ಹೂವು ಬಾಯಿ ಬಿಟ್ಟು ಕೂಗುತೈತೆ...
ದುಂಬಿಯೂ... ಬರಲೆಂದು ಬಳಿಗೆ.. !!
ಚಿಟ್ಟೆ ಓಡುತೈತೆ ರೆಕ್ಕೆ ಬಡಿದು ಮನಸ್ಸು ಹೇಳಿದಂತೆ
ಹೂವು ನಗೆಯ ಚೆಲ್ಲಿ ನಗುವ ನಕ್ಷತ್ರಗಳಂತೆ
ಒಬ್ಬೊಬ್ಬರ ನಗುವಲ್ಲಿ ಒಂತರಾ ಕನಸು..
ಅವು ನನಗಾಗಿ ಕಾಯುತಿದೆ ಯಾರಿಗೆ ಗೊತ್ತು !!
ಬಣ್ಣ ಬಯಲಾದ ಬೊಂಬೆಗಳು ಎಲ್ಲಾ..
ನಾಟಕದ ಪರದೆಯಂತೆ ಅವಳಂದ ಚೆಂದು
ನನಗಾಗಿ ಕಾದಿದ್ದ ಆ ಹೂವು ನೋಟ
ಸವಿಯ ಮಾತಲ್ಲಿ ಸವಿಯಾದ ಕೂಟ !!
ಹುಡುಕುತ್ತಿತ್ತು ಹೃದಯ ಬೆಚ್ಚಿಬಿದ್ದು
ಎದೆಯ ಒಳಗೆ ಅವಳ ನೆನಪೆ ಬಂದು
ನಿನಗಾಗಿ ಅರಳಿದ ಅವಳ ಮನಸ್ಸು
ಯಾರು ಕಿತ್ತಾರು ಮುಂಜಾನೆ ಅವಳ ಕತ್ತು !!
ನಿನ್ನೆ ಕಂಡ ಅವಳು ಮಾಯ ಮೋಹ
ಅವಳ ನಂಬಿ ದಿನವು ಕಾದ ದಾಹ
ಮುಂಜಾನೆ ಇಬ್ಬನಿಯಲ್ಲಿ ಕರಗಿದಂತೆ ಹನಿಯು
ಚಿಟ್ಟೆಯು ದುಃಖಸಿತು ನನಗಾಗಿ ಅವಳಿಲ್ಲವೆಂದು !!
ಬಾ ಎಂದು ಕೂಗೆ ಎಲ್ಲಿ ಹೋದಳು ಅವಳು
ಸುತ್ತೆಲ್ಲ ಹುಡುಕಿದೆ ಚೆಂಗುಲಾಬಿ ಎಂದು
ಯಾವ ಹೂವು ಯಾರಿಗೆ ಸೇರುವುದು ತಿಳಿಯದು
ಬಿಟ್ಟುಬಿಡು ಮನಸ್ಸಿಂದ ಆಸೆ ಚಿಟ್ಟೆ ಹಾರಿತ್ತು ಗಗನೆತ್ತರ ಕಡೆಗೆ !!
ಅಮ್ಮನ ಮಮತೆಯ ಅರಿಯದವರಿಲ್ಲಾ
ಅವಳ ಪ್ರೀತಿ ಮಮಕಾರಕ್ಕೆ ಸರಿಸಾಟಿಯಾರಿಲ್ಲಾ
ಮೊದಲ ಕೈ ತುತ್ತು ಕೊಟ್ಟವಳೂ ಅವಳೇ
ನೊವಾದಗಲೆಲ್ಲಾ ನೆನಪಾಗುವಳು ಅವಳೇ
ಮೊದಲಾಕ್ಷರ ಕಲಿಸಿದವಳು ಅವಳು
ಜೀವನ ಪಾಠವ ಭೊಧಿಸಿದವಳು
ತಪ್ಪು ಹೆಜ್ಜೆ ಇಟ್ಟಾಗ ಸರಿ ತಿದ್ದಿದವಳು
ಪ್ರೀತಿಗೆ ಮೊದಲ ಹೆಸರೇ ಅಮ್ಮ
ಕೊಪಿಸಿಕೊಂಡರೇ ಅವಳೇ ಗುಮ್ಮ
ಮಗು ನಕ್ಕಾಗ ತಾನು ನಗುವಳು
ಮಗು ಅತ್ತಾಗ ತಾನು ಅಳುವಳು
ಕರುಳ ಬಳ್ಳಿಯ ಈ ಬಂಧ ಎಂದು ಕೊನೆಕಾಣುವುದಿಲ್ಲ....
ಅಮ್ಮ I love you
✍
Ask'c
ಅವಳ ಕಂಡ ಮೇಲೆ ನಾ ಮರೆತೆ ನನ್ನವರನ್ನೆ...
ಕಂಗಳು ಕುರುಡಾಗಿ ಸಂಬಂಧಗಳು ದೂರಾಗಿ...
ಎದೆಯಲಿ ಪ್ರೀತಿಯೆಂಬ ಅಮಲು ಜೋರಾಗಿ ..
ಈ ಕ್ಷಣ ಅವಳಿಲ್ಲ ಜತೆಯಲಿ....
ಕಳೆದು ಹೋದ ಸಂಬಂಧಗಳ ಹುಡುಕಾಟದಲ್ಲಿ ಹುಚ್ಚನಾಗಿರುವೆ...
ಮರೆತು ನಾ ನನ್ನನೆ......
ಹೇ ಹುಡುಗಿ ನನ್ನ ಬಾಳ ಸಂಗಾತಿಯಾಗುವೆಯಾ?
ಎಂದು ಕೇಳಿದ ಹುಡುಗನಿಗೆ..
ಹುಡುಗಿ ಕೊಟ್ಟ ಉತ್ತರ ಇದೆ ನೋಡಿ.. !!!
ದೇಹ ನೋಡಿ ಆಕರ್ಷಣೆಯಾಗಿದ್ದರೆ ದಯಮಾಡಿ ದೂರ ಹೋಗಿಬಿಡು.. ನಿನ್ನ ಮನದರಸಿ ಯಾಗಬೇಕೇ ಹೊರತು ದೇವದಾಸಿಯಾಗಲು ಇಷ್ಟವಿಲ್ಲ ನನಗೆ….!!
ಮನೆಯ ಕೆಲಸಕ್ಕಾಗಿ ಮದುವೆ ಯಾಗುವುದಾದರೆ ಕ್ಷಮಿಸಿಬಿಡು.. ಸಮಾಜದ ಮುಂದೆ ಇವಳು ನನ್ಮ ಹೆಂಡತಿ ಎಂದು ಕೈ ಹಿಡಿಯುವ ಗಂಡು ನನ್ನವನಾಗಬೇಕು ಎಂಬ ಆಸೆ ಇದೆ ನನಗೆ..!!
ದೇಹದ ಭಾಗಗಳ ವರ್ಣನೆ ಬೇಡ ನನಗೆ.. ನಿನ್ನ ದೇಹದ ಒಳಗಿರುವ ಆತ್ಮವೇ ನಾನು ಎನ್ನುವುದಾದರೆ ಹಿಡಿದುಕೋ ಈ ಕೈಯನು ಬಿಡದ ಹಾಗೆ..
ನಾಲ್ಕು ಗೋಡೆಯ ಮಧ್ಯೆ ನಾನೆಂದಿಗೂ ನಿನ್ನ ದಾಸಿಯಾಗಿರುವೆ..!!
ನಾಲ್ಕು ಜನರ ಮುಂದೆ ನಿನ್ನ ರಾಣಿಯಾಗ ಬಯಸುವೆ..
ಸಾವಿರ ಬೆಲೆ ಬಾಳುವ ಸೀರೆಯೊಡವೆ ಬೇಡ ನನಗೆ.. ಬೆಲೆ ಕಟ್ಟಲೂ ಆಗದ ನಿನ್ನ ಪ್ರೀತಿ ಕಾಳಜಿಯನ್ನು ಅಪೇಕ್ಷೆ ಪಡುತ್ತಿರುವೆನೆಂದು ನೆನಪಿರಲಿ ನಿನಗೆ..!!
ಬೆಳಗ್ಗೆ ಎದ್ದಾಗ ನಾ ಕಾಣುವ ಮುಖ ನಿನ್ನದಾಗಿರಲಿ.. ನಾ ಕೊನೆಯದಾಗಿ ಕಣ್ಣು ಮುಚ್ಚುವಾಗ ನನ್ನ ತಲೆ ನಿನ್ನ ತೊಡೆಯ ಮೇಲಿರಲಿ..
ಜೀವ ಇರುವವರೆಗೂ ನಾ ನಿನ್ನ ಮಗುವಂತೆ ಪೋಷಿಸುವೆ..!!
ನನಗೆ ನೋವಾದಾಗ ನಾನೆ ನಿನ್ನ ಮಗುವಾಗುವೆ.. ತಪ್ಪು ಮಾಡಿದಾಗ ಕಠೋರ ಮಾತುಗಳನ್ನಾಡಬೇಡ.. ಒಮ್ಮೆ ತಿದ್ದಿಬಿಡು ಮತ್ತೆಂದೂ ಆ ತಪ್ಪು ಮಾಡುವುದಿಲ್ಲ..!!
ನಾ ತಿನ್ನುವ ಮೊದಲ ತುತ್ತು ಎಂದಿಗೂ
ಅದು ನಿನ್ನ ಪಾಲು..
ತುತ್ತು ಕೊಡಲು ನೀನಿಲ್ಲವಾಗಿ ಹೋದರೆ.. ನೆನಪಿಟ್ಟುಕೋ..
ಈ ನನ್ನ ದೇಹದಲಿ ಉಸಿರು ಇರುವುದಿಲ್ಲ
ಅರೆ ಘಳಿಗೆಯೂ..!!
ನೆನಪಿಟ್ಟುಕೋ ನೀ ಸೋತಾಗ ನಿನ್ನ ಜೊತೆಯಲಿ ನಾ ಎಂದಿಗೂ ನಿಲ್ಲುವೆನೆಂದು..
ಗೆದ್ದಾಗ ದಯಮಾಡಿ ಮರೆಯದಿರು..
ನಿನ್ನ ಬೆನ್ನ ಹಿಂದೆ ನಾನಿದ್ದೆನೆಂದು..!!
ನಿನ್ನ ಆರೋಗ್ಯದ ವಿಷಯದಲ್ಲಿ ವೈದ್ಯಳಾಗುವೆ.. ಊಟ ಬಡಿಸುವಾಗ ತಾಯಿಯಂತೆ ನಾ ನಿನ್ನ ನೋಡುವೆ..
ಮುಖ ಸುಕ್ಕಾದಮೇಲೂ ನೀ ನನಗೆ ರಾಜನೇ.. ಊರುಗೋಲು ಹಿಡಿಯುವ ಸಮಯ ಬರದಂತೆ ಕಾಯುವ ನಿನ್ನ ರಾಣಿಯೂ ನಾನೆ..!!
ಇಷ್ಟೆಲ್ಲಾ ಹೇಳಿದ ಮೇಲೂ ನಿನ್ನ ಮನಸ್ಸಲ್ಲಿ ನಾನಿದ್ದರೆ.. ತಲೆ ಬಗ್ಗಿಸುವೆ ತಾಳಿ ಕಟ್ಟಿಬಿಡು..
ಮಾತು ಕೊಡುವೆ ಕೊನೆವರೆಗೂ ಜೊತೆಯಲಿರುವೆ..!!
p..gold