾದ ತುಟಿಯಂಚಲಿ
ತುಂಟ ನಗೆಯ ಕಂಡೆ
ಹಾಲುಗೆನ್ನೆಯ ದಿಮ್ಮೆಗಳಲ್ಲಿ
ಚಂದಿರನ ಹೊಳಪನು ಕಂಡೆ
ಮುದ್ದಾದ ಮೂಗಿನ ಮೇಲೆ
ದುಂಬಿಯು ಕೂರುವುದು ಕಂಡೆ
ಆದರೆ ನಿನ್ನ ಕಣ್ಣಂಚಲಿ
ನನ್ನ ಬಿಂಬವೇ ಕಾಣಲಿಲ್ಲ.....
##ಮೌನಿ##