ಸೂತಕದ ಮನೆಯಲ್ಲೊಂದು
ನೋವಿನ ಚೀಲ ಗಂಟು ಕಟ್ಟಿ
ಇಟ್ಟಿಹರು ಯಾರಿಗೂ ಕಾಣದ ಹಾಗೆ
ಒಂದೊಂದೆ ಅಣಕ ಮಾತುಗಳು ಇಣುಕಿ
ಇಣುಕಿ ನೋಡುತಿವೆ ಹೊರಬಂದು
ಶಾಂತದಿಂದಿರುವ ಮನಸ್ಸನ್ನು
ಕೆಣಕಿ ಎಬ್ಬಿಸಿ ಮನೆಮಂದಿಯನ್ನೆಲ್ಲ
ಕಾಣದೂರಿಗೆ ಸಾಗಿಸಲೆಂದು .............
ಬಚ್ಚಿಟ್ಟು ಕೊಂಡಿದ್ದ ನೋವಿನ ಚೀಲ
ಬಿಚ್ಚಿಟ್ಟು ಕೊಂಡು ಉಸಿರುಗಟ್ಟಿಸುವಂತಾಗಿದೆ
ಮನೆ ಮಂದಿಗೆಲ್ಲ......
ಸಂಬಂದಗಳ ಸೂಳಿಯಲ್ಲಿ ನಿಂತಿರುವಾಗ
ಬೇರೋಂದು ಎದ್ದು ಮರವನ್ನೆ ಮಸಣದೆಡೆಗೆ
ಸಾಗಿಸಿದಂತಾಗಿದೆ ಇಗ.......
ಹುಟ್ಟುವವರಾರು ಸಾಯುವವರಾರು
ಹುಟ್ಟು ಸಾವಿನ ನಡುವೆ ಬದುಕಿ ನರಳುವವರಾರು
ಇಂತವರ ನಡುವೆ ಸತ್ತುಬದುಕುವವರೆ ಹೆಚ್ಚು...
ನಡುವಲ್ಲಿ ಇರುವವರಿಗೆ ಬಂದಿದೆ ಕಂಟಕದ ನಂಟು ಬಿಡಿಸಿಕೊಳ್ಳುವ ಹಾಗಿಲ್ಲ ಉಸಿರುಗಟ್ಟಿ ಸಾಯುವ ಹಾಗು ಇಲ್ಲ ಇದ್ದು ನರಕ ಅನುಭವಿಸಬೇಕಿದೆ ಇಗ.........
ಕಾಡುತಿದೆ ಈ ಬೇಸರ
ತಿಳಿಯದು ಈ ಮನಸ್ಸಿನ ಭಾವ
ಮರೆಯಾಯಿತು ಈ ಸಂತಸ ಸಮಯ
ಕಾಯುತಿರುವೆ ನಾ ಖುಷಿಯ ದಿನವ
ಮನದ ಕನ್ನಡಿಯ ಒಳಗೆ ಆವರಿಸಿತು
ಈ ಬೇಸರದ ಮುಗುಳು ನಗು
ಅರಿಯಿತು ನನಗೀಗ ಕೌತುಕದ ಭಾವ
ನೋವುನಲಿವುಗಳ ಜೊತೆ ಬೆರೆಯಿತು
ಈ ಬೇಸರ.......
ತಿಳಿ ಮೌನದ ಜೊತೆಗೂಡಿತು ಈ ಬೇಸರ
ನನ್ನ ನೆರಳಾಗಿ ಬಂತು ಸಂತೋಷದ ಭಾವನೆಯಲ್ಲಿ ಜೊತೆಗೂಡಿತು
ಬಿಡುಗಡೆಯ ಹಾದಿಯಲ್ಲಿ
ಕೊನೆಗೂ ಒಂದು ದಿನ ಮರೆಯಾಗಲಿ
ಈ ಬೇಸರ........
ಯಶಸ್ಸಿನ ಹಾದಿಯಲ್ಲಿ ನಾ
ನಡೆಯಬೇಕೆಂದು ಬಯಸುವವಳು
ನನಗೆ ಕಷ್ಟಗಳೆ ಬಾರದಂತೆ
ನೋಡಿಕೊಳ್ಳಲು ಬಯಸುವವಳು
ನನ್ನ ಪ್ರತಿ ಹೆಜ್ಜೆಯಲ್ಲೂ
ಜೊತೆಯಾಗಿ ಸಾಗುವವಳು
ಸದಾ ನನ್ನ ಧ್ಯಾನದಲ್ಲೆ ಬದುಕವವಳು. ನನ್ನ ಮಗುವಂತೆ ಸಾಕುತಿಹಳು
ಅವಳೆ ನನ್ನ ಸಂಗಾತಿ.
ಸಾವಿರ ವಜ್ರದಮಣಿಗಳ ಮೌಲ್ಯವನ್ನು
ಮಿರಿಸುವಂಥಹ ಮಣಿಯು ನಿನು
ನಿನ್ನನ್ನು ಮಣ್ಣಿನ ಮಡಿಕೆಯಲ್ಲೀಟ್ಟ
ಹಾಲಿನಂತೆ ಸಂರಕ್ಷಿಸಲೇ ಆದು ಆಗದು
ಎಕೆಂದರೆ ತೆರೆದ ಜಗದಲ್ಲಿ ಹುಳಿ
ಹಿಂಡುವ ಜನಗಳು ಜಾಸ್ತಿ.....
ಮೌಲ್ಯ ಭರಿತ ಕೀರಿಟ ಮಾಡಿಸಿ
ಆದರೋಳು ಅಡಗಿಸಲು ಯೊಚಿಸಿದೆ
ಆದು ಸಾದ್ಯವಾಗಲಿಲ್ಲ ಏಕೆಂದರೇ ನೀನ್ನ
ಇನಿಯನು ಒಂದು ದಿನ ಬಂದು ಮದುವೆಯ
ನೇಪಒಡ್ಡಿ ಹೊತ್ತು ಹೋಗುವ ಭಯ ಎನಗೆ
ನಿನ್ನನ್ನು ಘಡಿಗೆಯಲ್ಲಿ ಮಸರಿನಂತೆ ರಕ್ಷಿಸಲು
ಮುಂದಾದೆ ಆದರೆ ಕಿಡಿಗೇಡಿಗಳ ಕಲ್ಲಿನ
ಏಟಿಗೆ ಹೊಡೆದು ಹೋಗುವ ಭಯ ನಾನ್ನದು
ಹೆಳು ಹೇಗೆ ಸಂರಕ್ಷಿಸಿ ಕೊಳ್ಳಲಿ ನಿಮ್ಮನ್ನ
ಜಾಸ್ತಿಯಾಯಿತು ನೀ ನಾನಗೆ ಕೊಟ್ಟ ಸಲುಗೆ
ಇಗಲಾದರು ಮಠಕು ಗೋಳಿಸಿಕೂ ಎಕೆಂದರೆ
ಮುಂದೆ ನೀನ್ನ ನೆನಪುಗಳು ಬಾಣಗಳಂತೆ
ನಾನ್ನನು ಕಾಡಬಾರದು......
ಯಾಕೆಂದರೆ ಮುಂದೆ ಒಂದು ದಿನ ನೀ
ಕಾಣೆಯಾದಾಗ ಹುಡುಕಲಾಖದೆ ಮುಕನಾಗಿ
ದುಃಖದ ಬಡಬಾಗ್ನಿ ಯಲ್ಲಿ ಬೆಯ್ಯತ್ತಿರುವೆ
ನಾನ್ನ ಮನವಿ ಪಾಲಿಸು ನೀನು ನಾನ್ನರಿತಿ
ಯಾಗಬೆಡ ಯಾವ ಭಂಧನದಲ್ಲಿಯು
ಭಂದಿಸಬೇಡ
......ಇಂತಿ ನಿನ್ನ ನತದೃಷ್ಟ ಸಹೋದರ....