Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಾಡುವ ಹುಡುಗಿ

ಕಣ್ಣಸನ್ನೆಲಿ ಶುರುವಾಗುತ್ತಿದೆ ಪ್ರೀತಿ
ಮೌನದಲ್ಲೇ ಉತ್ತರಿಸುತ್ತಿದ್ದಾಳೆ ಪ್ರತಿ ಸರತಿ
ಅವಳ ಇನ್ನು ನೀಡಿಲ್ಲ ನಂಗೆ ಮಾಹಿತಿ..
ನನ್ನವಳು ಇವಳಿನ್ನು ಚಿಕ್ಕವಳು...

- shivu

11 Jul 2019, 09:58 am

ಅಗ್ನಿ

ಪೂಜೆಗೆಲ್ಲ ಮೊದಲುಗೈವ,

ಕೊಳೆಯ ತೊಳೆದು ಪಾಪ ಕಳೆವ

ಆಗಸದಗಸ ಅಗ್ನಿ!1!

ಬಡವ ಬಲ್ಲಿದ ಭೇದವಿಲ್ಲದ ಸಮಾನತಾವಾದಿ ಅಗ್ನಿ, ಚಾತುರ್ವರ್ಣವನೂ ಸಹಿಸದೆ ದಹಿಸುವ

ಸಮಾಜವಾದಿ ಅಗ್ನಿ!2!

ಜೀರ್ಣಕ್ರಿಯೆಗೆ ಕಾರಣನಾಗಿ,

ಆಹಾರವನು ಅಪೋಷಣೆಗೈದು,

ಪೋಷಣೆಯನು ಪೋಷಿಸುವ

ಜಾಠರಾಗ್ನಿ!3!

ಪಂಚಭೂತಗಳನು ಸಂಸ್ಕರಿಸಿ,

ಧಾತುಗಳನು ದೃಡೀಕರಿಸಿಸುವ ಭೂತಾಗ್ನಿ, ಜೀವಸಂಕುಲದ ಸಂತತಿಯ ವೃದ್ಧಿಸುವ

ಕಾಮಾಗ್ನಿ!4!

ಸಪ್ತವರ್ಣವ ತನ್ನೊಳಿಟ್ಟು,

ಕೆಂಪು ಅಶ್ವವನೇರಿ ಹೊರಟ ಅಗ್ನಿ,

ಸಮುದ್ರದಲ್ಲಿ ಬಡಬಾಗ್ನಿ,

ಪರ್ವತನ ಹೊಟ್ಟೆಯಲ್ಲಿ

ಜ್ವಾಲಾಗ್ನಿ!5!

ಅಂಧರ ಅಂಧಕಾರವ ದೂರ ಸರಿಸಿ

ಕಿಚ್ಚನಚ್ಚಿ ಸ್ಥೈರ್ಯ ನೀಡುವ ಜ್ಞಾನಾಗ್ನಿ,

ಧೀ, ಧೃತಿ, ಸ್ಮೃತಿಗಳಲಿ ಚೇತನ ತುಂಬುವ ಚೈತನ್ಯದ

ಚಿಲುಮೆ ಈ ಅಗ್ನಿ!6!

ಜೀವನಯಾತ್ರೆಯ ಅಂತ್ಯದಲೂ ಪ್ರೀತಿಯಿಂದ ಸ್ಪರ್ಶಿಸಿ, ರೋದಿಸಿ, ಸಾಂತ್ವನ ಹೇಳಿ ಕೈ ಹಿಡಿದು ಕರೆದೊಯ್ಯುವ ಜೀವದ

ನಿಜ ಗೆಳೆಯನೀ ಅಗ್ನಿ!7!

-ಡಾ! ಸಿ.ಮುರಳೀಧರ

https://muralinada.wordpress.com

17, ಮೇ, 2019

- ಡಾ!ಸಿ.ಮುರಳೀಧರ

10 Jul 2019, 10:22 pm

ನ ನಾ ನಿನ್ನ ನೋಡಿದೆ...

ಸಂಜೆಯ ವೇಳೆ, ಜೋರು ಮಳೆ
ಪಂಕ್ಚರ್ ಆದ ಬಸ್ಸು, ಕಿಟಕಿ ಹೊರಗೆ ನನ್ನ ಮನಸು
ನಾ ನಿನ್ನ ನೋಡಿದೆ....
ಆ ಮುಗ್ಧ ನಗು, ನಾನಾದೆ ಮಗು
ಸುಂದರ ನಯನ, ಮಾತಾಯ್ತು ಮೌನ
ನಾ ನಿನ್ನ ನೋಡಿದೆ....
ನಾನಾದೆ ಕವಿ, ಮನಸ್ಸಲ್ಲೇ ಮನವಿ
ನನ್ನ ಒಮ್ಮೆ ನೋಡು, ಎದೆಯಲೊಂದು ಹಾಡು
ನಾ ನಿನ್ನ ನೋಡಿದೆ...
ಸಿದ್ಧವಾಯ್ತು ಬಸ್ಸು, ಒಳಗೇನೋ ಮುನಿಸು
ಕೊನೆಗೂ ನೀ ನೋಡಲೇ ಇಲ್ಲ
ನಾ ನಿನ್ನ ನೋಡಿದೆ...
ಕಣ್ಣೀಗೆ ಕಾಣದ, ಕಣ್ ಮುಚ್ಚಿದರೆ ಕಾಡುವ
ನಿನ್ನ ಹುಡುಕುತಿರುವೆ, ಎಲ್ಲಿರುವೆ
ನಾ ನಿನ್ನ ನೋಡಿದೆ...
ಈಗಲೂ ನೋಡುತಿರುವೆ, ನಿನ್ನ ನೆನಪಲ್ಲೇ...

- dvja

09 Jul 2019, 10:11 am

ಪ್ರೀತಿಯ ಹೃದಯ

""ನಿನ್ನ ನೆನಪಿನ ನೆರಳಿನಲ್ಲೇ ದಿನ ಕಳೆವೆ ಉಸಿರಾಡುತಾ... ದೂರದಿಂದಲೇ ನೋಡಿ ನಗುತ...
ಮನಸಾರೆ ಹಾರೈಸುವೆ...
"""ಹೃದಯ ನಂದು ಆದರೆ ಆ ಹೃದಯದಲ್ಲಿ ಇರೋ ನೆನಪುಗಳೆಲ್ಲ ನಿಂದೆ ಕಣೆ.... ?

- Parashuram2337

09 Jul 2019, 06:31 am

ನನ್ನ ಹೃದಯ

ಮನೆಯಿಂದ ನಾ ಹೊರಟೆ ಸೈಕಲನ್ನೇರಿ
ಹುಡುಕುತಾ ಅವಳ ಮನೆಯ ದಾರಿ
ನನ್ನ ಹೃದಯದ ಸೈಕಲ್ಲಿಗೆ ಬ್ರೇಕು ಬಿತ್ತು
ಅವಳ ನಗುಮೊಗವ ಕಂಡು.
ಬಂದಳು ನನ್ನ ಮನದಂಗಳದ ಕಸವ ಗುಡಿಸಿ
ಹಳೆಯ ನೆನಪು ಮರೆಸಿ ಪ್ರೀತಿಯ ನೀರನ್ನು ಸಿಡಿಸಿ.
ಕಣ್ಣು ಹೊಡೆದ ಸೂರ್ಯ ಕುಳಿತು ಅವಳ ಕಣ್ಣ ಹೊಳಪಲಿ
ತಡವಾದರೂ ಮನೆಗೆ ಹೋಗದ ಚಂದ್ರ
ನಗುತಿರುವನು ಅವಳ ದಂತಪಂಕ್ತಿಯಲಿ.
ಸುಳಿದಾಡಿದೆ ಅವಳ ಮನೆಯ ಸುತ್ತ ಬೆಲ್ಲನ್ನು ರಿಂಗಣಿಸಿ
ಹೊರಗೆ ಬರುವಳೇನೋ ಎಂಬ ನಿರೀಕ್ಷೆಯಲಿ.
ಅವಳ ಗೆಜ್ಜೆಯ ಸದ್ದು ನನ್ನ ಹೃದಯದ ಬೆಲ್ ರಿಂಗಣಿಸಿ
ಬಂದಳು ಚುಕ್ಕಿಯ ರಂಗೋಲಿ ಇಡಲು
ಒಂದೊಂದು ಹೆಜ್ಜೆಯನಿಕ್ಕುತಾ ನನ್ನ ಮನದಲಿ.
ಬಳಿ ಹೋಗಿ ನಿಂತೆ ಅವಳ ಮಾತನಾಡಿಸಲು
ಕಳೆದುಹೋಗಿದ್ದೆ ಅವಳ ಕಲ್ಪನೆಯ ಗುಂಗಿನಲಿ.
ರಪ್ಪನೇ ನೀರು ಹೊಡೆದಳು ಮುಖದ ಮೇಲೆ
ನಶೆಯೆಲ್ಲಾ ಇಳಿದು ಹೋಯಿತು ಕಣ್ಣಿಗೆ ಕಂಡದ್ದು ಕಂಡು
ಅರಿವಾಯಿತು ಅದು ಅವಳಲ್ಲ ಅವಳ ಅಜ್ಜಿ ಎಂದು.
- ಉಮೇಶ್ (ಮಣಿ).

- Umesh

07 Jul 2019, 04:49 pm

ಮೊದಲ ಮಾತು

ಕಡಲಾಳದಲ್ಲಿ ಹುಡುಕಿದರು
ಸಿಗದ ಸ್ವಾತಿಮುತ್ತು ನೀ ಗೆಳತಿ
ನೀ ಸಿಕ್ಕಿದೆ ಪಕ್ಕದ ಊರ ಬೀದಿಯಲಿ
ನಾ ಅಲೆಯುತ ಬಂದಾಗ
ನನ್ನ ಕಂಡು ನೀ ಮರೆಯಲಿ
ನಿಂತು ಇಣುಕಿ ನೋಡುವ ಪರಿ
ನನ್ನ ಹೃದಯಕ್ಕೆ ಬೀರಿತು ಬಾಣದ
ಗುರಿ ನಾ ತಪ್ಪಿಸಿಕೋಳ್ಳಲು ಪರದಾಡಿದೆ
ನೀನ್ನ ನಗುವಿನ ಬಾಣವ ಕಂಡು
ಆದರೆ ಆ ಬಾಣವೆ ಹೃದಯವ ಹೊಕ್ಕು
ಇಂದು ನನ್ನ ನೆಮ್ಮದಿಯಗೆಡಿಸಿತು ಹಾಳಾದ್ದು..

- Parashuram2337

04 Jul 2019, 09:38 am

ಮೌನ

ಸಾವಿನ ಶವಯಾತ್ರೆಯಲ್ಲಿ
ನೆನಪುಗಳ ಮೆರವಣಿಗೆ
ಕಂಬನಿಯ ಮಿಡಿತ
ನನ್ನವರು ಜಗವ ತೊರೆದರು
ಏನೂ ಹೇಳದೆ ಹೊರಟೆ ಮೌನಿಯಾಗಿ.

ಎ ಜಿ ಶರಣ್

- ಎ ಜಿ ಶರಣ್

04 Jul 2019, 08:14 am

ತಲ್ಲಣ ಲ್ಲ

ಅದೇ ಚಂದ್ರ ಅದೇ ತಾರೆ
ನಾವು ಮಾತ್ರ ಬೇರೆ ಬೇರೆ
ಅದೇ ಬಾನು ಅದೇ ಭೂಮಿ
ಲೀಲೆಯ ನವ ಧಾರೆ ಧಾರೆ
ಅದೇ ಚಂದ್ರ ಅದೇ ತಾರೆ
ನಾವು ಮಾತ್ರ ಬೇರೆ ಬೇರೆ

ಕಾಲ ಪಥದ ತಿರುವಿನಲ್ಲಿ
ನಮ್ಮದೊಂದು ನಿಲುವ ತಾಣ
ನಮ್ಮ ಆಟ ಹೊಸದೆನಿಸುವ
ಬಗೆಯದೊಂದು ಹೊಸದೆ ಪಯಣ
ಅದೇ ಚಂದ್ರ ಅದೇ ತಾರೆ
ನಾವು ಮಾತ್ರ ಬೇರೆ ಬೇರೆ

ನಮ್ಮ ಮನೆ ನಮ್ಮ ಒಲುಮೆ
ನಮ್ಮ ಕರುಳ ಕುಡಿಗಳು
ಮನದ ತುಂಬಾ ಹಾಡು ಗುನುಗಿ
ಹರುಷ ತಂದ ಕ್ಷಣಗಳು
ಅದೇ ಚಂದ್ರ ಅದೇ ತಾರೆ
ನಾವು ಮಾತ್ರ ಬೇರೆ ಬೇರೆ

ಹೊಸ ಚಿಗುರಿನ ಉಲ್ಲಾಸಕೆ
ಬೇರಿಗೇನೋ ಸಂಭ್ರಮ
ಮೇಲೊಗಿದಿವೆ ಹೂಗೊಂಚಲು
ಬಯಲ ಬೆರಗು ಘಮಘಮ
ಅದೇ ಚಂದ್ರ ಅದೇ ತಾರೆ
ನಾವು ಮಾತ್ರ ಬೇರೆ ಬೇರೆ
ಅದೇ ಬಾನು ಅದೇ ಭೂಮಿ
ಇಗೋ ನಾವು ಹಳಬರು
ಅದೇ ಚಂದ್ರ ಅದೇ ತಾರೆ
ಬರುವರಿನ್ನು ಹೊಸಬರು

- Radhika Narasimha

03 Jul 2019, 09:39 pm

ಪುಸ್ತಕ

ಕೆಲವೊಮ್ಮೆ,
ನಾವು ಓದಲು ಬಯಸಿದ
ಪುಟಗಳಲ್ಲೇ ಉತ್ತರ
ಅರಸುತ್ತಾ ಇರುತ್ತವೆ....

- Radhika Narasimha

03 Jul 2019, 08:27 pm

ನಾನೊಬ್ಬ ಭಿಕ್ಷುಕ

ಆ ದೇವರ ಬಳಿ ಜನನದ ಭಿಕ್ಷೆ
ತಾಯಿಯ ಬಳಿ ಜೀವದ ಭಿಕ್ಷೆ
ತಂದೆಯ ಬಳಿ ಬದುಕಿನ ಭಿಕ್ಷೆ
ಗುರುವಿನ ಬಳಿ ವಿದ್ಯೆಯ ಭಿಕ್ಷೆ
ನಾನೊಬ್ಬ ಭಿಕ್ಷುಕ ಕೇಳಲೆಂಗೆ
ಬೆಡಲೆಂಗೆ ನಿಡುವ ಭಿಕ್ಷೆಯನು

ತಂಗಾಳಿಯ ಬಳಿ ಹುಸಿರಿನ ಭಿಕ್ಷೆ
ನೀರಿನ ಬಳಿ ದಾಹದ ಭಿಕ್ಷೆ
ಉದಕದ ಬಳಿ ಹಸಿವಿನ ಭಿಕ್ಷೆ
ಮರದ ಬಳಿ ನೇರಳಿನ ಭಿಕ್ಷೆ
ನಾನೊಬ್ಬ ಭಿಕ್ಷುಕ ಬೇಡಲೆಂಗೆ
ಕೇಳಲೇಂಗೇ ನಿಡುವ ಭಿಕ್ಷಯನು

ಗೇಳೆಯರ ಬಳಿ ಗೇಳೆತನದ ಭಿಕ್ಷೆ
ಪ್ರೇಯಸಿಯ ಬಳಿ ಪ್ರೀತಿಯ ಭಿಕ್ಷೆ
ಪುರೋಹಿತರ ಬಳಿ ಮಾಂಗಲ್ಯದಾರಣೆ
ಯ ಭಿಕ್ಷೆ ಬಂಧುಭಾಂದವರ ಬಳಿ
ಹಾರ್ಸಿವಾದ ಮತ್ತು ಉಡುಗೊರೆಯ ಭಿಕ್ಷೆ
ತಿರಸ್ಕರಿಸಿರಿಸಲೇಂಗೆ ಮೌಲ್ಯದ ಭಿಕ್ಷಯನು

ಸಿರಿವಂತನ ಬಳಿ ಸಾಲದ ಭಿಕ್ಷೆ
ಕಾರ್ಯದಲ್ಲಿ ಸಂಬಳದ ಭಿಕ್ಷೆ
ಮಡದಿಯ ಬಳಿ ಸಂತಾನ ಭಿಕ್ಷೆ
ನಂತರ ಮಕ್ಕಳ ಆರೈಕೆಯ ಭಿಕ್ಷೆ
ನಾನೊಬ್ಬ ಭಿಕ್ಷುಕ ಬೇಡಲೆಂಗೆ
ಕೇಳಲೆಂಗೆ ನಿಡದ ಭಿಕ್ಷಯನು

ಮಕ್ಕಳ ಬಳಿ ನಿಷ್ಪ್ರಯೋಜಕನೇಂಬ
ಭಿಕ್ಷೆಯ ಪಡೆದು ಭಂದುಭಾದವರಿಂದ
ಎಳ್ಳು ನೀರುಎಂಬ ಭಿಕ್ಷೆಯ ಪಡೆದು
ಬೊಮಿತಾಯಿಯ ಬಳಿ ಆರಡಿ ಮುರಡಿ
ನೇಲ ಮಾಳಿಗೆಯ ಭಿಕ್ಷೆ ನಾನೊಬ್ಬ ಭಿಕ್ಷುಕ
ಬೇಡಲೆಂಗೆ ಕೇಳಲೆಂಗೆ ನಿಡುವ ಭಿಕ್ಷಯನು

- Vinod Naik Vinod Naik

03 Jul 2019, 02:12 am