Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಗಾಂಧಿ ಕನಸು...

ಗಾಂಧಿ ಕನಸಿನ ನಡಿಗೆ
ಅಧ್ಬುತ ಭಾರತದೆಡೆಗೆ
ಅಭಿವೃದ್ಧಿಯ ಗುರಿಯೆಡೆಗೆ
ವಿಶ್ವವೇ ಭಾರತದೆಡೆಗೆ ತಿರುಗಿ ನೋಡುವುದೆ -ಡೆಗೆ
ಗಾಂಧಿ ಕನಸಿನ ನಡಿಗೆ...

ಸ್ವಚ್ಚ ಭಾರತವೇ ಇವರ ಗುರಿ
ಎಲ್ಲರಲ್ಲೂ ಮೂಡಬೇಕು ಈ ಪರಿಯ ಅರಿ
ಸ್ವರ್ಗವೇ ಇಳಿದಂತಾಗುವುದು ನಮ್ಮ ನೆಲಕ್ಕೆ
ಭಾರತದ ಕಿರೀಟಕ್ಕೆ ಸೇರುವುದು ಒಂದು ಗರಿ
ಗಾಂಧಿಯ ಮನವಾಗಿರುವುದು ತಿಳಿ...

- ತೇಜಸ್ವಿನಿ.ಎಂ
ವಿದ್ಯಾರ್ಥಿ

- Tejaswini M

26 Jul 2019, 03:40 pm

ಸೈನಿಕ

ಓ ಸೈನಿಕ

ತಾಯಿಯ ಮಡಿಲಲ್ಲಿ ಹುಟ್ಟಿ
ತಾಯಿ ನೆಲದಲ್ಲಿಯೇ ದೇಶಕ್ಕಾಗಿ
ಪ್ರಾಣ ತ್ಯಾಗ ಮಾಡಿದ ತ್ಯಾಗಮಯಿ ನೀನು

ನಿನ್ನ ಜೀವನ ಒತ್ತೆ ಇಟ್ಟು
ದೇಶಕ್ಕಾಗಿ ನಿನ್ನ ಜೀವ ಮುಡಿಪಿಟ್ಟ
ನಮ್ಮೆಲ್ಲರ ಕಾಪಾಡುವ ಧೀರ ನೀನು

ದೇಶಕ್ಕಾಗಿ ತನ್ನದೆನ್ನುವುದೆಲ್ಲವನ್ನೂ ಬದಿಗಿಟ್ಟು,
ಛಲದಿಂದ ಹೋರಾಡುವ ಸೈನಿಕ ನೀನು
ತನ್ನ ತನವನ್ನೇ ಲೆಕ್ಕಿಸದೆ ಗಂಭೀರತೆಯಿಂದ
ದೇಶವನ್ನು ಕಾಪಾಡುವ ಸಹನಾಭೂತಿ ಸ್ವರೂಪಿ ನೀನು

ತನ್ನ ಕುಟುಂಬವನ್ನೇ ಲೆಕ್ಕಿಸದೆ ಭಾರತ ಮಾತೆಯ
ಮಡಿಲಲ್ಲಿ ಇರುವ ಕುಟುಂಬವನ್ನು ರಕ್ಷಿಸುವ
ಆ ತಾಯಿಯ ಹೆಮ್ಮೆಯ ಪುತ್ರ ನೀನು
ಆ ನಿನ್ನ ಹೆತ್ತತಾಯಿಯ ಅದೆಷ್ಟು ಪುಣ್ಯಾತ್ಮತಳು
ತನ್ನ ಕುಡಿಯನ್ನೆ ದೇಶಕ್ಕಾಗಿ ನೀಡಿದ ಮಹಾತ್ಮಾಳು

ಇದೊ ನಿನಗೊಂದು ನನ್ನ ನಮನ

- An

26 Jul 2019, 11:09 am

ಯಾಕೆ ಬಂದೆ ಗೆಳೆಯಾ ನೀನು

ಯಾಕೆ ಬಂದೆ ಗೆಳೆಯಾ ನೀನು
ನನ್ನ ಬಾಳಿನಲ್ಲಿ!!
ಸಿಲುಕಿ ಕೊಂಡೆನಲ್ಲಾ ನಾನು
ಪ್ರೀತಿ ಪಾಶದಲ್ಲಿ!!

ಹೃದಯವೆಂಬ ಸುಂದರ ವೀಣೆಯ
ನುಡಿಸ ನೀನು ಬಂದೆ!!
ಸ್ವರವ ಹರಿಸೋ ಮುನ್ನ ನೀನು
ತಂತಿ ಹರಿದು ಬಿಟ್ಟೆ!!

ಸೋತು ಹೋದೆ ಬದುಕು ನನದು
ನಿನಗೆ ತಿಳಿಯದೇನು!!
ಮೂಖವಾದ ಅದರ ತೊದಲಿ
ಮಾತನು ಆಡದು ಇನ್ನು!!

ವಿಧಿಯ ಆಟ ಬಲ್ಲವರಾರು
ಎದೆಯ ನೋವ ಕೇಳುವರಾರು!!
ಇರುಳು ಕವಿದ ಬದುಕಿಗೆ ಈಗ
ಹಣತೆ ಹಚ್ಚಿ ಬೆಳಗುವರಾರು!!

- ಪಿ.ಜಿ.ಜ್ಯೋತಿ

25 Jul 2019, 02:01 pm

ಕಾಯುತಿರುವೆ ಕಾಯುತಿರುವೆ

ನೀ ಬರುವ ಸಮಯ ನಾ ಕಾದೆ ನಿನಗೋಸ್ಕರ

ನೀ ಬಾರದೆ ಹೋದಾಗ ನನಗಾಯಿತು

ಬೇಸರದ ಭಾವ......

ನಾ ಅರಿತೆ ಆಗ ನಿನಗೆ ಬಿಡುವಿಲ್ಲದ ಸಮಯ

ಹೀಗೆ ನಿನಗಾಗಿ ಕಾಯುತಿರುವೆ.

ನಾ ಮುಂದೊಂದು ದಿನವ........

ಮತ್ತೆ ಕಾಯುವೆ ನೀ ಬರುವ ದಾರಿಯ....

ಕಾದು ಕಾದು ನಾ ಕಂಗಾಲಾದ ದಿನವ

ಕಾಲ ಸರಿದರು ಕಾಯುವೆ

ನಾ ಮುಂದೊಂದು ದಿನವ........

- An

24 Jul 2019, 05:29 pm

ಜಡೆ

ಎಂಥ ಚೆಂದ ಉಂಟು
ಎಂಥ ಅಂದ ಉಂಟು
ನಿನ್ನ ಜಡೆಯು ತಂಗಿ (!!)

ಹಾವಿನಂಥ ಹೆಡೆ
ಬಳ್ಳಿಯಂತೆ ಬಳುಕುವ
ನವಿರಾದ ನಿನ್ನ ಜಡೆ (ಎಂಥ )

ಗಂಗೆಯ ಬಂದಿಸಿದ ಜಡೆ
ಉರಗಪತಾಕನನ್ನುರುಳಿಸಿದ
ವಯ್ಯಾರದ ಜಡೆ (ಎಂಥ )

ಅಕ್ಕನ ಅಕ್ಕರೆಯ ಜಡೆ
ನಾರಿಯರ ನೆಚ್ಚಿನ ಜಡೆ
ಪುರಾಣ ಪ್ರಸಿದ್ಧ ನಿನ್ನ ಜಡೆ ( ಎಂಥ )

ಸಾಹಿತಿಗಳ ಸ್ಪೂರ್ತಿಯ ಸೆಲೆ
ಪ್ರೇಮಿಗಳ ಪ್ರೀತಿಯ ಬಲೆ
ಎಲ್ಲೆಲ್ಲು ನಿನ್ನದೆ ಅಲೆ ( ಎಂಥ )




ಶಾರದ

- ಶಕುಂತಲಾ

24 Jul 2019, 09:19 am

ಕನಸು ಹೊತ್ತ ಮೊಡದಬಂಡಿ

ಕನಸು ಹೊತ್ತು ಚಲಿಸಿದ ಮೊಡದ
ಬಂಡಿಯ ಗರ್ವದ ಚಾಲಕ

ಕರಗುವ ಮೋಡಗಳ ಜೊತೆ ಕರಗದ
ಕನಸುಗಳ ಹೋತ್ತು ಚಲಿಸುವ ಪಯಣಿಗ
ನಾನು ಪಯಣದ ವಾಹನದಲ್ಲಿ ಹಾರುವ
ಹಕ್ಕಿಗಳನ್ನು ಮಿರಿಸುವ ವೇಗ ನಾನ್ನದು

ದಾರಿಯು ಕಾಣದೆ ದಿಕ್ಕು ತೋಚದೆ
ಕಣ್ಣೀಗೆಬಟ್ಟೆ ಕಟ್ಟಿದ ವಿಧಿಯ ತಗಡು
ಬಂಡಿಯನ್ನೆರಿ ಕೂತು ಕಾಲಕ್ಕೆ ಸವಾಲೇಸೆದು
ಅದರ ವಿರುದ್ಧ ಚಲಿಸುವ ಛಲಗಾರನಾಗುವೆ

ವಿಧಿಯ ತಗಡು ಬಂಡಿಯಂತೆ ನನ್ನ
ಬದುಕಿನ ಬಂಡಿ ಈ ಬಂಡಿಯಲ್ಲಿ ನಾನೇ
ಗರ್ವದ ಚಾಲಕ ಗರ್ವದಿಂದ ಓಡಿಸಿ
ಮುರಿದ ಬಾಳಬಂಡಿಯ ಹತ್ತುವೇ

ಕಾಲದ ಸಿಡಿಲಿನ ಹೊಡೆತಕ್ಕೆ ಬಳಲಿ
ಬೆಂಡಾದ ಬಂಡಿಯನ್ನು ಮತ್ತೆ ಜೋಡಿಸಿ
ಕನಸುಗಳ ಪಯಣಿಗರನ್ನ ಕೂರಿಸಿ ಮತ್ತೆ
ಆದೇ ಗರ್ವದಿಂದ ಚಲಿಸುವೇ

ವಿಧಿಯ ಆಟದಲ್ಲಿ ಆಕಸ್ಮಿಕವಾಗಿ ನಾನು
ಸೋತರೆ ನಾನ್ನ ಕನಸಿನ ಬಂಡಿನಾಶ ವಾದರೆ
ನೀರನ್ನು ತುಂಬಿಕೊಂಡ ಮೋಡಗಳಂತೆ
ಆಶೆಯನ್ನು ಹೊತ್ತು ತೇಲುತ್ತ ಗುರಿ ಮುಟ್ಟವೇ......

ಕನಸು ಹೊತ್ತು ಚಲಿಸಿದ ಮೊಡದ
ಬಂಡಿಯ ಗರ್ವದ ಚಾಲಕ.....

- Vinod Naik Vinod Naik

23 Jul 2019, 11:01 pm

ಕಾತುರ

ನಿನಗೆ ಅರಿಯದೆ ಹೋಯಿತೆ

ಇ ನನ್ನ ಮನಸ್ಸಿನ ಕಾತುರ


ನಿನಗೆ ಎಣಿಸದೇ ಹೋಯಿತಾ

ನನ್ನ ಆತುಂಕದ ಆತುರ


ಬರಿದಾದ ಈ ಮನಸ್ಸಿನ

ಕಾಡಿದೆ ಬಯಕೆಯ ಪ್ರೀತಿಯ ಕಾತುರ


ನಾ ಒಲ್ಲೆ ಕಾತುರತೆಯ ಪ್ರೀತಿಯ ಆತುರ


ನಿನಗಾಗಿ ನಾ ಕಾಯುವೆ ಕಾತುರತೆಯ ಕಾತುರ


ಅನಿತಾ ಹರೀಶ್ ಕುತ್ಪಾಡಿ ✍️

- An

22 Jul 2019, 09:31 pm

ತವಕ ತವಕ

ನಿನ್ನ ನೆನೆದು ಮನದಲ್ಲಿ ಆ ಮೋಹದ ತವಕ

ನನ್ನ ಮುಖದಲ್ಲಿ ಆದ ಪ್ರೀತಿಯ ಪುಳಕ

ನೀ ಬರುವೆ ಎಂದು ಕಾಯುವುದೆ ನನ್ನ ಕಾಯಕ

ಬಂದ ಕ್ಷಣ ಮನದಲ್ಲಾಯಿತು ಭಾವನೆಯ ತವಕ


ನಾ ಅರಿಯೆ ನಿನ್ನ ಆ ಪ್ರೀತಿಯ ಭಾವ

ಆ ಪ್ರೀತಿಗೆ ಮನಸಾರೆ ನನಗಾಯ್ತು ಹಂಬಲದ ತವಕ


ಚಿರನೂತನವಾಗಿರಲಿ ಮೋಹಕ ಪ್ರೀತಿಯ ತವಕ

- An

22 Jul 2019, 02:06 pm

ಪ್ರೇಮ ಯುದ್ಧ(ಸಿಳೀದ ಹೃದಯ)

ಅವಳದೋಂದು ಪ್ರೇಮಯುದ್ಧ
ಇಲ್ಲಿ ಸೋತವನೆ ಸಾಧಕ ಗೇದ್ದವಳೆ
ಸಾಧಕನ ಕಾಲ್ಕಸ...ಸಿಳಿದ ಹೃದಯ

ಅವಳೊಂದು ಅಣುಬಾಂಬ್
ಆವಳ ನಗು ಮತ್ತೋಂದು ಬಾಂಬ್
ನಾನ್ನ ಮತ್ತಾವಳ ಪ್ರೇಮಯುದ್ಧದಲ್ಲಿ
ಸೋತು ಗಾಯಗೊಂಡವನು ನಾನು

ಆವಳ ಪ್ರೇಮ ವಿಕೀರಣಕ್ಕೆ ತುತ್ತಾದ
ನೀರಾಶ್ರೀತ ಮರುಭೂಮಿ ಯಂಥಃ
ಪಾಪಿ ಹೃದಯದ ಪಾಪಿಗಳು ನುಡಿಯುವ
ಅನುಭವದ ನುಡಿಗಳು

ಬಹುದಿನಗಳ ವರೇಗೆ ಕನಸಿನ
ಮೊಳಕೆಯನ್ನೆ ಮರೆಸಿ ಎಂದೆಂದಿಗೂ
ಚೀಗುರದಂತೆ ಮಾಡಿತು ನಾನ್ನ
ಮತ್ತಾವಳ ಪ್ರೇಮ ಯುದ್ಧ

ಕೊನೆಯಲ್ಲಿ ನಿರುಪಯುಕ್ತ ಕಲ್ಲಾಗಿ
ರವಿಯ ಕಣ್ನೊಟಕ್ಕೆ ಕರಗಿ ನೀರಾಗಿ
ಹರಿದು ಶಾಶ್ವತವಾಗಿ ಉದಾಹರಣೆಯ
ಶಿಲೆಯಾಗಿ ನಿಂತು ತೊರುವೆ

ಆವಳದೊಂದು ಪ್ರೇಮಯುದ್ದ
ಇಲ್ಲಿ ಸೊತವನೆ ಸಾಧಕ ಗೇದ್ದವಳೇ
ಸಾಧಕನ ಕಾಲ್ಕಸ .......ಸಿಳಿದ ಹೃದಯ

- Vinod Naik Vinod Naik

21 Jul 2019, 12:23 am

ಸ್ವಂತಿಕೆ ಯಾವುದು

ಸ್ವಂತಿಕೆ ಯಾವುದು?

ಈ ಜೀವನವೆ ಬಾಡಿಗೆ ಬಂದಿರುವಾಗ
ಯಾವುದು ಸ್ವಂತಿಕೆ ಹೇಳಣ್ಢ

ಹೆತ್ತವರು ಉಚಿತವಾಗಿ ಜನ್ಮಕೊಟ್ಟರು
ಬದುಕಲು ನಮಗೆ ಒಳ್ಳೆಯ ಮಾರ್ಗ ಹೇಳಿಕೊಟ್ಟರು
ಮಾತುಗಳೆಲ್ಲಾ ಬಿಟ್ಟಿ ನಡೆಯುವುದೆಲ್ಲಾ ಬಿಟ್ಟಿ
ವಾಸಿಸುವುದೆಲ್ಲ ಬಿಟ್ಟಿ ಸ್ವಂತಿಕೆ ಎಲ್ಲಿದೆ ನೀನೆ ಹೇಳಣ್ಣ

ಕಲಿತ ಪಾಠ ಸ್ವಂತಿಕೆಯಿಂದ ಬಂದದ್ದೇಳಣ್ಣ
ನೀನು ಓದಿದ್ದಲ್ಲ ಹೃದಯದಿಂದ ಬಂದದ್ದೇನಣ್ಣ
ಸ್ವಂತಿಕೆ ಯಾವುದು ಭೂಮಿಯಲ್ಲಿ ಕಾಣುವುದೇನಣ್ಣ
ಎಲ್ಲವು ನಾವು ಇನ್ನೊಬ್ಬರ ನೋಡಿ ಕಲಿಯಬೇಕಣ್ಣ

ಕುಡಿಯುವ ನೀರು ಬಿಟ್ಟಿ
ಸೇವಿಸುವ ಗಾಳೀಯು ಬಿಟ್ಟಿ
ಮೂರು ಹೊತ್ತು ತಿನ್ನುವುದು ಬಿಟ್ಟಿ
ಹುಟ್ಟುವ ಮುನ್ನ ಯಾರದು ಇಲ್ಲಿ ಸ್ವಂತಿಕೆ ಇಲ್ಲಣ್ಣ

ಬರೆಯುವ ಮುನ್ನ ಓದಲೆ ಬೇಕು ಇನ್ನೊಬ್ಬರ ಕಥೆಯ
ಹಿರಿಯರ ಮಾರ್ಗದಲ್ಲಿ ಹೋಗಲೆ ಬೇಕು ನಾವು ಎಲ್ಲರು
ಪದಗಳ ಗುಚ್ಚ ಜ್ಞಾನದ ಬೆಳಕು ಆಲೋಚನೆ ಕೇಳಣ್ಣ
ಅಪ್ಪ ಅವ್ವರ ಕಲಿಸಿದ ಗುರುಹಿರಿಯರ ಮಾರ್ಗದಲ್ಲಿ
ಸಾಗಿ ಬರುವ ಜೀವನ ಪಾಠ ಸ್ವಂತಿಕೆ ಎಲ್ಲಣ್ಣ

ನನ್ನದು ಯಾವುದು ಸ್ವಂತಿಕೆ ಇಲ್ಲ
ಜ್ಞಾನದ ಬಲುಗುಟ್ಟು
ದಿನವು ಬದುಕಿಗೆ ತಿರಿಯುತಲಿರುವೆವು ಇನ್ನೊಬ್ಬರನ್ನು ಇನ್ನೊಬ್ಬರ ಕೈಕೆಳಗೆ ಕೂಲಿಕಾರರು ನಾವು
ಸ್ವಂತದು ಎಲ್ಲಿದೆ ಹೇಳಣ್ಣ
ಜ್ಞಾನದ ನಿಘಂಟು ಹುಡುಕುವರೆಲ್ಲ ಸ್ವಂತಿಕೆ ಇಲ್ಲಣ್ಣ

ಜೀವವ ಹೆತ್ತವರು ಕೊಟ್ಟಿರುವಾಗ ಸ್ವಂತ ಇದೆಯಣ್ಢ
ಆಲೋಚನೆ ಎಂಬ ಜ್ಞಾನವು ಮನಸಿನದು ಕಾಣಣ್ಣ
ಬುದ್ಧಿ ಎಂಬುದು ತನ್ನಿಚ್ಚೆಯಲ್ಲ ಬಲು ಯೋಚಿಸಬೇಕಣ್ಣ
ಭೂಮಿಯಲ್ಲಿ ಬಾಡಿಗೆದಾರರು ಸ್ವಂತಿಕೆ ಎಲ್ಲಣ್ಣ ನೀನು ಅರ್ಥವ ತಿಳಿಯಣ್ಣ

ಜಿ ಟಿ ಆರ್ ದುರ್ಗ
ಬಂಗಾರಪೇಟೆ

- Gtramachandrappa Ramachandrappa

20 Jul 2019, 07:50 pm