Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸುರಿದಿದೆ ಮಳೆಹನಿ

ಋತುವಲ್ಲಿ ನೀನು ಬಂದೆ
ನನ್ನ ಮನಕೆ ಹರುಷ ತಂದೆ
ಗಗನದಲ್ಲಿ ನೀನೆ ನಿಂತೆ
ಬರಬಾರದೆ ಹನಿಯಾಗಿ ಸುರಿಯಬಾರದೆ

ನನಗೊಂದು ಹನಿಯ ನೀಡು
ಅವಳ ತುಟಿಗೆ ಜೇನು ನೀಡು
ಭುವಿಯ ಮೇಲಣ ಸ್ವರ್ಗ ನೋಡು
ಹನಿಹನಿಯಾಗಿ ಹೊಳೆಯ ಸುರಿಸು

ಜಾರಿಬಿದ್ದ ಹನಿಯೊಂದು ಗಿರಿಯನ್ನು ಸೇರಿದೆ
ವಸಂತೆ ನಡುವಲ್ಲಿ ಒಂದಷ್ಟು ನುಸುಳಿ ಹರಿದು
ಅದು ಯೇನು ಸ್ಪರ್ಶವು ಮಳೆಬಿಲ್ಲ ಹೂನಗೆ
ತಂಗಾಳಿಯಲ್ಲಿ ತೇಲುತ್ತಾ ಬಂದೆ ಒಡಲೊಳಗೆ

ಅವಳ ಎದೆಯಲ್ಲಿ ಜಾರಿದ ಮುತ್ತಾಗುವೆ
ಬಾನಲ್ಲಿ ನನ್ನೊಮ್ಮೆ ಕರೆಯಬಾರದೆ
ಮೋಡಗಳ ಮಧ್ಯದಲ್ಲಿ ಬೆಳ್ಳಿಯ ಬೆಳಕಿಗಿಸು
ಕಿರಣಗಳ ಚಿಮ್ಮಿತು ಹೊಳೆ ಸಿಹಿಯ ಪ್ರೀತಿಯಲಿ

ಜಿ ಟಿ ಆರ್ ದುರ್ಗ
ಬಂಗಾರಪೇಟೆ

- Gtramachandrappa Ramachandrappa

20 Jul 2019, 05:57 pm

ಚೆಲುವಿನ ಸೊಬಗು

ಚೆಲುವಿನ ಸೊಬಗು

ಈ ಭೂಮಿಯ... ಆ ಆಗಸ ...
ಎಷ್ಟೊಂದು ಚೆಲುವು ಒಲವು...
ಗಿರಿಯ ಧರೆಯ ಸಾಲೆ ಓಹೋ..
ಏನಿದು ಸೊಬಗಿನ ಲೀಲೆ.. ಓಹೋ ಮನವನು ತಣಿಸುವ ಲೀಲೆ..!!

ಚೆಲುವು ತುಂಬಿ ನಗುವ.....
ಆ ಮುಗಿಲ ನಕ್ಷತ್ರ ಹೊಳಪೆ...
ಗಿಡಮರ ಹಸಿರೆಲೆ ನಾಚಿಸುವಂತೆ
ಎಷ್ಟೊಂದು ಸುಂದರ ಚೆಲುವೆ...!!

ಕಾಮನ ಬಿಲ್ಲಿನ ಜಡೆಯೆ...
ಕಟ್ಟಿದೆ ತೆರೆತೆರೆ ಹೊಳೆಯೇ...
ಹಿಮದ ಮಡಿಲ ಮಂಜಿನಲ್ಲಿ ಕವಿದಿದೆ
ಶ್ವೇತವೆ ಸುರಿದಿದೆ ಮಲ್ಲಿಗೆ ಸುಗಂಧವೆ..!!

ರವಿಯ ತೆರೆದ ಕುಂಜದಿ....
ಬೀಸಿದಿ ಬಗೆಬಗೆ ಸೆರೆಯ
ಎಲೆಗಳಲ್ಲಿ ಮರೆಮಾಚಿದೆ ನೋಡು
ಕೋಗಿಲೆ ಇಂಚರ ಧ್ವನಿಯು ... !!

ಕಣ್ಢ ಮಿಟುಕಿಸಿ ಹೆಣ್ಣು
ಹಾರಿದೆ ರೆಪ್ಪೆಯ ಬಡಿದು
ಅಕ್ಕರೆ ಮುಗಿಲಿನ ನೀಲಿಯ ಸೌಂದರ್ಯ
ನಾಚಿಸಿ ಮಳೆಹನಿಯಾಗಿ !!

ಅವಳ ನಗುವ ಮೊಗವು
ಚಂದ್ರನು ತುಟಿಯಲ್ಲಿ ಅಮೃತ ಹನಿಯು
ಸಾಗಿದೆ ತೊರೆತೊರೆ ಹಬ್ಬರದಲ್ಲಿ....
ಪ್ರೀತಿಯ ಹುಣ್ಣಿಮೆ ರಾತ್ರಿ !!

ಜಿ ಟಿ ಆರ್ ದುರ್ಗ
ಬಂಗಾರಪೇಟೆ

- Gtramachandrappa Ramachandrappa

20 Jul 2019, 04:40 pm

ಪ್ರೇಮ ಶೃತಿ

ನನ್ನೊಲವಿನ ಬಾನಂಗಳದಿ
ನೀ ಹೊಳೆವ ಚಂದಿರನಂತೆ!!
ಮುದ್ದಿಸಲು ನಾ ಬರುವ ಮುನ್ನ
ಕರಗಿ ನೀ ಎಲ್ಲಿ ಹೊರಟೆ!!

ಸಾಗರದ ಅಲೆಯು ಹಿಂತಿರುಗಿ
ಬಂದೊಮ್ಮೆ ಕರೆಯುವುದು ನಿನ್ನ!!
ಬೊರ್ಗರೆತದ ನನ್ನ ಒಲುಮೆ
ಚಿಮ್ಮೆ ಬಿಡಲೇ ನಾ ನಿನ್ನ ಕಡೆಗೆ!!

ಆಕಾಶ ಗಂಗೆಯೇ ಧುಮುಕಿ
ನಿನ್ನನು ಕರೆತರಲಿ ನನ್ನ ಬಳಿಗೆ!!
ಅನುರಾಗದ ಬೇಲಿ ಹಾಕಿ
ಬಂದಿಸಿಡುವೆ ನನ್ನ ಎದೆಯೊಳಗೆ!!

ಅಂಗೈಯ ಬೊಗಸೆಯಲಿ ಪ್ರೀತಿ
ಅದು ಹೇಳಿ ತೀರದ ರೀತಿ!!
ಋತುಮಾನ ಕಳೆದರೂ ಅಳಿಯದು
ನನ್ನೊಳಗೆ ಮಿಡಿದ ಈ ಪ್ರೇಮ ಶೃತಿ!!

- ಪಿ.ಜಿ.ಜ್ಯೋತಿ

17 Jul 2019, 12:25 pm

ದುಡಿಮೆ

ಭಾವನೆಗಳ ಕೂಡಿಟ್ಟು
ಬಾದೆಗಳ ಬದಿಗಿಟ್ಟು
ನವನವೀನತೆಯ ಅರಸುತ್ತ
ದಿನವಿಡೀ ದುಡಿವ ಹಕ್ಕಿಯು ನಾನು

ದೇವಾಲಯಕ್ಕೊಂದೆ
ಮಹಾದ್ವಾರ
ಬಯಕೆಗಳ ನೀಗಿಸಲು
ಆದಾಯವೊಂದೆ ಮಾರ್ಗ

ಸಿಂಪಿಯು ಗಳಿಸುವ
ದಿನವು ಸಾವಿರಾರು ವರಹ
ಸಮಾಜದ ಶಿಲ್ಪಿಯು ನಾನು
ಆದೆ ಅವನಿಗಿಂತ ಬಲು ದೂರ

ಬಳಿಯಿದ್ದಾಗ ಎಲ್ಲವು
ನಮಗೆ ಬಲು ಅಗುರ
ದೂರ ಸರಿದಾಗಲೆ
ತಿಳಿವೆವು ಅದೆ ಅಮರ



ಶಾರದ

- ಶಕುಂತಲಾ

17 Jul 2019, 09:27 am

ಸ್ನೇಹ

ಸ್ನೇಹದ ಮಹತ್ವವನ್ನ ಜಗತ್ತಿಗೆ ಸಾರೋಣ
ಈ ನಮ್ಮ ಒಂದು ಸ್ನೇಹದ ಕವಿತೆಯಿಂದ

ನನ್ನ ನಿನ್ನ ಈ ಸ್ನೇಹ ನಿನ್ನೆಯದಲ್ಲ
ನನ್ನ ನಿನ್ನ ಈ ಸ್ನೇಹ ಇಂದಿನದಲ್ಲ
ನನ್ನ ನಿನ್ನ ಸ್ನೇಹ ಇಂದಿಗೂ ಚಿರಾಯು
ನನ್ನ ನಿಂನ್ನ ಸ್ನೇಹ ಇಂದಿಗೂ ಹೀಗೆ

ನಾನು ನೀನು ಕಳೆದ ಈ ಕ್ಷಣಗಳೆಲ್ಲ
ಎಂದು ಇಂದು ಹೀಗೆ ಇರುವುದು ಅಲ್ಲ
ನಾನು ನೀನು ಹೀಗೆ ಸ್ನೇಹಿತೆಯರಲ್ಲ
ನನ್ನ ನಿನ್ನ ನಡುವೆ ಜಗಳವೆ ಇಲ್ಲ

ನನ್ನ ನಿನ್ನ ಈ ಸ್ನೇಹ ಹಾಲು ಜೇನಿನಂತೆ
ನನ್ನ ನಿನ್ನ ನಡುವೆ ಪ್ರೀತಿಯು ಇದೆಯಲ್ಲ
ನನ್ನ ನಿನ್ನ ನಡುವೆ ಸ್ನೇಹವು ಇದೆಯಲ್ಲ
ನನ್ನ ನಿನ್ನ ಈ ಸ್ನೇಹ ಈ ಜಾಗಕ್ಕೆ ಒಂದು ಮಾದರಿಯಾಗಲಿ.......


ತ್ರಿಷಾ ಆರ್ ಶೇಖರ್.......

- Trupthi Trupthi

15 Jul 2019, 08:43 pm

ನನ್ನ ಹೃದಯ.........

ಓ ಹೃದಯ
ನನ್ನನ್ನು ಬಿಟ್ಟು ಎಲ್ಲಿ ಹೋದೆಯಾ
ನೀ ಇಲ್ಲದೆ ನನ್ನ ಬದುಕು ಖಾಲಿ ಹಾಳೆಯಾ
ಎಲ್ಲಿದ್ದರೂ ಬೇಗ ಬರುವೆಯಾ


ಓ ನನ್ನ ಮುದ್ದು ಅರಗಿಣಿಯೇ
ನನ್ನನ್ನು ಬಿಟ್ಟು ಎಲ್ಲಿ ಹೋದೆಯೇ
ನೀ ಆಗಿರುವೆ ನನ್ನ ಜೀವವೇ
ನಿನ್ನನ್ನು ಬಿಟ್ರು ನಾನು ಹೇಗೆ ಬದುಕಲೇ
ನನ್ನನ್ನು ಬಿಟ್ಟು ಹೇಗೆ ಇರುವೆಯೇ


ಹೌದು ಹೃದಯ
ನಿನ್ನನ್ನು ಬಿಟ್ಟು ಇರಲು ಸಾಧ್ಯವಿಲ್ಲ
ಎಲ್ಲಿದ್ದರೂ ಬೇಗ ಬರುವೆನು ನನ್ನ ಗೆಳೆಯ
ನೀ ಕೂಡ ನನ್ನ ಜೀವ
ಈ ನಮ್ಮ ಪ್ರೀತಿಗೆ ಈ ಜಾಗದಲ್ಲಿ ಜಾಗವಿಲ್ಲ
ಇದು ನಮ್ಮ ಪ್ರೀತಿಗೆ ಆಗುವ ಮೋಸವೇ ಅಲ್ಲ.......

- Trupthi Trupthi

14 Jul 2019, 07:35 pm

ಹುಣ್ಣಿಮೆಯ ಇರುಳು

ಹುಣಿಮೆಯ ಇರುಳಲಿ ಕಂಡನು ಶಶಿಯು
ಮನದಾಳದಿ ಹೊಮೀತು ಖುಷಿಯು
ಕಣ್ಣಲಿ ತುಂಬಿತು ಕನಸುಗಳ ರಾಶಿಯು
ಎಂದೆಂದಿಗು ನೀನೆ ನನ್ನ ಹಿತೈಷಿಯು

- shu

13 Jul 2019, 11:25 pm

ಅವಳ !

ಅವಳ ಚಲುವ
ನಾ ಹೇಗೆ ಬಣ್ಣಿಸಲಿ ?
ಕಣ್ಣು ಮುಚ್ಚಿದರೂ
ಅವಳ ರೂಪ ಕಣ್ಣೆದುರಲ್ಲಿ.
ಅವಳ ನಗುವ
ನಾ ಹೇಗೆ ಚಿತ್ರಿಸಲಿ ?
ಏಕಾಂತದಲ್ಲಿ ಕುಳಿತರೂ
ನಗಿಸುವುದು ಅವಳ ನಗುವಿಲ್ಲಿ.
ಅವಳ ಶೃಂಗಾರವ
ನಾ ಹೇಗೆ ಸಿಂಗರಿಸಲಿ?
ಸಂತೆಯಲ್ಲಿ ನಿಂತರೂ
ಸಂಭ್ರಮಿಸುವುದು ಮನವಿಲ್ಲಿ.
ಅವಳ ನಾಚಿಕೆಯ
ನಾ ಹೇಗೆ ಸೆರೆ ಹಿಡಿಯಲಿ?
ಅವಳೊಮ್ಮೆ ನೋಡಿ ನಾಚಿದರೆ
ನಿಂತು ನೀರಾಗುವೆ ನಾನಿಲ್ಲಿ.
ಅವಳ ಹೃದಯವ
ನಾ ಹೇಗೆ ಅಳೆಯಲಿ?
ಹೃದಯ ಕಲಕುವ ಹಾಗೆ
ನೋಡಿ ಕೊಲ್ಲುತ್ತಿಹಳು ಅವಳಿಲ್ಲಿ.

- ನಾಗರಾಜ ಬಾಕೆ೯ರ್

13 Jul 2019, 08:28 am

ಏಕಾಂಗಿ ಜೀವ್ ನಿನಗಾಗಿ...?

ಏಕಾಂಗಿ ನಾನಲ್ಲ ಆದರೂ ನನ್ನ ಜೋತೆ ಯಾರಿಲ್ಲಾ.
ಕಾದು ಕುಳಿತಿರುವೆ ಕಲ್ಲು ಹಾಸಿಗೆ ಮೇಲೆ ಎಲ್ಲಿಂದಲೋ ಬಂದು ಮಲಗಿದೆ ನನ್ನ ಹೃದಯದಮೇಲೆ....
ಯಾರು ನೀನು...........?

- shivu

12 Jul 2019, 10:14 am

ಪ್ರೀತಿ-ಸಂಪತ್ತು

ಹೃದಯದ ಅಣು ಅಣುವಿನಲಿ
ಪ್ರೀತಿ ವಾತ್ಸಲ್ಯಗಳಿರಲಿ
ಹೃದಯ ವೈಶಾಲತೆಯು ಸದಾ ಹಸಿರಾಗಿರಲಿ
ಪ್ರೀತಿ ವಿಶ್ವಾಸ ವಾತ್ಸಲ್ಯ
ಮಾನವೀಯತೆಗಳೇ ಜೀವನದ
ಅಮೂಲ್ಯ ಸಂಪತ್ತುಗಳಾಗಲಿ
-ಗಾಂಚಲಿ ಸೋಮ

- Soma

11 Jul 2019, 10:24 am